Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 22.08.2023
Share:

By Village Missionary Movement

Monday, 21-Aug-2023

ಧೈನಂದಿನ ಧ್ಯಾನ(Kannada) – 22.08.2023

 

ಹೇಳುವುದಕ್ಕಿಂತ ಮುಂಚೆ. . .

 

"ಅಳುತ್ತಾ ಬಿತ್ತುವವರು ಹಾಡುತ್ತಾ ಕೊಯ್ಯುವರು" - ಕೀರ್ತನೆ. 126:5

 

ಬಿಲ್ಲಿಸಂಡೆ ಎಂಬ ದೇವಮನುಷ್ಯನು ತನ್ನ ಪ್ರಸಂಗದಲ್ಲಿ ಈ ಕೆಳಗಿನ ಘಟನೆಯನ್ನು ಆಗಾಗ್ಗೆ ಹೇಳುವುದುಂಟು. ಒಬ್ಬ ನಂಬಿಕೆಯಿಲ್ಲದ ಕಮ್ಮಾರನಿದ್ದನು. ಅವನು "ಯಾವ ಕ್ರೈಸ್ತನೂ ನನ್ನ ಬಳಿ ಬಂದು ಕ್ರೈಸ್ತ ಧರ್ಮದ ಬಗ್ಗೆ ಮಾತನಾಡಲು ಸಾಧ್ಯವಿಲ್ಲ, ನಾನು ಅವರ ಜತೆ ವಾದ ಮಾಡಿ ಬಾಯಿ ಮುಚ್ಚಿಸುಬಿಡುತ್ತೇನೆ" ಎಂದು ಸವಾಲು ಹಾಕಿದನು. ಇದನ್ನು ತಿಳಿದ ಸ್ಥಳೀಯ ಸಭೆಯ ವಯಸ್ಸಾದ ಹಿರಿಯರೊಬ್ಬರು, ಹೇಗಾದರೂ ಈ ಮನುಷ್ಯನನ್ನು ಭೇಟಿಯಾಗಬೇಕೆಂದು ಯೋಚಿಸಿ, ಅವರ ಹೆಂಡತಿಯೊಂದಿಗೆ ಸೇರಿ ಅವನಿಗಾಗಿ ಪ್ರಾರ್ಥಿಸಲು ಪ್ರಾರಂಭಿಸಿದರು.

 

 ಒಂದು ದಿನ ಹಿರಿಯರು ಆ ವ್ಯಕ್ತಿಯನ್ನು ಭೇಟಿಯಾಗಿ, "ಸ್ನೇಹಿತನೇ, ನನ್ನ ಹೆಂಡತಿ ಮತ್ತು ನಾನು ನಿನಗಾಗಿ ದಿನನಿತ್ಯ ಪ್ರಾರ್ಥಿಸುತ್ತಾ ಇದ್ದೇವೆ" ಎಂದು ಹೇಳುತ್ತಿರುವಾಗಲೇ ಆ ಹಿರಿಯರ ಕಣ್ಣುಗಳು ಕಣ್ಣೀರಿನಿಂದ ತುಂಬಿದವು. ಅದಕ್ಕಿಂತ ಹೆಚ್ಚಿಗೆ ಏನನ್ನೂ ಹೇಳಲಾಗಲಿಲ್ಲ. ಅವರು ತನ್ನ ಮನೆಗೆ ಹಿಂದಿರುಗಿದರು. ಇದನ್ನು ತನ್ನ ಹೆಂಡತಿಗೆ ಹೇಳಿದಾಗ, "ನೀವು ಕಣ್ಣೀರು ಸುರಿಸಿದ್ದರಿಂದ ಕರ್ತನು ಅವನಲ್ಲಿ ಕಾರ್ಯ ಮಾಡುತ್ತಾರೆ" ಎಂದು ಹೇಳಿದರು. ಹೇಳಿದಂತೆಯೇ ಈ ಹಿರಿಯರ ಮಾತುಗಳು ಮತ್ತು ಕಣ್ಣೀರಿನ ಕಣ್ಣುಗಳು ಕಮ್ಮಾರನ ಹೃದಯವನ್ನು ಕದಲಿಸಿತು. ಮತ್ತೆ ಮತ್ತೆ ಆ ಹಿರಿಯರ ರೂಪವು ಅವನ ಕಣ್ಣೆದುರಿಗೆ ಕಾಣಿಸುತ್ತಲೇ ಇದ್ದುದರಿಂದ ಕಮ್ಮಾರನು ಅವರ ಮನೆಗೆ ಹೋಗಿ ನಡೆದ ಬದಲಾವಣೆಯನ್ನು ತಿಳಿಸಿ ಅವರ ಮುಂದೆ ತನ್ನನ್ನು ತಗ್ಗಿಸಿಕೊಂಡು ಮೊಣಕಾಲೂರಿದನು. ಆ ದಿನವೇ ದೇವರ ಮಗುವಾಗಿ ಮಾರ್ಪಟ್ಟನು.

 

ನಾವು ಸಹ ನಮ್ಮ ಸುತ್ತಲಿರುವ ಜನರಿಗೆ ದೇವರ ಬಗ್ಗೆ ಹೇಳಲು ಬಯಸುತ್ತೇವೆ. ಅವಕಾಶಕ್ಕಾಗಿ ಎದುರು ನೋಡುತ್ತೇವೆ. ಅದೇ ಸಮಯದಲ್ಲಿ, ಆ ಆತ್ಮಕ್ಕಾಗಿ ಭಾರವುಳ್ಳ ಹೃದಯದೊಂದಿಗೆ, ಕಣ್ಣೀರಿನಿಂದ ಪ್ರಾರ್ಥಿಸಲು ವಿಫಲವಾದರೆ, ಅವರ ಜೀವನದಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ. ನಮ್ಮ ಇತರ ಎಲ್ಲಾ ಪ್ರಯತ್ನಗಳು ವ್ಯರ್ಥವಾಗುತ್ತವೆ. ಏಕೆಂದರೆ ಪಾಪಿಯಾದ ಒಬ್ಬನ ಪಾಪಗಳನ್ನು ಅವನಿಗೆ ಪ್ರೇರೇಪಿಸುವುದು ಪವಿತ್ರಾತ್ಮನೇ. ಆದ್ದರಿಂದ ನಾವು ಬೋಧಿಸುವ ಸುವಾರ್ತೆಯ ಮೂಲಕ ಪವಿತ್ರಾತ್ಮನು ಅವರ ಹೃದಯದಲ್ಲಿ ಕಾರ್ಯ ಮಾಡುವಂತೆ ನಾವು ಕಣ್ಣೀರಿನಿಂದ ಪ್ರಾರ್ಥಿಸಬೇಕು.

 

ಸಭೆಗಳಿಗಾಗಿಯು ಮತ್ತು ಒಬ್ಬ ವ್ಯಕ್ತಿಯ ರಕ್ಷಣೆಗಾಗಿಯು ಪೌಲನು ಕಣ್ಣೀರಿನೊಂದಿಗೆ ಪ್ರಾರ್ಥಿಸಿದರು. ನಾವು ಸಹ ಸುವಾರ್ತೆಯನ್ನು ಸಾರಲು ಬಯಸುವ ವ್ಯಕ್ತಿಗಾಗಿ ಭಾರದೊಂದಿಗೆ ಪ್ರಾರ್ಥಿಸೋಣ. ಆಗ ದೇವರು ಖಂಡಿತವಾಗಿಯೂ ಅವಕಾಶಗಳನ್ನು ಒದಗಿಸಿಕೊಟ್ಟು ಅವರ ಹೃದಯವನ್ನು ನೇರವಾಗಿ ಸುವಾರ್ತೆಯ ಕಡೆಗೆ ತಿರುಗಿಸುತ್ತಾರೆ ಎಂಬುದರಲ್ಲಿ ಸಂದೇಹವೇ ಇಲ್ಲ.

- Mrs. ಶಶಿಕಲಾ ಪರಮಶಿವಂ

 

ಪ್ರಾರ್ಥನಾ ಅಂಶ:

ನಮ್ಮ ಉತ್ತರ ಭಾರತ ರಾಜ್ಯದ ಸೇವೆಗಳಿಗಾಗಿ ಮತ್ತು ಅಲ್ಲಿ ಸೇವೆ ಮಾಡುವ ಸೇವಕರಿಗಾಗಿ ಪ್ರಾರ್ಥಿಸೋಣ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al