Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 06.08.2023 (Kids Special)
Share:

By Village Missionary Movement

Sunday, 06-Aug-2023

ಧೈನಂದಿನ ಧ್ಯಾನ(Kannada) – 06.08.2023 (Kids Special)

 

ಪುಟ್ಟ ಹುಡುಗಿ ಪಾಲಿನ್

 

"…ಬೇಡಿಕೊಳ್ಳುವ ಪ್ರತಿಯೊಬ್ಬನು ಹೊಂದುವನು;" - ಲೂಕ 11:10

 

ಮುದ್ದು ಪುಟಾಣಿಗಳೇ ಹೇಗಿದ್ದೀರ? ಶಾಲೆ ಆರಂಭವಾಗಿ ಎರಡು ತಿಂಗಳು ಆಗೋಯ್ತು. ಹೇಗೆ ಹೋಗುತ್ತಿದೆ? ತುಂಬಾ ಸಂತೋಷವಾಗಿದೆಯಾ? ನಿಮ್ಮ ಜೊತೆ ಓದುತ್ತಿರುವ ಇತರ ಮಕ್ಕಳನ್ನು ಕಂಡ ಕೂಡಲೇ ಅವರಂತೆ ಹೊಸ ಡ್ರೆಸ್, ಹೊಸ ಬ್ಯಾಗ್, ಹೊಸ ಪೆನ್ನು, ಬಾಕ್ಸ್ ಹೀಗೆ ಎಲ್ಲಾ ಹೊಸದಾಗಿ ತಗೋಬೇಕು ಅನಿಸುತ್ತಿದೆ ಅಲ್ವಾ. ಹೀಗೇನೆ ಮೂರನೇ ತರಗತಿಯಲ್ಲಿ ಓದುತ್ತಿದ್ದ ಪಾಲಿನ್ ಗೂ ಒಂದು ಆಸೆ ಬಂತು. ಆ ಆಸೆಯನ್ನು ಯಾರ ಬಳಿ ಹೇಳಿದಳು ಅಂತಾ ಈಗ ನೋಡೋಣ.

 

ಪಾಲಿನ್ ತುಂಬಾ ಚುರುಕಾದ ಹುಡುಗಿ. ಚೆನ್ನಾಗಿ ಓದುತ್ತಿದ್ದಳು, ಹಾಡುತ್ತಿದ್ದಳು, ಡ್ಯಾನ್ಸ್ ಮಾಡುತ್ತಿದ್ದಳು ಮತ್ತು ತನ್ನ ಹೆತ್ತವರಿಗೆ ಚೆನ್ನಾಗಿ ವಿಧೇಯಳಾಗುತ್ತಿದ್ದಳು. ಪಾಲಿನ್ ಗೆ ಹಣ್ಣುಗಳೆಂದರೆ ತುಂಬಾ ಇಷ್ಟ. ಆ ದಿನ ಮನೆಯಲ್ಲಿ Snacks ಏನೂ ಇಲ್ಲದ ಕಾರಣ School ಗೆ Lunch ಮಾತ್ರವೇ ತೆಗೆದುಕೊಂಡು ಹೋಗಿದ್ದಳು. Evening snacks time ಬಂತು. ಎಲ್ಲರೂ snacks ತಿನ್ನತೊಡಗಿದರು. ಅವರನ್ನೆಲ್ಲಾ ನೋಡಿದ ಪಾಲಿನ್ ನ ನಾಲಿಗೆಯಲ್ಲಿ ಜೊಲ್ಲು ಸುರಿಯಿತು. ಹಣ್ಣು ತಿನ್ನಬೇಕು ಅನಿಸುತ್ತಿತ್ತು. ಪಾಲಿನ್ ಗೆ ಆ ವಿದ್ಯಾರ್ಥಿಯ ಬಳಿ ಹೋಗಿ ಹೇಗೆ ಕೇಳಬೇಕೆಂದು ಗೊತ್ತಾಗಲಿಲ್ಲ. ಬದಲಾಗಿ ಕಣ್ಣು ಮುಚ್ಚಿಕೊಂಡು ಯೇಸಪ್ಪ ನನಗೂ ದಾಳಿಂಬೆ ಹಣ್ಣನ್ನು ಕೊಡಿ ಎಂದು ಮನದಲ್ಲೇ ಪ್ರಾರ್ಥಿಸಿದಳು. School ಮುಗಿಯಿತು.

 

School ಮುಗಿಸಿ ಮನೆಗೆ ಬಂದ ಪಾಲಿನ್‌ಗೆ ಒಂದು ಅಚ್ಚರಿ ಕಾದಿತ್ತು. ಅದು ಏನು ಗೊತ್ತಾ? ಅವಳು ಆಸೆಯಿಂದ ಯೇಸಪ್ಪನ ಬಳಿ ಕೇಳಿದ ಅದೇ ದಾಳಿಂಬೆಹಣ್ಣನ್ನು ಸುಲಿದು ತಟ್ಟೆಗೆ ಹಾಕಿಡಲಾಗಿತ್ತು. ಪಾಲಿನ್ ಗೆ ಒಂದೇ ಸಂತೋಷ. ಅವಳು ಬೇಗನೆ ತನ್ನ ತಾಯಿಯ ಬಳಿಗೆ ಓಡಿ ಹೋಗಿ, ನಾನು school ಗೆ ಹೋಗುವಾಗ ನಮ್ಮ ಮನೆಯಲ್ಲಿ ಯಾವ ಹಣ್ಣೂ ಇರಲಿಲ್ಲ ಈಗ ಹೇಗೆ ಬಂತು ಎಂದು ಕೇಳಿದಳು. ತಕ್ಷಣ ತಾಯಿ ಮಧ್ಯಾಹ್ನ ಒಂದು ತಾತ ಈ ಹಣ್ಣನ್ನು ನನ್ನ ಕೈಗೆ ಕೊಟ್ಟು ನಿನ್ನ ಮಕ್ಕಳು ಬಂದ ಕೂಡಲೇ ಇದನ್ನು ಕೊಡು ಎಂದು ಹೇಳಿದರು ಎಂದಳು. ತಕ್ಷಣವೇ ಪಾಲಿನ್ ತನ್ನ school ನಲ್ಲಿ ನಡೆದದ್ದನ್ನು ತನ್ನ ತಾಯಿಗೆ ತಿಳಿಸಿ ಯೇಸಪ್ಪನಿಗೆ ಕೃತಜ್ಞತೆ ಸಲ್ಲಿಸಿ ಆ ಹಣ್ಣನ್ನು ತಿಂದಳು.

 

ಪುಟ್ಟ ತಮ್ಮ, ತಂಗಿ ಪಾಲಿನ್ ತನ್ನ ಆಸೆಯನ್ನು ಯಾರ ಬಳಿ ಹೇಳಿದಳು ಅಂತಾ ನೋಡುದ್ರಾ! ಅವಳು ಯೇಸಪ್ಪನ ಬಳಿ ಪ್ರಾರ್ಥನೆಯ ಮೂಲಕ ಕೇಳಿದಾಗ, ಯೇಸಪ್ಪ ಅದನ್ನು ಅವಳಿಗೆ ಕೊಟ್ಟಬಿಟ್ಟರು ನೋಡುದ್ರಾ? ಅದೇ ರೀತಿ, ನಿನ್ನ ಆಸೆಯನ್ನೂ ಯೇಸಪ್ಪನಿಗೆ ಹೇಳಿಬಿಡು. ಯೇಸಪ್ಪ ಖಂಡಿತವಾಗಿಯೂ ಅದನ್ನು ಪೂರೈಸುತ್ತಾರೆ. Ok ನಾ.

- Mrs. ಸಾರಾಳ್ ಸುಭಾಷ್

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al matbet matbet giriş hepsibet hepsibet giriş betnano betnano giriş betparibu betparibu giriş casibom virüsbet pashagaming kalebet perabet pashagaming virusbet marsbahis imajbet perabet perabet giriş perabet perabet giriş