Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 23.07.2023 (Kids Special)
Share:

By Village Missionary Movement

Sunday, 23-Jul-2023

ಧೈನಂದಿನ ಧ್ಯಾನ(Kannada) – 23.07.2023 (Kids Special)

 

ಹುಟ್ಟುಹಬ್ಬದ ಉಡುಗೊರೆ

 

"ಕರುಣೆಯುಳ್ಳವರು ಧನ್ಯರು; ಅವರು ಕರುಣೆಹೊಂದುವರು" - ಮತ್ತಾಯ 5:7

 

ಹಲೋ ಪುಟಾಣಿಗಳೇ, ನಿಮಗೆ ಹುಟ್ಟಿದ ಹಬ್ಬ ಬಂದರೆ ತುಂಬಾ ಸಂತೋಷ ಆಗುತ್ತೆ ಅಲ್ವಾ! ಹೊಸ ಡ್ರೆಸ್, ಕೇಕ್, ಚಾಕೊಲೇಟ್ ತಂಗೊಂಡು ಖುಷಿಯಿಂದ ಆಚರಿಸ್ತೀರ ತಾನೇ.

 

ಇದರಂತೆಯೇ ಒಬ್ಬ ರಾಜನಿಗೆ ಹುಟ್ಟುಹಬ್ಬ ಬಂತು. ತನ್ನ ಹುಟ್ಟು ಹಬ್ಬದಂದು ಯಾರಾದರೂ ಒಂದು ಖೈದಿಯನ್ನು ಬಿಡುಗಡೆ ಮಾಡಬೇಕೆಂದು ಅವರು ಮನಸ್ಸಿನಲ್ಲಿ ತೀರ್ಮಾನಿಸಿದರು. ಆದರೆ ಯಾರನ್ನು ಬಿಡುಗಡೆ ಮಾಡಬೇಕು ಎಂಬುದೇ ಗೊಂದಲ. ಮಂತ್ರಿ ಒಂದು ಸಲಹೆ ನೀಡಿದರು. ಅದು ರಾಜನಿಗೆ ತೃಪ್ತಿಯಾಗಿತ್ತು. ಅದರಂತೆ, ರಾಜನು ಎಲ್ಲಾ ಖೈದಿಗಳನ್ನು ಬಿಡುಗಡೆ ಮಾಡಲಿದ್ದಾರೆ ಅದಕ್ಕಾಗಿ ಈ ಪೆಟ್ಟಿಗೆಯಲ್ಲಿ ಒಂದು ವ್ಯಕ್ತಿಗೆ ಒಂದು ಸ್ಟಾಂಪ್ ಸ್ಲಿಪ್ ತಂದಿದ್ದೇನೆ. ಸಂಜೆ ಈ ಸ್ಟಾಂಪ್ ಸ್ಲಿಪ್ ತೋರಿಸಿ ನೀವು ಬಿಡುಗಡೆಯಾಗಬಹುದು ಎಂದು ಹೇಳಿ ಅಲ್ಲಿಂದ ಮುಂದೆ ಹೋದರು.

 

ಮಂತ್ರಿ ಹೇಳಿದಂತೆ ಖೈದಿಗಳೆಲ್ಲ ಸಂಜೆ ಸ್ಟಾಂಪ್ ಚೀಟಿ ಹಿಡಿದು ಬಂದರು. But ಒಬ್ಬರು ಮಾತ್ರ ಬರಲಿಲ್ಲ. ರಾಜ ಅವನನ್ನು ಕರೆದುಕೊಂಡು ಬನ್ನಿ ಎಂದರು. ತಕ್ಷಣ ಆ ಖೈದಿಯನ್ನು ತಂದು ರಾಜನ ಮುಂದೆ ನಿಲ್ಲಿಸಿದರು. ಅವನನ್ನು ನೋಡಿ ರಾಜ ನಿನ್ನ ಸ್ಟಾಂಪ್ ಚೀಟಿ ಎಲ್ಲಿ ಎಂದರು. ತಕ್ಷಣ ಆ ಖೈದಿ ರಾಜನ ಬಳಿ ಮಂತ್ರಿಯವರು ಸ್ಟಾಂಪ್ ಚೀಟಿಯನ್ನು ತರುವಾಗ ಒಂದು ಚೀಟಿ ಕಡಿಮೆ ಇತ್ತು. ಅಗೋ ಅಲ್ಲಿ ನಿಂತಿದ್ದಾರಲ್ಲಾ ಅವರಿಗೆ ಚೀಟಿ ಸಿಗದೇ ಇತ್ತು. ಅವರಿಗೆ ಕುಟುಂಬ ಇದೆ ಮತ್ತು ವಯಸ್ಸಾದ ತಂದೆ ತಾಯಿ ಇದ್ದಾರೆ. ಅವರು ತನ್ನ ಎಲ್ಲಾ ವಿವರಗಳನ್ನು ನನ್ನ ಬಳಿ ಹೇಳಿದ್ದಾರೆ. ಅದಕ್ಕೇ ನನ್ನ ಚೀಟಿಯನ್ನು ಅವರಿಗೆ ಕೊಟ್ಟುಬಿಟ್ಟೆ ನನ್ನನ್ನು ಕ್ಷಮಿಸಿಬಿಡಿ ಎಂದು ಹೇಳಿದನು. ಇದನ್ನು ಕೇಳಿದ ರಾಜ ಸಬಾಷ್‌ ನೀನೇ ಉತ್ತಮನು ಇಷ್ಟು ಕರುಣೆಯುಳ್ಳ ನೀನು ಜೈಲಿನಲ್ಲಿ ಇರಬಾರದು. ಆದ್ದರಿಂದ ನಾನು ನಿನ್ನನ್ನು ಬಿಡುಗಡೆ ಮಾಡಲಿದ್ದೇನೆ. ನಿನ್ನ ಒಳ್ಳೆಯ ಗುಣಕ್ಕೆ ಇನ್ನೂ ಏನಾದರೂ ಮಾಡಬೇಕು ಎಂದು ನನ್ನ ಹೃದಯ ಹೇಳುತ್ತಿದೆ. ನಿನ್ನ ಇಷ್ಟಾರ್ಥವನ್ನು ಹೇಳು ಎಂದು ಹೇಳುತ್ತಲೇ ಸಿಂಹಾಸನದ ಮೇಲೆ ಕುಳಿತರು. ಖೈದಿಯು ರಾಜನನ್ನು ನೋಡಿ ನನಗೆ ಏನಾದರೂ ಮಾಡಬೇಕೆಂದು ಬಯಸುವುದಾದರೆ, ನನ್ನನ್ನು ಬಿಡುಗಡೆ ಮಾಡದೇ ಅಗೋ ಅವರನ್ನು ಬಿಡುಗಡೆ ಮಾಡಿ. ಅದೇ ನೀವು ನನಗೆ ಕೊಡುವ ಉಡುಗೊರೆಯಾಗಿರುತ್ತದೆ ಎಂದನು. ರಾಜನ ಹೃದಯ ಸಂತೋಷದಿಂದ ತುಂಬಿತು. ತಕ್ಷಣ ರಾಜ Ok, ನಾನು ಅವನನ್ನು ಬಿಡುಗಡೆ ಮಾಡುತ್ತೇನೆ ಆದರೆ ನಿನ್ನನ್ನು ಈ ಜೈಲಿನಿಂದ ಬಿಡುಗಡೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು. ಇದನ್ನು ಕೇಳಿದ ಎಲ್ಲರಿಗೂ ಆಶ್ಚರ್ಯವಾಯಿತು. ಆಗ ರಾಜನು ನಿನ್ನನ್ನು ಖೈದಿಯಾಗಿ ಅಲ್ಲ, ಸೆರೆಮನೆಯ ಅಧಿಕಾರಿಯಾಗಿ ಹೆಚ್ಚಿಸುತ್ತಿದ್ದೇನೆ. ನೀನು ಜೈಲಿನ ಅಧಿಕಾರಿಯಾದರೆ ಎಷ್ಟೋ ಜನ ಮನಃಪರಿವರ್ತನೆ ಆಗುತ್ತಾರೆ ಎಂದು ಹೇಳಿ ಖುಷಿಯಿಂದ ತನ್ನ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.

 

ಪುಟ್ಟ ತಮ್ಮ, ತಂಗಿ ಇಂತಹ ಕರುಣೆಯ ಗುಣವನ್ನೇ ಯೇಸಪ್ಪ ನಿಮ್ಮ ಬಳಿ ನಿರೀಕ್ಷಿಸುತ್ತಿದ್ದಾರೆ. ನೀವು ಸಹ ಆ ಅಣ್ಣನಂತೆ ಮಾರ್ಪಡುತ್ತೀರಾ?

- Mrs. ಸಾರಾ ಸುಭಾಷ್

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş