Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 29.07.2023
Share:

By Village Missionary Movement

Saturday, 29-Jul-2023

ಧೈನಂದಿನ ಧ್ಯಾನ(Kannada) – 29.07.2023

 

ಹಣದಾಸೆ

 

"ಹಣದಾಸೆಯು ಸಕಲವಿಧವಾದ ಕೆಟ್ಟತನಕ್ಕೆ ಮೂಲವಾಗಿದೆ..." - 1 ತಿಮೊಥೆಯ 6:10

 

ಪ್ರಪಂಚದ ಅದ್ಭುತಗಳಲ್ಲಿ ಒಂದು ಚೀನಾದ ಮಹಾಗೋಡೆ! ಈ ಮಹಾಗೋಡೆಯು 4500 ಮೈಲಿ ಉದ್ದ, 35 ಅಡಿ ಎತ್ತರ ಮತ್ತು 25 ಅಡಿ ಅಗಲವಿದೆ. ಜಗತ್ತೇ ಆಶ್ಚರ್ಯಪಡುವಷ್ಟು ಸುರಕ್ಷಿತ ಮತ್ತು ವೈಭವಯುತವಾಗಿ ಇದನ್ನು ನಿರ್ಮಿಸಲಾಗಿದೆ. ಜಗತ್ತಿನ ಯಾವ ದೇಶವೂ ಇಷ್ಟೊಂದು ದೈತ್ಯಾಕಾರದ ಗೋಡೆಯನ್ನು ನಿರ್ಮಿಸಿಲ್ಲ. ನಿಸರ್ಗದ ಮಧ್ಯೆ ಪರ್ವತಗಳ ಮೇಲೆ ಕಟ್ಟಲ್ಪಟ್ಟಿರುವ ಈ ಗೋಡೆಯನ್ನು ಜೀವನದಲ್ಲಿ ಒಮ್ಮೆಯಾದರೂ ನೋಡಲು ಹಲವು ದೇಶಗಳ ಜನರು ತಂಡೋಪತಂಡವಾಗಿ ಬರುತ್ತಾರೆ. ಇಷ್ಟೆಲ್ಲಾ ವೈಶಿಷ್ಟ್ಯಗಳೊಂದಿಗೆ ಚೀನಾದ ಮಹಾಗೋಡೆಯನ್ನು ನಿರ್ಮಿಸಿದ ಉದ್ದೇಶವೇನು ಗೊತ್ತೇ? ಶತ್ರು ಪಡೆಗಳು ತನ್ನ ದೇಶದೊಳಗೆ ಪ್ರವೇಶಿಸಬಾರದು ಎಂಬುದೇ. ಆದರೆ ಅದನ್ನು ಮೀರಿ, ಬಾರ್ಬೆರಿಯನ್ ಎಂಬ ಅರಣ್ಯವಾಸಿಗಳು ಬಹಳ ಸುಲಭವಾಗಿ ಒಳಗೆ ಪ್ರವೇಶಿಸಿಬಿಟ್ಟರು. ಹೇಗೆ ಎಂದು ತಾನೇ ಯೋಚಿಸುತ್ತಿದ್ದೀರಾ? ಆ ಗೋಡೆಯನ್ನು ದಾಟಿಯೋ ಅಥವಾ 4500 ಮೈಲುಗಳಷ್ಟು ದೂರ ಸುತ್ತಿಯೋ ಒಳಗೆ ನುಗ್ಗಲಿಲ್ಲ. ಕೋಟೆಯನ್ನು ಕಾವಲು ಕಾಯುತ್ತಿದ್ದ ಕಾವಲುಗಾರನಿಗೆ ಲಂಚ ಕೊಟ್ಟು, ಗೇಟ್ ಮೂಲಕವೇ ಪ್ರವೇಶಿಸಿ ಚೀನಾವನ್ನು ಆಕ್ರಮಿಸಿದರು. ಒಂದು ಸಣ್ಣ ಹಣಕಾಸಿನ ಆಸೆ ದೊಡ್ಡ ಸೋಲಿಗೆ ಕಾರಣವಾಯಿತು. ಬೇಲಿಯೇ ಬೆಳೆ ಮೇಯುವ ಕಥೆಯಂತೆ, ಜೊತೆಯಿದ್ದ ಕಾವಲುಗಾರನ ಹಣದ ಆಸೆಯೇ ಇದಕ್ಕೆ ಕಾರಣವಾಯಿತು. 

 

2 ಅರಸುಗಳು 5 ನೇ ಅಧ್ಯಾಯದಲ್ಲಿ ದೇವರ ಮನುಷ್ಯನಾದ ಎಲೀಷನ ಸೇವಕನಾದ ಗೇಹಜಿಯ ಮೂಲಕ ದೇವರು ನಮಗೆ ಕಲಿಸಿಕೊಡುವ ಕಾರ್ಯ ಏನೆಂದು ನೋಡೋಣವಾ. ಎಲೀಯನ ನಂತರ, ಎಲೀಷನು ತನ್ನ ಸಂಪೂರ್ಣ ಗಮನವನ್ನು ತೋರಿ ಆತ್ಮದಲ್ಲಿ ಎರಡು ಪಾಲನ್ನು ಹೊಂದಿ ಬಲವುಳ್ಳ ಪ್ರವಾದಿಯಾದನು. ಆದರೆ ಎಲೀಷನ ನಂತರ ಅವನ ಸ್ಥಾನವನ್ನು ಪಡೆಯಬೇಕಾಗಿದ್ದ ಗೇಹಜಿಯು ತನ್ನ ಆತ್ಮವನ್ನು ತಡೆಯದೆ ಭೌತಿಕ ವಸ್ತುಗಳ ಮೇಲೆ ಆಸೆಯಿಟ್ಟು ಕೊನೆಗೆ ನಾಮಾನನ ಕುಷ್ಠವನ್ನು ಪಡೆದನು. ಅವನು ತನಗೆ ಮಾತ್ರವಲ್ಲದೆ ಅವನ ಸಂತತಿಗೂ ಶಾಪವನ್ನು ಬರಮಾಡಿದನು. ಉನ್ನತಿಗಾಗಿ ಕರೆಯಲ್ಪಟ್ಟವನು ಕುಗ್ಗಿಸಲ್ಪಟ್ಟನು. ಆತ್ಮವನ್ನು ಅಡಗಿಸಲಾಗದೆ ಕೋಟೆ ಕುಸಿದ ಪಟ್ಟಣದಂತೆ ಮಾರ್ಪಟ್ಟನು.

 

ನಾವು ಕೂಡ ಮನಸ್ಸಿನ ನಡುವನ್ನು ಕಟ್ಟಿ ಕೊಂಡು ಸ್ವಸ್ಥಚಿತ್ತರಾಗಿಬೇಕು. (1 ಪೇತ್ರ 1:13) ಎಂದು ಸತ್ಯವೇದವು ನಮ್ಮನ್ನು ಎಚ್ಚರಿಸುತ್ತಿದೆ. ದೇವರಿಗೆ ಇಷ್ಟವಿಲ್ಲದ ಸಣ್ಣ, ಸಣ್ಣ ಭೌತಿಕ ಆಸೆಗಳು ನಮ್ಮ ಜೀವನದ ದೊಡ್ಡ ಆಶೀರ್ವಾದಗಳಿಗೆ ಅಡ್ಡಿಯಾಗಬಹುದು ಎಂಬುದರಲ್ಲಿ ಸಂದೇಹವೇ ಇಲ್ಲ. ಹಣದ ಆಸೆಯನ್ನು ಬಿಟ್ಟು ಸಾಕು ಎನ್ನುವ ಮನಸ್ಸಿನೊಂದಿಗೆ ಬದುಕುವುದನ್ನು ಅಭ್ಯಾಸಮಾಡಿಕೊಳ್ಳೋಣ. ದೇವರು ನಮ್ಮನ್ನು ಆಶೀರ್ವದಿಸಲಿ.

- Mrs. ಜಯಂತಿ ಬಾಕ್ಯನಾಥನ್

 

ಪ್ರಾರ್ಥನಾ ಅಂಶ:

ನಮ್ಮ ಸೇವೆಯನ್ನು ಪ್ರಾರ್ಥನೆಯಿಂದಲೂ, ಕಾಣಿಕೆಯಿಂದಲೂ ಬೆಂಬಲಿಸುತ್ತಿರುವ ಪ್ರತಿಯೊಬ್ಬರನ್ನು ದೇವರು ಆಶೀರ್ವದಿಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet holiganbet jojobet güncel giriş matbet holiganbet güncel sahabet onwin bets10 bets10 giriş bets10 güncel giriş betcio atlasbet bets10 bets10 giriş kralbet betturkey safirbet safirbet safirbet giriş safirbet güncel giriş tarafbet betnano meritbet mariobet markajjbet queenbet betcio atlasbet tarafbet mariobet mariobet Norabahis Norabahis giriş Norabahis jojobet jojobet grandpashabet holiganbet gameofbet 1win teosbet palacebet tempobet wbahis grandpashabet betpark betpark casibom casibom casibom giriş casibom casibom giriş vaycasino holiganbet bahsegel bahsegel bahsegel