Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 24.07.2023
Share:

By Village Missionary Movement

Sunday, 23-Jul-2023

ಧೈನಂದಿನ ಧ್ಯಾನ(Kannada) – 24.07.2023

 

ಹೋರಾಡು

 

"…ನೀವು ನನಗೋಸ್ಕರ ದೇವರ ಮುಂದೆ ಮಾಡುವ ಪ್ರಾರ್ಥನೆಗಳಲ್ಲಿ ನನ್ನೊಂದಿಗೆ ಹೋರಾಟದಿಂದ ವಿಜ್ಞಾಪಿಸಿಕೊಳ್ಳಬೇಕೆಂದು… ನಿಮ್ಮನ್ನು ಬೇಡಿ ಕೊಳ್ಳುತ್ತೇನೆ” - ರೋಮಾ15:32

 

ಚಪ್ಪಲಿ ಹೊಲಿಯುವ ಕೆಲಸ ಮಾಡುವವನು ಸಹ ಜಗತ್ತನ್ನು ಬದಲಾಯಿಸಬಹುದು ಎಂಬುದನ್ನು ಸಾಬೀತುಪಡಿಸಿದವರೇ ವಿಲಿಯಂ ಕೇರಿ! ಜಗತ್ತನ್ನು ಸುಗಮಗೊಳಿಸಲು ಜನಿಸಿದವರು ಎಂದು ಸಹ ಹೇಳಬಹುದು. 1793 ನೇ ವರ್ಷದಲ್ಲಿ ಕಲ್ಕತ್ತಾಗೆ ಕಾಲಿಟ್ಟ ವಿಲಿಯಂ ಕೇರಿ ಒಮ್ಮೆಯೂ ತನ್ನ ದೇಶಕ್ಕೆ ಹಿಂತಿರುಗಲಿಲ್ಲ. 40 ವರ್ಷಗಳು ಕಠಿಣವಾಗಿ ಪ್ರಯಾಸಪಟ್ಟು ದೇವರ ಸೇವೆಯನ್ನು ಪೂರ್ಣಗೊಳಿಸಿದರು. ಸಮಸ್ಯೆಗಳು ಮತ್ತು ಹೋರಾಟಗಳು ಅವರ ಜೀವನವನ್ನು ಹೆಣೆದುಕೊಂಡಿದ್ದವು. ಅವರ ಪತ್ನಿ ಮೆದುಳಿನ ಅಸ್ವಸ್ಥತೆಯಿಂದ ಬಳಲುತ್ತಿದ್ದರು. ಮಗು ಕೂಡ ಅನಾರೋಗ್ಯದಿಂದ ಸಾವನ್ನಪ್ಪಿತು. ಆದರೆ ವಿಲಿಯಂ ಕೇರಿ ಎಲ್ಲಾ ರೀತಿಯ ಶೋಧನೆಗಳನ್ನು ಸಾಧನೆಗಳಾಗಿ ಪರಿವರ್ತಿಸಿದರು. ಇವರು ಆರಂಭಿಸಿದ ಸೆರಾಂಪೂರ್ ವಿಶ್ವವಿದ್ಯಾಲಯ ಸಾವಿರಾರು ವಿದ್ಯಾರ್ಥಿಗಳನ್ನು ರೂಪಿಸಿದೆ. ಈ ವಿಶ್ವವಿದ್ಯಾಲಯ ಇಂದಿಗೂ ಅವರ ಕೀರ್ತಿಯನ್ನು ಸಾರುತ್ತಿದೆ. ಇವರು ತನ್ನ ಜೀವನದಲ್ಲಿ, ಎಲ್ಲಾ ರೀತಿಯ ಹೋರಾಟಗಳನ್ನು ಪರಿಶುದ್ದಾತ್ಮನ ಸಹಾಯದೊಂದಿಗೆ ಜಯಿಸಿದರು.

 

ಸತ್ಯವೇದದಲ್ಲಿಯೂ ಸಹ ಹೀಗೆ ಹೋರಾಡಿ ಆಶೀರ್ವಾದ ಪಡೆದುಕೊಂಡವರು ಯಾಕೋಬನು. ಇವರು ತನ್ನ ಮಾವನಾದ ಲಾಬಾನನ ಮನೆಯಲ್ಲಿ ಸಂಪಾದಿಸಿ ಹಿಂದಿರುಗಿ ಬರುವ ಮಾರ್ಗದಲ್ಲಿ ಒಬ್ಬನೇ ಇದ್ದನು. ಆಗ ಒಬ್ಬ ಮನುಷ್ಯನು ಬೆಳಗಾಗುವವರೆಗೂ ಅವನೊಂದಿಗೆ ಹೋರಾಡಿದನು ಆ ಪುರುಷನು ತಾನು ಗೆಲ್ಲದೆ ಇರುವದನ್ನು ಕಂಡು ಯಾಕೋಬನ ತೊಡೆಯ ಕೀಲನ್ನು ಮುಟ್ಟಿದರು. ಯಾಕೋಬನು ದೇವರೊಂದಿಗೆ ಮತ್ತು ಮನುಷ್ಯರೊಂದಿಗೆ ಹೋರಾಡಿ ಗೆದ್ದದ್ದನ್ನು ನಾವು ಓದುತ್ತೇವೆ.

 

ಇದನ್ನು ಓದುತ್ತಿರುವ ಪ್ರಿಯರೇ! ನಾವು ಶಾಪಗ್ರಸ್ತ ಭೂಮಿಯ ಮೇಲೆ ವಾಸಿಸುತ್ತಿದ್ದೇವೆ. ನಾವು ಯಾರಿಂದಲೂ ಸುಲಭವಾಗಿ ಏನನ್ನೂ ಪಡೆಯಲು ಸಾಧ್ಯವಿಲ್ಲ. ಯಾಕೋಬನು ಏಕಾಂಗಿಯಾಗಿ ಹೋರಾಡಿದನು ಮತ್ತು ದೇವರಿಂದ ದೈವಿಕ ಆಶೀರ್ವಾದವನ್ನು ಪಡೆದನು. ಸತ್ಯವೇದದಲ್ಲಿ ಯಾಕೋಬನೊಬ್ಬನೇ ಅಲ್ಲ ಇನ್ನೂ ಅನೇಕರು ತಮ್ಮ ಕೃಪಾವರಗಳಿಗಾಗಿ ಹೋರಾಡಿ ಪಡೆದುಕೊಂಡಿದ್ದು ನಮಗೆ ಗೊತ್ತು. ನಾವು ಪ್ರತಿದಿನವೂ ದೇವರ ಕೃಪೆಯನ್ನು ಹೋರಾಡಿ ಪಡೆದುಕೊಳ್ಳೋಣ. ಯೇಸು ಕೂಡ ಹೋರಾಡಿ ಪ್ರಾರ್ಥಿಸಿದ್ದನ್ನು ನಾವು ಓದುತ್ತೇವೆ. ನಾವು ನಮಗೆ ಬೇಕಾದ ಎಲ್ಲಾ ಆಶೀರ್ವಾದಗಳನ್ನು ಪಡೆಯಲು ಖಂಡಿತವಾಗಿ ಹೋರಾಡಬೇಕು. ದೇವರನ್ನು ಬಿಡದೆ ಸತತವಾಗಿ ಹೋರಾಟವನ್ನು ಮುಂದುವರೆಸೋಣ! ಖಂಡಿತವಾಗಿ ಯಶಸ್ಸನ್ನು ಕಾಣುತ್ತೇವೆ!

- Mrs. ಶಕ್ತಿ ಶಂಕರ್ ರಾಜ್ 

 

ಪ್ರಾರ್ಥನಾ ಅಂಶ:

ಫಿಲಿಪ್ ಗಾಸ್ಪೆಲ್ ತಂಡದ ಸೇವೆಗಳ ಮೂಲಕ ಹೊಸ ಹಳ್ಳಿಗಳನ್ನು ತಲುಪುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al