Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 11.07.2023
Share:

By Village Missionary Movement

Tuesday, 11-Jul-2023

ಧೈನಂದಿನ ಧ್ಯಾನ(Kannada) – 11.07.2023

 

ನಾಳೆ ನೋಡಿಕೊಳ್ಳೋಣ

 

"ಈ ಅತ್ಯಂತ ವಿಶೇಷ ರಕ್ಷಣೆಯನ್ನು ನಾವು ಅಲಕ್ಷ್ಯಮಾಡಿದರೆ ತಪ್ಪಿಸಿಕೊಳ್ಳುವದು ಹೇಗೆ?..." - ಇಬ್ರಿಯ 2:4

 

ಗ್ರೀಕ್ ದೇಶವನ್ನು ಆಳಿದ ರಾಜರಲ್ಲಿ ಕಿಂಗ್ ಆರ್ಕಿಯಸ್ ಒಬ್ಬರು. ಅವರು ತಮ್ಮ ದೇಶವಾಸಿಗಳ ಬಗ್ಗೆ ಸ್ವಲ್ಪವೂ ಅಕ್ಕರೆಯಿಲ್ಲದವರಾಗಿದ್ದರು. ಅವರು ಎಲ್ಲಾ ರೀತಿಯ ಇಂದ್ರಿಯ ಸುಖಗಳನ್ನು ಅನುಭವಿಸುವುದನ್ನು ಅಭ್ಯಾಸ ಮಾಡಿಕೊಂಡಿದ್ದರು. ಇದರಿಂದಾಗಿ ದೇಶದಲ್ಲಿ ಯಾವ ಅಭಿವೃದ್ಧಿಯೂ ಇರಲಿಲ್ಲ. ರಾಜನ ಬೇಜವಾಬ್ದಾರಿ ಆಡಳಿತದ ಫಲವಾಗಿ ಅವ್ಯವಸ್ಥೆಯಿಂದ ಕೂಡಿತ್ತು. ಇದರಿಂದ ದೇಶದ ಜನರು ತಾಳ್ಮೆ ಕಳೆದುಕೊಂಡು ರಾಜನನ್ನು ನಾಶಮಾಡಲು ಸಂಚು ಹೂಡಿದರು. ಷಡ್ಯಂತ್ರವನ್ನು ನಡೆಸಲು ಜನರು ಸೂಕ್ತ ಸಮಯವನ್ನು ಹುಡುಕುತ್ತಿದ್ದರು. ಜನರು ತನ್ನ ವಿರುದ್ಧ ಕೆಲಸ ಮಾಡುತ್ತಿದ್ದಾರೆ ಮತ್ತು ತನ್ನನ್ನು ಕೊಲ್ಲಲು ಸಂಚು ಹೂಡುತ್ತಿದ್ದಾರೆ ಎಂದು ತಿಳಿಯದೆ ಅವರು ಹೆಚ್ಚು ಆಹ್ಲಾದಕರ ಕಾಲಕ್ಷೇಪಗಳಲ್ಲಿ ತೊಡಗಿಸಿಕೊಂಡರು. ಇವರ ಆಪ್ತ ಸ್ನೇಹಿತರೊಬ್ಬರ ಮೂಲಕ ಪತ್ರದ ವಿಧದಲ್ಲಿ ರಾಜನನ್ನು ಹತ್ಯೆ ಮಾಡುವ ಸಂಚು ಬರುತ್ತದೆ. ಆಗಲೂ ರಾಜನು ಪತ್ರವನ್ನು ತೆರೆದು ಓದಲು ಸಾಧ್ಯವಾಗದೆ ನಾಳೆ ನೋಡಿಕೊಳ್ಳೋಣ ಎಂದು ನಿರ್ಲಕ್ಷಿಸಿದರು. ಈ ವೇಳೆ ಔತಣಕ್ಕೆ ಕರೆದಿದ್ದವರು ರಾಜನ ಮೇಲೆ ದಾಳಿ ನಡೆಸಿ ಕೊಂದು ಹಾಕಿದರು. ರಾಜನ ಮರಣಕ್ಕೆ ನಾಳೆ ನೋಡಿಕೊಳ್ಳೋಣ ಎಂಬ ಅವರ ಉದಾಸೀನತೆಯೇ (ಯೋಚನೆ) ಕಾರಣ.

 

ಹಳೆಯ ಒಡಂಬಡಿಕೆಯ ಕಾಲದಲ್ಲಿ, ಯಾಕೋಬನೆಂಬ ದೇವರ ಮನುಷ್ಯನಿಗೆ ಏಸಾವ ಮತ್ತು ಯಾಕೋಬ ಎಂಬ ಇಬ್ಬರು ಮಕ್ಕಳಿದ್ದರು. ಇದರಲ್ಲಿ ಹಿರಿಯ ಮಗನಾದ ಏಸಾವನಿಗೆ ಜ್ಯೇಷ್ಠ ಪುತ್ರ ಪಾಲು ಹೋಯಿತು. ಆದರೆ ಅವನೋ ಒಂದು ಹೊತ್ತಿನ ಗಂಜಿಗಾಗಿ ಅದನ್ನು ನಿರ್ಲಕ್ಷಿಸಿದನು. ಮತ್ತು ಮತ್ತಾಯ 25 ನೇ ಅಧ್ಯಾಯದಲ್ಲಿ ಯೇಸು ಕ್ರಿಸ್ತನು ಹೇಳಿದ ಒಂದು ಸಾಮ್ಯದಲ್ಲಿ, ಒಂದು ತಲಾಂತನ್ನು ಹೊಂದಿದ್ದ ವ್ಯಕ್ತಿಯು ಅದರ ಮಹತ್ವವನ್ನು ಅರಿಯದೇ ಅದನ್ನು ನಿರ್ಲಕ್ಷಿಸಿದನು. ಅಂತ್ಯವು ನರಕ ಎಂದು ನೋಡುತ್ತೇವೆ.

 

ಪ್ರಿಯರೇ, ಪಾಪ ಮಾಡುವ ಆತ್ಮ ಸಾಯುತ್ತದೆ. (ಯೆಹೆ. 18:14) ಪಾಪದ ಸಂಬಳ ಮರಣ. (ರೋಮಾ 6:23) ಹೀಗೆಲ್ಲಾ ಸತ್ಯವೇದವು ನಮ್ಮನ್ನು ಎಚ್ಚರಿಸುತ್ತಿದೆ. ಆದ್ದರಿಂದ ದೇವರು ನಮಗೆ ಕೃಪೆಯಾಗಿ ನೀಡುವ ಪ್ರತಿಯೊಂದು ದಿನವನ್ನೂ, ಸಿಗುವ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳೋಣ. ನಾಳೆ ನೋಡಿಕೊಳ್ಳೋಣ. ಆಮೇಲೆ ನೋಡಿಕೊಳ್ಳೋಣ ಎಂದೆಲ್ಲಾ ತಡಮಾಡದೆ ಕೂಡಲೇ ಮಾಡಿ ಮುಗಿಸೋಣ. ದೇವರು ನಮಗೆ ಕೃಪೆಯಾಗಿ ಕೊಡುವ ಬಲದೊಂದಿಗೆ ಬದುಕೋಣ!

 

ಪ್ರಾರ್ಥನಾ ಅಂಶ:

ಆಗಸ್ಟ್ 15 ರಂದು ತಿರುನಲ್ವೇಲಿಯಲ್ಲಿ ನಡೆಯುವ ಯುವ ಶಿಬಿರದ ಸಿದ್ಧತಾ ಕಾರ್ಯಗಳಿಗಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş