Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 25.07.2023
Share:

By Village Missionary Movement

Monday, 24-Jul-2023

ಧೈನಂದಿನ ಧ್ಯಾನ(Kannada) – 25.07.2023

 

ಬಾಯಿಯ ಪ್ರತ್ಯುತ್ತರ

 

"ತನ್ನ ಬಾಯಿಯ ಪ್ರತ್ಯುತ್ತರದಿಂದ ಮನುಷ್ಯನಿಗೆ ಆನಂದವಾ ಗುತ್ತದೆ; ತಕ್ಕಕಾಲದಲ್ಲಿ ಆಡಿದ ಮಾತು ಎಷ್ಟೋ ಒಳ್ಳೇದು!." - ಜ್ಞಾನೋಕ್ತಿ 15:23

 

ಹಳೆಯ ಒಡಂಬಡಿಕೆಯಲ್ಲಿ, ಮೊರ್ದೆಕೈ ಎಸ್ತೇರಳಿಗೆ, "ನೀನು ಈ ಕಾಲದಲ್ಲಿ ಮೌನವಾಗಿಯೇ ಇದ್ದರೆ ಮತ್ತೊಂದು ಕಡೆಯಿಂದ ಯೆಹೂದ್ಯರಿಗೆ ವಿಶ್ರಾಂತಿಯೂ ಬಿಡುಗಡೆಯೂ ಉಂಟಾಗುವವು; ಇಂಥಾ ಕಾಲ ಕ್ಕೋಸ್ಕರ ನೀನು ರಾಜತ್ವಕ್ಕೆ ಬಂದಿ ಏನೋ ತಿಳಿದ ವರು ಯಾರು?" ಎಂದು ಹೇಳಿದ ಮಾತುಗಳು ಎಸ್ತೇರಳನ್ನು ಉಪವಾಸ ಮಾಡಿ, ಕಾನೂನನ್ನು ಉಲ್ಲಂಘಿಸಿ ರಾಜನ ಮನೆಯನ್ನು ಪ್ರವೇಶಿಸುವ ಧೈರ್ಯವನ್ನು ನೀಡಿತು. ಇದರಿಂದಾಗಿ ಯೆಹೂದ್ಯ ಕುಲವು ವಿನಾಶದಿಂದ ತಪ್ಪಿಸಲ್ಪಟ್ಟಿತು.

 

 ನೆಬೂಕದ್ನೆಚ್ಚರನು ಮಾಡಿಸಿದ ಬಂಗಾರದ ಪ್ರತಿಮೆಯನ್ನು ನಮಸ್ಕರಿಸಲು ನಿರಾಕರಿಸಿದ್ದರಿಂದ ಉರಿಯುವ ಬೆಂಕಿಯ ಆವಿಗೆಯ ಮಧ್ಯದಲ್ಲಿ ಹಾಕಲ್ಪಡುವ ದಂಡನೆಯನ್ನು ಹೊಂದಿದ ಶದ್ರಕ್‌, ಮೇಷಕ್‌, ಅಬೇದ್‌ನೆಗೋ ಎಂಬವರು ರಾಜನ ಬಳಿ, "ನಾವು ಸೇವಿಸುವ ನಮ್ಮ ದೇವರು ಉರಿಯುವ ಬೆಂಕಿಯ ಆವಿಗೆಯೊಳಗಿಂದ ನಮ್ಮನ್ನು ತಪ್ಪಿಸಲು ಸಮರ್ಥನಾಗಿದ್ದಾನೆ" ಎಂದು ಹೇಳಿದ ಮಾತುಗಳ ಪ್ರಕಾರವೇ ದೇವರು ಅವರನ್ನು ತಪ್ಪಿಸಿದರು. ರಾಜನು ಆ ನಿಜ ದೇವರನ್ನು ಮಹಿಮೆಪಡಿಸಿದರು. ಆ ಮೂರು ಜನರು ದೇಶದಲ್ಲಿ ಉನ್ನತ ಪದವಿಗೆ ಬಂದರು.

 

ಹೊಸ ಒಡಂಬಡಿಕೆಯಲ್ಲಿ, ಕಾನಾನ್ಯರವಳೊಬ್ಬಳು ಯೇಸುವಿನ ಬಳಿ ಬಂದು ತನ್ನ ಮಗಳನ್ನು ದೆವ್ವದ ಕಾಟದಿಂದ ಬಿಡಿಸಬೇಕೆಂದು ಬೇಡಿಕೊಂಡಾಗ, ಯೇಸು ಇಸ್ರಾಯೇಲನ ಮನೆತನದವರ ಬಳಿಗೇ ಹೊರತು ಮತ್ತಾರ ಬಳಿಗೂ ನಾನು ಕಳುಹಿಸಲ್ಪಟ್ಟವನಲ್ಲ, ಆದ್ದರಿಂದ ಮಕ್ಕಳು ತಿನ್ನುವ ರೊಟ್ಟಿಯನ್ನು ತಕ್ಕೊಂಡು ನಾಯಿಮರಿಗಳಿಗೆ ಹಾಕುವದು ಸರಿಯಲ್ಲ ಎಂದು ಹೇಳಿಬಿಟ್ಟರು. ಆದರೆ ಆಕೆ, "ನಾಯಿಮರಿಗಳಂತೂ ತಮ್ಮ ಯಜಮಾನರ ಮೇಜಿನಿಂದ ಬೀಳುವ ರೊಟ್ಟಿಯ ತುಂಡುಗಳನ್ನು ತಿನ್ನುತ್ತವಲ್ಲಾ" ಎಂದು ಹೇಳಿದ ಮಾತುಗಳು, ಯೇಸುವೇ ಆಕೆಯ ನಂಬಿಕೆಯನ್ನು ಹೊಗಳುವಂತೆ ಮಾಡಿ, ಆಕೆಯ ಮಗಳಿಗೆ ಸ್ವಸ್ಥತೆ ಉಂಟಾಗುವಂತೆ ಮಾಡಿತು.

 

ಯೇಸು ಶಿಲುಬೆಯಲ್ಲಿ ನೇತಾಡುತ್ತಿರುವಾಗ, ಒಬ್ಬ ಕಳ್ಳನು "ಯೇಸುವೇ, ನೀನು ನಿನ್ನ ರಾಜ್ಯವನ್ನು ಪಡೆದವನಾಗಿ ಬರುವಾಗ ನನ್ನನ್ನು ನೆನಸಿಕೋ" ಎಂದು ಸಮಯೋಚಿತವಾಗಿ ಆಡಿದ ಮಾತುಗಳು ಅವನಿಗೆ ಪರದೈಸಿಯನ್ನು ಮತ್ತು ಶಾಶ್ವತ ಸಂತೋಷವನ್ನು ತಂದುಕೊಟ್ಟಿತು.

 

ಪ್ರಿಯರೇ! ಮೇಲಿನ ಸತ್ಯವೇದದ ಮೂಲಗಳು ತನ್ನ ಬಾಯಿಯ ಪ್ರತ್ಯುತ್ತರದಿಂದ ಮನುಷ್ಯನಿಗೆ ಆನಂದವಾ ಗುತ್ತದೆ ತಕ್ಕಕಾಲದಲ್ಲಿ ಆಡಿದ ಮಾತು ಎಷ್ಟೋ ಒಳ್ಳೇದು ಎಂಬುದನ್ನು ತೋರಿಸುತ್ತಿದೆ. ಹೃದಯದಲ್ಲಿ ತುಂಬಿರುವದೇ ಬಾಯಲ್ಲಿ ಹೊರಡುವದು. ನಮ್ಮ ಹೃದಯವು ದೇವರ ವಾಕ್ಯಗಳಿಂದ ತುಂಬಿರುವಾಗ, ವಾಕ್ಯವಾಗಿರುವ ದೇವರು ನಮ್ಮ ಹೃದಯಗಳಲ್ಲಿ ಆತ್ಮವಾಗಿ ತುಂಬಿರುತ್ತಾರೆ. ಆಗ ಮಾತನಾಡುವವರು ನಾವಲ್ಲ, ಪವಿತ್ರಾತ್ಮನೇ ಮಾತನಾಡುತ್ತಾರೆ. ನಾವು ದೇವರ ಬಳಿ ಮತ್ತು ಮನುಷ್ಯರ ಬಳಿ ಮಾತನಾಡುವ ಮಾತುಗಳಿಂದಾಗಿ ನಮಗೆ ಸಂತೋಷವಾಗುತ್ತದೆ. ಸರಿಯಾದ ಸಮಯದಲ್ಲಿ ನಾವು ಮಾತನಾಡುವ ಮಾತುಗಳು ನಮಗೆ ಹೆಚ್ಚಿನ ಪ್ರಯೋಜನವನ್ನು ತರುತ್ತವೆ!

- Mrs. ಗೀತಾ ರಿಚರ್ಡ್

 

ಪ್ರಾರ್ಥನಾ ಅಂಶ:

ಆಂಧ್ರಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ಮಂದಿರ ನಿರ್ಮಾಣ ಕಾರ್ಯಕ್ಕಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet holiganbet jojobet güncel giriş matbet holiganbet güncel sahabet onwin bets10 bets10 giriş bets10 güncel giriş betcio atlasbet bets10 bets10 giriş kralbet betturkey safirbet safirbet safirbet giriş safirbet güncel giriş tarafbet betnano meritbet mariobet markajjbet queenbet betcio atlasbet tarafbet mariobet mariobet Norabahis Norabahis giriş Norabahis jojobet jojobet grandpashabet holiganbet gameofbet 1win teosbet palacebet tempobet wbahis grandpashabet betpark betpark casibom casibom casibom giriş casibom casibom giriş vaycasino holiganbet bahsegel bahsegel bahsegel