By Village Missionary Movement
Wednesday, 02-Aug-2023ಧೈನಂದಿನ ಧ್ಯಾನ(Kannada) – 03.08.2023
ಮಧ್ಯಪ್ರದೇಶ
"ಕರ್ತನು ಆ ಆತ್ಮನೇ ಆಗಿದ್ದಾನೆ; ಕರ್ತನ ಆತ್ಮನು ಯಾರಲ್ಲಿದ್ದಾನೋ ಅವರಿಗೆ ಬಿಡುಗಡೆ ಉಂಟು" - 2 ಕೊರಿಂಥ 3:17
ಮಧ್ಯಪ್ರದೇಶ ರಾಜ್ಯವು ಭಾರತದ ಅತಿದೊಡ್ಡ ರಾಜ್ಯಗಳಲ್ಲಿ ಒಂದಾಗಿದೆ. ಉತ್ತರ ಭಾರತದ ಇತರ ರಾಜ್ಯಗಳಿಗೆ ಹೋಗಲು ಈ ರಾಜ್ಯವು ಪ್ರಮುಖ ಹೆಬ್ಬಾಗಿಲಾಗಿದೆ. ಈ ಮಹಾನ್ ರಾಜ್ಯದಲ್ಲಿ ಕೇವಲ 0.26% ಜನರು ಮಾತ್ರ ಕರ್ತನಾದ ಯೇಸುಕ್ರಿಸ್ತನನ್ನು ಅರಿತುಕೊಂಡು ಕ್ರೈಸ್ತರಾಗಿ ಬದುಕುತ್ತಿದ್ದಾರೆ. ಹಿಂದಿ ಮುಖ್ಯ ಭಾಷೆಯಾಗಿದ್ದರೂ, ಮಾಲ್ವಿಯಂತಹ ಭಾಷೆಗಳನ್ನು ಮಾತನಾಡುವ ಅನೇಕ ಆದಿವಾಸಿ ಜನರಿದ್ದಾರೆ. ಇಲ್ಲಿ ಕೃಷಿಯೇ ಮುಖ್ಯ ಕಸುಬು.
1800 ರ ದಶಕದಲ್ಲಿ, ಕ್ಯಾಥೋಲಿಕರ ಒಂದು ಗುಂಪು ಮಧ್ಯಪ್ರದೇಶದ ಜಬಲ್ಪುರಕ್ಕೆ ಬಂದು ಸುವಾರ್ತೆ ಸಾರಿದರು ಮತ್ತು ಜನರಿಗೆ ತಮ್ಮ ಕೈಲಾದಷ್ಟು ಸಹಾಯ ಮಾಡಿದರು ಮತ್ತು ಆ ಪ್ರದೇಶವನ್ನು ಸುವಾರ್ತಾ ಕೇಂದ್ರವನ್ನಾಗಿ ಮಾಡಿದರು. ಅದರ ನಂತರ, ಅನೇಕ ಜನರು ಮಧ್ಯಪ್ರದೇಶದ ವಿವಿಧ ಭಾಗಗಳಿಗೆ ಹೋಗಿ ಸುವಾರ್ತೆಯನ್ನು ಸಾರಿದರು. ಅವರಲ್ಲಿ ಕೇರಳದ ರಾಣಿ ಮರಿಯಾ ವಟಾಲಿಲ್ (1954-1995) ಎಂಬ ಮಿಷನರಿ ವಿಶೇಷವಾದವರು.. ಅವರು ಬಡವರು ಮತ್ತು ದೀನದಲಿತ ಜನರಿಗೆ ಸುವಾರ್ತೆಯನ್ನು, ಶಿಕ್ಷಣ ಮತ್ತು ಸಾಮಾಜಿಕ ನ್ಯಾಯದ ಚಟುವಟಿಕೆಗಳನ್ನು ಬೋಧಿಸುತ್ತಾ ಇಂದೋರ್ ಪ್ರದೇಶಗಳಲ್ಲಿ ಸಂಚರಿಸಿದರು. ಇವರ ಚಟುವಟಿಕೆಗಳಿಂದ ಕೋಪಗೊಂಡ ಜಮೀನ್ದಾರರು ಅವರನ್ನು ಇಂದೋರ್ ಬಳಿಯ ಸ್ಥಳದಲ್ಲಿ ಇರಿಸಿ ಅವರನ್ನು ಇರಿದು ಕೊಂದರು. ಸುಮಾರು 40 ಬಾರಿ ಅವರ ದೇಹಕ್ಕೆ ಚಾಕುವಿನಿಂದ ಇರಿದಿದ್ದಾರೆ. ಸಾವಿನ ಅಂಚಿನಲ್ಲಿ ಅವರು "ಯೇಸುವೇ" ಎಂದು ತನ್ನ ಪ್ರಾಣವನ್ನು ತ್ಯಜಿಸಿದರು. ಅವರ ಮರಣದ ನಂತರ, ಆ ಪ್ರದೇಶದ ಅನೇಕ ಜನರು ಯೇಸುವನ್ನು ತಮ್ಮ ಸ್ವಂತ ರಕ್ಷಕನಾಗಿ ಸ್ವೀಕರಿಸಿದರು. ಈ ರೀತಿಯಾಗಿ, ಮಧ್ಯಪ್ರದೇಶದ ಪ್ರಾಂತ್ಯಗಳಲ್ಲಿ ಸುವಾರ್ತಾಬೋಧನೆಯು ಹರಡಲು ಪ್ರಾರಂಭಿಸಿತು.
ಇಂದಿಗೂ ಮಧ್ಯಪ್ರದೇಶ ರಾಜ್ಯದಲ್ಲಿ ಅಸ್ಪೃಶ್ಯತೆ ಎಂಬ ಪಿಡುಗು ಇದೆ. ಮೇಲ್ವರ್ಗದವರೆಂದು ಕರೆಸಿಕೊಳ್ಳುವವರು ಬುಡಕಟ್ಟು ಜನರನ್ನು ತುಂಬಾ ಸಂಕಷ್ಟಕ್ಕೆ ಸಿಲುಕಿಸುತ್ತಿದ್ದಾರೆ. ಇಂದಿಗೂ ದೇವರನ್ನು ಅರಿಯದ ಲಕ್ಷಾಂತರ ಜನರಿದ್ದಾರೆ. ಮಧ್ಯಪ್ರದೇಶದ ಈ ಜನರನ್ನು ಭೇಟಿ ಮಾಡಲು ನಮ್ಮ ಸೇವೆಯು ಸಿಕೋರ್ ಜಿಲ್ಲೆಯಲ್ಲಿ ಮೊದಲ ಹೆಜ್ಜೆ ಇಟ್ಟಿದೆ.
ಕತ್ತಲೆಯಲ್ಲಿ ನಡೆಯುವ ಜನರು ದೊಡ್ಡ ಬೆಳಕನ್ನು ಕಂಡರು; ಮರಣದ ನೆರಳಿನ ದೇಶದಲ್ಲಿ ವಾಸಿಸುವವರ ಮೇಲೆ ಬೆಳಕು ಪ್ರಕಾಶಿ ಸುತ್ತದೆ ಎಂಬ ವಾಕ್ಯದ ಪ್ರಕಾರ ಪಾಪದಿಂದಲೂ ಮತ್ತು ಶಾಪದಿಂದಲೂ ನಿಜವಾಗಿಯೂ ಬಿಡುಗಡೆಯನ್ನು ತರುವ ಯೇಸುವನ್ನು ಪ್ರಕಟಿಸಲು ಮುಂದುವರಿಯೋಣ. ಯೇಸುಕ್ರಿಸ್ತನು ಕೊಡುವ ಬಿಡುಗಡೆಯನ್ನು ಮಧ್ಯಪ್ರದೇಶದ ಜನರು ಪಡೆದುಕೊಳ್ಳಲಿ.
- Mrs. ಶಕ್ತಿ ಶಂಕರ್ ರಾಜ್
ಪ್ರಾರ್ಥನಾ ಅಂಶ:
ಆಸ್ಪತ್ರೆಗೆ ಬೇಕಾದ ಉಪಕರಣಗಳು ಮತ್ತು ಎಲ್ಲಾ ರೀತಿಯ ಅವಶ್ಯಕತೆಗಳು ಪೂರೈಸಲ್ಪಡುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482