By Village Missionary Movement
Friday, 04-Aug-2023ಧೈನಂದಿನ ಧ್ಯಾನ(Kannada) – 05.08.2023
ಮಣಿಪುರ
"ಕತ್ತಲಲ್ಲಿ ವಾಸಿಸಿದ ಈ ಸೀಮೆಗಳ ಜನರಿಗೆ ದೊಡ್ಡ ಬೆಳಕು ಕಾಣಿಸಿತು;…" - ಮತ್ತಾಯ 4:16
ಮಣಿಪುರ ಭಾರತದ ಅತ್ಯಂತ ಚಿಕ್ಕ ರಾಜ್ಯ. 21 ಜನವರಿ 1972 ರಂದು, ಮಣಿಪುರ ರಾಜ್ಯವನ್ನು ಸರ್ಕಾರದ ಮಾನ್ಯತೆಯೊಂದಿಗೆ ಪ್ರತ್ಯೇಕ ರಾಜ್ಯವೆಂದು ಘೋಷಿಸಲಾಯಿತು. ಮೈತ್ಯಿ, ನಾಗ, ಕುಟ್ಕಿ-ಸಿನ್-ಮಿಸೋ ಜನರು ಈ ರಾಜ್ಯದಲ್ಲಿ ವಾಸಿಸುತ್ತಿದ್ದಾರೆ. ಈ ಜನರಲ್ಲಿ ಮಣಿಪುರಿ ಭಾಷೆಯನ್ನು ಮಾತನಾಡುತ್ತಾರೆ. ಇಲ್ಲಿ ಬಿತ್ತಲ್ಪಟ್ಟ ಸುವಾರ್ತೆಯು ಯುದ್ಧಮಾಡುವ ಬುಡಕಟ್ಟುಗಳನ್ನು ಶಾಂತಿಯನ್ನು ಬಯಸುವ ವಿಶ್ವಾಸಿಗಳಾಗಿ ಪರಿವರ್ತಿಸಿತು.
ಯೇಸುಕ್ರಿಸ್ತನ ಸುವಾರ್ತೆಯು ಮಣಿಪುರಕ್ಕೆ ಎರಡು ಕಡೆಗಳಿಂದ ತಲುಪಿತು. ಒಂದು ಮುಖ್ಯವಾಗಿ ಉತ್ತರದಿಂದ ನಾಗಾ ಬುಡಕಟ್ಟುಗಳನ್ನು ಆಕರ್ಷಿಸಿತು. ಇನ್ನೊಂದು ದಕ್ಷಿಣದಿಂದ ಮಿಜೋರಾಂ ಮೂಲಕ ಮುಖ್ಯವಾಗಿ ಕುಟ್ಕಿ-ಸಿನ್-ಮಿಸೋ ಬುಡಕಟ್ಟುಗಳಿಗೆ ತಲುಪಿತು. 1894 ರಲ್ಲಿ, ವಿಲಿಯಂ ಬೆಟ್ಟಿಕ್ ಯು ಎಂಬ ಮಿಷನರಿಯು ಮಣಿಪುರದ ರಾಜಧಾನಿ ಇಂಫಾಲ್‌ಗೆ ಬಂದರು ಮತ್ತು ಅಲ್ಲಿನ ಗುಡ್ಡಗಾಡು ನಿವಾಸಿಗಳಿಗೆ ಮೊದಲ ಬಾರಿಗೆ ಸುವಾರ್ತೆಯನ್ನು ಬೋಧಿಸಿದರು. ಅಲ್ಲಿರುವ ಮಕ್ಕಳಿಗಾಗಿ ಒಂದು ಶಾಲೆಯನ್ನೂ ಆರಂಭಿಸಿದರು. ಅವರು ಶೈಕ್ಷಣಿಕ ಕೆಲಸದ ಜೊತೆಗೆ ಕ್ರಿಸ್ತನ ಪ್ರೀತಿಯನ್ನು ಎತ್ತಿ ತೋರಿಸಿದರು. ಅವರು ಉಖ್ರುಲ್ನಲ್ಲಿ ತಮ್ಮ ಮಿಷನರಿ ಕೆಲಸವನ್ನು ಪ್ರಾರಂಭಿಸಿದರು. ಆರು ವರ್ಷಗಳ ದಣಿವರಿಯದ ಸತತ ಪ್ರಯತ್ನದ ನಂತರ, ಅವರ 12 ವಿದ್ಯಾರ್ಥಿಗಳು ಕ್ರಿಸ್ತನನ್ನು ಸ್ವೀಕರಿಸಲು ನಿರ್ಧರಿಸಿದರು. 1926 ರಲ್ಲಿ, ಟೆಂಗುಲ್ ಬುಡಕಟ್ಟಿನ ಭಾಷೆ ಮಾತನಾಡುವ ಜನರ ಮಧ್ಯದಲ್ಲಿ ಇಂಗ್ಲಿಷ್ ಬೈಬಲ್ ಅನ್ನು ಪೋಂಗಿಯೊದಲ್ಲಿ ಭಾಷಾಂತರಿಸಲು ಮತ್ತು ಮುದ್ರಿಸಲು ಅವರು ಪ್ರಮುಖ ಪಾತ್ರ ವಹಿಸಿದರು. ಇದರ ನಂತರದ ವರ್ಷಗಳಲ್ಲಿ, ಕ್ರೈಸ್ತ ಮಿಷನರಿ ಕೆಲಸವು ಇಲ್ಲಿ ಬೆಳೆಯಲು ಪ್ರಾರಂಭಿಸಿತು.
ಭಾರತದ ಏಳು ಸಹೋದರಿಗಳು ಎಂದು ಕರೆಯಲ್ಪಡುವ ಈಶಾನ್ಯ ರಾಜ್ಯಗಳಲ್ಲಿ ಒಂದಾದ ಮಣಿಪುರ ರಾಜ್ಯದಲ್ಲಿ 41% ಕ್ರೈಸ್ತರು ವಾಸಿಸುತ್ತಿದ್ದಾರೆ. ಹೀಗೆ ಸುವಾರ್ತೆ ಹಬ್ಬಿ ಬದುಕುತ್ತಿದ್ದ ಈ ರಾಜ್ಯದಲ್ಲಿ ಒಂದು ತಿಂಗಳ ಹಿಂದೆ ಪ್ರಾರಂಭವಾದ ಗಲಭೆಗಳ ಬಗ್ಗೆ ನಾವು ಕೇಳಿರುತ್ತೇವೆ. ಇಂತಹವರ ನಡುವೆ ಇಂದಿನ ಯುವ ಪೀಳಿಗೆಯು ಸೇವೆ ಮಾಡುವಂತೆ ನಾವು ಪ್ರಾರ್ಥಿಸೋಣ. ನನ್ನ ಜೊತೆಕೆಲಸದವರಾದ ಪ್ರಿಸ್ಕಳಿಗೂ ಅಕ್ವಿಲನಿಗೂ
(ರೋಮಾ 16:3)ಅವರು ನನ್ನ ಪ್ರಾಣದ ಸಂರಕ್ಷಣೆಗಾಗಿ ತಮ್ಮ ಪ್ರಾಣಗಳನ್ನು ಅಪಾಯಕ್ಕೆ ಗುರಿಮಾಡಿದರು ಎಂದು ಪೌಲನು ಅವರ ಬಗ್ಗೆ ಸಾಕ್ಷಿ ಹೇಳುವ ಪ್ರಕಾರ, ನಾವೂ ಸಹ ಇಂತಹ ಕಠಿಣ ಸ್ಥಳಗಳಿಗೆ ಹೋಗಿ ಪರಮತಂದೆಯ ಒಳ್ಳೆಯ ಸಾಕ್ಷಿಯನ್ನು ಪಡೆಯೋಣ. ಮಣಿಪುರದ ರಕ್ಷಣೆಗಾಗಿ ಮತ್ತು ಶಾಂತಿಗಾಗಿ ಪ್ರಾರ್ಥಿಸುವುದು ನಮ್ಮ ಕರ್ತವ್ಯವಲ್ಲವೇ?
- Bro. ಭಾಕ್ಯನಾಥನ್
ಪ್ರಾರ್ಥನಾ ಅಂಶ:
ತಿರುನೆಲ್ವೇಲಿ ಯೌವನಸ್ಥರ ಉಜ್ಜೀವನ ಕೂಟದ ಪೂರ್ವಸಿದ್ಧತಾ ಕಾರ್ಯಗಳಲ್ಲಿ ಅನೇಕರ ದೃಷ್ಟಿಯಲ್ಲಿ ದೇವರ ದಯೆ ದೊರಕುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482