Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 31.08.2023
Share:

By Village Missionary Movement

Thursday, 31-Aug-2023

ಧೈನಂದಿನ ಧ್ಯಾನ(Kannada) – 31.08.2023

 

ಶಿಲುಬೆಯ ದೊಡ್ಡಸ್ತಿಕೆ 

 

"ನನಗಾದರೋ... ಕ್ರಿಸ್ತನ ಶಿಲುಬೆಯ ವಿಷಯದಲ್ಲಿ ಹೊರತು ಹೆಚ್ಚಳಪಡುವದು ಬೇಡವೇ ಬೇಡ" - ಗಲಾತ್ಯ. 6:14

 

ದೇವರಿಗಾಗಿ ನಿಷ್ಠೆಯಿಂದ ಮತ್ತು ಮನಃಪೂರ್ವಕವಾಗಿ ಸೇವೆ ಮಾಡುತ್ತಿದ್ದ ಒಬ್ಬ ಹಿರಿಯ ಸೇವಕನ ಬಳಿ ಒಂದು ಪ್ರಶ್ನೆಯನ್ನು ಕೇಳಲಾಯಿತು. ನಿಮ್ಮ ನೂರಾರು ಹಾಡುಗಳು ಇಂದಿಗೂ ಮೂಲೆ ಮೂಲೆಗಳಲ್ಲಿ ಇನ್ನೂ ಹಾಡಲಾಗುತ್ತಿದೆ. ತಮಿಳು ಕ್ರೈಸ್ತರ ಮಧ್ಯದಲ್ಲಿ ಪ್ರಮುಖ ಸ್ಥಾನವನ್ನು ಗಳಿಸಿದ್ದೀರಿ. ಕೀರ್ತಿಯ ತುತ್ತತುದಿಗೆ ಹೋದರೂ ನಿಮ್ಮ ಹೆಸರು ಹೇಳಿದರೆ "ತಾಳ್ಮೆಯುಳ್ಳವರು" ಎಂದೇ ಸೇವಕರು, ವಿಶ್ವಾಸಿಗಳು ಹೇಳುತ್ತಿದ್ದಾರಲ್ಲಾ ಇದರ ರಹಸ್ಯವೇನು? ಎಂದು ಕೇಳಿದರು. ದೇವ ಸೇವಕರು ಹೇಳಿದ ಉತ್ತರ, "ಹೆಮ್ಮೆಪಡಲು ನನ್ನ ಬಳಿ ಏನಿದೆ? ಏನೂ ಇಲ್ಲ, ಮತ್ತು ನನ್ನ ಧ್ವನಿಯ ಬಗ್ಗೆಯೂ ನಾನು ಹೆಮ್ಮೆಪಡಲಾರೆ, ಏಕೆಂದರೆ ನಾನು ಗಾಯಕರ ಗುಂಪಿನಲ್ಲಿ ಸೇರಲು ಬಯಸಿದಾಗ ಕತ್ತೆಯ ಧ್ವನಿಯುಳ್ಳವನು ಎಂದು ಟೀಕಿಸಲ್ಪಟ್ಟವನು. ಹಾಗಾಗಿ ನನ್ನ ಬಳಿ ಇರುವುದೆಲ್ಲವೂ ದೇವರದು‌. ನನ್ನ ಬಳಿ ಏನೂ ಇಲ್ಲ" ಎಂದರು.

     

ಅಪೊಸ್ತಲನಾದ ಪೌಲನು, ಶಿಲುಬೆಯ ಕುರಿತು ಮಾತ್ರವೇ ಹೆಚ್ಚಳಪಡುತ್ತೇನೆ ಎಂದು ಹೇಳುತ್ತಾರೆ. ಈ ಲೋಕದ ಆಸ್ತಿ, ಅಂತಸ್ತು, ಹೆಮ್ಮೆ ಎಲ್ಲವೂ ಶಿಲುಬೆಯ ಮುಂದೆ ಧೂಳು ಮತ್ತು ಕಸವಾಗಿದೆ. "ನನ್ನ ಕರ್ತನಾದ ಕ್ರಿಸ್ತ ಯೇಸುವನ್ನರಿಯುವದೇ ಅತಿಶ್ರೇಷ್ಠವಾದದ್ದೆಂದು ತಿಳಿದು ನಾನು ಎಲ್ಲವನ್ನು ನಷ್ಟವೆಂದೆಣಿಸುತ್ತೇನೆ" ಎಂದು ತನ್ನ ಪತ್ರಿಕೆಗಳಲ್ಲಿ ಬರೆದಿದ್ದಾರೆ. ಪೌಲನು ಯಾರು? ಒಬ್ಬ ಮಹಾನ್ ವಿದ್ವಾಂಸ. ಆತನಲ್ಲಿ ಹೆಗ್ಗಳಿಕೆಗೆ ಪಾತ್ರವಾದ ಅನೇಕ ಗುಣಗಳಿವೆ. ಆದರೆ ಶಿಲುಬೆಯನ್ನು ಮತ್ತು ಅದರಲ್ಲಿ ನೇತಾಡುತ್ತಿರುವ ಯೇಸುಕ್ರಿಸ್ತನನ್ನು ನೋಡುವಾಗ, ವಿಶೇಷಗಳೆಲ್ಲಾ ಕಸವಾಗಿ ಮಾರ್ಪಟ್ಟವು.

 

ಪ್ರಿಯರೇ! ನಾವು ನಮ್ಮ ಬಗ್ಗೆ ಹೆಮ್ಮೆಯಾಗಿ ಯೋಚಿಸುತ್ತಿದ್ದೇವಾ? ನಮ್ಮ ಸೌಂದರ್ಯ ಮತ್ತು ಐಷಾರಾಮಿ ಜೀವನ, ಶಿಕ್ಷಣ ಮತ್ತು ಬಿರುದು, ಸಂಪತ್ತು ಮತ್ತು ಪ್ರಭಾವ ನಮ್ಮ ಮನಸ್ಸನ್ನು ಬಿಟ್ಟು ನೀಗದೆ ಇದೆಯೋ? ಹಾಗಾದರೆ ಒಂದಂತೂ ನಿಜ, ನಮಗೆ ಇನ್ನೂ ಶಿಲುಬೆಯ ಮಹತ್ವದ ಬಗ್ಗೆ ಸಾಸಿವೆ ಕಾಳಷ್ಟೂ ಗೊತ್ತೇ ಇಲ್ಲ ಎಂಬುದೇ! ತಮ್ಮ ಎಲ್ಲಾ ಲೌಕಿಕ ಶ್ರೇಷ್ಠತೆಯನ್ನು ತ್ಯಜಿಸಿ ಅವಮಾನದ ಚಿಹ್ನೆಯಾಗಿ ನೇತಾಡುವ ಕ್ರಿಸ್ತನ ತ್ಯಾಗವನ್ನು ಗ್ರಹಿಸಿದ ಯಾರ ಬಳಿಯೂ ಹೊಗಳಿಕೊಳ್ಳಲು ಏನೂ ಇರುವುದಿಲ್ಲ. ಕ್ರಿಸ್ತನ ಇಂತಹ ಮನಸ್ಸನ್ನು ಹೊಂದಲು ನಾವು ಪ್ರತಿಯೊಬ್ಬರನ್ನು ಬೇಡಿಕೊಳ್ಳೋಣ.

 

          ಅಧಿಕವಾದ ಆಸ್ತಿ ಉನ್ನತ ಶಿಕ್ಷಣ ಹೆಚ್ಚು ಪ್ರಭಾವವಿದ್ದರೂ 

          ತಿರುಗಿ ನೋಡೋಕೆ ನನಗಿರುವ ಹೆಮ್ಮೆಯೆಲ್ಲಾ ಅಲ್ಪವೇ

          ಪ್ರಿಯ ಕ್ರಿಸ್ತೇಸು ರಾಜ ನಿಮ್ಮ ಶಿಲುಬೆಯೆ ನನ್ನ ಹೆಮ್ಮೆ.

 

- T. ಸಾಮುವೇಲ್

 

ಪ್ರಾರ್ಥನಾ ಅಂಶ:

ತಮಿಳುನಾಡಿನ 310 ತಾಲೂಕುಗಳಲ್ಲಿ ಎರಡೆರಡು ದೆಬೋರಾಗಳು ಎದ್ದೇಳುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet holiganbet giriş holiganbet giriş matbet holiganbet sahabet onwin casibom giriş casibom casibom giriş casibom matbet matbet giriş jojobet superbetin superbetin giriş betsmove betsmove giriş holiganbet holiganbet giriş jasminbet jasminbet giriş kargabet kargabet giriş matbet matbet giriş norabahis norabahis giriş piabellacasino piabellacasino giriş supertotobet supertotobet giriş marsbahis casibom casibom giriş holiganbet holiganbet giriş jojobet jojobet giriş holiganbet casibom çarkbet vizebet vizebet giriş alobet alobet giriş amgbahis amgbahis giriş sweet bonanza grandpashabet grandpashabet jojobet gameofbet