Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 09.08.2023
Share:

By Village Missionary Movement

Wednesday, 09-Aug-2023

ಧೈನಂದಿನ ಧ್ಯಾನ(Kannada) – 09.08.2023

 

ಅಸ್ಸಾಂ

 

"ಕ್ರಿಸ್ತನ ಪ್ರೀತಿಯಿಂದ ನಮ್ಮನ್ನು ಅಗಲಿಸುವವರು ಯಾರು?" - ರೋಮಾ 8:35

 

ಅಸ್ಸಾಂ ರಾಜ್ಯವು ಸಾವಿರಾರು ಆದಿವಾಸಿಗಳನ್ನು ಒಳಗೊಂಡಿದೆ. ಅವರು ಬಹಳ ನುರಿತ ಬೇಟೆಗಾರರು. “ಯೇಸವಿನ ಹಿಂದೆ ಹೋಗಲು ಆತುರಗೊಂಡೆನು” ಎಂಬ ಹಾಡು ಗೊತ್ತಿಲ್ಲದವರು ಯಾರೂ ಇಲ್ಲ. ಈ ಹಾಡು ಅಸ್ಸಾಂನಲ್ಲಿ ಮರಣಶಯ್ಯೆಯಲ್ಲಿ ಹುತಾತ್ಮ ಯೋಧ ಹಾಡಿರುವ ಹಾಡು. ಯಾವ ಸಂಕಟವೂ ತನ್ನನ್ನು ಕ್ರಿಸ್ತನ ಪ್ರೀತಿಯಿಂದ ಬೇರ್ಪಡಿಸಲಾರದು ಎಂಬ ಧೈರ್ಯದಿಂದ ನಂಬಿಕೆಗಾಗಿ ಬದುಕಿ ಸತ್ತವನ ಅನುಭವದ ಸಾಲುಗಳಿವು.

 

ಅಮೇರಿಕನ್ ಬ್ಯಾಪ್ಟಿಸ್ಟ್ ಮಿಷನ್ ಕಳುಹಿಸಿದ ಮಿಷನರಿಯು "ಕರೋ" ಬುಡಕಟ್ಟುಗಳ ನಡುವೆ ಸೇವೆ ಮಾಡಲು ಹೋದರು. ನಂತರ ಎರಡು ಮಕ್ಕಳೊಂದಿಗೆ ಒಂದು ಸಣ್ಣ ಕುಟುಂಬವು ಕ್ರಿಸ್ತನನ್ನು ಸ್ವೀಕರಿಸಿತು. ಗ್ರಾಮದ ಮುಖಂಡ ಕೋಪಗೊಂಡು ಗ್ರಾಮಸ್ಥರನ್ನೆಲ್ಲ ಕರೆದ. ಕ್ರಿಸ್ತನನ್ನು ಸ್ವೀಕರಿಸಿದ ಕುಟುಂಬವನ್ನು ಗ್ರಾಮಸ್ಥರ ಮಧ್ಯದಲ್ಲಿ ನಿಲ್ಲಿಸಿ ನಿನ್ನ ನಂಬಿಕೆಯನ್ನು ಬಿಟ್ಟುಬಿಡು ಇಲ್ಲವೇ ಸಾಯುತ್ತೀಯ ಎಂದು ಹೇಳಿದನು. ಆದರೆ ಆ ವ್ಯಕ್ತಿ, "ನಾನು ಯೇಸುವನ್ನು ಹಿಂಬಾಲಿಸಲು ನಿರ್ಧರಿಸಿದ್ದೇನೆ ನಾನು ಎಂದಿಗೂ ಹಿಂತಿರುಗುವುದಿಲ್ಲ" ಎಂದನು. "ಆ ಮನುಷ್ಯನ ನಿರಾಕರಣೆಯಿಂದ ಕೋಪಗೊಂಡ ನಾಯಕನು ಇಬ್ಬರು ಮಕ್ಕಳನ್ನು ಗುಂಡಿಕ್ಕಿ ಕೊಂದನು. ಆದರೆ ಆ ವ್ಯಕ್ತಿ ಹಿಂತಿರುಗಲು ನಿರಾಕರಿಸಿದನು ಮತ್ತು ಅವನ ಹೆಂಡತಿಯನ್ನೂ ಕೊಂದನು". ನಂತರ, "ನಿನಗೆ ಕೊನೆಯ ಅವಕಾಶ" ಎಂದು ಅವನಿಗೆ ಬಾಣವನ್ನು ಗುರಿಯಿಟ್ಟಾಗ, "ಶಿಲುಬೆ ನನ್ನ ಮುಂದೆ, ಪ್ರಪಂಚವು ನನ್ನ ಹಿಂದೆ ಹಿಂತಿರುಗೆನು ನಾ" ಎಂದು ಹೇಳಿದ ಕೂಡಲೇ ಅವನು ಕೊಲ್ಲಲ್ಪಟ್ಟನು.

 

ಈ ವ್ಯಕ್ತಿಯ ಸಾವಿನೊಂದಿಗೆ ನಮ್ಮ ಹಳ್ಳಿಯಿಂದ ಕ್ರೈಸ್ತ ಧರ್ಮ ಕಣ್ಮರೆಯಾಗುತ್ತದೆ ಎಂದು ಗ್ರಾಮದ ಎಲ್ಲರೂ ಭಾವಿಸಿದ್ದರು. ಅಷ್ಟೇ ಅಲ್ಲ. ಆ ವ್ಯಕ್ತಿಯ ಸಾವು ಗ್ರಾಮದ ಮುಖಂಡರನ್ನು ಬೆಚ್ಚಿಬೀಳಿಸಿತು. ಇಡೀ ಕುಟುಂಬ ಸಾಯಲು 2000 ವರ್ಷಗಳ ಹಿಂದೆ ಈ ಜಗತ್ತಿಗೆ ಬಂದ ಯಾರೋ ಒಬ್ಬರು ಶಕ್ತಿಶಾಲಿಯಾಗಿದ್ದಾರೆ. ನನಗೂ ಆ ದೇವರ ಬಗ್ಗೆ ತಿಳಿಯಬೇಕು ಎಂದರು. ಈ ಸುದ್ದಿ ಇಡೀ ಪ್ರದೇಶದಲ್ಲಿ ಸಂಚಲನ ಮೂಡಿಸಿತು. ಎಲ್ಲಾ ಜನಸಮೂಹವು ಯೇಸುವನ್ನು ಅಂಗೀಕರಿಸಿತು. ಅಮೇರಿಕನ್ ಪಾಠದಶಾಸ್ತ್ರಜ್ಞ ವಿಲಿಯಂ ಜೆನ್ಸನ್ ರೆನಾಲ್ಡ್ಸ್ 1959 ರ ಅಸೆಂಬ್ಲಿ ಪಾಠಪುಸ್ತಕದಲ್ಲಿ ಈ ಪಾಠವನ್ನು ಸೇರಿಸಿದರು.

 

ಇದನ್ನು ಓದುತ್ತಿರುವ ಪ್ರಿಯರೇ! ಉಜ್ಜೀವನವನ್ನು ಬಯಸುತ್ತಿದ್ದೀರಾ? ನೀವು ಉಜ್ಜೀವನಕ್ಕಾಗಿ ಪ್ರಾರ್ಥಿಸುವವರಾ? ಹಾಗಾದರೆ ನಮಗೆ ಇಂತಹ ನಂಬಿಕೆ ಮತ್ತು ವೈರಾಗ್ಯ ಅಗತ್ಯ. ಇವುಗಳು ಇಲ್ಲದ್ದರಿಂದಲೇ ಉಜ್ಜೀವನವು ಆಲಸ್ಯವಾಗುತ್ತಿದೆಯಾ?. . . ಇಂತಹ ನಂಬಿಕೆ, ವೈರಾಗ್ಯ ಮತ್ತು ಕ್ರಿಸ್ತನ ಮೇಲಿನ ಪ್ರೀತಿಯು ನಮ್ಮಲ್ಲಿ ಪ್ರತಿಯೊಬ್ಬರಲ್ಲೂ ಹೊತ್ತಿ ಉರಿಯುವಂತೆ ಪ್ರಾರ್ಥಿಸೋಣ.

- Mrs. ಜ್ಯೋತಿ ಸ್ಟಾಲಿನ್

 

ಪ್ರಾರ್ಥನಾ ಅಂಶ:

ತಿರುನಲ್ವೇಲಿ ಯೌವನಸ್ಥರ ಉಜ್ಜೀವನ ಕೂಟಕ್ಕಾಗಿ ಪ್ರಾರ್ಥಿಸುವ ಕಾರ್ಯ ನಿರ್ವಹಿಸುವ 7000 ಜನರು ಎದ್ದೇಳುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al casibom jojobet jojobet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş milanbahis milanbahis giriş casibom giriş casibom casibom jojobet jojobet giriş bahsegel