By Village Missionary Movement
Wednesday, 12-Jul-2023ಧೈನಂದಿನ ಧ್ಯಾನ(Kannada) – 13.07.2023
ಜಗಳ ಮಾಡಬೇಡ...
"…ಯೆರೂಸಲೇಮೇ, ನಿನ್ನ ಗತಿಯನ್ನು ಏನೆಂದು ಹೇಳಲಿ! ನೀನು ಶುದ್ಧಳಾಗಲು ಇನ್ನೆಷ್ಟು ಕಾಲಬೇಕು" - ಯೆರೆಮಿಯ 13:27
ನ್ಯಾಯಸ್ಥಾಪಕರ ಪುಸ್ತಕದಲ್ಲಿ ಗಿದ್ಯೋನನು ಇಸ್ರಾಯೇಲ್ ಜನರಿಗಾಗಿ ಮಿದ್ಯಾನ್ಯರ ವಿರುದ್ಧ ಯುದ್ಧಮಾಡಿದನು ಮತ್ತು ಕರ್ತನಿಗಾಗಿ ಮಹತ್ಕಾರ್ಯಗಳನ್ನು ಮಾಡಿದನು ಎಂದು ನಮಗೆ ಗೊತ್ತು. ನ್ಯಾಯಸ್ಥಾಪಕರು ಎಂಟನೆಯ ಅಧ್ಯಾಯದಲ್ಲಿ, ಎಫ್ರಾಯೀಮ್ಯರು ಅವನನ್ನು, “ನೀನು ಹೀಗೆ ಯಾಕೆ ಮಾಡಿದಿ? ವಿುದ್ಯಾನ್ಯರೊಡನೆ ಯುದ್ಧಮಾಡುವದಕ್ಕೆ ಹೊರಟಾಗ ನಮ್ಮನ್ನೇಕೆ ಕರೆಯಲಿಲ್ಲ" ಎಂದು ಉಗ್ರದಿಂದ ಕಲಹಮಾಡಿದರು ಎಂದು ಓದುತ್ತೇವೆ. ಅಂದರೆ, ಕರ್ತನು ದರ್ಶನವನ್ನು ಕೊಟ್ಟು ಗಿದ್ಯೋನನು ಇಸ್ರಾಯೇಲ್ ಜನರಿಗಾಗಿ ಯುದ್ಧ ಮಾಡಿದ್ದಾನೆ. ಈಗ ಆ ಯುದ್ಧದಲ್ಲಿ ದೊರೆತ ಜಯಕ್ಕಾಗಿ ದೇವರನ್ನು ಮಹಿಮೆಪಡಿಸಿ ಗಿದ್ಯೋನನನ್ನು ಹೊಗಳಬೇಕಾದ ಎಫ್ರಾಯೀಮಿನ ಜನರು, ಅವನ ಮನಸ್ಸನ್ನು ಆಯಾಸಗೊಳಿಸುವಂತೆ ಅವನೊಂದಿಗೆ ವಾದ ಮಾಡುವುದನ್ನು ನಾವು ನೋಡುತ್ತೇವೆ. ಆ ಘಟನೆಯಲ್ಲಿ, ಗಿದ್ಯೋನನು ಎಫ್ರಾಯೀಮ್ ಜನರೊಂದಿಗೆ ತಾಳ್ಮೆಯಿಂದ ಮಾತನಾಡಿ ದೇವರ ಮುಂದೆ ತನ್ನನ್ನು ಕಾಪಾಡಿಕೊಂಡಿದ್ದು ನಮಗೆ ಗೊತ್ತು. ಆದರೆ ಆ ಎಫ್ರಾಯೀಮಿನ ಜನರು ಯಾವಾಗಲೂ ಜಗಳಗಂಟರಾಗಿದ್ದರು. ನೀವು ನ್ಯಾಯಸ್ಥಾಪಕರು 12 ನೇ ಅಧ್ಯಾಯದ ಮೊದಲನೇ ವಚನದಲ್ಲಿ ನೋಡುವುದಾದರೆ, ಅವರು ಹೇಗೆ ಗಿದ್ಯೋನನೊಂದಿಗೆ ಜಗಳ ಮಾಡಲು ಹೋದರೋ ಅದರಂತೆಯೇ ಯೆಪ್ತಾಹನೊಂದಿಗೆ ನಮ್ಮನ್ನು ಯುದ್ಧಕ್ಕೆ ಏಕೆ ಕರೆಯಲಿಲ್ಲ ಎಂದು ಜಗಳ ಮಾಡಿದ್ದನ್ನು ನೋಡುತ್ತೇವೆ. ಆದರೆ ಯೆಪ್ತಾಹನು ಗಿದ್ಯೋನನಂತೆ ತನ್ನನ್ನು ತಗ್ಗಿಸಿಕೊಳ್ಳಲಿಲ್ಲ, ಬದಲಾಗಿ ಎಫ್ರಾಯೀಮ್ ಜನರೊಂದಿಗೆ ಕೋಪದಿಂದ ಮಾತಾಡಿ ತನ್ನ ಜನರನ್ನು ಕರೆದುಕೊಂಡು ಅವರೊಂದಿಗೆ ಯುದ್ಧಕ್ಕೆ ಹೋಗುತ್ತಾನೆ. ಇದರಿಂದಾಗಿ ಎಫ್ರಾಯೀಮ್ ನ ಅನೇಕ ಜನರು ನಾಶವಾದರು.
ಇದನ್ನು ಓದುತ್ತಿರುವ ಪ್ರಿಯರೇ, ನಮ್ಮ ಜೀವನದಲ್ಲೂ ನಾವು ಯಾವಾಗಲೂ ಎಫ್ರಾಯೀಮ್ ಜನರಂತೆ ಜಗಳಗಂಟರಾಗಿ ಮುಂದುವರಿದರೆ ವಿನಾಶ ಖಚಿತ. ಬದಲಾಗಿ ಸಮಾಧಾನ ಪಡಿಸುವವರು ಧನ್ಯರು; ಅವರು ದೇವರ ಮಕ್ಕಳು ಎಂದು ಯೇಸು ಹೇಳಿದಂತೆ ನಾವು ಸಮಾಧಾನ ಪಡಿಸುವವರಾಗಿ ಮಾರ್ಪಡುವಾಗ ಭಾಗ್ಯವಂತರಾಗಿ ಮಾರ್ಪಡುತ್ತೇವೆ . ಕರ್ತನು ನಮ್ಮನ್ನು ಹೆಚ್ಚಿಸುತ್ತಾರೆ.
ಆದ್ದರಿಂದ ಯಾವಾಗಲೂ ಜಗಳಮಾಡುತ್ತಲೇ ಇದ್ದು ನಾಶವಾಗಿ ಹೋದ ಎಫ್ರಾಯೀಮ್ಯರಂತೆ ಅಲ್ಲ, ಯೇಸು ಹೇಳಿದಂತೆ ಶಾಂತಗುಣವುಳ್ಳವರಾಗಿ ಜೀವಿಸಿ ಭೂಮಿಯನ್ನು ಸ್ವತಂತ್ರಿಸಿಕೊಳ್ಳೋಣ. ದೇವರ ನಾಮವು ಮಹಿಮೆಹೊಂದಲಿ. ಕರ್ತನು ನಮ್ಮನ್ನು ಆಶೀರ್ವದಿಸಲಿ ಎಂಬ ವಾಕ್ಯದ ಪ್ರಕಾರ ನಮಗೆ ಉನ್ನತಿ ಖಚಿತ.
- Bro. ಬೆಂಜಮಿನ್
ಪ್ರಾರ್ಥನಾ ಅಂಶ:
ಸೇವಾ ಕ್ಷೇತ್ರಗಳ ಎಲ್ಲಾ ಸ್ಥಳಗಳಲ್ಲಿ ಪ್ರಾರ್ಥನಾ ಗುಂಪುಗಳು ತಡೆಯಿಲ್ಲದೆ ನಡೆಯುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482