By Village Missionary Movement
Friday, 14-Jul-2023ಧೈನಂದಿನ ಧ್ಯಾನ(Kannada) – 15.07.2023
ಹೋರಾಟಗಳ ನಡುವೆ ಬಲ
"ದೇವಾ, ನನ್ನನ್ನು ಪರೀಕ್ಷಿಸಿ… ಕೇಡಿನ ಮಾರ್ಗದಲ್ಲಿರುತ್ತೇನೋ ಏನೋ ನೋಡಿ ಸನಾತನಮಾರ್ಗದಲ್ಲಿ ನನ್ನನ್ನು ನಡಿಸು" - ಕೀರ್ತನೆ 139:23-24
2003 ನೇ ವರ್ಷ ಜೂನ್ 5 ನೇ ತಾರೀಖು ಚೆನ್ನೈ, ಬೋರೂರು ರಾಮಚಂದ್ರ ಆಸ್ಪತ್ರೆಯಲ್ಲಿ ನನ್ನ ಎರಡೂ ಕಾಲುಗಳು ಚಲನವಿಲ್ಲದ ಕಾರಣದಿಂದಾಗಿ ನನ್ನ ಕುಟುಂಬದವರು ನನ್ನನ್ನು ಅಲ್ಲಿಗೆ ದಾಖಲಿಸಿದರು. ಅನೇಕ ಪರೀಕ್ಷೆಗಳ ನಂತರ ವೈದ್ಯರು ಅಂತಿಮವಾಗಿ ರೋಗದ ಹೆಸರನ್ನು ನೀಡಿದರು. ಆ ರೋಗವನ್ನು "ಟ್ರಾನ್ಸ್ವರ್ಸ್ ಮೈಲಿಟಿಸ್" ಎಂದು ಕರೆಯಲಾಗುತ್ತದೆ. ಬೆನ್ನುಮೂಳೆಯ ಮೂಳೆಗಳ ನಡುವಿನ ನ್ಯೂರಾನ್ಸ್ ಎಂಬ ಭಾಗದಲ್ಲಿ ವೈರಸ್ ಕ್ರಿಮಿ ತಗುಲಿ ಮೆದುಳಿನಲ್ಲಿ ಹುಟ್ಟುವ ಆಜ್ಞೆಯನ್ನು ಕಾಲುಗಳಲ್ಲಿ ಗ್ರಹಿಸಲಾಗುವುದಿಲ್ಲ. ಕಾಲುಗಳ ಪ್ರತಿಕ್ರಿಯೆಯನ್ನು ಮೆದುಳಿನಿಂದ ಗ್ರಹಿಸಲಾಗುವುದಿಲ್ಲ. ಮೆದುಳು ಮತ್ತು ಸೊಂಟದ ಕೆಳಭಾಗವು ಏನನ್ನೂ ಮಾಡಲು ಸಾಧ್ಯವಾಗದ ಸ್ಥಿತಿಯೇ ಆ ವ್ಯಾಧಿ.
ನಾನು ರಕ್ಷಣೆ ಹೊಂದಿದ ಹೊಸ ಜೀವನದ ಆರಂಭದಲ್ಲಿ (12 ನೇ ವಯಸ್ಸಿನಲ್ಲಿ) ಸ್ವಯಂ ಸಂಶೋಧನೆಗಾಗಿ ಸಮಯ ಕಳೆಯುತ್ತಿದ್ದೆ. ಆದರೆ ಈಗ (27-30 ವಯಸ್ಸಿನಲ್ಲಿ) ನನ್ನ ವೈವಾಹಿಕ ಜೀವನ, ಗಂಡ ಮತ್ತು ಮಗ ನನ್ನ ಆಧ್ಯಾತ್ಮಿಕ ಕಣ್ಣುಗಳನ್ನು ಹೆಚ್ಚು ಹೆಚ್ಚು ಕುರುಡಾಗಿಸುತ್ತಿದ್ದರು. ಕೆಲವು ಗೊಣಗಾಟಗಳು, ಅತೃಪ್ತಿಗಳು, ನಕಾರಾತ್ಮಕ ಹೇಳಿಕೆಗಳಂತಹ ಪರಾವಲಂಬಿಯಂತಹ ವಿಷಯಗಳಿಗೆ ನಾನು ಒಗ್ಗಿಕೊಂಡಿದ್ದೇನೆ ಎಂದು ನನಗೆ ಸ್ಪಷ್ಟವಾಗಿ ಅರ್ಥವಾಯಿತು. ಆದರೆ ಈಗಲೋ ನನಗೆ ಹೋರಾಟಗಳೇ ಶಾಲೆಯಾಗಿ ಮಾರ್ಪಟ್ಟಿದೆ. ಸಮಯವಿಲ್ಲ, ದೇವರೇ! ಎಂದ ನನಗೆ ದೇವರೊಂದಿಗೆ ಸಮಯ ಕಳೆಯಲು ಹೆಚ್ಚು ಸಮಯವು ದೊರೆಯಿತು. ವೈದ್ಯರು ಕೂಡ ನನಗೆ ಮಾಡಬೇಕಾದ ಚಿಕಿತ್ಸೆ ಮುಗಿಸಿ, ಇನ್ನು ಕಾಲುಗಳಿಗೆ ವ್ಯಾಯಾಮ ಮಾಡುವುದು, ನಡೆಯುವುದು ನಿಮ್ಮ ಜವಾಬ್ದಾರಿ ಎಂದು ಹೇಳಿ ಮನೆಗೆ ಕಳುಹಿಸಿ ಬಿಟ್ಟರು. ಆದರೂ ಇನ್ನೂ ಹಾಸಿಗೆಯೇ. ರೋಗದ ಕಾರಣ, ಯಾವ ವೈರಸ್ ಕ್ರಿಮಿ, ಯಾವುದರಿಂದಾಗಿ ನನಗೆ ಬಂತು ಎಂಬುದು ನಮಗೆ ಗೊತ್ತಾಯಿತಲ್ಲಾ! ಹಾಗಾಗಿ ನಾನು ಕೂಡ ಮನೆಗೆ ಬಂದುಬಿಟ್ಟೆ.
ನನ್ನ ಕಣ್ಣುಗಳು ಹಗಲು ರಾತ್ರಿ ಪರಲೋಕದಿಂದ ಬರುವ ಸಹಾಯವನ್ನು ಎದುರು ನೋಡುತ್ತಿತ್ತು. ಸ್ತುತಿಸುವುದೇ ನನ್ನ ಪೂರ್ಣಾವಧಿಯ ಕೆಲಸವಾಗಿ ಮಾರ್ಪಟ್ಟಿತು. ಪರರ ನೆರವಿನಿಂದ ನಡೆಯಲು ದೇವರು ಕೃಪೆ ಮಾಡಿದರು. ನಾನು ಎದ್ದು ನಂಬಿಕೆಯಿಂದ ನಡೆಯಲು ಪ್ರಯತ್ನಿಸಿದೆ. ನನಗಾಗಿ ಸಣ್ಣ ಗುರಿಗಳನ್ನು ಇಟ್ಟುಕೊಂಡು ನಡೆದು ನೋಡಿದೆ. ಅನೇಕ ಬಾರಿ ಕೆಳಗೆ ಬೀಳುತ್ತಿದ್ದೆ. ನನ್ನ ದೇವರೇ ನನ್ನನ್ನು ಬಲಪಡಿಸಿ ಎಂದು ಪ್ರಾರ್ಥಿಸುತ್ತಿದ್ದೆ. ದೇವರು ಮನಮರುಗಿ ಅದ್ಬುತ ಮಾಡಿದರು. ಇಂದು ನಾನು ಎಲ್ಲವನ್ನೂ ಮಾಡುತ್ತೇನೆ.
ಹೌದು, ಸಮಸ್ಯೆಗಳು ನಮಗೆ ಬರುವುದು ನಮ್ಮನ್ನು ಕಹಿ ಮಾಡಲು ಅಲ್ಲ ನಮ್ಮನ್ನು ಮೃದುಗೊಳಿಸಲು. ದೇವರು ನಮ್ಮನ್ನು ಆಳ ಸಮುದ್ರಕ್ಕೆ ಕರೆದುಕೊಂಡು ಹೋಗುವುದು ನಮ್ಮನ್ನು ಮುಳುಗಿಸಲು ಅಲ್ಲ, ನಮ್ಮನ್ನು ಮನುಷ್ಯರನ್ನಾಗಿ ಮಾಡಲು ಎಂದು ಎಲ್ಲೋ ಓದಿದ ನೆನಪು. ಹೋರಾಟಗಳು ಮುಂದುವರಿಯಬಹುದು. ಆದರೆ ಶಾಶ್ವತವಾಗಿ ಅಲ್ಲ! ಹೋರಾಟದ ಕೆಲಸಗಳು ಬಹಿರಂಗದ ಕೆಲಸಗಳು. ಆಮೆನ್! ಹಲ್ಲೇಲೂಯಾ!
- Mrs. S. ಬೆರ್ಲಿನ್ ಸೆಲ್ಫಾಯ್
ಪ್ರಾರ್ಥನಾ ಅಂಶ:
ಸೇವಾ ಕ್ಷೇತ್ರಗಳಲ್ಲಿ ವೈದ್ಯಕೀಯ ಸೇವೆಗಳ ಮೂಲಕ ಭೇಟಿಯಾಗುವ ವ್ಯಕ್ತಿಗಳಿಗಾಗಿ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482