By Village Missionary Movement
Wednesday, 02-Aug-2023ಧೈನಂದಿನ ಧ್ಯಾನ(Kannada) – 02.08.2023
ಛತ್ತೀಸ್ಗಢ
"ನೀನು ಕೇಳಿಕೊಂಡರೆ ನಾನು ಅನ್ಯಜನಗಳನ್ನೆಲ್ಲಾ ನಿನಗೆ ಅಧೀನ ಮಾಡುವೆನು; ಭೂವಿುಯ ಕಟ್ಟಕಡೆಯವರೆಗೂ ಇರುವ ಎಲ್ಲಾ ದೇಶಗಳನ್ನೂ ನಿನಗೆ ಸ್ವಾಸ್ತ್ಯವಾಗಿ ಕೊಡುವೆನು" - ಕೀರ್ತನೆ 2:8
ಛತ್ತೀಸ್ಗಢ ರಾಜ್ಯವನ್ನು ನವೆಂಬರ್ 1, 2000 ದಂದು ಮಧ್ಯಪ್ರದೇಶ ರಾಜ್ಯದಿಂದ ಬೇರ್ಪಡಿಸಿ ಸರ್ಕಾರದ ಮಾನ್ಯತೆಯೊಂದಿಗೆ ಸ್ವತಂತ್ರ ರಾಜ್ಯವೆಂದು ಘೋಷಿಸಲಾಯಿತು. ಆದರೂ ಹಿಂದಿನ ದಿನಗಳಿಂದಲೇ ಛತ್ತೀಸ್ಗಢ ಒಂದು ಭಾಗವಾಗಿತ್ತು. ಹೀಗಾಗಿ ಛತ್ತೀಸ್ಗಢ (ಛತ್ತೀಸ್ - 36, ಗಢ - ಗುಡ್ಡಗಾಡು, ಕೋಟೆಯಂತಹ ಪ್ರದೇಶ) 36 ಗುಡ್ಡಗಾಡು ಪ್ರದೇಶಗಳನ್ನು ಒಳಗೊಂಡ ರಾಜ್ಯವಾಗಿತ್ತು. ಈ ಜನರು ಮಾತನಾಡುವ ಭಾಷೆ ಛತ್ತೀಸ್ಗರಿ.
1868 ರಲ್ಲಿ, ಜರ್ಮನಿಯ ಮಿಷನರಿಯೊಬ್ಬರು ಛತ್ತೀಸ್ಗಢ ರಾಜ್ಯದ ಸತ್ನಾಮಿ ಎಂಬ ಬುಡಕಟ್ಟಿನ ಜನರ ಬಗ್ಗೆ ಕೇಳಲ್ಪಟ್ಟರು. ಈ ಬುಡಕಟ್ಟಿನ ಜನರು ತಮ್ಮ ಸತ್ತ ಪೂರ್ವಜರನ್ನು ದೇವರಂತೆ ಪೂಜಿಸುತ್ತಿದ್ದರು ಮತ್ತು ಮೂಢನಂಬಿಕೆಗಳಿಗೆ ತುಂಬಾ ವ್ಯಸನಿಗಳಾಗಿದ್ದರು. ಅವರು ಪ್ರಾರ್ಥಿಸಿ ತನ್ನ ಹೃದಯದಲ್ಲಿ ತೀರ್ಮಾನಿಸಿ ಛತ್ತೀಸ್ಗಢ ರಾಜ್ಯದಲ್ಲಿ ಸತ್ನಾಮಿ ಬುಡಕಟ್ಟಿನ ಜನರನ್ನು ಹುಡುಕಿ ಬಂದರು. ಅವರ ಹೆಸರು Rev. Oscar T. Lohr ಇವರು ಒಂದು ವೈದ್ಯಕೀಯ ಮಿಷನರಿ. ಇವರು ರಾಯಪುರದ ಬಳಿಯ ಬಿಸ್ರಾಂಪುರಕ್ಕೆ ಬಂದು ಅಲ್ಲಿರುವ ಜನರ ಮಧ್ಯದಲ್ಲಿ ಸುವಾರ್ತೆ ಸೇವೆಯನ್ನು ಮೊದಲ ಬಾರಿಗೆ ಮಾಡಲು ಪ್ರಾರಂಭಿಸಿದರು. ಅಲ್ಲಿ ವಾಸಿಸುತ್ತಿದ್ದ ಆದಿವಾಸಿ ಬುಡಕಟ್ಟು ಜನರಿಗೆ ತಮ್ಮ ಅತ್ಯುತ್ತಮ ವೈದ್ಯಕೀಯ ಸೇವೆಯನ್ನು ನೀಡಿ ಕರ್ತನಾದ ಯೇಸು ಕ್ರಿಸ್ತನ ಪ್ರೀತಿಯನ್ನು ಸಾರಿದರು. ಸಾಮಾನ್ಯ ಜನರಿಂದ ಹಿಡಿದು ಸೇನೆಯಲ್ಲಿ ಕೆಲಸ ಮಾಡುವ ಅಧಿಕಾರಿಗಳವರೆಗೆ ಎಲ್ಲರೊಂದಿಗೂ ಸ್ನೇಹದಿಂದ ಇರುತ್ತಿದ್ದರು. ಅನೇಕ ಜನರು ಯೇಸುವನ್ನು ಸ್ವೀಕರಿಸಿದರು ಮತ್ತು ದೀಕ್ಷಾಸ್ನಾನ ಪಡೆದರು. ಅವರು ಬಿಸ್ರಾಪುರದಲ್ಲಿ ಮೊದಲ ಚರ್ಚ್ ಅನ್ನು ನಿರ್ಮಿಸಿದರು. ಛತ್ತೀಸ್ಗಢದಲ್ಲಿ ನಿರ್ಮಿಸಲಾದ ಮೊದಲ ಚರ್ಚ್ ಇದಾಗಿದೆ. ಇದನ್ನು ಅನುಸರಿಸಿ, ಇನ್ನೂ ಅನೇಕರು ದೇವರನ್ನು ಅಂಗೀಕರಿಸುತ್ತಿದ್ದಾರೆ. ಇಂದಿಗೂ, ಅನೇಕ ಸೇವಕರು ಮತ್ತು ಮಿಷನರಿಗಳು ಎದ್ದು ದೇವರ ಸೇವೆ ಮಾಡುತ್ತಿದ್ದಾರೆ. ಇಂದಿಗೂ ಛತ್ತೀಸ್ಗಢವು 73% ಆದಿವಾಸಿ ಜನಸಂಖ್ಯೆಯೊಂದಿಗೆ ಹಿಂದುಳಿದ ರಾಜ್ಯವಾಗಿದೆ. ವೈದ್ಯಕೀಯ, ಶಿಕ್ಷಣ ಮತ್ತು ಸಾರಿಗೆ ಸೌಲಭ್ಯಗಳು ಬಹಳ ಕಡಿಮೆ. ಆದರೂ ಉರಾವ್ನಂತಹ ಬುಡಕಟ್ಟು ಜನರಿಗೆ ಅವರ ಮಾತೃಭಾಷೆಯಲ್ಲಿ ಸತ್ಯವೇದವಿಲ್ಲ.
ಇದನ್ನು ಓದುತ್ತಿರುವ ಸ್ನೇಹಿತರೇ! ಆರಂಭಿಕ ಮಿಷನರಿಗಳಂತೆ ನೀವು ಕೂಡ ಭಾರತ ದೇಶದ ಉಜ್ಜೀವನದ ಪಾಲುಹೊಂದಲು ಬಯಸುವಿರಾ? ನಮ್ಮೊಂದಿಗೆ ಸೇರಿ ನಿಮ್ಮಿಂದ ಸಾಧ್ಯವಾದ ಸೇವೆಯನ್ನು ಮಾಡಲು ಪ್ರೀತಿಯಿಂದ ಆಹ್ವಾನಿಸುತ್ತೇವೆ. ಛತ್ತೀಸ್ಗಢದಿಂದ ಬಂದು ನಮ್ಮ VMM ರಾಕ್ಲ್ಯಾಂಡ್ ಬೈಬಲ್ ಕಾಲೇಜಿನಲ್ಲಿ ತರಬೇತಿ ಪಡೆದು ಪುನಃ ತಮ್ಮ ತವರು ರಾಜ್ಯದಲ್ಲಿ ಸ್ಥಳೀಯ ಮಿಷನರಿಗಳಾಗಿ ಕೆಲಸ ಮಾಡುತ್ತಿದ್ದಾರೆ. ಅಪೊಸ್ತಲ. 16:9 ರಲ್ಲಿ ಮಕೆದೋನ್ಯ ದೇಶದವನಾದ ಒಬ್ಬ ಮನುಷ್ಯನು ಪೌಲನನ್ನು ಬೇಡಿಕೊಂಡ ಸಂಭವವನ್ನು ಓದಿದ್ದೇವೆ. ಅದೇ ರೀತಿ ಇಂದಿಗೂ ಛತ್ತೀಸ್ಗಢ ರಾಜ್ಯದಲ್ಲಿ ಒಂದು ದೊಡ್ಡ ಅವಶ್ಯಕತೆಯಿದೆ. ಆ ಅಗತ್ಯವನ್ನು ತುಂಬಲು ನೀವು ಸಹ ಮುಂದೆ ಬರುತ್ತೀರಾ?
- Bro. ಶಂಕರ್ ರಾಜ್
ಪ್ರಾರ್ಥನಾ ಅಂಶ:
ನಮ್ಮ ಸೇವಕರ ಪ್ರಯಾಣಗಳಲ್ಲಿ ದೇವರು ಭದ್ರತೆಯನ್ನು ಒದಗಿಸುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482