Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 16.07.2023 (Kids Special)
Share:

By Village Missionary Movement

Sunday, 16-Jul-2023

ಧೈನಂದಿನ ಧ್ಯಾನ(Kannada) – 16.07.2023 (Kids Special)

 

ಸಕ್ಕರೆ ಚೀಲ

 

"…ಮನುಷ್ಯನು ತಾನು ಏನು ಬಿತ್ತುತ್ತಾನೋ ಅದನ್ನೇ ಕೊಯ್ಯಬೇಕು" - ಗಲಾತ್ಯ 6:7

 

ಒಂದು ಹಳ್ಳಿಯಲ್ಲಿ ಮುತ್ತಯ್ಯನೆಂಬ ಒಬ್ಬ ಸಕ್ಕರೆ ವ್ಯಾಪಾರಿ ಇದ್ದರು. ಇವರು ಪಕ್ಕದ ಊರಿಗೆ ಹೋಗಿ ಒಟ್ಟಾಗಿ ಸಕ್ಕರೆ ಖರೀದಿಸಿ ಮಾರಾಟ ಮಾಡಿ ಹಣ ಸಂಪಾದಿಸುತ್ತಿದ್ದರು. ಅವರಿಗೆ ಸಹಾಯ ಮಾಡಲು ಒಂದು ಕತ್ತೆ ಇತ್ತು. ದಿನವೂ ಕತ್ತೆ ಸಕ್ಕರೆಯ ಚೀಲವನ್ನು ಕಷ್ಟಪಟ್ಟು ಹೊತ್ತುಕೊಂಡು ಬರುತ್ತಿತ್ತು. ಬರುವ ದಾರಿಯಲ್ಲಿ ನದಿಯನ್ನು ದಾಟಿ ಬರಬೇಕಿತ್ತು. ಒಂದು ದಿನ ನದಿ ದಾಟುವಾಗ ಕತ್ತೆ ಕಾಲು ಜಾರಿ ನದಿಗೆ ಬಿದ್ದುಬಿಟ್ಟಿತು. ನೆನೆದ ಸಕ್ಕರೆ ನೀರಿನಲ್ಲಿ ಕರಗಿಹೋದದ್ದರಿಂದ ಭಾರವನ್ನು ಹೊರಲು ಸುಲಭವಾಗಿತ್ತು. ಆದ್ದರಿಂದ ಕತ್ತೆ ಯೋಚಿಸಿತು, "ನಾನು ಪ್ರತಿದಿನ ಈ ನದಿಗೆ ಬಿದ್ದು ಬಿಡಬೇಕು" ಎಂದು. ಹಾಗೆಯೇ ಪ್ರತಿದಿನವೂ ನದಿ ದಾಟುವಾಗ ಕತ್ತೆ ಕಾಲು ಜಾರಿ ಬಿದ್ದು ಸಕ್ಕರೆಯನ್ನು ನೆನೆಸಿ‌ಬಿಟ್ಟು ಸಲೀಸಾಗಿ ಹೊರಟು ಹೋಗುತ್ತಿತ್ತು. ಇದನ್ನೆಲ್ಲ ಗಮನಿಸುತ್ತಿದ್ದ ಮುತ್ತಯ್ಯ ಹೇಗಾದರೂ ಮಾಡಿ ಈ ಕತ್ತೆಗೆ ಪಾಠ ಕಲಿಸಬೇಕು ಎಂದುಕೊಂಡರು.

 

ಒಂದು ದಿನ ಸಕ್ಕರೆಯ ಬದಲು ಹತ್ತಿ ಚೀಲವನ್ನು ಖರೀದಿಸಿ ಕತ್ತೆಯನ್ನು ಹೊತ್ತೊಯ್ಯುವಂತೆ ಮಾಡಿದರು. ಹೈ.. ಜಾಲಿ ಇದು ತುಂಬಾ ಸುಲಭವಾಗಿದೆ ಎಂದು ಜಾಲಿಯಾಗಿ ನಡೆದುಕೊಂಡು ಹೋಯಿತು. ಎಂದಿನಂತೆ ನದಿ ದಾಟಬೇಕಿತ್ತು. ಜಾರಿ ಬಿದ್ದ ಹಾಗೆ ಬಿದ್ದಿತು. ಹತ್ತಿ ಉಂಡೆ ಒದ್ದೆಯಾದಾಗ ಹೇಗಿರುತ್ತದೆ? ಅದು ತುಂಬಾ ಭಾರವಾಗಿರುತ್ತೆ ಅಲ್ವಾ, ಕತ್ತೆಗೆ ಎದ್ದೇಳಲು ಸಾಧ್ಯವಾಗಲಿಲ್ಲ. ನಡೆಯಲೂ ಆಗದೆ ನಿಧಾನವಾಗಿ ನಡೆಯುತ್ತಿತ್ತು. ಯಜಮಾನನಿಗೆ ಮೋಸ ಮಾಡಿದ್ದಕ್ಕೆ ನನಗೆ ಈ ಶಿಕ್ಷೆ ಎಂದುಕೊಂಡು ನಿಧಾನವಾಗಿ ಹೆಜ್ಜೆ ಹಾಕುತ್ತಾ ಮನೆಗೆ ಹೋಗಿ ಸೇರಿತು. ಅಯ್ಯಯ್ಯೋ, ನಾನು ಯಾವತ್ತೂ ಈ ರೀತಿ ಕಷ್ಟಪಟ್ಟಿಲ್ಲ, ನಾನು ಮೋಸ ಮಾಡಿದ್ದರಿಂದ ಇಂದು ನಾನು ಮೋಸ ಹೋದೆ ಎಂದು ಪಶ್ಚಾತ್ತಾಪ ಪಟ್ಟಿತು.

 

ಪ್ರೀತಿಯ ತಮ್ಮ, ತಂಗಿ, ನಾವು ಇತರರನ್ನು ಮೋಸಗೊಳಿಸಲು ಪ್ರಯತ್ನಿಸಿದರೆ, ನಾವು ಒಂದು ದಿನ ಮೋಸ ಹೋಗುತ್ತೇವೆ. ನಿಮ್ಮ ಮನೆಕೆಲಸ ಮತ್ತು ವಿದ್ಯಾಭ್ಯಾಸ ಮಾಡದೆ ನಿಮ್ಮ ಪೋಷಕರಿಗೆ ಮತ್ತು ಶಿಕ್ಷಕರಿಗೆ ನೀವು ಮೋಸ ಮಾಡಿದರೆ, ನೀವೇ ಮೋಸ ಹೋಗುತ್ತೀರ. ಪರೀಕ್ಷೆಯಲ್ಲಿ ಫೈಲ್ ಆಗೋಗ್ತೀರ. ಆದುದರಿಂದ ಆರಂಭದಿಂದಲೇ ಚೆನ್ನಾಗಿ ಓದಿ ಯಾರಿಗೂ ಮೋಸ ಮಾಡದೆ ಒಳ್ಳೆಯ ಮಕ್ಕಳಾಗಿ ಜೀವಿಸಿ ಯೇಸಪ್ಪನನ್ನು ಸಂತೋಷಪಡಿಸಿ ಪುಟಾಣಿಗಳೇ. Bye

- Mrs. ಜೀವಾ ವಿಜಯ್

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al