Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 12.08.2023
Share:

By Village Missionary Movement

Friday, 11-Aug-2023

ಧೈನಂದಿನ ಧ್ಯಾನ(Kannada) – 12.08.2023

 

ಕರ್ನಾಟಕ

 

"…ಒಂದು ಕಾಲ ಬರುತ್ತದೆ, ಆ ಕಾಲದಲ್ಲಿ ನೀವು ತಂದೆಯನ್ನು ಆರಾಧಿಸಬೇಕಾದರೆ ಈ ಬೆಟ್ಟಕ್ಕೂ ಹೋಗುವದಿಲ್ಲ, ಯೆರೂಸಲೇವಿುಗೂ ಹೋಗುವದಿಲ್ಲ" - ಯೋಹಾನ 4:21

 

ಕ್ರೈಸ್ತ ಧರ್ಮವು 16 ನೇ ಶತಮಾನದಲ್ಲಿ ಪೋರ್ಚುಗೀಸರ ಆಗಮನದೊಂದಿಗೆ ಕರ್ನಾಟಕವನ್ನು ಪ್ರವೇಶಿಸಿತು. ನಂತರ 1545 ರಲ್ಲಿ ಸೇಂಟ್ ಫ್ರಾನ್ಸಿಸ್ ಕ್ಸೇವಿಯರ್ ಆಗಮನದೊಂದಿಗೆ ಇದು ಮತ್ತಷ್ಟು ಬೆಳೆಯಲು ಪ್ರಾರಂಭಿಸಿತು. ಕರ್ನಾಟಕದ ಪಶ್ಚಿಮ ಕರಾವಳಿಯ ಕಾರವಾರದಿಂದ ಮಂಗಳೂರಿನವರೆಗೆ ಕ್ರೈಸ್ತರು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬಂದರು. ಇವರೆಲ್ಲರೂ ರೋಮನ್ ಕ್ಯಾಥೋಲಿಕ್ ಪಂಗಡಕ್ಕೆ ಸೇರಿದವರು. ಕರ್ನಾಟಕದ ಇತರ ಭಾಗಗಳಿಗಿಂತ ಈ ಪ್ರದೇಶದಲ್ಲಿ ಅವರ ಸಂಖ್ಯೆ ಹೆಚ್ಚಿತ್ತು.

 

ಭಾರತದ ಕರ್ನಾಟಕ ರಾಜ್ಯದಲ್ಲಿ ಕ್ರೈಸ್ತ ಧರ್ಮ ಹಿಂದುಳಿದ ಸ್ಥಿತಿಯಲ್ಲಿದೆ. ಆದಾಗ್ಯೂ, ಕ್ರೈಸ್ತ ಧರ್ಮವು ಅದನ್ನು ಸುಧಾರಿಸುವಲ್ಲಿ ಮಾತ್ರವಲ್ಲದೆ ಶಿಕ್ಷಣ ಮತ್ತು ತಾತ್ವಿಕ ಜ್ಞಾನವನ್ನು ಸುಧಾರಿಸುವಲ್ಲಿಯೂ ಪ್ರಮುಖ ಪಾತ್ರ ವಹಿಸಿದೆ.

 

 2011 ರ ಜನಗಣತಿಯ ಪ್ರಕಾರ, ಕ್ರೈಸ್ತ ಧರ್ಮವು ಕರ್ನಾಟಕದಲ್ಲಿ ಕೇವಲ 1.87% ಇತ್ತು. ಇಲ್ಲಿ ಪ್ರೊಟೆಸ್ಟಂಟ್ ಕ್ರೈಸ್ತರೂ ಇದ್ದಾರೆ. ಭಾರತದಲ್ಲಿ ಬ್ರಿಟಿಷ್ ಆಳ್ವಿಕೆಯ ದಿನಗಳಲ್ಲಿ ಹಲವರು ಬ್ರಿಟಿಷ್ ಮಿಷನರಿಗಳ ಮೂಲಕ ಕ್ರೈಸ್ತ ಧರ್ಮಕ್ಕೆ ಪರಿವರ್ತಿಸಲ್ಪಟ್ಟರು. ಆದಾಗ್ಯೂ, ಬ್ರಿಟಿಷರು ಜನರನ್ನು ಸ್ವಯಂಪ್ರೇರಣೆಯಿಂದ ಕ್ರೈಸ್ತ ಧರ್ಮಕ್ಕೆ ಪರಿವರ್ತಿಸಿದರು. ಬೆಂಗಳೂರಿನಲ್ಲಿ ಎರಡೂ ವರ್ಗಗಳು ಹೇರಳವಾಗಿವೆ. ಸೇಂಟ್ ಮೇರಿಸ್ ಬೆಸಿಲಿಕಾ ಬೆಂಗಳೂರಿನ ಅತ್ಯಂತ ಹಳೆಯ ಚರ್ಚ್ ಆಗಿದೆ. 2001ರಲ್ಲಿ 10,09,164 ಇದ್ದ ಕ್ರೈಸ್ತರ ಸಂಖ್ಯೆ 2011ರಲ್ಲಿ 11,42,647 ಆಗಿತ್ತು. ಕ್ರಿ.ಶ 52 ರಲ್ಲಿ ಕರ್ನಾಟಕದ ರಾಜಧಾನಿ ಎಂದು ಕರೆಯಲ್ಪಡುವ ಮೈಸೂರಿಗೆ ಅಪೊಸ್ತಲನಾದ ತೋಮ ರವರು ಕೂಡ ಕ್ರೈಸ್ತ ಧರ್ಮವನ್ನು ಕೊಂಡೊಯ್ದ ಬಗ್ಗೆ ಉಲ್ಲೇಖವಿದೆ.

 

2008 ರಲ್ಲಿ, ದಕ್ಷಿಣ ಕರ್ನಾಟಕ ಪ್ರದೇಶದಲ್ಲಿ ವಾಸಿಸುವ ಜನರು ಇತರರಿಂದ ಹೆಚ್ಚು ದಾಳಿಗೊಳಗಾದರು ಈ ರೀತಿಯಾಗಿ ಬಾಧಿಸಲ್ಪಟ್ಟ ಜಿಲ್ಲೆಗಳು ಉಡುಪಿ, ಚಿಕ್ಕಮಗಳೂರು ಮತ್ತು ದಕ್ಷಿಣ ಕನ್ನಡ. ಇಂತಹ ಅನೇಕ ಘಟನೆಗಳು ಸಂಭವಿಸುತ್ತಿರುವಾಗಲೂ ಕರ್ನಾಟಕದಲ್ಲಿ ಕ್ರೈಸ್ತ ಧರ್ಮವು ದೇವರಿಗೆ ಮಹಿಮೆಯಾಗಿ ಹಲವು ಹಂತಗಳಲ್ಲಿ ಅಭಿವೃದ್ಧಿ ಹೊಂದಿದ ಸ್ಥಿತಿಯಲ್ಲೇ ಇದೆ.

 

ಬೆಳೆಯು ಬಹಳ, ಕೆಲಸದವರು ಸ್ವಲ್ಪ (ಮತ್ತಾಯ 9:37) ಆದ್ದರಿಂದ ನಮ್ಮ ಯೇಸುವಿನ ಬರುವಿಕೆಗೆ ಮುಂಚಿತವಾಗಿ ಇನ್ನೂ ಹೆಚ್ಚು ವೇಗವಾಗಿ ಕಾರ್ಯನಿರ್ವಹಿಸಿ ಕರ್ನಾಟಕವನ್ನು ಆತನಿಗೆ ಸ್ವಂತವಾಗಿ ಮಾರ್ಪಡಿಸೋಣ.

- Mrs. ಜಯಂತಿ ಬಾಕ್ಯನಾಥನ್

 

ಪ್ರಾರ್ಥನಾ ಅಂಶ:

ನಮ್ಮ ಸೇವೆಯಲ್ಲಿ ಹೊಸ ದ್ವಿಚಕ್ರ ವಾಹನಗಳ ಅವಶ್ಯಕತೆ ಇದೆ. ಸಹಾಯ ಮಾಡುವ ವ್ಯಕ್ತಿಗಳು ಎದ್ದೇಳುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al