Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 27.08.2023 (Kids Special)
Share:

By Village Missionary Movement

Sunday, 27-Aug-2023

ಧೈನಂದಿನ ಧ್ಯಾನ(Kannada) – 27.08.2023 (Kids Special)

 

ಚಾರುವಿನ ಪ್ರಾರ್ಥನೆ

 

"ನಿಮ್ಮ ಚಿಂತೆಯನ್ನೆಲ್ಲಾ ಆತನ ಮೇಲೆ ಹಾಕಿರಿ, ಆತನು ನಿಮಗೋಸ್ಕರ ಚಿಂತಿಸುತ್ತಾನೆ" - 1 ಪೇತ್ರ 5:7

 

ಇದೊಂದು ಕರಾವಳಿ ಪ್ರದೇಶ. ಬರಿದಾದ ಗ್ರಾಮ. ಆ ಗ್ರಾಮದಲ್ಲಿ ಸರಿಯಾದ ವಿದ್ಯುತ್ ಸೌಕರ್ಯವಾಗಲಿ, ಬಸ್ ಸೌಕರ್ಯವಾಗಲಿ ಇಲ್ಲ. ಆ ಗ್ರಾಮದಲ್ಲಿ ಚಾರು ಎಂಬ ಪುಟ್ಟ ಹುಡುಗಿ ವಾಸಿಸುತ್ತಿದ್ದಳು. ಆಕೆ ಏಳನೇ ತರಗತಿ ವಿದ್ಯಾರ್ಥಿನಿ. ಆಕೆಗೆ ಹಾಡುವುದು ತುಂಬಾ ಇಷ್ಟ. ಅವಳು ಚೆನ್ನಾಗಿ ಪ್ರಾರ್ಥಿಸುತ್ತಿದ್ದಳು. ಅವಳಿಗೆ ಅಣ್ಣ, ಅಕ್ಕ, ತಮ್ಮ, ತಂಗಿ ಎಲ್ಲರೂ ಇದ್ದರು.

 

ಒಂದು ದಿನ ಅವಳ ಅಣ್ಣ ಕಾಣೆಯಾದ. ಅವನನ್ನು ಎಲ್ಲಾ ಕಡೆಗಳಲ್ಲಿ ಹುಡುಕುತ್ತಾ ಅಲೆದಾಡಿದರೂ ಎಲ್ಲೂ ಸಿಗಲಿಲ್ಲ. ಚಾರುವಿನ ತಾಯಿ ಅವನನ್ನು ನೆನೆದು ಅಳುತ್ತಾ ಅಳುತ್ತಾ ಹುಷಾರಿಲ್ಲದೆ ಆಸ್ಪತ್ರೆಗೆ ಸೇರಿಸಲ್ಪಟ್ಟು ತುಂಬಾ ಮೋಸವಾದ ಸ್ಥಿತಿಗೆ ಹೋಗಿಬಿಟ್ಟರು. ಇದನ್ನು ನೋಡಿದ ಚಾರುವಿನ ತಂದೆಯ ಹೃದಯ ನುಚ್ಚುನೂರಾಯಿತು. ಆಸ್ಪತ್ರೆಯಲ್ಲಿರುವ ಹೆಂಡತಿಯನ್ನು ನೋಡಿಕೊಳ್ಳೋದಾ? ಕಾಣೆಯಾದ ಮಗನನ್ನು ಹುಡುಕೋದಾ? ಮನೆಯಲ್ಲಿರುವ ಮಕ್ಕಳನ್ನು ನೋಡಿಕೊಳ್ಳೋದಾ? ಎಂದು ಅಳಲು ತೋಡಿಕೊಂಡರು. ಅದು ಡಿಸೆಂಬರ್ ತಿಂಗಳಾಗಿತ್ತು. ಬೆಳಗಾದರೆ ಕ್ರಿಸ್ಮಸ್ ಕ್ರಿಸ್ಮಸ್ ಎಂದು ಸಂತೋಷದಿಂದ ಆಚರಿಸಬೇಕಿದ್ದ ಮನೆ. ಅಂದು ಶೋಕದ ಮನೆಯಂತಿತ್ತು. ಇಷ್ಟೆಲ್ಲಾ ನಡೆಯುತ್ತಿದ್ದರೂ ಅದೇ ಊರಿನ ಆಕೆಯ ಸಂಬಂಧಿಕರು ಯಾರೂ ಬಂದು ವಿಚಾರಿಸಲಿಲ್ಲ. ಈ ಸಮಯದಲ್ಲಿ ಆ ಪುಟ್ಟ ಹುಡುಗಿ ಚಾರು ತನ್ನ ಮೊಣಕಾಲೂರಿ ಯೇಸುವಿಗೆ ಪ್ರಾರ್ಥಿಸಲು ಪ್ರಾರಂಭಿಸಿದಳು. ಯೇಸಪ್ಪ, ನಮ್ಮ ತಾಯಿ ಬದುಕಿರುವಾಗಲೇ ಯಾರೂ ನಮ್ಮ ಮೇಲೆ ಗಮನ ಹರಿಸುತ್ತಿಲ್ಲ. ನನ್ನ ತಾಯಿ ಸತ್ತರೆ ನಮ್ಮನ್ನು ಯಾರು ನೋಡಿಕೊಳ್ಳುತ್ತಾರೆ? ನನ್ನ ತಾಯಿಗೆ ಆರೋಗ್ಯ ಕೊಡಿ, ನನ್ನ ಅಣ್ಣ ಎಲ್ಲೇ ಇದ್ದರೂ ಕರೆದುಕೊಂಡು ಬನ್ನಿ ಎಂದು ಕಣ್ಣೀರಿನಿಂದ ಪ್ರಾರ್ಥಿಸಿದಳು. ಅಚ್ಚರಿಯ ಸಂಗತಿ ಏನು ಗೊತ್ತಾ? ಯೇಸಪ್ಪ ಇವಳ ಕಣ್ಣೀರಿನ ಪ್ರಾರ್ಥನೆಯನ್ನು ಕೇಳಿ ಎದ್ದೇಳಲು ಸಾಧ್ಯವಾಗದ ತಾಯಿಯನ್ನು ಎಬ್ಬಿಸಿ ಸಂಪೂರ್ಣವಾದ ಸ್ವಸ್ಥತೆಯನ್ನು ನೀಡಿದರು. ಅಷ್ಟೇ ಅಲ್ಲ ಅವಳ ತಾಯಿ ಚೇತರಿಸಿಕೊಂಡ ಒಂದು ವಾರದೊಳಗೆ ಅವಳ ಅಣ್ಣನೂ ಮನೆಗೆ ಬಂದು ಸೇರಿಕೊಂಡನು.

 

ಪ್ರೀತಿಯ ತಮ್ಮ, ತಂಗಿ ನೀನು ಕೂಡ ನಿನ್ನ ಕುಡುಕನಾದ ತಂದೆಯನ್ನು ನೆನೆದು, ನಿನ್ನ ಕುಟುಂಬದಲ್ಲಿನ ಸಮಸ್ಯೆಗಳು ಮತ್ತು ನಿನ್ನ ಕುಟುಂಬದಲ್ಲಿ ಅನಾರೋಗ್ಯದಿಂದ ಬಳಲುತ್ತಿರುವ ಜನರ ಬಗ್ಗೆ ಚಿಂತೆ ಮಾಡುತ್ತಿದ್ದೀಯ? ನಿನ್ನ ಎಲ್ಲಾ ಚಿಂತೆಗಳನ್ನು ಚಾರುವಿನ ಹಾಗೆ ಯೇಸಪ್ಪನಿಗೆ ಹೇಳಿ ಪ್ರಾರ್ಥಿಸಿಬಿಡು. ಅವಳಿಗೆ ಸಹಾಯ ಮಾಡಿದ ಯೇಸಪ್ಪ ನಿನಗೂ ಸಹಾಯ ಮಾಡುತ್ತಾರೆ. Ok ನಾ.

- Mrs. ಸಾರಾಳ್ ಸುಭಾಷ್

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al