Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 23.08.2023
Share:

By Village Missionary Movement

Wednesday, 23-Aug-2023

ಧೈನಂದಿನ ಧ್ಯಾನ(Kannada) – 23.08.2023

 

ಮುಂಜಾನೆ

 

"ಹೊತ್ತಾರೆ ನಿನ್ನ ಕೃಪೆಯು ನನಗೆ ಪ್ರಕಟವಾಗಲಿ; ನಿನ್ನಲ್ಲಿ ಭರವಸವಿಟ್ಟಿದ್ದೇನಲ್ಲಾ. ನಾನು ನಡೆಯತಕ್ಕ ಮಾರ್ಗವನ್ನು ತಿಳಿಸು; ನನ್ನ ಮನಸ್ಸನ್ನು ನಿನ್ನಲ್ಲಿಯೇ ಇಟ್ಟಿದ್ದೇನೆ" - ಕೀರ್ತನೆ 143:8

 

ಮುಂಜಾನೆ . . ತುಂಬಾ ಕತ್ತಲು. . . ದೇವರೊಂದಿಗೆ ಐಕ್ಯವಾಗಲು ಇದು ಅದ್ಭುತ ಸಮಯ. ಮನುಷ್ಯರ ಮುಖವನ್ನು ನೋಡುವ ಮೊದಲು, ದೇವರ ಪ್ರಸನ್ನತೆಯನ್ನು ಹುಡುಕಿ, ಆ ದಿನದ ದೇವರ ಯೋಜನೆಯನ್ನು ತಿಳಿಯಲು, ದೇವರ ಕೃಪೆಯನ್ನು ಪಡೆಯಲು ಕಾದಿರುವಂತಹ ಆ ಸಮಯವೇ ವಿಜಯದ ಸಮಯ. ನಿಜವಾಗಿಯೂ ಪ್ರತಿಯೊಬ್ಬ ಕ್ರೈಸ್ತನ ಜೀವನದಲ್ಲಿಯೂ ಇದು ಇರುವುದಾದರೆ, ಅವನು ಖಂಡಿತವಾಗಿಯೂ ಲೋಕವನ್ನು ಜಯಿಸಿಬಿಡುತ್ತಾನೆ.

 

ನಮ್ಮ ರಕ್ಷಕನಾದ ಯೇಸು ಕ್ರಿಸ್ತನು ಕೂಡ ಮುಂಜಾನೆ ಎದ್ದು ತಂದೆಯ ಸಾನಿಧ್ಯಕ್ಕೆ ಹೋದರು. ಅವರು ತಂದೆಯ ಚಿತ್ತ ಮತ್ತು ಯೋಜನೆಯನ್ನು ತಿಳಿದುಕೊಂಡರು. ಅದರಂತೆ, ಅದ್ಬುತ ಅತಿಶಯಗಳನ್ನು ಮಾಡಿ ಸೈತಾನನ್ನು ಸುಲಭವಾಗಿ ಸೋಲಿಸಿದರು. ಮತ್ತು ಸತ್ಯವೇದದಲ್ಲಿರುವ ಪರಿಶುದ್ಧರು ಶತ್ರುಗಳನ್ನು ಸಂಹರಿಸಲು ಮತ್ತು ದೇಶಗಳನ್ನು ವಶಪಡಿಸಿಕೊಳ್ಳಲು ಮುಂಜಾನೆಯೇ ಎದ್ದು ಹೋದದ್ದನ್ನು ಓದುತ್ತೇವೆ.

 

ಮುಖ್ಯವಾಗಿ ಯೆಹೂದದ ಅರಸನಾದ ಯೆಹೋಷಾಫಾಟನೆಂಬ ಅರಸನಿಗೆ ವಿರುದ್ಧವಾಗಿ ಯುದ್ಧಮಾಡಲು ಬಂದ ಮೋವಾಬ್ಯರೂ ಅಮ್ಮೋನಿಯರನ್ನು‌ ಕಂಡಾಗ ಬಹಳವಾಗಿ ಕಳವಳಗೊಂಡರು. ಆದಾಗ್ಯೂ, ಅರಸನು ಮತ್ತು ಜನರು ತಮ್ಮ ಕಣ್ಣುಗಳನ್ನು ಮತ್ತು ಕೈಗಳನ್ನು ನೇರವಾಗಿ ದೇವರ ಕಡೆಗೆ ಎತ್ತಿ ಪ್ರಾರ್ಥನೆಯಲ್ಲಿ ತಮ್ಮನ್ನು ತಗ್ಗಿಸಿಕೊಂಡರು. ದೇವರು ಹೇಳಿದ್ದೇನು? "ಕಳವಳಗೊಳ್ಳಬೇಡಿರಿ, ಹೆದರಬೇಡಿರಿ, ಯುದ್ಧವು ನಿಮ್ಮದಲ್ಲ, ದೇವರದೇ" ಎಂದರು. ನಡೆದದ್ದೇನು? ಅವರು ಶತ್ರುಗಳನ್ನು ಸಂಹರಿಸಲು ಮುಂಜಾನೆ ಬೇಗನೆ ಎದ್ದರು. ದೇವರನ್ನು ಸ್ತುತಿಸಿ ಗಾಯನಮಾಡುವದಕ್ಕಾಗಿ ಕೆಲವರನ್ನು ಆರಿಸಿಕೊಂಡು ಯುದ್ಧ ಭಟರ ಮುಂದೆ ನಿಲ್ಲಿಸಿದರು. ಸ್ತುತಿಸಲು ಪ್ರಾರಂಭಿಸಿದಾಗ ವಿರೋಧಿಗಳು ಒಬ್ಬರನ್ನೊಬ್ಬರು ಕೊಂದುಕೊಂಡು ಬಿದ್ದುಹೋದರು. ಆಹಾ! ಎಷ್ಟು ದೊಡ್ಡ ವಿಜಯದ ಶಬ್ದ!

 

ಪ್ರಿಯರೇ! ವಿರೋಧಿಯಾಗಿರುವ ಸೈತಾನನು ನಿಮ್ಮನ್ನು ಭಯಪಡಿಸುತ್ತಲೇ ಇದ್ದಾನಾ? ನಿಮ್ಮನ್ನು ನಾಶಮಾಡುತ್ತೇನೆ ಎಂದು ಸವಾಲು ಹಾಕುತ್ತಿದ್ದಾನಾ? ಅಥವಾ ಮನುಷ್ಯರು ನಿಮ್ಮ ವಿರುದ್ಧ ಎದ್ದಿದ್ದಾರಾ? ಭೀತಿಗೊಳಗಾಗಬೇಡಿರಿ. ದೇವರು ನಮಗೆ ಸಹಾಯಕನಾಗಿ ನಿಂತಿರುವಾಗ ನಮಗಿನ್ನೇಕೆ ಚಿಂತೆ? ಯುದ್ಧವು ಯೆಹೋವನದಲ್ಲವೇ? ನಾವು ಮಾಡಬೇಕಾಗಿರುವುದೆಲ್ಲಾ ಮುಂಜಾನೆ ಎದ್ದು ದೇವರ ಸನ್ನಿಧಿಯಲ್ಲಿ ನಿಲ್ಲುವುದಷ್ಟೆ. ಹೌದು, ಬೆಳಗಿನ ಪ್ರಾರ್ಥನೆ ಅತ್ಯಗತ್ಯ! ಹೆಚ್ಚು ಕತ್ತಲೆ, ಹೆಚ್ಚು ಮಹಿಮೆ, ಮುಂಜಾನೆಯ ಪ್ರಾರ್ಥನೆಯು ಯಶಸ್ಸನ್ನು ತರುತ್ತದೆ. ಮುಂಜಾನೆಯಲ್ಲಿ ಕಾದಿರುವಂತಹ ಅನುಭವವನ್ನು ಅಭ್ಯಾಸಮಾಡಿಕೊಂಡು ಜಯ ವೀರರಾಗಿ ಜೀವಿಸಿರಿ.

- S. ಮನೋಜ್ ಕುಮಾರ್

 

ಪ್ರಾರ್ಥನಾ ಅಂಶ:

ನಮ್ಮ ಆವರಣದಲ್ಲಿ ನಡೆಯುವ ಅಡುಗೆ ಕೆಲಸಗಳಲ್ಲಿ ತೊಡಗಿರುವ ವ್ಯಕ್ತಿಗಳಿಗಾಗಿ; ಅವರ ಕುಟುಂಬಗಳಿಗಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet holiganbet giriş holiganbet giriş matbet holiganbet sahabet onwin casibom giriş casibom casibom giriş casibom matbet matbet giriş jojobet superbetin superbetin giriş betsmove betsmove giriş holiganbet holiganbet giriş jasminbet jasminbet giriş kargabet kargabet giriş matbet matbet giriş norabahis norabahis giriş piabellacasino piabellacasino giriş supertotobet supertotobet giriş marsbahis casibom casibom giriş holiganbet holiganbet giriş jojobet jojobet giriş holiganbet casibom çarkbet vizebet vizebet giriş alobet alobet giriş amgbahis amgbahis giriş sweet bonanza grandpashabet grandpashabet jojobet gameofbet