By Village Missionary Movement
Sunday, 03-Sep-2023ಧೈನಂದಿನ ಧ್ಯಾನ(Kannada) – 03.09.2023
ಸತ್ಯ
"... ಸತ್ಯದಿಂದ ನಡೆದುಕೊಳ್ಳುವವರು ಆತನ ಆನಂದವಾಗಿದ್ದಾರೆ" - ಜ್ಞಾನೋಕ್ತಿ 12:22
ಹಾಯ್ ಪುಟಾಣಿಗಳೇ! ಕಥೆ ಕೇಳಲು ರೆಡಿ ತಾನೇ? ಕಥೆ ಕೇಳೋದು ಮಾತ್ರ ಅಲ್ಲ ಕಥೆಯಲ್ಲಿರೋ ಒಳ್ಳೇ ಕಾರ್ಯಗಳನ್ನು ಫಾಲೋ ಮಾಡೋದೆ ಬಹಳ ಮುಖ್ಯ. ಏನು ಪುಟಾಣಿಗಳೇ ಓಕೆ ತಾನೇ! ಸತ್ಯಕ್ಕೆ ದೊರೆತ ಬಹುಮಾನ ಏನೆಂಬ ಕಥೆಯನ್ನು ಇಂದು ಕೇಳೋಣ್ವಾ?
ಸುಂದರಂ ಒಬ್ಬ ಪೈಂಟ್ ಕೆಲಸ ಮಾಡುವವರು. ಬಡತನದಲ್ಲಿದ್ದರೂ ಸತ್ಯವಂತನಾಗಿದ್ದ ವ್ಯಕ್ತಿ. ಅವರು ಮಾಡುವ ಎಲ್ಲಾ ಕೆಲಸಗಳನ್ನು ಸರಿಯಾಗಿ ಮಾಡಿ ಮುಗಿಸುತ್ತಿದ್ದರು. ಆದರೆ ಅವರಿಗೆ ಕೆಲಸ ಸಿಗೋದೆ ತುಂಬಾ ಕಷ್ಟವಾಗಿತ್ತು. ಆದಾಯ ಹೆಚ್ಚಿಲ್ಲದ ಕಾರಣ ಒಳ್ಳೆಯ ಊಟ, ಒಳ್ಳೆ ಡ್ರೆಸ್ ಸಿಗೋದು ಕೂಡ ಅಪರೂಪವಾಗಿತ್ತು. ಸುಂದರಂ ಇದ್ದ ಊರಿನಲ್ಲಿ ಒಬ್ಬ ರೈತನಿದ್ದ. ಅವರು ಕೆಲವೊಮ್ಮೆ ಕೆಲಸಕ್ಕೆ ಕರೆಯುತ್ತಿದ್ದರು. ಸುಂದರಂ ಕೂಡ ತುಂಬಾ ಖುಷಿಯಿಂದ ಹೋಗುತ್ತಿದ್ದರು. ಯಾಕೆ ಗೊತ್ತಾ? ಮ್... ಕರೆಕ್ಟಾಗಿ ಹೇಳ್ತಿದೀರಲ್ಲಾ! ರೈತನ ಮನೆ ಅಂದ್ರೆ ಸುಮ್ನೇ ನಾ, ಒಳ್ಳೆ ಕೆಲಸ, ಒಳ್ಳೆ ಸಂಬಳ ಸಿಗುತ್ತೆ ಅಲ್ವಾ?ಸುಂದರಂ ಕೂಡ ನಮ್ಮಂತೆಯೇ ಯೋಚಿಸಿ ಹೋದರು. ರೈತ ಅವನನ್ನು ನದಿಯ ದಡಕ್ಕೆ ಕರೆದೊಯ್ದು ಈ ದೋಣಿಗೆ ಪೈಂಟ್ ಹೊಡಿ ಎಂದು ಹೇಳಿ ಹೊರಟುಹೋದರು. ಇಷ್ಟೇನಾ ಎಂದು ಯೋಚಿಸುತ್ತಾ ದೋಣಿಗೆ ಪೈಂಟ್ ಹೊಡೆದರು. ದೋಣಿಯ ಮಧ್ಯದಲ್ಲಿ ಒಂದು ರಂಧ್ರವಿತ್ತು. ಆ ರಂಧ್ರದ ಬಗ್ಗೆ ಚಿಂತಿಸುವುದು ಒಂದು ಪೈಂಟರ್ ನ ಕೆಲಸವಲ್ಲವಾದರೂ, ಆ ರಂಧ್ರವನ್ನು ಚೆನ್ನಾಗಿ ಮುಚ್ಚಿಬಿಟ್ಟು ಪೈಂಟ್ ಕೆಲಸವನ್ನು ಸೂಪರ್ ಆಗಿ ಮುಗಿಸಿಬಿಟ್ಟರು.
ಊರಿಗೆ ಹೋಗಿದ್ದ ದೋಣಿಯ ನಾವಿಕ ಬಂದರು. ರೈತ ಕುಟುಂಬವಾಗಿ ದೋಣಿಯಲ್ಲಿ ಪ್ರಯಾಣಿಸಲು ಬಂದರು. ಅಯ್ಯೋ ದೋಣಿಯಲ್ಲಿ ತೂತುಬಿದ್ದಿದೆ, ನಾಳೆ ಹೋಗೋಣ ಎಂದು ಹೇಳುತ್ತಲೇ ದೋಣಿಯ ನಾವಿಕ ದೋಣಿಯನ್ನು ಪರಿಶೀಲಿಸಿದಾಗ ರಂಧ್ರವು ಮುಚ್ಚಲ್ಪಟ್ಟು ಉತ್ತಮವಾಗಿತ್ತು. ಸುಂದರಂ ಇದನ್ನು ಹೇಳದೆಯೇ ಸರಿಯಾಗಿ ಕೆಲಸವನ್ನು ಮಾಡಿ ಮುಗಿಸಿದ್ದಾನಲ್ಲಾ ಎಂದು ಭಾವಿಸಿದ ರೈತ ಸುಂದರಂನನ್ನು ಹುಡುಕಿಕೊಂಡು ಹೋಗಿ ಅಧಿಕವಾದ ಸಂಬಳವನ್ನು ಕೊಟ್ಟು, ನನ್ನ ಮನೆಯಲ್ಲಿ ಕೆಲಸ ಮಾಡುವವರಿಗೆಲ್ಲ ನೀನೇ ಜವಾಬ್ದಾರ ಎಂದು ಹೇಳಿ ಸುಂದರಂನನ್ನು ಹೊಗಳಿದರು. ಸುಂದರಂಗೆ ಏನೂ ಅರ್ಥವಾಗಲಿಲ್ಲ. . . ಏನಯ್ಯಾ . . ಏನು ಹೇಳ್ತಾ ಇದೀರ. ಹೌದಪ್ಪಾ, ನಿನ್ನ ನಿಜಾಯಿತಿಯ ಕೆಲಸಕ್ಕೆ ದೊರೆತ ಬಹುಮಾನವೇ. ಬಾ ಮನೆಗೆ ಹೋಗೋಣ ಎಂದು ಹೇಳಿದ ರೈತನನ್ನು ನೋಡಿ ಸುಂದರಂಗೆ ಆಶ್ಚರ್ಯವಾಯಿತು. ತಾನು ಪಟ್ಟ ಕಷ್ಟಗಳಿಗೆ ದೇವರು ಒಳ್ಳೆಯ ದಾರಿಯನ್ನು ತೋರಿಸಿದರು ಎಂದು ಹೇಳಿಕೊಂಡೇ ರೈತನ ಮನೆಯತ್ತಾ ಹೊರಟರು.
ಕಥೆಯನ್ನು ಕೇಳುದ್ರಾ, ಪುಟಾಣಿಗಳೇ! ನೀವು ಮಾಡುತ್ತಿರುವ ಕೆಲಸವನ್ನು ದೇವರು ಗಮನಿಸುತ್ತಲೇ ಇದ್ದಾರೆ. ನಿಮ್ಮ ನಿಜಾಯಿತಿಗೆ ಕರ್ತನು ಖಂಡಿತವಾಗಿಯೂ ಪ್ರತಿಫಲ ನೀಡುತ್ತಾರೆ. ಯಾವ ಕೆಲಸವಾದರೂ ಸತ್ಯವಂತರಾಗಿರುತ್ತೀರಾ? Ok bye!
- Mrs. ಅನ್ಬುಜ್ಯೋತಿ ಸ್ಟಾಲಿನ್
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482