Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 05.09.2023
Share:

By Village Missionary Movement

Monday, 04-Sep-2023

ಧೈನಂದಿನ ಧ್ಯಾನ(Kannada) – 05.09.2023

 

ಹೊಳೆಯುವ ನಕ್ಷತ್ರಗಳು

 

"ಬುದ್ಧಿವಂತರಾದವರು ಆಕಾಶದ ಕಾಂತಿಯ ಹಾಗೆ ಯೂ ಅನೇಕರನ್ನು ನೀತಿಯ ಕಡೆಗೆ ತಿರುಗಿಸಿದ ವರು ನಕ್ಷತ್ರಗಳ ಹಾಗೆಯೂ ಎಂದೆಂದಿಗೂ ಪ್ರಕಾಶಿಸುವರು" - ದಾನಿಯೇಲ 12:3

 

ಒಬ್ಬ ರಾಜನು ತನ್ನ ದೇಶದ ಅತ್ಯುತ್ತಮ ಪ್ರಜೆಯನ್ನು ಗೌರವಿಸಲು ಬಯಸಿದರು. ಇದಕ್ಕಾಗಿ ಪರೀಕ್ಷೆಯಲ್ಲಿ ನಾಲ್ವರನ್ನು ಆಯ್ಕೆ ಮಾಡಲಾಯಿತು. ಆ ನಾಲ್ವರಲ್ಲಿ ಒಬ್ಬರನ್ನು ಆಯ್ಕೆ ಮಾಡಲು ಎಲ್ಲರನ್ನು ಅಂತಿಮ ಸುತ್ತಿಗೆ ಕರೆತರಲಾಯಿತು. ಇವರಲ್ಲಿ ಒಬ್ಬರು ಮಹಾನ್ ವೈದ್ಯ ಎಂದು, ಇವರಿಂದ ಗುಣಹೊಂದಿದವರು ಅನೇಕರು ಎಂದು ಬಡವರಿಗೆ ಉಚಿತ ವೈದ್ಯಕೀಯ ನೆರವು ನೀಡಿದವರು ಎಂದು ಪರಿಚಯಿಸಲಾಯಿತು. ಎರಡನೆಯವರು ಅತ್ಯುತ್ತಮ ಸಮಾಜ ಸೇವಕರು ಎಂದು ಇವರಿಂದ ಅನೇಕ ಹಳ್ಳಿಗಳು ಮತ್ತು ಪಟ್ಟಣಗಳಲ್ಲಿ ವಾಸಿಸುವ ಬಡವರ ಜೀವನಮಟ್ಟವನ್ನು ಅವರಿಂದ ಸುಧಾರಿಸಲಾಯಿತು ಎಂದು ಪರಿಚಯಿಸಲಾಯಿತು. ಮೂರನೆಯ ವ್ಯಕ್ತಿಯನ್ನು ಇವರು ತುಂಬಾ ನ್ಯಾಯಯುತವಾಗಿ, ನಿಜಾಯಿತಿಯ ತೀರ್ಪುಗಳನ್ನು ನೀಡಿದ ಉತ್ತಮ ನ್ಯಾಯಾಧೀಶರು ಎಂದು ಪರಿಚಯಿಸಲಾಯಿತು. ಕೊನೆಯಲ್ಲಿ ತುಂಬಾ ಸರಳವಾಗಿ ಕಾಣುವ ಮುದುಕಿಯನ್ನು ಪರಿಚಯಿಸಿದರು. ಇಂತಹ ಉನ್ನತ ವ್ಯಕ್ತಿಗಳ ನಡುವೆ ಈ ತಾಯಿಯನ್ನು ಯಾಕೆ ಕರೆತಂದರು ಎಂದು ಹಲವರ ಹಣೆ ಕುಗ್ಗಿತು. ಈ ಮೂವರಿಗೂ ಈ ತಾಯಿಯೇ ಗುರು. ಈ ಮೂವರನ್ನು ಮಹಾನ್ ವ್ಯಕ್ತಿಗಳನ್ನಾಗಿ ಮಾಡಲು ಇವರು ತನ್ನ ಜೀವನವನ್ನೇ ಮುಡಿಪಾಗಿಟ್ಟ ವ್ಯಕ್ತಿ ಎಂದು ಪರಿಚಯಿಸಿದಾಗ ಅಲ್ಲಿ ನೆರೆದಿದ್ದವರು ಜೋರಾಗಿ ಚಪ್ಪಾಳೆ ತಟ್ಟಿದರು.

 

ಇಂದು ಶಿಕ್ಷಕರ ದಿನ; ಸಮಾಜದಲ್ಲಿ ಒಬ್ಬ ವ್ಯಕ್ತಿಯನ್ನು ರೂಪಿಸುವಲ್ಲಿ ಶಿಕ್ಷಕರು ಪ್ರಮುಖ ಪಾತ್ರ ವಹಿಸುತ್ತಾರೆ. ಪುಟ್ಟ ಶಿಶುವಿಹಾರದಿಂದ ಹಿಡಿದು ಪೋಷಕರಿಂದ ಬೇರ್ಪಟ್ಟ ಯೌವನಸ್ಥರ ವರೆಗಿನ ವಿದ್ಯಾರ್ಥಿಗಳ ಪ್ರಗತಿಯನ್ನು ರೂಪಿಸುವಲ್ಲಿ ಶಿಕ್ಷಕರ ಪಾತ್ರ ಬಹಳ ಮುಖ್ಯವಾಗಿದೆ.

 

ಆತ್ಮೀಯ ಶಿಕ್ಷಕರೇ! ನೀವು ಶಾಲಾ ಶಿಕ್ಷಕರು ಅಥವಾ ಕಾಲೇಜು ಪ್ರಾಧ್ಯಾಪಕರಾಗಿರಬಹುದು. ಉಪ್ಪಾಗಿ, ಬೆಳಕಾಗಿ ಬೆಳಗುವ ನೀವು ಅನೇಕ ವಿದ್ಯಾರ್ಥಿಗಳನ್ನು ಸುಂದರವಾಗಿ ಕೆತ್ತುವ ಶಿಲ್ಪಿಗಳು ಎಂಬುದನ್ನು ಮರೆಯಬೇಡಿರಿ. ನೀವು ಪ್ರತಿದಿನ ಪ್ರವೇಶಿಸುವುದು ತರಗತಿಯಲ್ಲಿ ಮಾತ್ರವೇ ಅಲ್ಲ; ನಿಮ್ಮ ವಿದ್ಯಾರ್ಥಿಗಳ ಜೀವನದಲ್ಲಿಯೂ ಸಹ. ಕೇವಲ ಅಂಕಗಳು ವಿದ್ಯಾರ್ಥಿಯ ಜೀವನವನ್ನು ಶ್ರೀಮಂತಗೊಳಿಸಲು ಸಾಧ್ಯವಿಲ್ಲ ಎಂದು ನಿಮಗೆ ತಿಳಿದಿದೆ. ಅವನು ಬದುಕುವ ವಿಧಾನವೇ ಅವನು ಯಾರೆಂಬುದನ್ನು ತಿಳಿಸುತ್ತದೆ.

 

ವಿದ್ಯಾರ್ಥಿಗಳ ಶೈಕ್ಷಣಿಕ ಕಣ್ಣುಗಳನ್ನು ಮಾತ್ರವಲ್ಲದೆ ಅವರ ಆತ್ಮೀಕ ಕಣ್ಣುಗಳನ್ನೂ ತೆರೆಯಲು ನೀವು ಚಿಕ್ಕ ಚಿಕ್ಕ ಪ್ರಯತ್ನಗಳನ್ನು ಮಾಡಿದರೆ, ಖಂಡಿತವಾಗಿಯೂ ಪರಲೋಕವು ಸಂತೋಷಪಡುತ್ತದೆ. ನೀವು ಇದನ್ನು ಮಾಡಲು ಖಂಡಿತವಾಗಿಯೂ ಸಾಧ್ಯವಿದೆ. ಆದ್ದರಿಂದ ನಿಮ್ಮ ಬಳಿ ಇರುವ ವಿದ್ಯಾರ್ಥಿಗಳೆಂಬ ಮುತ್ತುಗಳನ್ನು "ಗೌರವಾನ್ವಿತ ವ್ಯಕ್ತಿಗಳನ್ನಾಗಿ" ರೂಪಿಸಲು ಇನ್ನೊಂದು ಬಾರಿ ನಿಮ್ಮನ್ನು ದೇವರ ಕೈಗಳಲ್ಲಿ ಸಮರ್ಪಿಸಿಕೊಂಡು ಕಾರ್ಯ ನಿರ್ವಹಿಸಿರಿ. ದೇವರು ನಿಮ್ಮ ವಿವೇಕವನ್ನು ಮತ್ತು ಬೋಧನಾ ಸಾಮರ್ಥ್ಯವನ್ನು ಹೆಚ್ಚಿಸಿ, ಆಶೀರ್ವದಿಸಿ ನಿಮ್ಮ ವಿದ್ಯಾರ್ಥಿಗಳನ್ನು ಭೂಮಿಯಲ್ಲಿ ವಜ್ರಗಳಂತೆ ಮತ್ತು ಆಕಾಶದಲ್ಲಿ ಹೊಳೆಯುವ ನಕ್ಷತ್ರಗಳಂತೆ ರೂಪಿಸಲು ದೇವರು ನಿಮಗೆ ಕೃಪೆ ತೋರಿಸಲಿ.

- Mrs. ಸರೋಜಾ ಮೋಹನ್ ದಾಸ್ 

 

ಪ್ರಾರ್ಥನಾ ಅಂಶ:

ದೆಬೋರಾಳ್ ಗುಂಪುಗಳಲ್ಲಿ ಒಟ್ಟಾಗಿ ಸೇರಿ ಕಾರ್ಯ ನಿರ್ವಹಿಸುವ ಸೇವಕರನ್ನು ದೇವರು ಬಲವಾಗಿ ಉಪಯೋಗಿಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al