Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 26.07.2023
Share:

By Village Missionary Movement

Tuesday, 25-Jul-2023

ಧೈನಂದಿನ ಧ್ಯಾನ(Kannada) – 26.07.2023

 

ಕರ್ತನಿಗೆ ಸ್ತೋತ್ರ ಸಲ್ಲಿಸು

 

"ಸ್ತೊತ್ರವನ್ನು ಅರ್ಪಿಸುವವನು ನನ್ನನ್ನು ಘನ ಪಡಿಸುತ್ತಾನೆ" - ಕೀರ್ತನೆ 50:23

 

ಅಮೆರಿಕಾದಲ್ಲಿ ಒಬ್ಬರಿಗೆ ಅವರು ಮಾಡಿದ ಅಪರಾಧಕ್ಕಾಗಿ 50 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು. ಇದರಿಂದ ಅವರ ಪತ್ನಿ ಮತ್ತು ಮಕ್ಕಳು ವರ್ಷಾನುಗಟ್ಟಲೆ ತುಂಬಾ ಕಷ್ಟಪಟ್ಟರು. ಇದರಿಂದಾಗಿ ಸಿಟ್ಟಿನಿಂದ ಕೋಪಗೊಂಡ ಅವರು ತನ್ನ ಸುತ್ತಮುತ್ತಲಿನವರ ಮೇಲೆ ಆ ಕೋಪ ಮತ್ತು ಸಿಟ್ಟನ್ನು ತೋರಿಸುತ್ತಿದ್ದರು. ಒಂದು ದಿನ ಅವರು ತನ್ನ ಕೋಣೆಯಲ್ಲಿದ್ದ ಸತ್ಯವೇದವನ್ನು ತೆಗೆದುಕೊಂಡು ಓದಿದರು. ಓದುತ್ತಾ ಓದುತ್ತಾ ಒಂದು ರೀತಿಯ ಸಮಾಧಾನ ಅವರನ್ನು ಆವರಿಸಿತು. ಕ್ರಿಸ್ತನು ಒಂದೇ ಒಂದು ಪಾಪವನ್ನೂ ಮಾಡದೆ ನನಗಾಗಿ ಪಾಡುಪಟ್ಟು ಮರಣ ಹೊಂದಿದರಲ್ಲಾ ಎಂದು ಅಂಗೀಕರಿಸಿದರು. ಅಂದಿನಿಂದ ತನಗೆ ಬರಬೇಕಾದ ಶಿಕ್ಷೆಯನ್ನು ಕರ್ತನು ಸ್ವೀಕರಿಸಿದರೆಂದು ದೇವರಿಗೆ ಕೃತಜ್ಞತೆ ಹೇಳಲು ಪ್ರಾರಂಭಿಸಿದರು. ಕೆಲವು ದಿನಗಳು ಕಳೆದವು. ಅವರ ಹೆಂಡತಿಗೆ ಕ್ಯಾನ್ಸರ್ ಎಂದು ತಿಳಿಯಿತು. ಆಗಲೂ ಮನಗುಂದದೇ ಕೃತಜ್ಞತೆ ಸಲ್ಲಿಸಿದರು. ಅವರ ಹೆಂಡತಿ ಸ್ವಸ್ಥಳಾಗಿ ಅವರನ್ನು ನೋಡಲು ಬಂದಳು. ಎಂಥಾ ಅದ್ಭುತ ನೋಡಿ.

 

ನಾವು ಗುಣುಗುಟ್ಟುವಾಗ, ಸೈತಾನನಿಗೆ ದಾರಿ ಮಾಡಿಕೊಡುತ್ತೇವೆ. ಸ್ತುತಿಸುವಾಗ, ಕರ್ತನಿಗೆ ಮೊದಲ ಸ್ಥಾನವನ್ನು ಕೊಟ್ಟು ಆತನನ್ನು ಉನ್ನತೀಕರಿಸುತ್ತೇವೆ. ಇಸ್ರಾಯೇಲ್ಯರು ಅರಣ್ಯದಲ್ಲಿ ಮೋಶೆಯ ಮೂಲಕ ದೇವರಿಂದ ನಡೆಸಲ್ಪಟ್ಟಾಗ, ಅವರು ದಾರಿಯಲ್ಲಿ ಕಷ್ಟಗಳನ್ನು ಎದುರಿಸಿದಾಗ ಅವರು ಗುಣುಗುಟ್ಟಿ, ಕೊರತೆ ಹೇಳುತ್ತಲೇ ಇದ್ದರು. ಅವರನ್ನು ಗುಲಾಮಗಿರಿಯಿಂದ ಮುಕ್ತಗೊಳಿಸಿದ್ದಕ್ಕಾಗಿ ದೇವರನ್ನು ಮಹಿಮೆಪಡಿಸಲೇ ಇಲ್ಲ. ಹೀಗೆ ಅವರು ಕಾನಾನ್ ಅನ್ನು ಕಳೆದುಕೊಂಡರು. ಅವರ ಮಕ್ಕಳು ಅದನ್ನು ಸ್ವತಂತ್ರಿಸಿಕೊಂಡರು. ಬದಲಾಗಿ ಸ್ತುತಿಸುವಾಗ ದೇವರೇ ಇಳಿದು ಬರುತ್ತಾರೆ. ಇಸ್ರಾಯೇಲ್ಯರು ಸ್ತುತಿಸಿ ಆರ್ಭಟಿಸಿದಾಗ ಯೆರಿಕೋ ಕುಸಿದುಬಿದ್ದಿತು. ಗುಣುಗುಟ್ಟಿದಾಗ ವಿನಾಶ ಮತ್ತು ದೇವರ ಕೋಪ ಬಂದಿತು. ಹೌದು, ನಾವು ಸ್ತುತಿಸುವಾಗ ದೇವರಿಗೆ ಮತ್ತು ಗುಣುಗುಟ್ಟುವಾಗ ಸೈತಾನನಿಗೆ ಮೊದಲ ಸ್ಥಾನವನ್ನು ನೀಡುತ್ತೇವೆ. ನಾವು ಯಾರಿಗೆ ಆದ್ಯತೆ ನೀಡುತ್ತೇವೆ ಎಂಬುದರ ಮೇಲೆ ನಮ್ಮ ಜೀವನವು ಅವಲಂಬಿತವಾಗಿರುತ್ತದೆ.

 

ಇದನ್ನು ಓದುತ್ತಿರುವ ಪ್ರಿಯರೇ, ನಾವು ಕೂಡ ಕಷ್ಟ ಸಂಕಟಗಳ ನಡುವೆ ಸ್ತುತಿಸಲು ಸಾಧ್ಯವಾಗದೆ ಗುಣುಗುಟ್ಟುತ್ತಲೋ, ಕೊರತೆ ಹೇಳುತ್ತಲೋ ಇರಬಾರದು. ದೇವರು ನಮ್ಮ ಜೀವನದಲ್ಲಿ ಮಾಡುವ ಕಾರ್ಯಗಳನ್ನು ಮರೆಯದೆ ಕೃತಜ್ಞರಾಗಿದ್ದರೆ ಸ್ತೋತ್ರವು ತಾನಾಗಿ ಬರುತ್ತದೆ. ತಡೆಗಳನ್ನು ಒಡೆಯುವ ಸ್ತುತಿಯು ನಮ್ಮ ಜೀವನವನ್ನು ವಿಜಯಶಾಲಿಯಾಗಿಸುತ್ತದೆ. ಸ್ತುತಿಯು ಸದಾ ನಮ್ಮ ನಾಲಿಗೆಯ ಮೇಲಿರಲಿ. ನಿಮ್ಮಲ್ಲಿ ಸ್ತುತಿಯಿದ್ದರೆ ಪರಲೋಕವು ನಿಮ್ಮ ಬಳಿಗೆ ಬರುತ್ತದೆ. ನಿಮ್ಮ ಸ್ಥಳ ಕದಲಿಸಲ್ಪಡುತ್ತದೆ. ಪರಿಸ್ಥಿತಿ ಬದಲಾಗುತ್ತದೆ. ಇಷ್ಟವಾಗಿ ಸ್ತುತಿಸಿರಿ ಅದು ನಿಮ್ಮ ಅಭ್ಯಾಸವಾಗಿಬಿಡುತ್ತದೆ.

- Mrs. ಜೆನಿಟಾ ಅಬಿರಾಮಿ

 

ಪ್ರಾರ್ಥನಾ ಅಂಶ:

ನಮ್ಮ ಕ್ಯಾಂಪಸ್‌ನಲ್ಲಿ ಟ್ಯೂಷನ್ ಮಾಡುವ ಶಿಕ್ಷಕರಿಗಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş