Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 08.08.2023
Share:

By Village Missionary Movement

Monday, 07-Aug-2023

ಧೈನಂದಿನ ಧ್ಯಾನ(Kannada) – 08.08.2023

 

ಗುಜರಾತ್

 

"ಭೂಮಂಡಲದವರೆಲ್ಲರು ಎಚ್ಚರಗೊಂಡು ಯೆಹೋವನ ಕಡೆಗೆ ತಿರುಗಿಕೊಳ್ಳುವರು;…" - ಕೀರ್ತನೆ 22:27

 

ಭಾರತದ ಒಂದು ರಾಜ್ಯವಾದ ಗುಜರಾತ್ ನಲ್ಲಿ ಕ್ರೈಸ್ತ ಧರ್ಮವು ಅಲ್ಪಸಂಖ್ಯಾತ ಧರ್ಮವಾಗಿದೆ. ಪೋರ್ಚುಗೀಸರು ಗುಜರಾತ್ ಕರಾವಳಿಯಲ್ಲಿ ಡಾಮನ್ ಮತ್ತು ಟೆಯುವನ್ನು ಶತಮಾನಗಳವರೆಗೆ ತಮ್ಮ ನಿಯಂತ್ರಣದಲ್ಲಿ ಇಟ್ಟುಕೊಂಡಿದ್ದರು. ಅವರು ಕ್ಯಾಥೊಲಿಕ್ ಧರ್ಮವನ್ನು ತಂದರು. 16 ನೇ ಶತಮಾನದಲ್ಲಿ ಗುಜರಾತ್ ಮೊದಲು ಕ್ರೈಸ್ತ ಧರ್ಮದೊಂದಿಗೆ ಸಂಪರ್ಕಕ್ಕೆ ಬಂದಿತು. ಫ್ರೆಂಚ್ ಮಿಷನರಿ ಜೋರ್ಡಾನಸ್ ಕ್ಯಾಟಲಾನಿ 1320 ರಲ್ಲಿ ಸೂರತ್‌ಗೆ ಬಂದರು. ಗುಜರಾತಿನಲ್ಲಿ ಸೇವೆಯನ್ನು ಪ್ರಾರಂಭಿಸಿದ ಮೊದಲ ಯುರೋಪಿಯನ್ ಇವರು.

 

ಬ್ರಿಟಿಷ್ ಪಾರ್ಲಿಮೆಂಟ್ ಅಂಗೀಕರಿಸಿದ 1813 ರ ಚಾರ್ಟರ್ ಆಕ್ಟ್ ಕ್ರೈಸ್ತ ಮಿಷನರಿಗಳು ಬ್ರಿಟಿಷ್ ಕಂಪನಿಯಿಂದ ನಿಯಂತ್ರಿಸಲ್ಪಡುವ ಪ್ರದೇಶಗಳನ್ನು ಪ್ರವೇಶಿಸಲು ಅವಕಾಶ ಮಾಡಿಕೊಟ್ಟಿತು. ಮಿಷನರಿಗಳಲ್ಲಿ ಜಾನ್ ಟೇಲರ್ (1821), ಜೋಸೆಫ್ ಟೇಲರ್ (1852), ಜೆ.ವಿ.ಎಸ್. ಟೇಲರ್ (1881) ಮತ್ತು ಡಾ. ಜಿ.ಬಿ. ಟೇಲರ್ ಸೇರಿದ್ದಾರೆ. 20ನೇ ಶತಮಾನದ ಮೊದಲಾರ್ಧದಲ್ಲಿ ಮಿಷನರಿಗಳು ಶಾಲೆಗಳನ್ನು ಸ್ಥಾಪಿಸಿದರು. ಗುಜರಾತ್ ಚರ್ಚ್ ಆಫ್ ನಾರ್ತ್ ಇಂಡಿಯಾದ ಡಯಾಸಿಸ್ ಅನ್ನು ಹೊಂದಿದೆ. ಇದು ಉಸುಯಿ ಮತ್ತು ಔಲುಯಿ ಚರ್ಚುಗಳ ಜೊತೆಗೆ ಅತಿ ದೊಡ್ಡ ಪ್ರೊಟೆಸ್ಟಂಟ್ ಕ್ರೈಸ್ತ ಪಂಗಡವಾಗಿದೆ. ಸಾಲ್ವೇಶನ್ ಆರ್ಮಿ ಮತ್ತು ಅಲಯನ್ಸ್ ಚರ್ಚುಗಳನ್ನು ಸಹ ಈ ರಾಜ್ಯದಲ್ಲಿ ಕಾಣಬಹುದು.

 

ಗುಜರಾತಿನ ಜನರು ಕ್ರಿಸ್ತನನ್ನು ಕಂಡುಕೊಳ್ಳಲು ದೇವರು ಅಲ್ಲಿ ಅನೇಕ ಸೇವೆಗಳನ್ನು ಎಬ್ಬಿಸಿದ್ದಾರೆ. ಹಾಗೆ ಸೇವೆ ಮಾಡುವಾಗ ಸೇವಕರು ಹಲವು ವಿರೋಧಗಳನ್ನು ಎದುರಿಸುತ್ತಿದ್ದಾರೆ. ಒಂದು ಸಂಜೆ ಕೂಟಕ್ಕಾಗಿ, ಇಬ್ಬರು ಸೇವಕರು ಪರ್ವತದ ದಾರಿಯ ಮೂಲಕ ಹಾದು ಹೋಗುತ್ತಿದ್ದರು. ಇಂದು ಈ ಇಬ್ಬರು ಸೇವಕರನ್ನು ಬದುಕಲು ಬಿಡಬಾರದು ಎಂಬ ಉದ್ದೇಶದಿಂದ ಬಂದೂಕು ಹಿಡಿದವರ ಗುಂಪೊಂದು ಹೊಂಚು ಹಾಕುತ್ತಿತ್ತು. ಆ ದಾರಿಯಲ್ಲಿ ಸಾಗುತ್ತಿದ್ದಂತೆ ಗುರಿ ಹಿಡಿದು ಗುಂಡು ಹಾರಿಸಲು ಆರಂಭಿಸಿದರು. ದೇವರು ಅವರಿಗೆ ರಕ್ಷಕನಾಗಿದ್ದು ಬಂದೂಕುಗಳಿಂದ ಒಂದೇ ಒಂದು ಗುಂಡನ್ನು ಹೊರಬರಲು ಬಿಡಲಿಲ್ಲ. ಶೂಟ್ ಮಾಡಲು ಹೊರಬಂದ ಜನಸಮೂಹ "ಇದೇನು ಮ್ಯಾಜಿಕ್?"ಎಂದು ಯೋಚಿಸುತ್ತಾ ಸೇವಕರ ಪಾದಗಳಿಗೆ ಬಿದ್ದು, "ಈ ದೇವರ ಬಗ್ಗೆ ನಮಗೆ ತಿಳಿಸಿ, ನಾವು ಅವರನ್ನು ಸ್ವೀಕರಿಸುತ್ತೇವೆ" ಎಂದು ಹೇಳಿದರು, ಅವರು ಅಲ್ಲೇ ಕುಳಿತು ಯೇಸುವನ್ನು ತಮ್ಮ ರಕ್ಷಕನಾಗಿ ಸ್ವೀಕರಿಸಿದರು. ಇಂದಿಗೂ ಗುಜರಾತ್ ರಾಜ್ಯದಲ್ಲಿ ಯೇಸು ಇಂತಹ ಅನೇಕ ಅದ್ಭುತಗಳನ್ನು ಮಾಡುತ್ತಿದ್ದಾರೆ. ಆಮೆನ್! ಹಲ್ಲೇಲೂಯಾ!

- Mrs. ಬರ್ಲಿನ್ ಸೆಲ್ಬಾಯ್

 

ಪ್ರಾರ್ಥನಾ ಅಂಶ:

ತಿರುನೆಲ್ವೇಲಿ ಯೌವನಸ್ಥರ ಉಜ್ಜೀವನ ಕೂಟದಲ್ಲಿ ಸಂದೇಶ ನೀಡುವ ದೇವಸೇವಕರನ್ನು ದೇವರು ಬಲವಾಗಿ ಉಪಯೋಗಿಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al holiganbet giriş matbet holiganbet holiganbet giriş casibom giriş casibom casibom giriş casibom matbet matbet giriş imajbet imajbet giriş perabet perabet giriş coinbar coinbar giriş klasbahis klasbahis giriş supertotobet giriş supertotobet jojobet giriş jojobet casibom casibom giriş jojobet giriş jojobet interbahis interbahis giriş mariobet mariobet giriş betpas betpas giriş artemisbet artemisbet giriş marsbahis giriş marsbahis restbet restbet giriş egebet egebet giriş Hiltonbet Hiltonbet giriş jojobet alobet alobet giriş betcio betcio giriş grandpashabet grandpashabet giriş superbetin superbetin giriş perabet perabet giriş pashagaming tarafbet editörbet perabet perabet giriş grandbetting hitbet xslot betkom giriş betkanyon giriş perabet perabet giriş Hiltonbet Hiltonbet giriş grandpashabet grandpashabet giriş grandpashabet güncel giriş grandpashabet grandpashabet giriş grandpashabet giriş güncel jojobet jojobet giriş holiganbet holiganbet giriş casibom casibom giriş jojobet jojobet giriş alobet alobet giriş marsbahis marsbahis giriş milanobet jojobet jojobet jojobet jojobet jojobet holiganbet palacebet holiganbet romabet teosbet betgit cratosroyalbet cratosroyalbet gameofbet