Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 26.08.2023
Share:

By Village Missionary Movement

Saturday, 26-Aug-2023

ಧೈನಂದಿನ ಧ್ಯಾನ(Kannada) – 26.08.2023

 

ಶೂನೇಮ್ಯಳು

 

"ಪ್ರವಾದಿಯನ್ನು ಪ್ರವಾದಿಯೆಂದು ಸೇರಿಸಿಕೊಳ್ಳುವವನು ಪ್ರವಾದಿಗೆ ಬರತಕ್ಕ ಪ್ರತಿಫಲವನ್ನು ಹೊಂದುವನು;..." - ಮತ್ತಾಯ. 10:41

 

ಶೂನೇಮ್ಯ - ಇದು ಆ ಮಹಿಳೆಯ ಹೆಸರಲ್ಲ. ಅವಳು ವಾಸಿಸುತ್ತಿದ್ದ ಆ ಊರಿನ ಹೆಸರು! ಪ್ರವಾದಿಯಾಗಿದ್ದ ಎಲೀಷ ಆ ಊರಿಗೆ ಹೋದಾಗ, ಅವರನ್ನು ತನ್ನ ಮನೆಗೆ ಬಂದು ಊಟ ಮಾಡುವಂತೆ ಕೇಳಿಕೊಂಡಳು. ಹಾಗೆ ಅವರು ಪ್ರಯಾಣಿಸುವಾಗಲೆಲ್ಲಾ ಅವರನ್ನು ಪ್ರೀತಿಯಿಂದ ಉಪಚರಿಸುತ್ತಿದ್ದಳು. ಅಷ್ಟೇ ಅಲ್ಲ, ಅವರಿಗೆ ಇರಲು ಅನುಕೂಲವಾದ ಕೋಣೆಯನ್ನು ನಿರ್ಮಿಸಿ ಅವರಿಗೆ ಬೇಕಾದ ಎಲ್ಲಾ ವಸ್ತುಗಳನ್ನು ಒದಗಿಸಿದಳು. ಅವಳ ಪ್ರೀತಿಯ ಆರೈಕೆ, ಆತಿಥ್ಯ ಮತ್ತು ಸನ್ಮಾನಿಸುವಿಕೆ ಇಂತಹ ಸತ್ಕಾರ್ಯಗಳು ಎಲೀಷನನ್ನು ಅವಳಿಗೆ ಏನಾದರೂ ಒಳ್ಳೆಯದನ್ನು ಮಾಡಬೇಕೆಂಬ ಬಯಕೆಯನ್ನು ಹುಟ್ಟಿಸಿತು. "ನೀನು ಕಷ್ಟಪಟ್ಟು ನಮಗೆ ಇಷ್ಟೆಲ್ಲಾ ಉಪಕಾರಮಾಡಿದಿ; ನಾನು ನಿನಗೆ ಯಾವ ಪ್ರತ್ಯುಪಕಾರ ಮಾಡಲಿ? ನಿನಗೋಸ್ಕರವಾಗಿ ಅರಸನ ಮುಂದಾಗಲಿ ಸೇನಾಪತಿಯ ಮುಂದಾಗಲಿ ಮಾತಾಡಬೇಕೋ ಎಂದು ಕೇಳಿದರು. ಆದರೆ ಅವಳೋ ತನಗೆ ಮಕ್ಕಳಿಲ್ಲ ಎಂಬ ಲೋಪವನ್ನು ಬಹಿರಂಗಪಡಿಸದೆ "ನಾನು ಸ್ವಕುಲದವರ ಮಧ್ಯದಲ್ಲಿ ಸುಖವಾಗಿದ್ದೇನೆ" ಎಂದಳು. ಹೌದು, ಅವಳು ಯಾವುದೇ ರೀತಿಯ ಪ್ರತಿಫಲವನ್ನು ನಿರೀಕ್ಷಿಸಿ ಅವರನ್ನು ಉಪಚರಿಸಲಿಲ್ಲ ಎಂಬುದನ್ನು ಅರಿತುಕೊಳ್ಳಬಹುದು.

 

ಗೇಹಜಿಯ ಮೂಲಕ ವಿಷಯ ತಿಳಿದು, ಪ್ರವಾದಿಯು ಅವಳನ್ನು ಆಶೀರ್ವದಿಸಿದಾಗ ಒಬ್ಬ ಮಗನಿಗೆ ಜನ್ಮ ನೀಡಿದಳು. ಅವನು ದೊಡ್ಡವನಾದ ಮೇಲೆ ಒಂದು ದಿನ ಕಾಯಿಲೆ ಬಿದ್ದು ಸತ್ತುಹೋದನು. ಇದು ಅವಳ ಹೃದಯವನ್ನು ಆಳವಾಗಿ ಬಾಧಿಸಿದರೂ, ಅವಳು ಗಾಬರಿಯಾಗಲಿಲ್ಲ ಮತ್ತು ಈ ಬಗ್ಗೆ ತನ್ನ ಗಂಡನಿಗೂ ಹೇಳಲಿಲ್ಲ, ಅವಳು ತನ್ನ ಮಗನನ್ನು ಎಲೀಷನ ಕೋಣೆಯಲ್ಲಿ ಮಲಗಿಸಿ ಕರ್ಮೆಲ್ ಬೆಟ್ಟದಲ್ಲಿರುವ ದೇವರ ಸೇವಕನ ಬಳಿಗೆ ಹೋಗಿ ಅವರ ಪಾದಗಳನ್ನು ಹಿಡಿದು ತನ್ನ ಪರಿಸ್ಥಿತಿಯನ್ನು ಹೇಳಿದಳು. ಅವರು ತನ್ನ ಸೇವಕನನ್ನು ಕಳುಹಿಸುತ್ತೇನೆ ಎಂದು ಹೇಳಿದಾಗ ಇಲ್ಲ ನೀವೇ ಬರಬೇಕು ಎಂದು ಹಠ ಹಿಡಿದಳು. ಅವಳು ನಂಬಿದ ಪ್ರಕಾರ ತನ್ನ ಮಗನನ್ನು ಮರಳಿ ಪಡೆದಳು. ಸತ್ಯವೇದದಲ್ಲಿ ಹೆಸರಿಲ್ಲದ ಮಹಿಳೆಯಾಗಿ, ಬೋಧಕರು ಹೆಚ್ಚಾಗಿ ಬೋಧಿಸದ ಮಹಿಳೆಯಾಗಿ ಈಕೆ ಕಾಣಲ್ಪಟ್ಟರೂ, ಉಪಚರಿಸುವುದರಲ್ಲಿ, ದೇವರ ಮಕ್ಕಳನ್ನು ಗೌರವಿಸುವುದರಲ್ಲಿ, ದೃಢವಾಗಿ ನಂಬುವ ವಿಷಯದಲ್ಲಿ ಈಕೆ ನಮಗೆಲ್ಲರಿಗೂ ಒಂದು ಉತ್ತಮವಾದ ಉದಾಹರಣೆ ಎಂದೇ ಹೇಳಬಹುದು. 

 

ಪ್ರಿಯರೇ! ಒಂದು ವೇಳೆ ಸೇವೆ ಮಾಡಲು ನಮಗೆ ಅವಕಾಶವಿಲ್ಲದಿರಬಹುದು. ಆದರೆ ಶೂನೇಮ್ಯಳಂತೆ ನಮ್ಮ ಊರಿಗೆ ಬರುವ ದೇವರ ಸೇವಕರನ್ನು ನಮ್ಮ ಮನೆಗಳಲ್ಲಿ ಪ್ರೀತಿಯಿಂದ ಸ್ವಾಗತಿಸಿ ಉಪಚರಿಸೋಣ! ಪ್ರವಾದಿಯನ್ನು ಪ್ರವಾದಿಯೆಂದು ಸೇರಿಸಿಕೊಳ್ಳುವವನು ಪ್ರವಾದಿಗೆ ಬರತಕ್ಕ ಪ್ರತಿಫಲವನ್ನು ಹೊಂದುವನು ಎಂದು ಸತ್ಯವೇದವು ಹೇಳುವುದನ್ನು ನಾವು ಮೇಲಿನ ವಾಕ್ಯದಲ್ಲಿ ನೋಡುತ್ತೇವೆ. ಹೌದು, ಶೂನೇಮ್ಯಳಂತೆ ಪ್ರತಿಯಾಗಿ ಏನನ್ನೂ ನಿರೀಕ್ಷಿಸದೆ ನಾವು ಒಳ್ಳೆಯದನ್ನು ಮಾಡಿದಾಗ, ದೇವರು ನಮಗೆ ತಕ್ಕ ಪ್ರತಿಫಲವನ್ನು ನೀಡುತ್ತಾರೆ ಎಂಬುದರಲ್ಲಿ ಸಂದೇಹವೇ ಇಲ್ಲ.

- Mrs. ಅನಿತಾ ಅಲಗರಸ್ವಾಮಿ

 

ಪ್ರಾರ್ಥನಾ ಅಂಶ:

ತಮಿಳುನಾಡಿನ ಎಲ್ಲಾ 310 ತಾಲೂಕುಗಳಲ್ಲಿ ದೆಬೋರಾಳ್ ಗುಂಪುಗಳನ್ನು ರಚಿಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş