Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 30.08.2023
Share:

By Village Missionary Movement

Wednesday, 30-Aug-2023

ಧೈನಂದಿನ ಧ್ಯಾನ(Kannada) – 30.08.2023

 

ಕಾಪಾಡುವ ದೇವರು 

 

"...ವೈರಿಯು ಪ್ರಳಯದಂತೆ ಬರುವಾಗ ಕರ್ತನ ಆತ್ಮನು ಅವನಿಗೆ ವಿರೋಧವಾಗಿ ಧ್ವಜವನ್ನೆತ್ತುವನು" - ಯೆಶಾಯ 59:19

 

ಬುಡಕಟ್ಟು ಜನರು ಇಂದಿಗೂ ದಕ್ಷಿಣ ಆಫ್ರಿಕಾದ ಕಾಡಿನಲ್ಲಿ ವಾಸಿಸುತ್ತಿದ್ದಾರೆ. ಅವರು ತಮ್ಮ ಮಕ್ಕಳು ಕಾಡಿನಲ್ಲಿ ಧೈರ್ಯವಾಗಿ ಬದುಕಲು ಅಭ್ಯಾಸ ಮಾಡಿಕೊಳ್ಳುವುದಕ್ಕಾಗಿ ಕೆಲವು ತರಬೇತಿಗಳನ್ನು ನೀಡುತ್ತಾರೆ. ಅದರಲ್ಲಿ ಒಂದು ತಂದೆ ಮಗುವನ್ನು ದಟ್ಟವಾದ ಕಾಡಿಗೆ ಕರೆದುಕೊಂಡು ಹೋಗಿ ಮರದ ಬುಡದಲ್ಲಿ ಕೂರಿಸಿ ಬಿಟ್ಟು ಬಂದುಬಿಡುತ್ತಿದ್ದರು. ಬೆಳಕು ಮರೆಯಾಗುತ್ತಿದ್ದಂತೆ, ಕಾಡು ಪ್ರಾಣಿಗಳ ಶಬ್ದವನ್ನು ಕೇಳಿ ಮಗು ಭಯಪಡುವ ಸ್ವಲ್ಪ ಸಮಯಕ್ಕೆಲ್ಲಾ ಪ್ರಾಣಿಗಳು ಬಂದು ಅಲ್ಲಿ ಓಡಾಡುತ್ತಿದ್ದವು. ಅವುಗಳಲ್ಲಿ ಕೆಲವು ಮಗುವಿನ ಬಳಿಗೆ ಹೋದಾಗ, ಮಗು ಕಿರುಚಲು ಮತ್ತು ಅಳಲು ಪ್ರಾರಂಭಿಸುತ್ತಿತ್ತು. ಆ ಮೃಗವು ಮಗುವಿಗೆ ಇನ್ನೂ ಹತ್ತಿರವಾಗಿ ಬರುವ ಸಂದರ್ಭದಲ್ಲಿ ವಿಷದ ಬಾಣವು ಆ ಮೃಗದ ದೇಹದೊಳಗೆ ಹಾದುಹೋಗಿ ಕೆಳಗೆ ಬೀಳುತ್ತಿತ್ತು. ಆ ಮಗುವನ್ನು ಯಾರು ಕಾಪಾಡಿದ್ದು? ಯಾರು ಆ ಮೃಗವನ್ನು ಕೊಂದಿದ್ದು? ಆ ಮಗುವಿನ ಪ್ರೀತಿಯ ಅಪ್ಪನೇ! ಹೌದು, ಅವರು ಆ ಮಗುವನ್ನು ಒಂಟಿಯಾಗಿ ಬಿಡಲಿಲ್ಲ. ದೂರದಲ್ಲಿ ಕುಳಿತು ಬಿಲ್ಲುಗಾರನಂತೆ ಅವನನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದರು. ಅಪಾಯ ಸಮೀಪಿಸಿದಾಗ, ಅವರು ತ್ವರಿತವಾಗಿ ಕಾರ್ಯನಿರ್ವಹಿಸಿ ಆ ಮಗುವನ್ನು ಉಳಿಸಿದರು.

 

ಹೌದು, ಪ್ರಿಯರೇ! ನಾವು ಜೀವಿಸುತ್ತಿರುವ ಈ ಲೋಕ ದೇವರಿಂದ ಶಪಿಸಲ್ಪಟ್ಟ ಭೂಮಿಯೇ. ಎಲ್ಲೆಲ್ಲೂ ದುಷ್ಟತನ ಮತ್ತು ಕೆಟ್ಟತನ ತುಂಬಿ ತುಳುಕುತ್ತಿರುವುದನ್ನು ನೋಡುತ್ತಿದ್ದೇವೆ. ಮಹಿಳೆಯರ ಮೇಲಿನ ದೌರ್ಜನ್ಯ, ಭಯೋತ್ಪಾದನೆ, ತೀವ್ರವಾದ, ಸಾಂಕ್ರಾಮಿಕ ರೋಗಗಳು, ಅಪಘಾತಗಳು ಮತ್ತು ದುರಂತಗಳನ್ನು ಕಂಡಾಗ ಮನುಷ್ಯ ಪುತ್ರರ ಹೃದಯಗಳು ನಡುಗುತ್ತಿವೆ. "ಯಾವಾಗ ಏನಾಗುತ್ತದೋ? ಎಂದು ಯೋಚಿಸಿ ಭಯಪಡಬೇಕಾಗಿದೆ. ಇಂತಹ ಲೌಕಿಕ ಪರಿಸ್ಥಿತಿಯಲ್ಲಿ ದೇವರು ತನ್ನ ಮಕ್ಕಳಿಗಾಗಿ ಮಾಡುವುದೇನು ಎಂದು ನೋಡೋಣವಾ? ತಂದೆಯು ಆ ಕಾಡಿನಲ್ಲಿ ತನ್ನ ಮಗುವನ್ನು ಯಾವ ದುಷ್ಟ ಮೃಗವೂ ಮುಟ್ಟದಂತೆ ಹೇಗೆ ಕಾಪಾಡಿದರೋ, ಹಾಗೆಯೇ ಈ ದುಷ್ಟ ಪ್ರಪಂಚದಿಂದ ಕಾಪಾಡಲು ನಮ್ಮ ಪರಮತಂದೆ ನಮ್ಮೊಂದಿಗಿದ್ದಾರೆ. ಆ ಉನ್ನತವಾದ ದೇವರ ಆಶ್ರಯದಲ್ಲಿ ನಾವು ಇರೋದಾದರೆ, ಆತನು ನಮ್ಮನ್ನು ನಾಶಮಾಡುವ ಮರಣಕರವಾದ ರೋಗಗಳಿಂದ ತಪ್ಪಿಸುತ್ತಾರೆ, ಬೇಟೆಗಾರನ ಬಲೆಯಿಂದಲೂ ನಾವು ಪಾರಾಗುತ್ತೇವೆ. ನಮಗೆ ಯಾವ ವಿಪತ್ತೂ ಸಂಭವಿಸುವುದಿಲ್ಲ, ನಮ್ಮ ಗುಡಾರವನ್ನು ಯಾವ ಕೇಡೂ ಮುಟ್ಟುವುದಿಲ್ಲ, ನಾವು ಹೋಗುವ ಮಾರ್ಗಗಳಲ್ಲಿ ನಮ್ಮನ್ನು ಕಾಯುವದಕ್ಕೆ ತನ್ನ ದೂತರನ್ನು ಕಳುಹಿಸುತ್ತಾರೆ. ಸಿಂಹದಂತಹ ಭಯಾನಕ ತೊಂದರೆಗಳನ್ನು ಮತ್ತು ಸೈತಾನನ ಕುತಂತ್ರಗಳನ್ನು ಸಹ ನಾವು ತುಳಿದು ಹಾಕಲು ಸಾಧ್ಯ. ಆಪತ್ಕಾಲದಲ್ಲಿ ಅವರೇ ನಮ್ಮೊಂದಿಗಿದ್ದು ನಮ್ಮನ್ನು ತಪ್ಪಿಸುತ್ತಾರೆ. ಹಲ್ಲೇಲೂಯಾ!

 

ಆದರೆ, ನೀವು ಅವರನ್ನು ನಿಮ್ಮ ಸ್ವಂತ ತಂದೆಯಾಗಿ ಹೊಂದಿದ್ದೀರಾ? ಎಂಬುದು ಬಹಳ ಮುಖ್ಯ. ತಂದೆ-ಮಕ್ಕಳ ಸಂಬಂಧ ಮತ್ತು ಏಕತೆ ನಿಮ್ಮ ಬಳಿ ಇದೆಯೇ? ಯೋಚಿಸಿರಿ.

- Mrs. ತವಮಣಿ ವೈರವೇಲ್

 

ಪ್ರಾರ್ಥನಾ ಅಂಶ:

ನಮ್ಮಿಂದ ಸಂಪೂರ್ಣ ಬೈಬಲ್ ಅನ್ನು ಪಡೆದ ಪ್ರತಿಯೊಬ್ಬ ವ್ಯಕ್ತಿಯು ದೇವರಿಗೆ ಮೆಚ್ಚಿಕೆಯಾಗಿ ಜೀವಿಸಬೇಕೆಂದು ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al holiganbet giriş holiganbet padişahbet bets10 extrabet royalbet süperbetin padişahbet betcio romabet giriş romabet queenbet bahiscasino betcio bahiscasino atlasbet matbet matbet giriş bahiscasino celtabet queenbet casibom jojobet