Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 25.08.2023
Share:

By Village Missionary Movement

Friday, 25-Aug-2023

ಧೈನಂದಿನ ಧ್ಯಾನ(Kannada) – 25.08.2023

 

ಶತಾಧಿಪತಿ 

 

"…ನಾನು ಇಂಥ ದೊಡ್ಡ ನಂಬಿಕೆಯನ್ನು ಇಸ್ರಾಯೇಲ್ ಜನರಲ್ಲಿಯೂ ಕಾಣಲಿಲ್ಲವೆಂದು ನಿಮಗೆ ಹೇಳುತ್ತೇನೆ ಅಂದನು." - ಲೂಕ 7:9

 

ಕೆಲವರು ನಡೆಸಿದ ಅಸಾಧಾರಣ ಘಟನೆಯ ಕುರಿತು ಕೇಳಿದಾಗ ಅಥವಾ ನೋಡಿದಾಗ ನಮಗೆ ಆಶ್ಚರ್ಯವಾಗುತ್ತದೆ. ಆದರೆ ಒಬ್ಬರ ಗುಣವನ್ನು ಕಂಡು ಯೇಸು ಕ್ರಿಸ್ತನೇ ಆಶ್ಚರ್ಯಪಟ್ಟರೆಂದರೆ, ಅದು ನಮಗೂ ಆಶ್ಚರ್ಯವಾಗಿದೆಯಲ್ಲವೇ? ಹೌದು, ಯೇಸುಕ್ರಿಸ್ತನನ್ನು ಅಚ್ಚರಿಗೊಳಿಸಿದವರೇ ಈ ಶತಾಧಿಪತಿ. ಸತ್ಯವೇದದಲ್ಲಿ ಆತನ ಹೆಸರನ್ನು ನಮೂದಿಸದಿದ್ದರೂ, ಅವರ ಪ್ರತಿಯೊಂದು ಸತ್ಕ್ರಿಯೆಗಳೂ ಸತ್ಯವೇದದಲ್ಲಿ ಬರೆಯಲು ಅರ್ಹವಾಗಿವೆ. ಅವರ ಜೀವನವನ್ನು ನಮ್ಮ ಜೀವನದೊಂದಿಗೆ ಹೋಲಿಸಿ ನೋಡಿ ದೇವರು ಮೆಚ್ಚುವವರಂತೆ ಬದುಕಲು ನಾವು ಸಹ ಪ್ರಯತ್ನಿಸೋಣವಾ?

 

* ಶತಾಧಿಪತಿಯು ಒಬ್ಬ ಸೇನಾಧಿಪತಿಯಾಗಿದ್ದರೂ ತನ್ನ ಸೇವಕನ ಮೇಲೆ ಪ್ರೀತಿಯುಳ್ಳವರಾಗಿದ್ದರು. ಅವರು ತನ್ನ ಹೆಂಡತಿ ಮಕ್ಕಳ ಸ್ವಸ್ಥತೆಗಾಗಿ ಯೇಸುವನ್ನು ಹುಡುಕಿಬಂದಿದ್ದರೆ ಆಶ್ಚರ್ಯವೇನಿಲ್ಲ. ಆದರೆ ಅವರೋ ಸೇವಕನಿಗಾಗಿ ದೇವರನ್ನು ಪ್ರಾರ್ಥಿಸಿದರು. ನಮ್ಮ ಆಲೋಚನೆ, ಮನಸ್ಥಿತಿ ಮತ್ತು ಕ್ರಿಯೆ ಹೀಗಿರುತ್ತದಾ? ನಮ್ಮ ಮನೆಯಲ್ಲಿ ಕೆಲಸ ಮಾಡುವವರ ಬಗ್ಗೆ ನಮಗೆ ಕಾಳಜಿ ಇದೆಯೇ?

 

* ಇವರು ಅನ್ಯಮತಸ್ಥರಾಗಿದ್ದರೂ, ಯೆಹೂದ್ಯರನ್ನು ಪ್ರೀತಿಸಿ ಅವರಿಗಾಗಿ ಒಂದು ಆಲಯವನ್ನೂ ಕಟ್ಟಿಕೊಟ್ಟಿದ್ದಾರೆ. ಇವರ ವಿಶಾಲ ಮನೋಭಾವವನ್ನು ನೋಡಿ! ಇವರು ಉದಾರ ಸ್ವಭಾವದವರಾಗಿದ್ದರು ಮತ್ತು ಜನಾಂಗ ಮತ್ತು ಜಾತಿ ಎಂಬ ಭಾವನೆಗಳನ್ನೂ ಮೀರಿ ಇತರರಿಗೆ ಒಳ್ಳೆಯ ಕಾರ್ಯಗಳನ್ನು ಮಾಡುವ ಉದ್ದೇಶವನ್ನು ಹೊಂದಿದ್ದರು. ನಾವು ಸಹ ಒಂದು ಸಂಕುಚಿತ ವಲಯದಲ್ಲಿ ನಾವು, ನಮ್ಮದು, ನಮ್ಮ ಜನಾಂಗ ಎಂದು ವರ್ತಿಸದೇ ವಿಶಾಲ ಮನೋಭಾವದಿಂದ ಕಾಣಲ್ಪಡೋಣ.

 

* "ಪ್ರಭುವೇ ನೀನು ನನ್ನ ಮನೆಗೆ ಬರತಕ್ಕಷ್ಟು ಯೋಗ್ಯತೆ ನನ್ನಲ್ಲಿಲ್ಲ" ಎಂದು ತನ್ನನ್ನು ತಗ್ಗಿಸಿಕೊಂಡು ತನ್ನ ಸ್ನೇಹಿತನ ಬಳಿ ಹೇಳಿ ಕಳುಹಿಸಿದರು. ನಾವು ಪ್ರಾರ್ಥಿಸುವಾಗ ದೇವರ ಮುಂದೆ ನಮ್ಮನ್ನು ತಗ್ಗಿಸಿಕೊಳ್ಳುತ್ತೇವೆ; ಆದರೆ ನಮ್ಮ ದೈನಂದಿನ ಜೀವನದಲ್ಲಿ ನಾವು ಮನುಷ್ಯರ ಮುಂದೆ ನಮ್ಮನ್ನು ತಗ್ಗಿಸಿಕೊಳ್ಳಲು ಸಿದ್ಧರಿಲ್ಲ. ಅದು ನಮಗೆ ಕಷ್ಟಕರವಾಗಿದೆ.

 

* "ನೀನು ಒಂದೇ ಒಂದು ಮಾತು ಹೇಳು" ಎಂದು ದೇವರ ಮಾತಿನಲ್ಲಿ ಅಚಲವಾದ ನಂಬಿಕೆ ಇಟ್ಟಿದ್ದರು. ಇಂದು ನಾವು ಮನುಷ್ಯರು ಹೇಳುವ ಸುಳ್ಳು ಭರವಸೆಗಳನ್ನು ನಂಬುತ್ತೇವೆ. ಆದರೆ ಸತ್ಯವೇದ ವಾಕ್ಯಗಳನ್ನು ಎಷ್ಟರ ಮಟ್ಟಿಗೆ ನಂಬುತ್ತಿದ್ದೇವೆ ಎಂದು ಯೋಚಿಸೋಣ.

 

ಶತಾಧಿಪತಿಯ ಹೆಸರು ಸತ್ಯವೇದದಲ್ಲಿ ಇಲ್ಲದಿದ್ದರೂ, ಜೀವಗ್ರಂಥದಲ್ಲಿದೆ. ನಾವು ಸಹ ಈ ಲೋಕದಲ್ಲೇ ಪ್ರಖ್ಯಾತಿ ಹೊಂದಲು ಬಯಸದೆ, ಜೀವಗ್ರಂಥದಲ್ಲಿ ಸ್ಥಾನ ಪಡೆಯುವ ಮಟ್ಟಿಗೆ ಸಾಕ್ಷಿಯಾಗಿ ಬದುಕೋಣ.

- Mrs. ಪುಷ್ಪ ಸೈಮನ್

 

ಪ್ರಾರ್ಥನಾ ಅಂಶ:

ತಮಿಳುನಾಡಿನಲ್ಲಿ ಸಭೆಗಳಿಲ್ಲದ ಸಾವಿರಾರು ಹಳ್ಳಿಗಳಲ್ಲಿ ಸಭೆಗಳನ್ನು ಕಟ್ಟಿ ಎಬ್ಬಿಸಲು ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet holiganbet giriş holiganbet giriş matbet holiganbet sahabet onwin casibom giriş casibom casibom giriş casibom matbet matbet giriş jojobet superbetin superbetin giriş betsmove betsmove giriş holiganbet holiganbet giriş jasminbet jasminbet giriş kargabet kargabet giriş matbet matbet giriş norabahis norabahis giriş piabellacasino piabellacasino giriş supertotobet supertotobet giriş marsbahis casibom casibom giriş holiganbet holiganbet giriş jojobet jojobet giriş holiganbet casibom çarkbet vizebet vizebet giriş alobet alobet giriş amgbahis amgbahis giriş sweet bonanza grandpashabet grandpashabet jojobet gameofbet