By Village Missionary Movement
Monday, 31-Jul-2023ಧೈನಂದಿನ ಧ್ಯಾನ(Kannada) – 31.07.2023
ದಯೆ ತೋರಿಸು
"ಬಡವರಿಗೆ ದಯೆತೋರಿಸುವವನು ಯೆಹೋವನಿಗೆ ಸಾಲಕೊಡುವವನು;…" - ಜ್ಞಾನೋಕ್ತಿ 19:17
ಒಂದು ಈಸ್ಟರ್ ದಿನದ ಮುಂಜಾನೆಯಲ್ಲಿ ಒಬ್ಬ ದೈವಭಕ್ತಿಯುಳ್ಳ ವ್ಯಕ್ತಿ ಆರಾಧನೆಗೆ ಹೋಗುತ್ತಿದ್ದರು. ದಾರಿಯಲ್ಲಿ ಒಬ್ಬ ಬಡವ ಸರಿಯಾದ ಬಟ್ಟೆಯಿಲ್ಲದೆ ಚಳಿಯಲ್ಲಿ ನಡುಗುತ್ತಿದ್ದನು. ಈ ದೃಶ್ಯವನ್ನು ನೋಡಿ ಆತನ ಹೃದಯ ಕಂಪಿಸಿತು. ಹೋಗಿ ಬೇರೊಂದು ಡ್ರೆಸ್ ತಂದುಕೊಡುವಷ್ಟರಲ್ಲಿ ಆತನು ಹೆಪ್ಪುಗಟ್ಟಿ ಸಾಯುತ್ತಾನೆ ಎಂದು ಭಯಪಟ್ಟರು. ತಕ್ಷಣ ತಾನು ಹಾಕಿಕೊಂಡಿದ್ದ ಉದ್ದನೆಯ ಕೋಟನ್ನು ತೆಗೆದು ಎರಡಾಗಿ ಹರಿದು ಒಂದರ್ಧವನ್ನು ಚಳಿಯಿಂದಾಗಿ ತಾನು ಸುತ್ತಿಕೊಂಡು ಇನ್ನರ್ಧವನ್ನು ಬಡವನಿಗೆ ಹೊದ್ದಿಸಿ ಆಲಯಕ್ಕೆ ಬಂದು ಬಿಟ್ಟರು. ಇದ್ದಕ್ಕಿದ್ದಂತೆ ದೇವರು ಅವರ ಕಣ್ಣುಗಳ ಮುಂದೆ ಒಂದು ದರ್ಶನವನ್ನು ಕೊಟ್ಟರು. ಮಹಿಮೆಯ ದೇವರಾಗಿ ಕಾಣಿಸಿಕೊಂಡ ಅವರು ಅರ್ಧ ನಿಲುವಂಗಿಯನ್ನು ಧರಿಸಿದ್ದರು. ಆ ಮನುಷ್ಯನು ಅದನ್ನು ನೋಡಿ ನಾನು ಸಹಾಯ ಮಾಡಿದ್ದು ಯೇಸು ಕ್ರಿಸ್ತನಿಗಾ ಎಂದು ಆಶ್ಚರ್ಯಪಟ್ಟರು. ಅಯ್ಯೋ ದೇವರು ಎಂದು ಗೊತ್ತಿದ್ದರೆ ಪೂರ್ತಿ ಕೋಟನ್ನೇ ಕೊಡುತ್ತಿದ್ದೆನೇ ಅಂದುಕೊಂಡರು.
ದಯೆ ತೋರುವ ಮನೋಭಾವದಿಂದ ಇತರರ ಹಿತದೃಷ್ಟಿಯಿಂದ ವರ್ತಿಸುವ ಜನರು ಕಡಿಮೆಯಾಗುತ್ತಿರುವ ಕಾಲಘಟ್ಟದಲ್ಲಿ ನಾವು ಬದುಕುತ್ತಿದ್ದೇವೆ. ಇತರರಿಗೆ ಸಹಾಯ ಮಾಡುವಾಗ ತಮಗೆ ಬರುವ ಸಂಕಟವನ್ನು ಜನರು ಇಷ್ಟಪಡುವುದಿಲ್ಲ. ನಮಗೆ ಸಂಕಟ ಉಂಟಾಗದಂತೆ ಇತರರಿಗೆ ಸಹಾಯ ಮಾಡಲು ಸಾಧ್ಯವಿಲ್ಲ. ಇಂದಿನ ಸತ್ಯವೇದ ಭಾಗದಲ್ಲಿ ಮಹಾ ಉಪದ್ರವದಲ್ಲಿದ್ದರೂ ಕೊಟ್ಟಂತಹ ಮಕೆದೋನ್ಯ ಸಭೆಯವರ ಬಗ್ಗೆ ಓದೆದೆವು. ಹೌದು, ಕ್ರಿಸ್ತನು ಸೇವಿಸಿದ ಅದೇ ಪಾತ್ರೆಯಲ್ಲಿ ನಾವು ಕುಡಿಯದಿದ್ದರೆ, ಸರಿಯಾದ ಸಮಯದಲ್ಲಿ ಇತರರಿಗೆ ಸಹಾಯ ಮಾಡುವುದರಿಂದ ಉಂಟಾಗುವ ದೊಡ್ಡ ಸಂತೋಷವನ್ನು ನಾವು ಅನುಭವಿಸಲು ಸಾಧ್ಯವಿಲ್ಲ.
ಪ್ರಿಯರೇ! ನಮ್ಮ ಕೊರತೆಗಳ ನಡುವೆಯೂ ಇತರರಿಗೆ ಸಹಾಯ ಮಾಡುವ ಮನಸ್ಸು ನಮ್ಮಲ್ಲಿದೆಯೇ? ಮತ್ತೊಬ್ಬರಿಗೆ ಕೊಡುವುದರಿಂದ ನಮಗೆ ನೋವಾದರೂ ಅದನ್ನು ಸಹಿಸಿಕೊಳ್ಳುತ್ತಿದ್ದೇವೆಯೇ? ನಮ್ಮ ಕೈ ಗಾಯವಾಗುವವರೆಗೂ ಇತರರಿಗೆ ಕೊಡುತ್ತಿದ್ದೇವೆಯೇ?
- Mrs. ಜಾಸ್ಮಿನ್ ಪಾಲ್
ಪ್ರಾರ್ಥನಾ ಅಂಶ:
ನಮ್ಮ ಕಾರ್ಯ ಸ್ಥಳಗಳಿಗೆ ದ್ವಿಚಕ್ರ ವಾಹನಗಳು ಅತ್ಯಗತ್ಯವಾಗಿದೆ. ಸಹಾಯ ಮಾಡುವ ವ್ಯಕ್ತಿಗಳು ಎದ್ದೇಳುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482