Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 28.08.2023
Share:

By Village Missionary Movement

Sunday, 27-Aug-2023

ಧೈನಂದಿನ ಧ್ಯಾನ(Kannada) – 28.08.2023

 

ಐಕ್ಯತೆ 

 

"ಆದರೆ ಆತನು ಬೆಳಕಿನಲ್ಲಿರುವಂತೆಯೇ ನಾವು ಬೆಳಕಿನಲ್ಲಿ ನಡೆದರೆ ನಾವು ಒಬ್ಬರಸಂಗಡಲೊಬ್ಬರು ಅನ್ಯೋನ್ಯತೆಯಲ್ಲಿದ್ದೇವೆ,…" - 1 ಯೋಹಾನ 1:7

 

9 ಜನರ ಗುಂಪು ಮೌಂಟ್ ಶಿಖರವನ್ನು ತಲುಪಲು ಯೋಜನೆ ಹಾಕಿದರು. ಅವರು ಯಶಸ್ವಿಯಾಗಿ ಉತ್ತುಂಗವನ್ನು ತಲುಪಿದರು ಮತ್ತು ಹೆಚ್ಚಿನ ಪ್ರಯತ್ನದ ನಡುವೆ ಮರಳಿದರು. ಅವರನ್ನು ನೋಡಿದವರಿಗೆಲ್ಲ ಒಂದೇ ಆಶ್ಚರ್ಯ! ಏಕೆಂದರೆ ಆ 9 ಜನರಲ್ಲಿ 4 ಜನರಿಗೆ ಕಣ್ಣುಗಳಿಲ್ಲ. 2 ಜನರು ಮಾತನಾಡಲು ಮತ್ತು ಕೇಳಲು ಸಾಧ್ಯವಿಲ್ಲ. 3 ಮಂದಿಗೆ ಕೃತಕ ಕಾಲುಗಳಿವೆ. ಇದು ಜನರ ಅಚ್ಚರಿಗೆ ಕಾರಣವಾಗಿತ್ತು. ಹಾಗಾದರೆ ಇದನ್ನು ಹೇಗೆ ಸಾಧಿಸಲಾಯಿತು? ಏಕತೆ, ಸಹಕಾರ! ಕೆಲವೇ ಜನರು ಸಾಮಾನ್ಯವಾಗಿ ಇತರರನ್ನು ಪರಿಗಣಿಸುತ್ತಾರೆ! ನಮ್ಮಲ್ಲಿ ಅನೇಕರು ಇತರರೊಂದಿಗೆ ಒಂದಾಗಲು ಹಿಂಜರಿಯುತ್ತಾರೆ. ಇದಕ್ಕೆ ಹಲವು ಕಾರಣಗಳಿದ್ದರೂ ಕೆಲವು ಮುಖ್ಯವಾದವುಗಳನ್ನು ಮಾತ್ರ ನೋಡೋಣ.

 

ಮೊದಲನೆಯದು, "ನನಗೆ ಬೇರೆಯವರು ಅಗತ್ಯವಿಲ್ಲ, ನಾನು ಅವರೊಂದಿಗೆ ಏಕೆ ಮಾತನಾಡಬೇಕು? ನಾನಾಗಿ ನಾನೇ ಹೋಗಿ ಮಾತನಾಡಿದರೆ ನನಗೇನು ಮರ್ಯಾದೆ ಇರುತ್ತದೆ?" ಎಂಬ ಹೆಮ್ಮೆಯ ಆಲೋಚನೆಯೇ ನಮ್ಮನ್ನು ಇತರರೊಂದಿಗೆ ಒಂದಾಗದಂತೆ ತಡೆಯುತ್ತಿದೆ. ನಾವು ಅಂದುಕೊಂಡಂತೆ ದೇವರು ನಮ್ಮ ಬಗ್ಗೆ ಯೋಚಿಸಿದರೆ, ನಮ್ಮ ಪರಿಸ್ಥಿತಿ ಹೇಗಿರುತ್ತದೆ ಸ್ವಲ್ಪ ಯೋಚಿಸೋಣ.

 

ಎರಡನೆಯದು "ನನಗೆ ಇತರರಿಂದ ಯಾವುದೇ ಸಹಾಯ ಬೇಕಾಗಿಲ್ಲ" ಎಂಬ ಆಲೋಚನೆ! ಇದೂ ಕಷ್ಟ. ಈ ಲೋಕದಲ್ಲಿ ನಾವೊಬ್ಬರೇ ಇದ್ದೇವೆ ಮತ್ತು ನಮಗೆ ಬೇಕಾದಷ್ಟು ಹಣವಿದೆ ಎಂದು ಊಹಿಸಿಕೊಳ್ಳೋಣ. ಹಾಗಿದ್ದರೆ ನಾವು ಬದುಕಲು ಸಾಧ್ಯವಾ? ನೀರು, ಹಾಲು, ದಿನಪತ್ರಿಕೆ, ಪೆಟ್ರೋಲ್, ಆಹಾರ ಇತ್ಯಾದಿಗಳನ್ನು ಪಡೆಯಲು ಇತರರ ಸಹಾಯ ಬೇಕಲ್ಲವೇ? ಬಹುಶಃ, ನಾವು ಇತರರ ಸಹಾಯವನ್ನು ಬಯಸದ ಸ್ಥಿತಿಯಲ್ಲಿದ್ದರೂ, ಇತರರಿಗೆ ನಮ್ಮ ಸಹಾಯ ಬೇಕಾಗಬಹುದು! ಜನರನ್ನು ನಿರ್ಲಕ್ಷಿಸುವುದು ಸೃಷ್ಟಿಕರ್ತನಾದ ದೇವರನ್ನು ನಿರ್ಲಕ್ಷಿಸಿದಂತೆ!

 

ಪ್ರಿಯರೇ! ನಮ್ಮ ಬಾಗಿಲಲ್ಲಿರುವ ಅನ್ಯರನ್ನೂ ಸಹ ಪ್ರೀತಿಸೋಣ ಮತ್ತು ಅವರು ಮಾತನಾಡುವ ಮಾತುಗಳನ್ನು ಗಮನಿಸೋಣ. ನಗು ನಗುತ್ತಾ ಇದ್ದು ಇತರರೊಂದಿಗೆ ಇರುವ ಅಂತರವನ್ನು ಕಡಿಮೆ ಮಾಡೋಣ. ದೇವರ ಪ್ರೀತಿಯನ್ನು ಹಂಚೋಣ, ಕ್ಷಮಿಸೋಣ, ಸಹಿಸೋಣ ಮತ್ತು ತಾಳ್ಮೆಯಿಂದಿರೋಣ. . . ಅನೇಕರನ್ನು ನಿತ್ಯ ಜೀವಕ್ಕೆ ಕರೆದೊಯ್ಯೋಣ. ನೀವು ಮಾತನಾಡಲು, ಕೇಳಲು ಮತ್ತು ಪ್ರೀತಿಸಲು ಜನರು ಸಿದ್ಧರಾಗಿದ್ದಾರೆ. ಪ್ರೀತಿಯನ್ನು ತೋರಿಸಲು ಮತ್ತು ಒಂದಾಗಲು ನೀವು ಸಿದ್ಧರಿದ್ದೀರಾ? ಇಂದಿನ ಅವಕಾಶ ಮತ್ತೆ ಬರದಿರಬಹುದು. ಸಿದ್ಧವಾಗಿರೋಣ ಅವಕಾಶಗಳನ್ನು ಉಪಯೋಗಿಸಿಕೊಳ್ಳೋಣ.

- L. ಅಳಗರಸಾಮಿ 

 

ಪ್ರಾರ್ಥನಾ ಅಂಶ:

ನಮ್ಮ ಕ್ಯಾಂಪಸ್‌ನಲ್ಲಿರುವ ರಾಕ್‌ಲ್ಯಾಂಡ್ ಬೈಬಲ್ ಕಾಲೇಜಿಗಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler Vdcasino vaycasino vaycasino giriş vaycasino güncel giriş matbet matbet giriş matbet güncel giriş matbet matbet giriş matbet güncel giriş betsmove betsmove giriş betsmove güncel giriş betsat betsat giriş betsat güncel giriş perabet perabet giriş perabet güncel giriş dumanbet giriş dumanbet dumanbet güncel giriş kingroyal kingroyal giriş kingroyal güncel giriş marsbahis marsbahis giriş marsbahis güncel giriş kingroyal kingroyal giriş kingroyal güncel giriş meritking meritking giriş meritking güncel giriş meritbet meritbet giriş meritbet güncel giriş nakitbahis nakitbahis giriş nakitbahis güncel giriş vaycasino vaycasino giriş vaycasino güncel giriş Holiganbet holiganbet giriş holiganbet güncel giriş bahissenin bahissenin giriş bahissenin güncel giriş bayconticasino bayconticasino giriş bayconticasino güncel giriş imajbet imajbet giriş imajbet güncel giriş prizmabet prizmabet giriş pashagaming pashagaming giriş pashagaming güncel giriş interbahis interbahis giriş interbahis güncel giriş jojobet superbetin matbet jojobet marsbahis marsbahis güncel marsbahis güncel giriş deneme bonusu deneme bonusu veren siteler bahsegel vaycasino vaycasino giriş perabet perabet giriş holiganbet holiganbet giriş holiganbet holiganbet giriş holiganbet holiganbet giriş jojobet jojobet giriş Superbetin superbetin giriş superbetin güncel giriş süperbetin