Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 11.08.2023
Share:

By Village Missionary Movement

Thursday, 10-Aug-2023

ಧೈನಂದಿನ ಧ್ಯಾನ(Kannada) – 11.08.2023

 

ಕೇರಳ

 

"...ಜ್ಞಾನಿಯು ಆತ್ಮಗಳನ್ನು ಆಕರ್ಷಿಸುವನು." - ಜ್ಞಾನೋಕ್ತಿ. 11:30

 

ನಮ್ಮ ದೇವರು ಯಾರನ್ನೆಲ್ಲಾ ಆರಿಸಿಕೊಂಡರೋ ಅವರು ಒಂದಲ್ಲ ಒಂದು ರೀತಿಯಲ್ಲಿ ನಮಗೆ ಒಂದು ಸಂದೇಶವನ್ನು ತಿಳಿಸಿದ್ದಾರೆ. ಅವರ ಜೀವನದಲ್ಲಿ ಮಾತ್ರವಲ್ಲದೆ ಅವರ ಸಾವಿನಲ್ಲೂ ಸಹ ಅವರು ನಮಗೊಂದು ಸಂದೇಶವನ್ನು ಬಿಟ್ಟು ಹೋಗಿದ್ದಾರೆ. ಯೇಸುಕ್ರಿಸ್ತನ 12 ಶಿಷ್ಯರಲ್ಲಿ ನಂಬಿಕೆಯಲ್ಲಿ ದುರ್ಬಲರಾಗಿದ್ದ ಮತ್ತು ಅವರ ಗಾಯಗಳನ್ನು ನೋಡಿದ ನಂತರವೇ ನಂಬಿದ ತೋಮ ನಮ್ಮ ಭಾರತ ದೇಶದಲ್ಲಿ ಕೇರಳ ರಾಜ್ಯದಲ್ಲಿ ಮಾಡಿದ ಸೇವೆಗಳನ್ನು ಮತ್ತು ಅವರ ನಂತರ ಬಂದ ಮಿಷನರಿಗಳು ಮಾಡಿದ ಸೇವೆಗಳನ್ನು ವಿವರವಾಗಿ ನೋಡೋಣವಾ!

 

ಕ್ರಿ.ಶ 1938 ರಲ್ಲಿ ತೋಮ ಭಾರತಕ್ಕೆ ಬಂದರು. ಅವರು ಹಡಗು ಪ್ರಯಾಣ ಮಾಡಿ ಕೇರಳದ ಕರಾವಳಿಯನ್ನು ತಲುಪಿದರು. ಅವರು ಆ ಸ್ಥಳಗಳಲ್ಲಿ ಯೇಸುಕ್ರಿಸ್ತನ ಸುವಾರ್ತೆಯನ್ನು ಸಾರಲು ಪ್ರಾರಂಭಿಸಿದರು. ಕೇರಳದ ರಾಜ ಕೊಂಡಪರಸ್ ಅವರಿಗೆ ಸಾಕಷ್ಟು ಸಹಾಯ ಮಾಡಿದರು. ತೋಮ ಅಲ್ಲಿ 7 ಕ್ರೈಸ್ತ ಚರ್ಚುಗಳನ್ನು ನಿರ್ಮಿಸಿದರು. 15 ನೇ ಶತಮಾನದಲ್ಲಿ ಪೋರ್ಚುಗೀಸರು ಆಗಮಿಸಿದಾಗ, ಅವರು ದೊಡ್ಡ ಪ್ರಮಾಣದಲ್ಲಿ ಸೇವೆಯನ್ನು ಮಾಡಿದರು. ವಿವಿಧ ಪಂಗಡಗಳಿಗೆ ಸೇರಿದ ಜನರು ಸುವಾರ್ತೆಯನ್ನು ಸ್ವೀಕರಿಸಿದರು. ಯಾವುದೇ ಬಡ್ತಿ, ಕೀಳರಿಮೆ ಇಲ್ಲದೇ ಎಲ್ಲರನ್ನೂ ಸಮಾನವಾಗಿ ಕಾಣುತ್ತಿದ್ದರು.

 

ಮಿಷನರಿಗಳು ಸುವಾರ್ತೆ ಸಾರುವುದರಲ್ಲಿ ಮಾತ್ರ ಆಸಕ್ತಿ ಹೊಂದಿರಲಿಲ್ಲ. ಅವರು ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು ಮತ್ತು ಇತರ ಸಾಮಾಜಿಕ ಸೇವಾ ಕೇಂದ್ರಗಳನ್ನು ಸ್ಥಾಪಿಸಿದರು. ಅವರು ಸ್ಥಳೀಯ ಆಡಳಿತಗಾರರಿಂದ ಬೆಂಬಲ ಪಡೆದರು. ಹೋಮಿಯೋಪತಿ ಔಷಧವನ್ನು ಮಿಷನರಿಗಳು ಕೇರಳಕ್ಕೆ ತಂದರು. ಬೆಂಜಮಿನ್ ಬೈಲಿ ಮತ್ತು ಹೆನ್ರಿ ಬೇಕರ್ ಅವರು 1813 ರಿಂದ 1930 ರವರೆಗೆ ಕೊಟ್ಟಾಯಂನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕ್ರಿಶ್ಚಿಯನ್ ಮಿಷನರಿ ಸೊಸೈಟಿ (CMS) ಗೆ ಸೇರಿದವರು. ಅವರು ಕೊಟ್ಟಾಯಂನಲ್ಲಿ ವ್ಯಾಕರಣ ಶಾಲೆ ಮತ್ತು ಆಲಪ್ಪುಳದಲ್ಲಿ ಬಾಲಕಿಯರ ಶಾಲೆಯನ್ನು ಸ್ಥಾಪಿಸಿದರು.

 

ಹರ್ಮನ್ ಗುಂಡರ್ಟ್ ಅವರು ಹಳೆಯ ಒಡಂಬಡಿಕೆಯನ್ನು ಇಬ್ರಿಯ ಭಾಷೆಯಿಂದ ಮತ್ತು ಹೊಸ ಒಡಂಬಡಿಕೆಯನ್ನು ಗ್ರೀಕ್‌ನಿಂದ ಮಲಯಾಳಂ ಭಾಷೆಗೆ ಅನುವಾದಿಸಿದ್ದಾರೆ. ಲಂಡನ್ ಮಿಷನ್ ಸೊಸೈಟಿ (LMS) ಗೆ ಸೇರಿದ ರೆವ. ಮೀಡ್ 1817-1873 ತಿರುವಾಂಕೂರಿನಲ್ಲಿ ವೃತ್ತಿಪರ ಶಾಲೆಗಳನ್ನು ಪ್ರಾರಂಭಿಸಿದರು. ಅವರ ಪತ್ನಿ ಬಾಲಕಿಯರಿಗಾಗಿ ಶಾಲೆಗಳನ್ನು ಆರಂಭಿಸಿದರು. ಈ ರೀತಿಯಲ್ಲಿ ಮಿಷನರಿಗಳು ಕೇರಳದಲ್ಲಿ ಸೇವೆ ಮಾಡಿ ಉಜ್ಜೀವನವನ್ನು ಕಂಡರು.

 

ಇದನ್ನು ಓದುತ್ತಿರುವ ನೀವು ಸಹ, ದೇವರು ಆರಿಸಿಕೊಂಡಿರುವ ಪಾತ್ರೆಯೇ! ಅವರಿಗಾಗಿ ಏನಾದರೂ ಮಾಡಿ! ದೇವರು ನಿಮ್ಮನ್ನು ಆಶೀರ್ವದಿಸಲಿ. ಆಮೆನ್!!

- Sis. ಮಂಜುಳಾ

 

ಪ್ರಾರ್ಥನಾ ಅಂಶ:

ನಮ್ಮ ಮಾಧ್ಯಮ ಸೇವೆಗಳಲ್ಲಿ ಭಾಗಿಯಾಗಿರುವ ವ್ಯಕ್ತಿಗಳಿಗಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al holiganbet giriş matbet holiganbet holiganbet giriş casibom giriş casibom casibom giriş casibom matbet matbet giriş imajbet imajbet giriş perabet perabet giriş coinbar coinbar giriş klasbahis klasbahis giriş supertotobet giriş supertotobet jojobet giriş jojobet casibom casibom giriş jojobet giriş jojobet interbahis interbahis giriş mariobet mariobet giriş betpas betpas giriş artemisbet artemisbet giriş marsbahis giriş marsbahis restbet restbet giriş egebet egebet giriş Hiltonbet Hiltonbet giriş jojobet alobet alobet giriş betcio betcio giriş grandpashabet grandpashabet giriş superbetin superbetin giriş perabet perabet giriş pashagaming tarafbet editörbet perabet perabet giriş grandbetting hitbet xslot betkom giriş betkanyon giriş perabet perabet giriş Hiltonbet Hiltonbet giriş grandpashabet grandpashabet giriş grandpashabet güncel giriş grandpashabet grandpashabet giriş grandpashabet giriş güncel jojobet jojobet giriş holiganbet holiganbet giriş casibom casibom giriş jojobet jojobet giriş alobet alobet giriş marsbahis marsbahis giriş milanobet jojobet jojobet jojobet jojobet jojobet holiganbet palacebet holiganbet romabet teosbet betgit cratosroyalbet cratosroyalbet gameofbet