By Village Missionary Movement
Saturday, 08-Jul-2023ಧೈನಂದಿನ ಧ್ಯಾನ(Kannada) – 09.07.2023
ತಾಳ್ಮೆ ಅಗತ್ಯ
"ದೇವರ ಚಿತ್ತವನ್ನು ನೆರವೇರಿಸಿ ವಾಗ್ದಾನದ ಫಲವನ್ನು ಹೊಂದಬೇಕಾದರೆ ನಿಮಗೆ ತಾಳ್ಮೆಬೇಕು" - ಇಬ್ರಿಯ 10:36
ಜಾನ್ ಮತ್ತು ಜಗನ್ ಆಪ್ತ ಸ್ನೇಹಿತರು. ಇಬ್ಬರೂ ಬಾಲ್ಯದಿಂದಲೂ ಒಟ್ಟಿಗೆ ಓದುತ್ತಿದ್ದರು. ಓದು ಮುಗಿದ ಮೇಲೆ ಇಬ್ಬರೂ ಕೆಲಸ ಹುಡುಕತೊಡಗಿದರು. ಜಾನ್ ಗೆ ಒಳ್ಳೆಯ ಕಂಪನಿಯಲ್ಲಿ ಕೆಲಸ ಸಿಕ್ಕಿತು. ಉದ್ಯೋಗದಲ್ಲಿ ಸ್ಥಿರಗೊಂಡನು. ಜಗನ್ ಇನ್ನೂ ಕೆಲಸಕ್ಕಾಗಿ ಪರದಾಡುತ್ತಲೇ ಇದ್ದ. ದಿನಗಳು ವರ್ಷಗಳು ಉರುಳಿದವು.
ಒಂದು ದಿನ ಜಾನ್ ಕೆಲಸ ಮಾಡುತ್ತಿದ್ದ ಅದೇ ಕಂಪನಿಯಲ್ಲಿ interview ನಡೆಯಿತು. ಅದರಲ್ಲಿ ಜಗನ್ ಕೂಡ ಭಾಗವಹಿಸಿ select ಆದನು. ಮರುದಿನ ಜಗನ್ ಆ ಕಂಪನಿಗೆ join ಆಗಿ ಕೆಲಸ ಪ್ರಾರಂಭಿಸಿದ. ಇಬ್ಬರೂ ತಮಗೆ ವಹಿಸಿದ ಕೆಲಸವನ್ನು ಜವಾಬ್ದಾರಿಯಿಂದ ನಿರ್ವಹಿಸುತ್ತಿದ್ದರು. ಅವರು ಪ್ರಾಮಾಣಿಕವಾಗಿ ಮತ್ತು ಜವಾಬ್ದಾರಿಯಿಂದ ಮಾಡಿದ ಕೆಲಸವನ್ನು ನೋಡಿದ ಕಂಪನಿಯ ಮ್ಯಾನೇಜರ್ ಅವರನ್ನು ತುಂಬಾ ಮೆಚ್ಚಿದರು ಮತ್ತು ಇಬ್ಬರಿಗೂ promotion ಕೊಡಲು ಬಯಸಿದರು.
ಮೊದಲು ಜಗನ್ ನನ್ನು ಕರೆಸಿ ಕಂಪನಿಯಲ್ಲಿ ಕೆಲಸಗಾರರನ್ನು ನೋಡಿಕೊಳ್ಳುವ ಜವಾಬ್ದಾರಿ ಕೊಟ್ಟರು. ತನಗೆ ಕೊಟ್ಟ ಆ ಜವಾಬ್ದಾರಿಯನ್ನೂ ಸಹ ನಿಷ್ಠೆಯಿಂದ ಪೂರೈಸತೊಡಗಿದ. ದಿನಗಳು ಕಳೆದವು. ಜಾನ್ ಗೆ ತುಂಬಾ ಕೋಪ. ನನಗಿಂತ ಎಷ್ಟೋ ವರ್ಷಗಳು ತಡವಾಗಿ ಬಂದ ಜಗನ್ ಗೆ Promotion ಕೊಟ್ಟಿದ್ದಾರೆ. ಆದರೆ ನನಗೆ ಕೊಡಲಿಲ್ಲವೇ ಎಂದು ಹೃದಯದಲ್ಲಿ ತುಂಬಾ ಬೇಸರಗೊಂಡನು. ಅಂತಿಮವಾಗಿ ಕಂಪನಿಯನ್ನು ಬಿಟ್ಟು ಹೋಗಲು ಯೋಚಿಸಿದ. ತಕ್ಷಣ ನೇರವಾಗಿ ಕಂಪನಿಯ ಮ್ಯಾನೇಜರ್ ಬಳಿ ಹೋಗಿ ನಾನು ಕೆಲಸಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಹೇಳಿದರು. ಮ್ಯಾನೇಜರ್ ಕಾರಣ ಕೇಳಿದರು. ಕೂಡಲೇ ಜಾನ್ ತನ್ನ ಮನದಾಳದಲ್ಲಿದ್ದ ಆತಂಕವನ್ನೆಲ್ಲಾ ಹೊರಹಾಕಿ ನನ್ನ ನಂತರ ಬಂದ ಜಗನ್ ಗೆ pramotion ಕೊಟ್ಟಿದ್ದೀರಿ, ನನ್ನನ್ನು ಮಾತ್ರ ಅದೇ ಕೆಲಸದಲ್ಲಿ ಇಟ್ಟುಕೊಂಡಿದ್ದೀರ ಎಂದನು. ಮ್ಯಾನೇಜರ್ ತಾಳ್ಮೆಯ ಧ್ವನಿಯಲ್ಲಿ ಜಾನ್ ತಾಳ್ಮೆಯಿಂದಿರಿ, ಆತುರಪಡಬೇಡಿ. ನಾವು ಕುಟುಂಬ ಸಮೇತರಾಗಿ ವಿದೇಶಕ್ಕೆ ಹೋಗುತ್ತಿರುವುದರಿಂದ ಈ ಕಂಪನಿಯ ಸಂಪೂರ್ಣ ಜವಾಬ್ದಾರಿಯನ್ನು ನಿಮ್ಮ ಕೈಗೆ ಕೊಟ್ಟು ಹೋಗೋಣ ಅಂದುಕೊಂಡಿದ್ದೆವು. ನೀನು ಹೀಗೆ Resigning letter ಅನ್ನು ತಂದು ನಿಂತಿದ್ದೀಯಲ್ಲಾ ನಿನ್ನನ್ನು ಹೇಗೋ ಅಂದುಕೊಂಡಿದ್ದೋ, ನೀನು ಹೀಗಿದ್ದೀಯಲ್ಲಾ ಎಂದು ತುಂಬಾ ನೊಂದುಕೊಂಡರು. ಜಾನ್ ತನ್ನ ಹೃದಯದಲ್ಲಿ ಎಷ್ಟು ದೊಡ್ಡ ಜವಾಬ್ದಾರಿಯನ್ನು ಹೀಗೆ ಅವಸರಪಟ್ಟು ಕಳೆದುಕೊಂಡು ಬಿಡುತ್ತಿದ್ದೆನಲ್ಲಾ ಅಂದುಕೊಂಡು ತನ್ನ ತಪ್ಪನ್ನು ಅರಿತು ಮ್ಯಾನೇಜರ್ ಬಳಿ ಕ್ಷಮೆಯಾಚಿಸಿದನು.
ತಮ್ಮ, ತಂಗಿ ಆತುರದಲ್ಲಿ ತೆಗೆದುಕೊಳ್ಳುವ ಯಾವ ನಿರ್ಧಾರವಾದರೂ ನಮಗೆ ದೊಡ್ಡ ನಷ್ಟವನ್ನೇ ತರುತ್ತದೆ. ಆದ್ದರಿಂದ ಅಸೂಯೆಪಡದೆ ತಾಳ್ಮೆಯಿಂದಿರಲು ಕಲಿಯಿರಿ.
- Mrs. ಸಾರಾ ಸುಭಾಷ್.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482