Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 14.07.2023
Share:

By Village Missionary Movement

Thursday, 13-Jul-2023

ಧೈನಂದಿನ ಧ್ಯಾನ(Kannada) – 14.07.2023

 

ನಮ್ಮನ್ನು ನಾವೇ ಪರೀಕ್ಷಿಸಿಕೊಳ್ಳೋಣ

 

"ನಮ್ಮನ್ನು ನಾವೇ ವಿಚಾರಿಸಿಕೊಂಡರೆ ನ್ಯಾಯವಿಚಾರಣೆಗೊಳಗಾಗುವದಿಲ್ಲ" - 1 ಕೊರಿಂಥ 11:31

 

ಒಂದು ದೊಡ್ಡ ಕಂಪನಿಯಲ್ಲಿ ನೋಟಿಸ್ ಬೋರ್ಡ್‌ನಲ್ಲಿ ನಿಮ್ಮ ಬೆಳವಣಿಗೆಗೆ ತಡೆಯಾಗಿದ್ದ ವ್ಯಕ್ತಿ ಸಾವನ್ನಪ್ಪಿದ್ದಾರೆ. ಅವರ ದೇಹವನ್ನು ಎರಡನೇ ಮಹಡಿಯಲ್ಲಿ ಇರಿಸಲಾಗಿದೆ. ಎಲ್ಲರೂ ಬಂದು ನೋಡಬೇಕು ಎಂದು ಬರೆಯಲಾಗಿತ್ತು. ಇದನ್ನು ನೋಡಿದ ನಂತರ ಪ್ರತಿಯೊಬ್ಬರ ಹೃದಯದಲ್ಲಿ ಅನೇಕ ಪ್ರಶ್ನೆಗಳು ಯಾರಾಗಿರಬಹುದು? ನನ್ನ ಬೆಳವಣಿಗೆಗೆ ಯಾರು ತಡೆ ಎಂದು ಕೂಡ ತಿಳಿಯದೇ ಇದ್ದೇನಲ್ಲಾ? ಅದಕ್ಕಾಗಿಯೇ ನನಗೆ ಪದವಿಯಲ್ಲಿ ಪ್ರಮೋಷನ್ ಸಿಗಲಿಲ್ಲವಾ? ಎಂದು ಯೋಚಿಸುತ್ತಾ ಎಲ್ಲರೂ ಸದ್ದಿಲ್ಲದೆ ಮೆಟ್ಟಿಲುಗಳನ್ನು ಹತ್ತಿ ಹೊರಟರು. ಅಲ್ಲೊಂದು ಶವಪೆಟ್ಟಿಗೆ ಇತ್ತು. ಸಾಲಾಗಿ ಹತ್ತಿರ ಹೋಗಿ ಒಳಗಡೆ ನೋಡಿದರೆ ಒಂದು ಮುಖ ನೋಡಿಕೊಳ್ಳುವ ಕನ್ನಡಿ ಇತ್ತು. ಅದರ ಕೆಳಗೆ "ನಿನ್ನ ಬೆಳವಣಿಗೆಗೆ ನೀನೇ ಅಡ್ಡಿ! ನಿನ್ನ ಬೆಳವಣಿಗೆಯನ್ನು ಬೇರೆ ಯಾರೂ ತಡೆಯಲಾರರು. ಬೇರೆಯವರನ್ನು ನೋಡಬೇಡ ಕಾರಣ ತೋರಿಸಬೇಡ" ಎಂದು ಬರೆಯಲಾಗಿತ್ತು.

 

ನಾವು‌ ಸಹ ಅನೇಕ ಬಾರಿ ಮತ್ತೊಬ್ಬರೇ ನನ್ನ ಬೆಳವಣಿಗೆಗೆ ಅಡ್ಡಿ. ಅವರಿಲ್ಲದಿದ್ದರೆ ನಾನು ಚೆನ್ನಾಗಿರುತ್ತೇನೆ ಎಂದು ಭಾವಿಸುತ್ತೇವೆ. ಆದರೆ ದೇವರು ನಮ್ಮಲ್ಲಿ ಪ್ರತಿಯೊಬ್ಬೊಬ್ಬರನ್ನು ಒಂದೊಂದು ರೀತಿ ಸೃಷ್ಟಿಸಿ, ಒಬ್ಬೊಬ್ಬರಿಗೂ ಒಂದೊಂದು ರೀತಿಯ ವಾಗ್ದಾನ ನೀಡಿ, ಜ್ಞಾಪಕ ಪುಸ್ತಕದಲ್ಲಿ ಪ್ರತ್ಯೇಕವಾಗಿ ಬರೆಯುತ್ತಾರೆ. ನ್ಯಾಯಸ್ಥಾಪಕನಾಗಿ ಬರುವಾಗ, ಅವನವನಿಗೆ ನಾನು ನೀಡುವ ಪ್ರತಿಫಲವು ನನ್ನೊಂದಿಗೆ ಬರುತ್ತದೆ ಎಂದು ಪ್ರತ್ಯೇಕವಾದ ಫಲವನ್ನು ನೀಡಿ ಗೌರವಿಸುತ್ತಾರೆ. ನಾವು ಇತರರೊಂದಿಗೆ ಬೆರೆತಿದ್ದರೂ, ನಮ್ಮ ಜೀವನದಲ್ಲಿ ನಾವು ಎದುರಿಸುವ ವಿಷಯಗಳಿಗೆ ಕಾರಣ ಬೇರೆಯವರಲ್ಲ ನಾವೇ. ಇದಕ್ಕಾಗಿ ನಾವು ಪ್ರತಿದಿನ ನಮ್ಮನ್ನು ನವೀಕರಿಸಿಕೊಳ್ಳುತ್ತಿದ್ದರೆ ಸಾಕು. ನಮ್ಮನ್ನು ನಾವು ನವೀಕರಿಸಿಕೊಳ್ಳುವಾಗ ಆತನ ಮಹತ್ಕಾರ್ಯಗಳನ್ನು ಗ್ರಹಿಸಿಕೊಳ್ಳಲು ಸಾಧ್ಯ. ದಾವೀದನು ಆ ಬಲದಿಂದಲೇ ಗೊಲ್ಯಾತನನ್ನು ಸೋಲಿಸಿ ಜಯ ಹೊಂದಿದನು. ಯೆಹೋಷಾಫಾಟನು ತನ್ನ ಸೈನ್ಯದ ಮುಂದೆ ಗಾಯಕರ ಗುಂಪಿನೊಂದಿಗೆ ಹೋಗಿ ವಿಜಯಶಾಲಿಯಾಗಿ ಬಂದನು. ಹಿಜ್ಕೀಯನು ಮನೆಕಾರ್ಯವನ್ನು ಕ್ರಮಪಡಿಸುವಂತಹ ಸಂದೇಶವನ್ನು ಕೇಳಿದರೂ ತನ್ನ ಅನಾರೋಗ್ಯದ ಬಗ್ಗೆ ತನಗೆ ಸಂದೇಶ ನೀಡಲು ಬಂದ ಪ್ರವಾದಿಯ ಬಳಿ ಮೊರೆಯಿಡದೇ ಗೋಡೆಯ ಕಡೆಗೆ ತಿರುಗುತ್ತಾನೆ. 15 ವರ್ಷಗಳ ಆಯುಷ್ಯನ್ನು ಹೆಚ್ಚಾಗಿ ಪಡೆದನು.

 

ಪ್ರಿಯರೇ, ನಾವು ಪ್ರತಿದಿನ ನಮ್ಮನ್ನು ನವೀಕರಿಸಿಕೊಳ್ಳೋಣ ಮತ್ತು ದೇವರೊಂದಿಗಿನ ಸಂಬಂಧದಲ್ಲಿ ಬೆಳೆಯೋಣ ಮತ್ತು ನಮ್ಮ ಮುಂದಿರುವ ವಿಷಯಗಳನ್ನು ದೊಡ್ಡದಾಗಿ ಮಾಡದೇ, ಕೊರತೆ ಹೇಳದೇ ತಡೆಯಾಗಿ ನೋಡದೇ ಪರಲೋಕ ಜೀವನವನ್ನು ಸ್ವತಂತ್ರಿಸಿಕೊಳ್ಳೋಣ. ನೀವು ಒಬ್ಬರನ್ನೊಬ್ಬರು ದ್ವೇಷಿಸಬೇಡಿರಿ; ನ್ಯಾಯವಿಚಾರಣೆಗೆ ಗುರಿಯಾದೀರಿ (ಯಾಕೋಬ 5:9) ಎಂದು ಸತ್ಯವೇದದಲ್ಲಿದೆ. ನಿಮಗೆ ದೇವರು ಕೊಡುವುದನ್ನು ಬೇರೆ ಯಾರೂ ಕೊಡಲು ಸಾಧ್ಯವಿಲ್ಲ. ತಡೆಯಲೂ ಸಾಧ್ಯವಿಲ್ಲ. ಇದನ್ನು ನಾವು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳೋಣ.

- Mrs. ಅನ್ಬು ಜ್ಯೋತಿ ಸ್ಟಾಲಿನ್

 

ಪ್ರಾರ್ಥನಾ ಅಂಶ:

ಸೇವಾ ಕ್ಷೇತ್ರಗಳಲ್ಲಿ ಸ್ಕೂಲ್ ಮಿಷನ್ ಮೂಲಕ ಭೇಟಿಯಾಗುತ್ತಿರುವ ವಿದ್ಯಾರ್ಥಿಗಳಿಗಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al