Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 22.07.2023
Share:

By Village Missionary Movement

Saturday, 22-Jul-2023

ಧೈನಂದಿನ ಧ್ಯಾನ(Kannada) – 22.07.2023

 

ಬೇಡಿಕೊಳ್ಳಿರಿ ಕೊಡಲ್ಪಡುವುದು

 

"...ಬೇಡಿಕೊಳ್ಳಿರಿ, ನಿಮಗೆ ಕೊಡಲ್ಪಡುವದು; ಹುಡುಕಿರಿ, ನೀವು ಕಂಡುಕೊಳ್ಳುವಿರಿ; ತಟ್ಟಿರಿ, ನಿಮಗೆ ತೆರೆಯಲ್ಪಡುವದು” - ಲೂಕ 11:9

 

ದೇವರು ನಮಗೆ ಎಷ್ಟು ಅದ್ಭುತವಾದ ಮತ್ತು ಖಚಿತವಾದ ವಾಗ್ದಾನವನ್ನು ಕೊಟ್ಟಿದ್ದಾರೆ ಎಂಬುದನ್ನು ನೋಡಿರಿ. ಅದು ಕೂಡ ಮೂರು ವಿಧವಾದ ಆಶ್ವಾಸನೆಗಳೊಂದಿಗೆ ನಾವು ದೇವರನ್ನು ಹೇಗೆ ಕೇಳಬೇಕು ಎಂಬುದನ್ನು ಸ್ಪಷ್ಟವಾಗಿ ಬರೆದಿಟ್ಟಿದ್ದಾರೆ. ಇಡೀ ಜಗತ್ತನ್ನು ಸೃಷ್ಟಿಸಿದ ದೇವರೇ ನಮಗೆ ಈ ವಾಗ್ದಾನವನ್ನು ನೀಡಿದ್ದಾರೆ. ಅವರು ಮಾತು ತಪ್ಪದವರು. ಮನುಷ್ಯರು ನಮಗೆ ಕೊಟ್ಟ ವಾಗ್ದಾನವನ್ನು ಮರೆತುಬಿಡಬಹುದು. ಆದರೆ ನಮ್ಮ ಯೇಸು ಕ್ರಿಸ್ತನು ಎಂದಿಗೂ ಮಾತು ತಪ್ಪದವರಾಗಿದ್ದಾರೆ.

 

ಮೊದಲನೆಯದು: ಬೇಡಿಕೊಳ್ಳಿರಿ, ನಿಮಗೆ ಕೊಡಲ್ಪಡುವದು. ನಾವು ಚಿಕ್ಕ ಮಕ್ಕಳಾಗಿದ್ದಾಗ, ನಮ್ಮ ತಾಯಿ ನಾವು ಕೇಳದೆಯೇ ಸರಿಯಾದ ಸಮಯಕ್ಕೆ ಆಹಾರವನ್ನು ತಿನಿಸುತ್ತಿದ್ದರು. ಹಾಗೆಯೇ, ದೇವರು ನಾವು ಕೇಳದೆಯೇ ಅನೇಕ ಆಶೀರ್ವಾದಗಳನ್ನು ನೀಡುತ್ತಲೇ ಇದ್ದಾರೆ. ಆದರೆ ಬೆಳೆದ ನಂತರ, ತಾಯಿಯು ನಾವು ಕೇಳಿದಾಗ ಮಾತ್ರವೇ ಆಹಾರವನ್ನು ನೀಡುತ್ತಾಳೆ, ಹಾಗೆಯೇ ದೇವರು ನಮ್ಮ ಕೆಲವು ಅಗತ್ಯಗಳಿಗಾಗಿ ದೇವರ ಬಳಿ ಕೇಳಬೇಕೆಂದು ನಿರೀಕ್ಷಿಸುತ್ತಿದ್ದಾರೆ.

 

ಎರಡನೆಯದು: ಹುಡುಕಿರಿ, ನೀವು ಕಂಡುಕೊಳ್ಳುವಿರಿ. ಒಮ್ಮೆ ಒಂದು ಹೊಸ ಓಲೆ ಹಾಕಿಕೊಂಡು ಬಸ್ಸಿನಲ್ಲಿ ವಿಶೇಷ ಕಾರ್ಯಕ್ರಮಕ್ಕೆ ಹೋಗುತ್ತಿದ್ದೆ. ಹೇಗೋ ಒಂದು ಕಿವಿಯ ಓಲೆ ಸಡಿಲಗೊಂಡು ಬಸ್ಸಿನಲ್ಲಿ ಬಿದ್ದುಹೋಯಿತು. ಇಳಿಯುವ ಮೊದಲು, ನನ್ನ ಕಿವಿಯಲ್ಲಿ ಓಲೆ ಇಲ್ಲ ಎಂದು ಕಂಡುಕೊಂಡೆ ಮತ್ತು ತಕ್ಷಣ ಅದನ್ನು ಹುಡುಕಿದೆ. ಅದೃಷ್ಟವಶಾತ್ ಬಸ್ಸಿನೊಳಗೆ ಸಿಕ್ಕಿಬಿಟ್ಟಿತು. ನನಗೆ ಅದು ಮತ್ತೆ ಸಿಕ್ಕಿದಾಗ ತುಂಬಾ ಸಂತೋಷವಾಯಿತು. ಕಳೆದು ಹೋದ ಜಾಗವನ್ನು ಬಿಟ್ಟು ಬಸ್ಸಿನ ಹೊರಗೆ ಹುಡುಕಿದ್ದರೆ ಸಿಕ್ಕುತ್ತಿರಲಿಲ್ಲ. ಅದೇ ರೀತಿ ಸರಿಯಾದ ಸಮಯದಲ್ಲಿ, ಸರಿಯಾದ ಜಾಗದಲ್ಲಿ ಹುಡುಕಿದಾಗ ಕಳೆದುಹೋದ ಸಂತೋಷವನ್ನು ಮತ್ತು ದೇವರ ಸಾನ್ನಿಧ್ಯವನ್ನು ಪಡೆದುಕೊಳ್ಳಬಹುದು.

 

ಮೂರನೆಯದು: ತಟ್ಟಿರಿ, ನಿಮಗೆ ತೆರೆಯಲ್ಪಡುವದು. ನನ್ನ ಮಗಳ ಕಾಲೇಜು ವಿದ್ಯಾಭ್ಯಾಸಕ್ಕೆ ಹಣದ ಅವಶ್ಯಕತೆ ಬೇಕಾದಾಗ, ದೇವರ ಮೇಲೆ ಮಾತ್ರವೇ ಅವಲಂಬಿತನಾಗಿ ಅವರ ಬಾಗಿಲು ತಟ್ಟಿ ಕಾದಿದ್ದೆ. ಅನಿರೀಕ್ಷಿತ ಸ್ಥಳದಿಂದ ಹಣ ದೊರೆಯಿತು ಕರ್ತನು ಅಗತ್ಯವನ್ನು ಪೂರೈಸಿದರು. ಸತ್ಯವೇದದಲ್ಲಿಯೂ ಯೋಸೇಫನು ದೇವರನ್ನೇ ನಂಬಿದ್ದರೂ, ಸೆರೆಮನೆಯಿಂದ ಹೊರಬರಲು ಮುಖ್ಯ ಪಾನದಾಯಕನ ಸಹಾಯಕ್ಕಾಗಿ ಕಾಯುತ್ತಿದ್ದನು. ಆದರೆ ಪಾನದಾಯಕನು ಯೋಸೇಫನನ್ನು ಮರೆತುಬಿಟ್ಟನು. ದೇವರು ಯೋಸೇಫನನ್ನು ಸರಿಯಾದ ಸಮಯದಲ್ಲಿ ವಿಮೋಚಿಸಿ ಐಗುಪ್ತದ ಅಧಿಪತಿಯನ್ನಾಗಿ ಉನ್ನತೀಕರಿಸಿದರು. ಆದ್ದರಿಂದ ಮನುಷ್ಯರನ್ನು ನಂಬುವ ಬದಲು ದೇವರ ಕಡೆಗೆ ನೋಡೋಣ. ಏಕೆಂದರೆ ತಟ್ಟುವವನಿಗೆ ದೇವರ ಬಾಗಿಲು ಯಾವಾಗಲೂ ತೆರೆದಿರುತ್ತದೆ ಎಂದು ನಂಬಿ ಆಶೀರ್ವಾದಗಳನ್ನು ಪಡೆದುಕೊಳ್ಳೋಣ! ಆಮೆನ್!

- Mrs. ಭುವನಾ ಧನಪಾಲನ್

 

ಪ್ರಾರ್ಥನಾ ಅಂಶ:

ಒಡನಾಡಿ ಸೇವಕರ ಸೇವಾ ಕ್ಷೇತ್ರದ ಸೇವೆಗಳಲ್ಲಿ ದೇವರ ಹಸ್ತವು ಜೊತೆಯಿರುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler vaycasino vaycasino giriş vaycasino güncel giriş matbet matbet giriş matbet güncel giriş matbet matbet giriş matbet güncel giriş betsmove betsmove giriş betsmove güncel giriş betsat betsat giriş betsat güncel giriş perabet perabet giriş perabet güncel giriş dumanbet giriş dumanbet dumanbet güncel giriş kingroyal kingroyal giriş kingroyal güncel giriş marsbahis marsbahis giriş marsbahis güncel giriş kingroyal kingroyal giriş kingroyal güncel giriş meritking meritking giriş meritking güncel giriş meritbet meritbet giriş meritbet güncel giriş nakitbahis nakitbahis giriş nakitbahis güncel giriş vaycasino vaycasino giriş vaycasino güncel giriş Holiganbet holiganbet giriş holiganbet güncel giriş bahissenin bahissenin giriş bahissenin güncel giriş bayconticasino bayconticasino giriş bayconticasino güncel giriş imajbet imajbet giriş imajbet güncel giriş prizmabet prizmabet giriş pashagaming pashagaming giriş pashagaming güncel giriş interbahis interbahis giriş interbahis güncel giriş jojobet superbetin matbet jojobet marsbahis marsbahis güncel marsbahis güncel giriş deneme bonusu deneme bonusu veren siteler bahsegel vaycasino vaycasino giriş perabet perabet giriş holiganbet holiganbet giriş holiganbet holiganbet giriş holiganbet holiganbet giriş jojobet jojobet giriş Superbetin superbetin giriş superbetin güncel giriş süperbetin