Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 12.07.2023
Share:

By Village Missionary Movement

Wednesday, 12-Jul-2023

ಧೈನಂದಿನ ಧ್ಯಾನ(Kannada) – 12.07.2023

 

PROJECT- ಹಡಗು ನಿರ್ಮಾಣ

 

"ಅಳುತ್ತಾ ಬಿತ್ತುವವರು ಹಾಡುತ್ತಾ ಕೊಯ್ಯುವರು." - ಕೀರ್ತನೆ 126:5

 

ನೋಹನು-ನೀತಿವಂತನು, ಉತ್ತಮನು ದೇವರೊಂದಿಗೆ ಸಂಚರಿಸುತ್ತಿದ್ದನು ಎಂಬುದು ಸತ್ಯವೇದವು ಹೇಳುವ ಸಾಕ್ಷಿ! ದೇವರು ನೋಹನನ್ನು ಆರಿಸಿಕೊಂಡರು, ಯಾತಕ್ಕಾಗಿ? ಅವರು ತಾನು ಮಾಡುತ್ತಿರುವ ಯೋಜನೆಯನ್ನು ಹೇಳುವುದಕ್ಕಾಗಿ ಮಾತ್ರವಲ್ಲ ಅವರ ಕುಟುಂಬವನ್ನು ರಕ್ಷಿಸುವುದಕ್ಕಾಗಿ ನೋಹನ ಬಳಿ ಒಂದು Project ಹೇಳುತ್ತಾರೆ. ಏನದು? ಅವರಿಗೆ ಗೊತ್ತಿರುವ ತೋಟಗಾರಿಕೆಯಾ? ಇಲ್ಲ, ಹಡಗು ನಿರ್ಮಿಸುವ Project, ಅದರಲ್ಲೂ Condition ಹೇಳುತ್ತಾರೆ. ಉದ್ದ, ಅಗಲ ಮತ್ತು ಎತ್ತರ ಇಷ್ಟೆಂದು ಮತ್ತು ಕೋಣೆಗಳು ಹೀಗಿರಬೇಕು, ಅವುಗಳಿಗೆ ಗಮ್ ಹಚ್ಚಬೇಕು ಎಂದು! ಹೌದು, ದೇವರ ಮುಂದೆ ಉತ್ತಮರಾಗಿ ನಡೆಯಲು ಬಯಸುವ ಪ್ರತಿಯೊಬ್ಬರಿಗೂ ದೇವರು "ಒಂದು Project" ನೀಡಬಹುದು. ಅದು ಏನು project (ಕುಟುಂಬ, ವಿದ್ಯಾಭ್ಯಾಸ ಅಥವಾ ಕೆಲಸ) ಯಾವುದಾಗಿದ್ದರೂ‌ ಸರಿ, ನಮಗೆ Rules ಇದೆ.

 

ದೇವರು ಹೇಳಿಬಿಟ್ಟರು ನಾವು ಕಟ್ಟಿಬಿಡೋಣ ಎಂದು ನೋಹನು ಕಟ್ಟುತ್ತಾರೆ. ಕಟ್ಟುವಾಗ ಅವರ ಹೃದಯದಲ್ಲಿ ಹಲವು ಪ್ರಶ್ನೆಗಳು ಹುಟ್ಟಿರಬಹುದು. ಅಚ್ಚುಕಟ್ಟಾಗಿ ಕಟ್ಟಿಮುಗಿಸಲು ಸಾಧ್ಯವಾ, ಕಟ್ಟಿದ ನಂತರ ನಾವು ಜೀವಂತವಾಗಿ ಇರುತ್ತೇವಾ, ಸರಿ ಜೀವಂತವಾಗಿದ್ದರೂ ನಾವು ಕಟ್ಟುತ್ತಿರುವ ಹಡಗು ನಮ್ಮನ್ನು ರಕ್ಷಿಸುತ್ತದಾ ಎಂದೆಲ್ಲಾ. . . ಅಷ್ಟೇ ಅಲ್ಲ, ಬೇರೆಯವರು ಈತನ ಕೆಲಸವನ್ನು ನೋಡಿ ನಕ್ಕಿರಬಹುದು ಅಥವಾ "ತನಗೆ ಗೊತ್ತಿಲ್ಲದ ಕೆಲಸ" ಮಾಡಲು ಹೆಣಗಾಡುತ್ತಿರುವುದಕ್ಕೆ ಅನುಕಂಪ ವ್ಯಕ್ತಪಡಿಸಿರಬಹುದು. ಆದಾಗ್ಯೂ, ಅವರು ತನ್ನ ಕೆಲಸವನ್ನು ಮಾತ್ರ ಅರ್ಧಕ್ಕೆ ಬಿಟ್ಟು ಬಿಡಲಿಲ್ಲ. ಕಣ್ಣೀರಿನ ಮಧ್ಯೆ, ಅವರು ಪೂರ್ಣ ಶಕ್ತಿಯಿಂದ ಮತ್ತು ಪೂರ್ಣ ಹೃದಯದಿಂದ perfect ಆಗಿ ಕಟ್ಟಿ ಮುಗಿಸುತ್ತಾರೆ.

 

ನೋಹನಂತೆ, ದೇವರು ನಮಗೆ ಕೊಟ್ಟಿರುವ project "ಕುಟುಂಬ" ಆಗಿದ್ದರೆ, ನಾವು ದೀರ್ಘ ಶಾಂತರಾಗಿದ್ದು, ಪ್ರೀತಿಯಿಂದ ಉನ್ನತ ಗುಣಲಕ್ಷಣಗಳೊಂದಿಗೆ ಕಟ್ಟೋಣ. ಅಥವಾ ನಮ್ಮ ಜ್ಞಾನಕ್ಕೆ ಹೊಂದದ ವಿದ್ಯಾಭ್ಯಾಸವಾಗಿರಬಹುದು. ಅಥವಾ ಅದು ನಮ್ಮ ವಿದ್ಯಾಭ್ಯಾಸಕ್ಕೆ ಸಂಬಂಧಿಸದ ಕೆಲಸವಾಗಿರಬಹುದು. ಅದು ಏನೇ ಆಗಿರಲಿ, ಎಂಥದ್ದೇ ಆಗಿರಲಿ. ಅರ್ಧದಲ್ಲೇ ಬಿಟ್ಟುಬಿಡಬೇಡಿರಿ. ನೋಹನ ಕಾರ್ಯಗಳು ನಮ್ಮೆಲ್ಲರಿಗೂ Role model ಆಗಿದೆ.

 

ನೋಹನು ಹಡಗು ನಿರ್ಮಿಸಲು ಒಂದು ತುರಾಯಿ ಮರವಿತ್ತು. ನಾವು Project ಮುಗಿಸಲು ಯೇಸು ಕ್ರಿಸ್ತನಿದ್ದಾರೆ. ಯೇಸುಕ್ರಿಸ್ತನು ಹೇಳುತ್ತಾರೆ, ನಿಮ್ಮ ಚಿತ್ತವಿದ್ದರೆ ಈ ಪಾತ್ರೆಯು ನನ್ನಿಂದ ತೊಲಗುವಂತೆ ಮಾಡಿ ಎಂದು! ಆದರೆ ಎಲ್ಲಾ ಪಾಡುಗಳನ್ನೂ ಸ್ವೀಕರಿಸಿದರು. ಇಂದು ನಮ್ಮೆಲ್ಲರಿಗೂ ಲೋಕರಕ್ಷಕನಾಗಿದ್ದಾರೆ. ನೋಹನು ನಿರ್ಮಿಸಿದ ಹಡಗಿನಿಂದ ನೋಹ ಮತ್ತು ಅವನ ಕುಟುಂಬವು ಪ್ರವಾಹದ ಮಹಾ ನಾಶನದಿಂದ ರಕ್ಷಿಸಲ್ಪಟ್ಟಿತು. ಅಷ್ಟೇ ಅಲ್ಲ, ಎಲ್ಲಾ ಜೀವರಾಶಿಗಳು ರಕ್ಷಿಸಲ್ಪಟ್ಟವು. ಅದೇ ರೀತಿಯಲ್ಲಿ, ಯೇಸು ಕ್ರಿಸ್ತನು ನಮಗೆ ನೀಡಿದ ಕುಟುಂಬ, ಕುಟುಂಬದವರ ವಿದ್ಯಾಭ್ಯಾಸ ಅಥವಾ ಕೆಲಸದ ಮೂಲಕ ನಮ್ಮೊಂದಿಗೆ ಸಂಬಂಧ ಹೊಂದಿರುವವರಿಗೂ ಆಶೀರ್ವಾದಗಳು ಹೆಚ್ಚುವಂತೆ ಮಾಡುತ್ತಾರೆ.

- Mrs. ಮುತ್ತುಲಕ್ಷ್ಮಿ ವೇದಾ

 

ಪ್ರಾರ್ಥನಾ ಅಂಶ:

ಆಗಸ್ಟ್ 15 ರಂದು ನಡೆಯಲಿರುವ ಯೌವನಸ್ಥರ ಉಜ್ಜೀವನ ಕೂಟದಲ್ಲಿ ಕೆಲಸ ಮಾಡಲು ಸ್ವಯಂಸೇವಕರು ಎದ್ದೇಳುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al