Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 21.07.2023
Share:

By Village Missionary Movement

Thursday, 20-Jul-2023

ಧೈನಂದಿನ ಧ್ಯಾನ(Kannada) – 21.07.2023

 

ಎಷ್ಟು ಅಂಕ?

 

"…ನಾನೇ ಮಾರ್ಗವೂ ಸತ್ಯವೂ ಜೀವವೂ ಆಗಿದ್ದೇನೆ; ನನ್ನ ಮೂಲಕವಾಗಿ ಹೊರತು ಯಾರೂ ತಂದೆಯ ಬಳಿಗೆ ಬರುವದಿಲ್ಲ" - ಯೋಹಾನ 14:6

 

"ಪರಲೋಕದ ದಾರಿ ಇಕ್ಕಟ್ಟು" ಎಂದು ಸೂಚಿಸುವ ಕಾಲ್ಪನಿಕ ಕಥೆ. ಒಬ್ಬ ಮನುಷ್ಯನು ಸತ್ತು ಪರಲೋಕದ ದ್ವಾರಕ್ಕೆ ಹೋದನು. ಅಲ್ಲಿ ಅವನು ಬಾಗಿಲಲ್ಲಿ ಪೇತ್ರನನ್ನು ಕಂಡುಕೊಂಡನು. ಪೇತ್ರನು ಅವನಿಗೆ, "ನೀನು 100 ಅಂಕಗಳನ್ನು ಪಡೆದರೆ, ಪರಲೋಕಕ್ಕೆ ಪ್ರವೇಶಿಸಬಹುದು" ಎಂದು ಹೇಳಿದರು, ಪೇತ್ರನು ಆ ವ್ಯಕ್ತಿಯನ್ನು ನೋಡಿ, , "ನೀನು ಮಾಡಿದ ಒಳ್ಳೆಯ ಕೆಲಸಗಳನ್ನು ನನಗೆ ಹೇಳು, ನಾನು ನಿನಗೆ ಅಂಕಗಳನ್ನು ಹಾಕುತ್ತೇನೆ" ಎಂದರು. ಆ ವ್ಯಕ್ತಿ ಸಂತೋಷದಿಂದ "ನನಗೆ ಒಬ್ಬಳೇ ಹೆಂಡತಿ ಇದ್ದಾಳೆ, ನಾನು ಅವಳೊಂದಿಗೆ 50 ವರ್ಷಗಳು ಜೀವಿಸಿದೆ, ನಾನು ಅವಳಿಗೆ ಮಾನಸಿಕವಾಗಿಯೂ ಮೋಸ ಮಾಡಿಲ್ಲ" ಎಂದನು. ಪೇತ್ರನು "ಓಹ್, ತುಂಬಾ ಒಳ್ಳೇದು ಇದಕ್ಕೆ 3 ಅಂಕಗಳು" ಎಂದು ಹೇಳಿದರು. ಆ ವ್ಯಕ್ತಿ ಮುಂದುವರಿಸುತ್ತಾ, "ನಾನು ಪ್ರತಿ ವಾರ ತಪ್ಪದೇ ಆಲಯಕ್ಕೆ ಹೋಗುತ್ತೇನೆ ಮತ್ತು ನಾನು ಸರಿಯಾಗಿ ದಶಮಾಂಶವನ್ನು ಕೊಟ್ಟಿದ್ದೇನೆ" ಎಂದನು. ಪೇತ್ರನು ಚಪ್ಪಾಳೆ ತಟ್ಟಿ, "ತುಂಬಾ ಒಳ್ಳೇದು, ಮತ್ತೆ 3 ಅಂಕಗಳು" ಎಂದು ಹೇಳಿದರು. "ನಾನು ವಯಸ್ಸಾದವರಿಗೆ ಸಹಾಯ ಮಾಡಿದ್ದೇನೆ" ಎಂದು ಆ ವ್ಯಕ್ತಿ ಹೇಳಿದರು. ಪೇತ್ರನು ಸಂತೋಷದಿಂದ 3 ಅಂಕಗಳು ಎಂದರು. ಆ ವ್ಯಕ್ತಿ ಅತ್ತೇಬಿಟ್ಟನು. "ನನ್ನ ಕೆಲಸಗಳಿಂದ ನಾನು ಎಂದಿಗೂ ಪರಲೋಕಕ್ಕೆ ಹೋಗಲು ಸಾಧ್ಯವೇ ಇಲ್ಲ, ದೇವರ ಕೃಪೆ ಯಿಂದ ಮಾತ್ರವೇ ನಾನು ಪರಲೋಕಕ್ಕೆ ಹೋಗಲು ಸಾಧ್ಯ" ಎಂದು ಅಳಲು ತೋಡಿಕೊಂಡರು. ಅದನ್ನು ಕೇಳಿದ ಪೇತ್ರನು “ನೀನು ಈಗ ಒಳಗೆ ಹೋಗಬಹುದು” ಎಂದರು.

 

ಅಪೊ. ಪೇತ್ರನು ಯೆಹೂದ್ಯರಿಗೆ ಮಾತ್ರವೇ ರಕ್ಷಣೆ ಎಂದು ಭಾವಿಸಿ ಸೇವೆ ಮಾಡುತ್ತಿದ್ದರು. ಆದರೆ ಯೇಸು ಯೆಹೂದ್ಯನಲ್ಲದ ಕೊರ್ನೇಲ್ಯನೆಂಬ ಅನ್ಯಜನಾಂಗವನ್ನು ಪರಿಚಯಿಸುತ್ತಾರೆ. ಅವರು ಇತಾಲ್ಯದ ಪಟ್ಟಣದಲ್ಲಿ ಶತಾಧಿಪತಿಯಾಗಿದ್ದು ತನ್ನ ಮನೆಯವರೆಲ್ಲರೊಂದಿಗೆ ದೇವರಿಗೆ ಭಯಪಡುತ್ತಿದ್ದನು, ಜನರಿಗೆ ಹೆಚ್ಚಾಗಿ ದಾನಧರ್ಮ ಮಾಡುವವನು, ದೇವರನ್ನು ನೋಡಿ ಪ್ರಾರ್ಥಿಸುತ್ತಿದ್ದವನು. ಉನ್ನತ ಸ್ಥಾನದಲ್ಲಿದ್ದರೂ, ಭಕ್ತಿಪೂರ್ಣನಾಗಿದ್ದರೂ, ಹೇರಳವಾಗಿ ಪ್ರಾರ್ಥಿಸಿದರೂ, ಸಾಕಷ್ಟು ದಾನಧರ್ಮವನ್ನು ಮಾಡಿದರೂ ಅವನಿಗೆ ರಕ್ಷಣೆ ಬೇಕು ಎಂಬುದನ್ನು ಪೇತ್ರನ ಮೂಲಕ ಪ್ರೇರೇಪಿಸುತ್ತಾರೆ.

 

ಹೌದು, ನನ್ನ ಪ್ರಿಯರೇ! ನಾವು ಎಷ್ಟೇ ಒಳ್ಳೆಯ ಕಾರ್ಯಗಳನ್ನು ಮಾಡಿದರೂ, ಯೇಸುವನ್ನು ನಮ್ಮ ರಕ್ಷಕನನ್ನಾಗಿ ಸ್ವೀಕರಿಸದಿದ್ದರೆ ಮತ್ತು ಪಾಪದಿಂದ ಮುಕ್ತಿ ಹೊಂದಿ ಸಾಕ್ಷಿ ಜೀವನವನ್ನು ಜೀವಿಸದಿದ್ದರೆ ನಿತ್ಯತ್ವ ಎಂಬುದು ಎಟುಕದಂತದ್ದೇ! ರಕ್ಷಣೆಯ ಅನುಭವದೊಂದಿಗೆ ಉತ್ತಮ ಕ್ರಿಯೆಗಳನ್ನು ಮಾಡುವವರಿಗೆ ಪ್ರಯಾಸದ ಫಲವನ್ನು ತಾವು ಮಹಿಮೆಯಲ್ಲಿ ಬರುವಾಗ ಕೊಡುತ್ತೇನೆ ಎನ್ನುತ್ತಿದ್ದಾರೆ. ಯೇಸುಕ್ರಿಸ್ತನು ನಮ್ಮ ಪ್ರೀತಿಯ ಪ್ರಯಾಸಗಳನ್ನು ಮರೆಯಲು ಅನ್ಯಾಯಸ್ಥನಲ್ಲವಲ್ಲಾ! ಕ್ರಿಸ್ತನಲ್ಲಿ ನಮ್ಮ ಒಳ್ಳೆಯ ಕಾರ್ಯಗಳು ಫಲವನ್ನು ಹೊತ್ತು ತರುತ್ತದೆ, ಅಂತಿಮವಾಗಿ ನಿತ್ಯಜೀವವೂ ಉಂಟು. ನಿಮ್ಮ ಓಟ ಕ್ರಿಸ್ತನೊಳಗಾ? ಅಥವಾ ಹೊರಗಾ? ಯೋಚಿಸೋಣ!!

- Sis. ಮಂಜುಳಾ

 

ಪ್ರಾರ್ಥನಾ ಅಂಶ:

ಹಸ್ತಪ್ರತಿ ಸೇವೆಗಳ ಮೂಲಕ ಭೇಟಿಯಾಗುವ ವ್ಯಕ್ತಿಗಳು ಮಾನಸಾಂತರ ಹೊಂದುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler Vdcasino vaycasino vaycasino giriş vaycasino güncel giriş matbet matbet giriş matbet güncel giriş matbet matbet giriş matbet güncel giriş betsmove betsmove giriş betsmove güncel giriş betsat betsat giriş betsat güncel giriş perabet perabet giriş perabet güncel giriş dumanbet giriş dumanbet dumanbet güncel giriş kingroyal kingroyal giriş kingroyal güncel giriş marsbahis marsbahis giriş marsbahis güncel giriş kingroyal kingroyal giriş kingroyal güncel giriş meritking meritking giriş meritking güncel giriş meritbet meritbet giriş meritbet güncel giriş nakitbahis nakitbahis giriş nakitbahis güncel giriş dumanbet dumanbet giriş dumanbet güncel giriş Holiganbet holiganbet giriş holiganbet güncel giriş bahissenin bahissenin giriş bahissenin güncel giriş bayconticasino bayconticasino giriş bayconticasino güncel giriş imajbet imajbet giriş imajbet güncel giriş prizmabet prizmabet giriş pashagaming pashagaming giriş pashagaming güncel giriş interbahis interbahis giriş interbahis güncel giriş jojobet superbetin matbet jojobet marsbahis marsbahis güncel marsbahis güncel giriş deneme bonusu deneme bonusu veren siteler bahsegel vaycasino vaycasino giriş perabet perabet giriş holiganbet holiganbet giriş holiganbet holiganbet giriş holiganbet holiganbet giriş jojobet jojobet giriş Superbetin superbetin giriş superbetin güncel giriş süperbetin