Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 13.08.2023 (Kids Special)
Share:

By Village Missionary Movement

Saturday, 12-Aug-2023

ಧೈನಂದಿನ ಧ್ಯಾನ(Kannada) – 13.08.2023 (Kids Special)

 

ಉಜ್ಜೀವನ ಪ್ರಾರ್ಥನೆ

 

"ಲೋಕವನ್ನು ಜಯಿಸಿದಂಥದು ನಮ್ಮ ನಂಬಿಕೆಯೇ" - 1 ಯೋಹಾನ 5:4

 

ದಟ್ಟವಾದ ಕಾಡಿನ ಬೆಟ್ಟದ ಮೇಲೆ ಒಂದು ಹಳ್ಳಿ ಇತ್ತು. ಇಲ್ಲಿ ವಿದ್ಯುತ್ ಸೌಕರ್ಯ, ಆಸ್ಪತ್ರೆ, ಸಾರಿಗೆ ಸೌಲಭ್ಯ, ಶಾಲೆ ಇಲ್ಲ. ಹಾಗಾದರೆ ಅಲ್ಲಿ ಎಷ್ಟು ಕಷ್ಟವಾಗಿರುತ್ತದೆ? ನಿಮಗೆ ಎಲ್ಲಾ ಸೌಲಭ್ಯಗಳು ಇವೆ ಅಲ್ವಾ. ಅದಕ್ಕಾಗಿ ಯೇಸಪ್ಪಾಗೆ ಧನ್ಯವಾದ ಹೇಳಬೇಕು. ಸರೀನಾ ಪುಟಾಣಿಗಳೇ! ಅಲ್ಲಿನ ಜನರು ಕರೀಮಣಿ ಮತ್ತು ವಿಧವಿಧವಾದ ಮಣಿಗಳನ್ನು ಪೋಣಿಸಿ ಅವುಗಳನ್ನು ಮಾಲೆಯಾಗಿ ಧರಿಸುತ್ತಿದ್ದರು. ದೇಹಕ್ಕೆ ಯಾವುದೇ ರೀತಿಯ ಅನಾರೋಗ್ಯ ಬಂದರೂ ಮಾಂತ್ರಿಕನ ಬಳಿಗೆ ಹೋಗಿ ಅವರು ಹೇಳುವುದನ್ನು ಹಾಗೆ ಕೇಳುತ್ತಿದ್ದರು. ಕೆಲವೊಮ್ಮೆ ಅವರು ಪರಿಹಾರ ಮಾಡಲು ಸಹ ಹೇಳುತ್ತಿದ್ದರು. ದಾರ ಕಟ್ಟಲು ಹೇಳುತ್ತಿದ್ದರು, ಬಿಸಿ ಇಡುತ್ತಿದ್ದರು. ಆಗಾಗ ಬಲಿಪೂಜೆಗಳೂ ನಡೆಯುತ್ತಿದ್ದವು. ಈ ಗ್ರಾಮದಲ್ಲಿ ಇವಾ ಮತ್ತು ಏಮಿ ಎಂಬ ಇಬ್ಬರು ಹುಡುಗಿಯರಿದ್ದರು. ಇವಾಗೆ ಇದ್ದಕ್ಕಿದ್ದಂತೆ ವಿಪರೀತ ಜ್ವರ ಬಂದಿತು. ಅಪ್ಪ ಅವಳನ್ನು ಮಾಂತ್ರಿಕನ ಬಳಿಗೆ ಕರೆದೊಯ್ದರು. ಮಾಂತ್ರಿಕ ಮಾಡಿದ್ದೇನು ಗೊತ್ತಾ? ಮಾಗಿದ ಭಟ್ಟಿಯ ತಂತಿಯಿಂದ ಹಣೆಗೆ ಒಂದು ಬಿಸಿ ಹಾಕಿದನು. ಅಯ್ಯೋ ನೋವು ತಾಳಲಾರದೆ ಮಿಡಿಯುತ್ತಿದ್ದಳು. ಒಂದು ಕಡೆ ನೋವು ಇನ್ನೊಂದೆಡೆ ಜ್ವರ ಕಡಿಮೆಯಾಗಲೇ ಇಲ್ಲ.

 

ಒಂದು ದಿನ ಮಾಂತ್ರಿಕನು ಜ್ವರ ಕಡಿಮೆಯಾಗದಿದ್ದರೆ ಅದು ಶಾಪ ಎಂದು ಹೇಳಿದನು. ಅವಳನ್ನು ಬಲಿಕೊಡಬೇಕೆಂದು ಹೇಳಿಬಿಟ್ಟನು. ಆ ಸಮಯದಲ್ಲಿ ಒಬ್ಬ ಅಪರಿಚಿತ ವ್ಯಕ್ತಿ ಯೇಸುವಿನ ಬಗ್ಗೆ ಹೇಳಿದರು ಮತ್ತು ಅವರಿಗೆ ಬೈಬಲ್ ಕೊಟ್ಟರು. ಹುಣ್ಣಿಗೆ ಔಷಧಿ, ಜ್ವರಕ್ಕೆ ಮಾತ್ರೆ ಕೊಟ್ಟು ಪ್ರಾರ್ಥಿಸಿ ಹೊರಟು ಹೋದರು. ಸ್ವಲ್ಪಮಟ್ಟಿಗೆ ಜ್ವರ ಕಡಿಮೆಯಾಯಿತು ಮತ್ತು ಹುಣ್ಣು ವಾಸಿಯಾಗತೊಡಗಿತು. ಇನ್ನೊಂದು ಕಡೆ ಯಜ್ಞಕ್ಕೆ ಏರ್ಪಾಡುಗಳನ್ನೂ ಮಾಡುತ್ತಿದ್ದರು. ಇವಾ ಮತ್ತು ಏಮಿ ಯೇಸಪ್ಪನ ಬಳಿ ಪ್ರಾರ್ಥಿಸಿದರು. ಎಂಥಾ ಆಶ್ಚರ್ಯ! ಕೆಲವೇ ಗಂಟೆಗಳಲ್ಲಿ ಜ್ವರ ಸಂಪೂರ್ಣವಾಗಿ ಕಡಿಮೆಯಾಗಿಬಿಟ್ಟಿತು. ಸುಟ್ಟ ಗಾಯ ಚೆನ್ನಾಗಿ ವಾಸಿಯಾಗಿತ್ತು. ಕೆಲಸ ಮುಗಿಸಿ ಮನೆಗೆ ಬಂದ ಪೋಷಕರು ಬೆಚ್ಚಿಬಿದ್ದರು. ಈ ಅದ್ಭುತ ಹೇಗೆ ಸಂಭವಿಸಿತು ಎಂದು ಕೇಳಿದಾಗ, ನಾವು ಯೇಸಪ್ಪನ ಬಳಿ ಪ್ರಾರ್ಥಿಸಿದೆವು ನನ್ನ ಮೇಲೆ ಒಂದು ಬೆಳಕು ಪ್ರಕಾಶಿಸಿತು ಆ ಕ್ಷಣದಲ್ಲೇ ನಾನು ಗುಣಹೊಂದಿದೆ ಎಂದು ಹೇಳಿದ ಕೂಡಲೇ ಅಪ್ಪ, ಅಮ್ಮನಿಗೆ ತುಂಬಾ ಖುಷಿಯಾಯಿತು. ಮಾಂತ್ರಿಕನೂ ಇದನ್ನು ಕೇಳಿ ನೋಡಲು ಬಂದನು. ನಿನಗೆ ಸ್ವಸ್ಥತೆ ನೀಡಿದ ಸ್ವಾಮಿಯೇ ನಿಜವಾದ ದೇವರು, ಎಂದು ಹೇಳಿದಾಗ ಇಡೀ ಊರೇ ಯಾಗ ಮಾಡುವ ಪರಿಪಾಠದಿಂದ ಹೊರಬಂದಿತು.

 

ಪುಟಾಣಿಗಳೇ! ಇವಾ ಮತ್ತು ಏಮಿ ಇಬ್ಬರೂ ಯೇಸಪ್ಪನ ಬಳಿ ನಂಬಿಕೆಯಿಟ್ಟು ಪ್ರಾರ್ಥಿಸಿದ್ದರಿಂದ ಎಷ್ಟು ದೊಡ್ಡ ಬದಲಾವಣೆ ಸಂಭವಿಸಿದೆ ಎಂದು ನೀವು ನೋಡುದ್ರಾ? ಇಂತಹ ಜನರಿಗಾಗಿ ನೀವೂ ಸಹ ಪ್ರಾರ್ಥಿಸಿದರೆ ಉಜ್ಜೀವನ ಖಂಡಿತವಾಗಿ ಬಂದು ಬಿಡುತ್ತದೆ. ಹಲ್ಲೇಲೂಯಾ!

- Mrs. ಜ್ಯೋತಿ ಸ್ಟಾಲಿನ್

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al casibom jojobet jojobet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş milanbahis milanbahis giriş casibom giriş casibom casibom jojobet jojobet giriş bahsegel