Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 19.07.2023
Share:

By Village Missionary Movement

Wednesday, 19-Jul-2023

ಧೈನಂದಿನ ಧ್ಯಾನ(Kannada) – 19.07.2023

 

ಹಿರಿಯರನ್ನು ಗೌರವಿಸಿ

 

"ನರೆಗೂದಲೇ ಸುಂದರ ಕಿರೀಟವು..." - ಜ್ಞಾನೋಕ್ತಿ 16:31

 

ಶ್ರೀಮತಿ. ಸ್ಟೇಕ್ ತಂಗಿದ್ದ ಒಂದು ನರ್ಸಿಂಗ್ ಹೋಮ್‌ನಲ್ಲಿಯೇ ಕ್ಲೇರಿಯ ತಾಯಿಯವರೂ ಇದ್ದರು. ಕ್ಲೇರಿ ತನ್ನ ತಾಯಿಯನ್ನು ನೋಡಲು ಬರುವಾಗೆಲ್ಲಾ, ಶ್ರೀಮತಿ. ಸ್ಟೇಕ್ ತುಂಬಾ ಆಸೆಯಿಂದ ಆ ಹಾಲ್‌ನಲ್ಲಿ ವೀಲ್‌ಚೇರ್‌ನಲ್ಲಿ ಕುಳಿತುಕೊಂಡು ಬಂದು ಹೋಗುವವರನ್ನೆಲ್ಲಾ ನೋಡುತ್ತಾ ಯಾರಾದರೂ ನನ್ನೊಂದಿಗೆ ಕುಳಿತು ಮಾತನಾಡುವುದಿಲ್ಲವೇ? ಎಂದು ಕಾತರದಿಂದ ನೋಡುತ್ತಿದ್ದರು. ಕ್ಲೇರಿ ಹಲೋ! ಎಂದು ಆ ತಾಯಿಯವರ ಕಡೆಗೆ ಕೈಬೀಸುತ್ತಾ ಹೋಗಿಬಿಡುತ್ತಿದ್ದಳು. ಆ ತಾಯಿಯವರು ಒಂಟಿಯಾಗಿರುವುದನ್ನು ಮತ್ತು ಎಲ್ಲರಿಂದಲೂ ಮರೆಯಲ್ಪಟ್ಟಿರುವುದನ್ನು ತಿಳಿದು, ತನ್ನ ನಿರ್ದಯ ವರ್ತನೆಗೆ ಪಶ್ಚಾತ್ತಾಪಪಟ್ಟು ಒಂದು ದಿನ ಅವಳೊಂದಿಗೆ ಕುಳಿತು ಮಾತಾಡಿದಳು.

 

ಮಾತನಾಡಲು ಪ್ರಾರಂಭಿಸಿದ ತಕ್ಷಣ. ಸ್ಟೇಕ್ ಅವರು ಬಾಲ್ಯದಲ್ಲಿ ಜರ್ಮನಿಯಲ್ಲಿ ಹೇಗೆ ವಾಸಿಸುತ್ತಿದ್ದರು ಎಂಬುದನ್ನು ಮತ್ತು ವಿವಾಹಿತ ಯುವ ವಧುವಾಗಿ ಅಮೆರಿಕಕ್ಕೆ ಬಂದದ್ದನ್ನು, ಕಣ್ಣುಗಳಲ್ಲಿ ಹೊಸ ಉತ್ಸಾಹದೊಂದಿಗೆ, ವಿವರಿಸಿದರು. ತಾನು ಪಿಯಾನೋ ನುಡಿಸಿದ ವಿಶೇಷತೆಗಳ ಬಗ್ಗೆ ಉತ್ಸಾಹದಿಂದ ಮಾತನಾಡಿದರು. ಕ್ಲೇರಿ ಸತತವಾಗಿ ಪ್ರತಿದಿನ ಆ ತಾಯಿಯೊಂದಿಗೆ ಮಾತನಾಡುತ್ತಾ ರಂಜಿಸುತ್ತಿದ್ದಳು. ತನ್ನ ಜೀವನದಲ್ಲಿ ನಿರುತ್ಸಾಹವನ್ನು ಎದುರಿಸಿದಾಗಲೆಲ್ಲಾ ದೇವರು ತನ್ನನ್ನು ಹೇಗೆ ಸಂತೈಸುತ್ತಿದ್ದರು ಎಂದು ಸಾಕ್ಷಿ ಹೇಳಿದಾಗ ಕ್ಲೇರಿ ಕಣ್ಣೀರು ಹಾಕಿದಳು.

 

ಕ್ಲೇರಿ ಆ ತಾಯಿಯವರಿಗೆ ನಾನು ಮಾತನಾಡಿಸುತ್ತಿರುವುದು ಅವರಿಗೆ ಆದರಣೆಯನ್ನು ಉಂಟುಮಾಡುತ್ತಿದೆ ಎಂದು ಭಾವಿಸಿದಳು. ಆದರೆ ಶ್ರೀಮತಿ. ಸ್ಟೇಕ್‌ನಿಂದ ಅನೇಕ ಅಪರೂಪದ ವಿಷಯಗಳನ್ನು ಕಲಿತಳು. ಪ್ರತಿಯೊಂದು ಹಿರಿಯರೂ ಬೇರೆಲ್ಲೂ ಸಿಗದ ಅನೇಕ ಅದ್ಭುತ ಜೀವನ ಟಿಪ್ಪಣಿಗಳು, ಐತಿಹಾಸಿಕ ಘಟನೆಗಳು ಇತ್ಯಾದಿಗಳ ನಿಧಿ ಎಂದು ಅವಳು ಭಾವಿಸಿದಳು.

 

ಪ್ರಿಯರೇ! ಹಿರಿಯರನ್ನು ನಿರ್ಲಕ್ಷಿಸುವ ಒಂದು ಕಾಲಘಟ್ಟದಲ್ಲಿ ನಾವು ಬದುಕುತ್ತಿದ್ದೇವೆ. ಹಿಂದಿನ ಕಾಲದಲ್ಲಿ ಅಂತ ಪ್ರಾರಂಭಿಸಿ ಕಥೆ ಹೇಳುವವರು ಎಂದು ತಮಾಷೆ ಮಾಡಿ ನಗುತ್ತಿದ್ದೆವು. ಹಿರಿಯರಿಗೆ ಅಗೌರವದಿಂದ ಮಾತನಾಡಬಾರದು ಎಂದು ಸತ್ಯವೇದವು ಹೇಳುತ್ತಿದೆ. ದೇವರು ಅವರ ಬಗ್ಗೆ ಕಾಳಜಿ ವಹಿಸುತ್ತಾರೆ. ಕುಟುಂಬದ ಹಿರಿಯರನ್ನು ಗೌರವಿಸಿ ಮತ್ತು ಬಿಡುವಿಲ್ಲದ ಕೆಲಸದ ನಡುವೆಯೂ ಅವರಿಗಾಗಿ ಸ್ವಲ್ಪ ಸಮಯವನ್ನು ಮೀಸಲಿಡಿ. ಆಗ ನಾವು ಅನೇಕ ಅದ್ಭುತವಾದ, ಅಮೂಲ್ಯವಾದ ಪ್ರಾಯೋಗಿಕ ಚಟುವಟಿಕೆಗಳನ್ನು ಕಲಿಯಬಹುದು.

 

ಪ್ರಾರ್ಥನೆ:

ಸರ್ವಶಕ್ತನಾದ ದೇವರೇ ಹಿರಿಯರನ್ನು ಧಿಕ್ಕರಿಸದಿರಲು ಮತ್ತು ಅವರನ್ನು ಬದಿಗಿರಿಸದಂತೆ ನಮಗೆ ಸಹಾಯ ಮಾಡಿ. ಅವರ ಹಿಂದಿನ ಅನುಭವಗಳನ್ನು ಎಚ್ಚರಿಕೆಯಿಂದ ಆಲಿಸಿ ಕಲಿಯಲು ಸಹಾಯ ಮಾಡಿ. ಆಮೆನ್.

- Mrs. ಜಾಸ್ಮಿನ್ ಪಾಲ್

 

ಪ್ರಾರ್ಥನಾ ಅಂಶ:

7000 ಮಿಷಿನರಿಗಳು ಒಂದು ಲಕ್ಷ ಗ್ರಾಮಗಳು ಎಂಬ ಗುರಿಯನ್ನು ತಲುಪಲು ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al holiganbet giriş holiganbet casibom bets10 extrabet royalbet süperbetin casibom giriş betcio jojobet giriş casibom milanobet piabellacasino betpas bahiscasino atlasbet betpas casinoroyal bahiscasino ngsbahis betplay holiganbet jojobet casibom holiganbet jojobet casibom vaycasino romabet