Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 28.07.2023
Share:

By Village Missionary Movement

Thursday, 27-Jul-2023

ಧೈನಂದಿನ ಧ್ಯಾನ(Kannada) – 28.07.2023

 

ಆತ್ಮಗಳ ಆದಾಯ 

 

"...ಆತ್ಮಗಳನ್ನು ಗೆಲ್ಲು ವವನು ಜ್ಞಾನಿಯಾಗಿದ್ದಾನೆ" - ಜ್ಞಾನೋಕ್ತಿ 11:30

 

ನಮ್ಮ ದೇಶದ ಉತ್ತರ ಭಾಗದಲ್ಲಿರುವ ಒಂದು ನಿರ್ದಿಷ್ಟವಾದ ಆಸ್ಪತ್ರೆಯು ತುಂಬಾ ಕಾರ್ಯನಿರತವಾಗಿತ್ತು. ಅಪಘಾತ ಸಂಭವಿಸಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಬಾಲಕನೊಬ್ಬನನ್ನು ಆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವನಿಗೆ 11 ವರ್ಷ ಎಂದು, ಆತನ ಹೆಸರು ಸ್ಟೀಫನ್ ಎಂದು ಸಂಬಂಧಿಕರು ತಿಳಿಸಿದರು. ಅವನಿಗೆ ಚಿಕಿತ್ಸೆ ನೀಡಲಾಯಿತು. ಆದರೆ ಗಾಯದ ತೀವ್ರತೆಯಿಂದಾಗಿ ಬದುಕುಳಿಯುವುದು ಕಷ್ಟ ಎಂದು ವೈದ್ಯರು ಹೇಳಿಬಿಟ್ಟರು. ಆದರೆ ಅಲ್ಲಿ ಕೆಲಸ ಮಾಡುತ್ತಿದ್ದ ನರ್ಸ್ ಅವನ ಬಳಿಗೆ ಹೋಗಿ, “ತಮ್ಮಾ ಭಯಪಡಬೇಡ, ನಿನ್ನ ದೇವರು ನಿನ್ನನ್ನು ಗುಣಪಡಿಸುತ್ತಾರೆ” ಎಂದು ಧೈರ್ಯ ತುಂಬಿದಳು. ಅದಕ್ಕೆ ಸ್ಟೀಫನ್ ಅಕ್ಕಾ, "ನಾನು ಸತ್ತರೆ, ಪರಲೋಕಕ್ಕೆ ಹೋಗಿ ಯೇಸಪ್ಪನನ್ನು ನೋಡುತ್ತೇನೆ" ಎಂದು ಹರ್ಷ ಮುಖದಿಂದ ಹೇಳಿದನು.

 

ಸ್ವಲ್ಪ ಹೊತ್ತಿನ ನಂತರ ಬಂದು ನೋಡಿದರೆ ಸ್ಟೀಫನ್ ಅಳುತ್ತಿದ್ದನು. ಅದನ್ನು ನೋಡಿ ನರ್ಸ್ ಮತ್ತೆ ಸಮಾಧಾನ ಪಡಿಸಿದಳು. ಸ್ಟೀಫನ್, "ಅಕ್ಕಾ, ನಾನು ಸಾಯುತ್ತೇನೆ ಎಂದು ಅಳುತ್ತಿಲ್ಲ. ನಾನು ಇದುವರೆಗೂ ನನ್ನ ವಯಸ್ಸಿನ 10 ಜನರನ್ನು ಯೇಸುವಿನ ಬಳಿಗೆ ಕರೆದೊಯ್ದಿದ್ದೇನೆ. ನನಗೆ ಈ ತಿಂಗಳಿಗೆ 11 ವರ್ಷವಾಗುತ್ತದೆ. ಆ 11 ನೇ ವ್ಯಕ್ತಿಯಾಗಿ ನೀವು ಯೇಸುವನ್ನು ಸ್ವೀಕರಿಸುತ್ತೀರಾ?" ಎಂದು ದಯೆಯಿಂದ ಕೇಳಿದನು. ನರ್ಸ್ ಸರಿ ನೋಡೋಣ ಎಂದು ಹೇಳಿ ಹೊರಟು ಹೋದಳು. ಆದರೂ ಹುಡುಗನ ಪ್ರಶ್ನೆ ಅವಳನ್ನು ಯೋಚಿಸುವಂತೆ ಮಾಡಿತು. ಇದರ ಮಧ್ಯದಲ್ಲೇ, ಸ್ಟೀಫನ್‌ಗೆ ಚಿಕಿತ್ಸೆ ನೀಡಿದ ಬೇರೊಂದು ಮತದ ವೈದ್ಯರಿಗೂ ಸ್ಟೀಫನ್ ಸುವಾರ್ತೆ ಸಾರಿದ್ದನು. ವೈದ್ಯರು ಮನೆಗೆ ಹಿಂದಿರುಗಿದಾಗ ಇದರ ಬಗ್ಗೆ ಯೋಚಿಸುತ್ತಾ ತಮ್ಮ ಮನೆಯಲ್ಲಿ ಆಕಡೆ ಈಕಡೆ ನಡೆಯುತ್ತಿದ್ದರು. ಈ ವಿಚಾರವನ್ನು ಪತ್ನಿಗೆ ತಿಳಿಸುತ್ತಿರುವಷ್ಟರಲ್ಲಿ ಬಾಲಕ ಮೃತಪಟ್ಟ ನೆಂಬ ವಿಚಾರ ತಿಳಿಯಿತು. ಆಸ್ಪತ್ರೆಗೆ ಬಂದ ವೈದ್ಯರು ನೋಡಿದ ದೃಶ್ಯ ಅವರ ಹೃದಯವನ್ನು ಹಿಂಡಿತು. ಹುಡುಗನ ಪಕ್ಕದಲ್ಲಿ ನರ್ಸ್ ಮೊಣಕಾಲೂರಿ ಪ್ರಾರ್ಥಿಸುತ್ತಿದ್ದಳು. "ಡಾಕ್ಟರ್, ಸ್ಟೀಫನ್ ನ ಇಚ್ಛೆಯಂತೆ ನಾನು ಯೇಸುವನ್ನು ಹನ್ನೊಂದನೇ ವ್ಯಕ್ತಿಯಾಗಿ ಸ್ವೀಕರಿಸಿದ್ದೇನೆ" ಎಂದು ಆನಂದ ಕಣ್ಣೀರಿನಿಂದ ಹೇಳಿದಳು.

 

ಮರಣದ ಹಾಸಿಗೆಯಲ್ಲಿದ್ದ 11 ವರ್ಷದ ಹುಡುಗನಿಗೆ ಇಂತಹ ಆತ್ಮಭಾರ, ಆತ್ಮಗಳ ಬಗ್ಗೆ ಕಾಳಜಿ ಇದ್ದರೆ, ನಮ್ಮ ಬಗ್ಗೆ ಏನು? ಇಸ್ರಾಯೇಲ್ಯರು ರಕ್ಷಿಸಲ್ಪಡಬೇಕು ಎಂಬುದೇ ಪೌಲನ ಹೃದಯದ ಬಯಕೆಯಾಗಿತ್ತು ನಮ್ಮ ಬಯಕೆ ಏನು? ಇಂದಿನ ಸತ್ಯವೇದ ಭಾಗದಲ್ಲಿ ಹೇಳಲ್ಪಟ್ಟ ಎಲ್ಲಾ ಪಾಡುಗಳಲ್ಲಿಯೂ ಸಭೆಯ ಕುರಿತು ಉಂಟಾಗಿರುವ ಚಿಂತೆಯು ನನ್ನನ್ನು ಪ್ರತಿದಿನವೂ ಒತ್ತುತ್ತಿದೆ ಎಂದು ಪೌಲನು ಹೇಳುತ್ತಿದ್ದಾರೆ. ನಮಗೆ ಸಭೆಯ‌ ಮಕ್ಕಳ ಕುರಿತಾದ ಸೇವೆಯ ದಾಹ ಹೆಚ್ಚಾಗಲಿ. ಆತ್ಮ ಆದಾಯವನ್ನು ಮಾಡಲು ನಮ್ಮನ್ನು ಸಮರ್ಪಿಸೋಣ. ದೇಶದಲ್ಲಿ ದೊಡ್ಡ ಉಜ್ಜೀವನವನ್ನು ನೋಡೋಣ.

- Mr. ಬಾಕ್ಯನಾಥನ್ 

 

ಪ್ರಾರ್ಥನಾ ಅಂಶ:

ನಮ್ಮ ಸೇವಕರ ಪ್ರಯಾಣಗಳಲ್ಲಿ ದೇವರು ಸುರಕ್ಷತೆಯನ್ನು ದಯಪಾಲಿಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet holiganbet jojobet güncel giriş matbet holiganbet güncel sahabet onwin bets10 bets10 giriş bets10 güncel giriş betcio atlasbet bets10 bets10 giriş kralbet betturkey safirbet safirbet safirbet giriş safirbet güncel giriş tarafbet betnano meritbet mariobet markajjbet queenbet betcio atlasbet tarafbet mariobet mariobet Norabahis Norabahis giriş Norabahis jojobet jojobet grandpashabet holiganbet gameofbet 1win teosbet palacebet tempobet wbahis grandpashabet betpark betpark casibom casibom casibom giriş casibom casibom giriş vaycasino holiganbet bahsegel bahsegel bahsegel