Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 01.09.2023
Share:

By Village Missionary Movement

Friday, 01-Sep-2023

ಧೈನಂದಿನ ಧ್ಯಾನ(Kannada) – 01.09.2023

 

EMPTY BOTTLE 

 

"ತಿತ್ತಿಯಲ್ಲಿದ್ದ ನೀರು ಮುಗಿದ ಮೇಲೆ…" - ಆದಿಕಾಂಡ 21:15

 

ಖಾಲಿ ಬಾಟಲ್ ಎಂದರೆ ಮನೆಯ ಶೋಕೆಸ್ ನ ಒಂದು ಮೂಲೆಯಲ್ಲಿ ಹೊರಳಾಡುತ್ತಾ ಬಿದ್ದಿರುತ್ತದೆ. ನಾವು ಅದನ್ನು ಗಮನಿಸುವುದಿಲ್ಲ. ಆದರೆ ದೇವರು ಖಾಲಿ ಬಾಟಲ್ ಅನ್ನು ನೋಡಿ ಹಾಗೆ ಬಿಡುವವರಲ್ಲ. ಅವರು ಅದನ್ನು ದೃ‌ಷ್ಟಿಸಿ ನೋಡಿ ತುಂಬಿಸುತ್ತಾರೆ. ಅದನ್ನು ನೋಡೋಣವಾ?

 

ಸತ್ಯವೇದದಲ್ಲಿ, ಹಾಗರಳು ಅಬ್ರಹಾಮನನ್ನು ನಂಬಿದ್ದಳು. ಕೊನೆಗೆ ಆಕೆಗೆ ಸ್ವಲ್ಪ ಆಹಾರ ಮತ್ತು ನೀರನ್ನು ಕೊಟ್ಟು ಅಬ್ರಹಾಮನು ಕಳುಹಿಸಿಬಿಟ್ಟನು. ಆಕೆ ಅರಣ್ಯದಲ್ಲಿ ಅಲೆದಾಡಿ ಅಲೆದಾಡಿ ತಿತ್ತಿಯಲ್ಲಿದ್ದ ನೀರು ಸಹ ಖಾಲಿಯಾಯಿತು. ನೀರಿನ ಕೊರತೆಯಿಂದ ಮಗು ಸಾಯುತ್ತಿರುವುದನ್ನು ಕಂಡ ಹಾಗರಳು, ಮಗುವನ್ನು ಬಿಟ್ಟು ದೂರ ಹೋಗಿ ಒಂಟಿಯಾಗಿ ಅತ್ತಳು. ನೀರಿನ ದಾಹದಿಂದ ಮಗು ಒಂದೆಡೆ ಅಳುತ್ತಿತ್ತು. ದೇವರು ಮಗುವಿನ ಅಳುವಿನ ಶಬ್ದವನ್ನು ಕೇಳಿಸಿಕೊಂಡರು. ಖಾಲಿಯಾಗಿದ್ದ ತಿತ್ತಿಯನ್ನು ಸಹ ಕಂಡರು. ಜನರನ್ನು ನಂಬುವಾಗ ಬರಿದಾಗಿರುತ್ತೇವೆ ಮತ್ತು ಕಣ್ಣೀರು ಸುರಿಸುವ ಪರಿಸ್ಥಿತಿ ಉಂಟಾಗುತ್ತದೆ. ಗಮನಿಸುತ್ತಾರೆ ಅಥವಾ ಸಾಯುವ ಪರಿಸ್ಥಿತಿಯೂ ಏರ್ಪಡಬಹುದು. ಆದರೆ ದೇವರೋ ಖಾಲಿ ಬಾಟಲ್ ಎಂದು ತಿರಸ್ಕರಿಸದೆ, ತಳ್ಳದೆ ನಂಬಿಕೆಯಿಂದ ವಾಗ್ದಾನ ಮಾಡುತ್ತಾರೆ. ಕೈಯಲ್ಲಿದ್ದ ಖಾಲಿ ಬಾಟಲ್ ಅನ್ನು ತುಂಬಲು ಬಾವಿಯನ್ನು ಇಟ್ಟಿದ್ದರು. ಅವಳ ಬಾಟಲ್ ತುಂಬಿದ್ದು ಮಾತ್ರವಲ್ಲದೆ, ಹಾಗರಳ ಬಾವಿಯಲ್ಲಿ ಹಲವರು ಇಂದಿನವರೆಗೂ ದಾಹ ತೀರಿಸಿಕೊಳ್ಳುವಂತೆ ನೀರಿನ ಒರತೆಯನ್ನು ಉಂಟು ಮಾಡಿದರು.

 

ಪ್ರಿಯರೇ! ಇದರಂತೆಯೇ, ಮನುಷ್ಯರನ್ನು ನಂಬುವಾಗ ಒಂದು ದಿನ ನಿಮ್ಮನ್ನು ಬರಿಗೈಯಲ್ಲಿ ಕಳುಹಿಸಿಬಿಡುತ್ತಾರೆ. ನೀವು ದೇವರನ್ನು ನಂಬದೇ, ಮನುಷ್ಯರನ್ನು, ಸಭೆಯನ್ನು ಮತ್ತು ಸೇವಕರನ್ನು ನಂಬಿದ್ದರೆ, ನೀವು ಖಾಲಿ ಬಾಟಲ್ ಗಳೇ. ನೀವು ಇಂದು ಚೆನ್ನಾಗಿದ್ದರೂ, ಒಂದು ದಿನ ನಿಮಗೆ ಹಾಗರಳ ಪರಿಸ್ಥಿತಿ ಬರುತ್ತದೆ. ಇಂದೇ ನಿಮ್ಮನ್ನು ಒಪ್ಪಿಸಿಕೊಡಿ, ನಿಮ್ಮ ಕಣ್ಣೀರು ಒರೆಸಲ್ಪಡುತ್ತದೆ. ಆತನು ನಿಮ್ಮ ಪಾತ್ರೆಯು ತುಂಬಿ ಹರಿಯುವಂತೆ ಮಾಡುತ್ತಾರೆ. ಅಷ್ಟೇ ಅಲ್ಲ, ನೀವು ಅನೇಕರಿಗೆ ಆಶೀರ್ವಾದವನ್ನು ಹಂಚುವಂತೆ ಮಾಡುತ್ತಾರೆ.

 

ಇವು ಸಂಪೂರ್ಣವಾಗಿ ಉಚಿತವೇ! ಎಲೈ, ಬಾಯಾರಿದ ಸಕಲ ಜನರೇ, ಕ್ರಯವಿಲ್ಲದೆ ತೆಗೆದುಕೊಳ್ಳಿರಿ ಎಂದು (ಯೆಶಾಯ 55:1) ಕರ್ತನು ಕರೆಯುತ್ತಿದ್ದಾರೆ. ನೀವು ಮನುಷ್ಯರನ್ನು ನಂಬಿ Empty bottle ಆಗಿಬಿಟ್ಟಿದ್ದೀರಾ? ಉಚಿತವಾಗಿ ಕೊಡುವವರ ಬಳಿಗೆ ಬನ್ನಿರಿ. ನಿಮಗಾಗಿ ಅರಣ್ಯದಲ್ಲಿಯೂ ಬುಗ್ಗೆಗಳನ್ನು ಉಂಟು ಮಾಡಲು ಆತನು ಶಕ್ತನಾಗಿದ್ದಾನೆ. ಬನ್ನಿರಿ ತುಂಬಲ್ಪಡಿರಿ.

- Bro. ಡೇವಿಡ್ ಗಣೇಶನ್

 

ಪ್ರಾರ್ಥನಾ ಅಂಶ:

ಈ ತಿಂಗಳು ಪೂರ್ತಿಯಾಗಿ ನಡೆಯುವಂತಹ ಸೇವೆಗಳಲ್ಲಿ ದೇವರ ಹಸ್ತವು ಜೊತೆಯಿದ್ದು ನಡೆಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al matbet matbet giriş hepsibet hepsibet giriş betnano betnano giriş betparibu betparibu giriş casibom virüsbet pashagaming kalebet perabet pashagaming virusbet marsbahis imajbet perabet perabet giriş perabet perabet giriş