Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 07.07.2023
Share:

By Village Missionary Movement

Friday, 07-Jul-2023

ಧೈನಂದಿನ ಧ್ಯಾನ(Kannada) – 07.07.2023

 

ದೊಡ್ಡ ನಷ್ಟ

 

"…ನಿಮಗಿರುವವುಗಳಲ್ಲಿ ತೃಪ್ತರಾಗಿರಿ;..." - ಇಬ್ರಿಯ 13:5

 

ಒಬ್ಬ ವ್ಯಕ್ತಿ ತನ್ನ ಚಿಕ್ಕ ದೋಣಿಯಲ್ಲಿ ಸಾಮಾನ್ಯ ರೀತಿಯಲ್ಲಿ ಮೀನು ಹಿಡಿಯುತ್ತಾ ತನ್ನ ಕುಟುಂಬವನ್ನು ಪೋಷಿಸುತ್ತಿದ್ದನು. ಒಂದು ದಿನ ಅವನ ಬಲೆಯಲ್ಲಿ ಒಂದು ದೊಡ್ಡ ಮೀನು ಸಿಕ್ಕಿಹಾಕಿಕೊಂಡಿತು. ಆದರೆ ಈ ಚಿಕ್ಕ ದೋಣಿಯಿಂದ ಆ ದೊಡ್ಡ ಮೀನನ್ನು ದಡಕ್ಕೆ ತರುವುದು ತುಂಬಾ ಕಷ್ಟ. ಆದರೂ, ದುರಾಸೆಯಿಂದ ಆ ದೊಡ್ಡ ಮೀನನ್ನು ದಡಕ್ಕೆ ತರಲು ಯತ್ನಿಸಿದನು. ಅದು ತುಂಬಾ ಕಷ್ಟವಾಗಿದ್ದದರಿಂದ ಬಹಳ ಹೊತ್ತು ಪ್ರಯತ್ನಿಸಿ ಸುಸ್ತಾದನು. ಕೊನೆಗೆ ಬೇರೆ ದಾರಿಯಿಲ್ಲದೆ ಬಲೆ ಹಿಡಿದು ಸಮುದ್ರದಲ್ಲಿ ಬಿಟ್ಟು ಬದುಕಲು ದಡಕ್ಕೆ ಬಂದು ಸೇರಿದನು. ಆ ದಿನ ಅವನು ಸಾಮಾನ್ಯವಾಗಿ ಹಿಡಿಯುತ್ತಿದ್ದ ಕೆಲವು ಮೀನುಗಳು ಸಹ ಸಿಗಲಿಲ್ಲ. ಆ ದಿನ ಪೂರ್ತಿ ಅವನ ವ್ಯಾಪಾರ ನಷ್ಟವಾಯಿತು.

 

ದೇವರ ಯೋಜನೆಯ ಪ್ರಕಾರ, ಲೋಟನು ಅಬ್ರಹಾಮನ ಉತ್ತಮ ಸಂಬಂಧವನ್ನು ಕಳೆದುಕೊಂಡನು ಏಕೆಂದರೆ ಅಬ್ರಹಾಮನೊಂದಿಗೆ ಇದ್ದ ಲೋಟನ ಹೃದಯದಲ್ಲಿ ಮಹಾನ್ ಆಸೆಗಳು ಪ್ರವೇಶಿಸಿದವು. ಪರಿಣಾಮವಾಗಿ, ಅವರು ಆಸ್ತಿ ಅಂತಸ್ತುಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗದೆ ಹೋದದ್ದರೊಂದಿಗೆ, ಜೀವನದ ಕೊನೆಯ ದಿನಗಳನ್ನು ತೀವ್ರ ಖಿನ್ನತೆಯಲ್ಲಿ ಕೊನೆಗೊಳಿಸಬೇಕಾಯಿತು. ಹವ್ವಳ ಹೃದಯದಲ್ಲಿ ಸೈತಾನನು ಬಹು ದೊಡ್ಡ ಆಸೆಯು ಪ್ರವೇಶಿಸುವಂತೆ ಮಾಡಿದ. ಅವಳೂ ಸಹ ಅದನ್ನು ಅಂಗೀಕರಿಸಿದಳು. ಈ ದುರಾಸೆಯೇ ದೇವರು ಅವರಿಗಾಗಿ ಇಟ್ಟಿದ್ದ ಉನ್ನತ ಆಶೀರ್ವಾದಗಳನ್ನು ಕಳೆದುಕೊಳ್ಳುವಂತೆ ಮಾಡಿತು. ಹವ್ವಳ ಆಸೆ ಈಡೇರಲಿಲ್ಲ. ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದ ಗೇಹಜಿಯ ಹೃದಯವನ್ನು ಪ್ರವೇಶಿಸಿದ ಹಣದಾಸೆಯು ಅವನ ಉತ್ತಮ ಸ್ಥಿತಿಯನ್ನು ವಂಚಿತಗೊಳಿಸಿತು ಮತ್ತು ಅವನನ್ನು ಕುಷ್ಠರೋಗಿಯನ್ನಾಗಿ ಮಾಡಿತು.

 

ಕೆಲವೊಮ್ಮೆ ನಮ್ಮ ಜೀವನದಲ್ಲಿ ದೊಡ್ಡ ದೊಡ್ಡ ಕನಸುಗಳು ಮತ್ತು ದೊಡ್ಡ ದೊಡ್ಡ ಆಸೆಗಳು ಹೃದಯವನ್ನು ಪ್ರವೇಶಿಸಿ ನಮ್ಮನ್ನು ಭಾರವಾಗಿಸುತ್ತದೆ. ನೀವು ದೊಡ್ಡ ವಿಷಯಗಳನ್ನು ಬಯಸಲು ಪ್ರಾರಂಭಿಸಿದಾಗ, ನಿಮ್ಮ ಸಣ್ಣ ಆಸೆಗಳನ್ನು ಪೂರೈಸುವ ಮಾರ್ಗವು ನಿರ್ಬಂಧಿಸಲ್ಪಡುತ್ತದೆ. ಉನ್ನತಿಯ ಕುರಿತಾದ ಆಸೆ ತಪ್ಪಲ್ಲ. ಆದರೆ ಅವು ದುರಾಸೆಯ ಮುಖವಾಡಗಳಾಗದಂತೆ ಎಚ್ಚರವಹಿಸೋಣ. ಸತ್ಯವೇದವು ಹೇಳುವಂತೆ ನಿಮಗಿರುವವುಗಳಲ್ಲಿ ತೃಪ್ತರಾಗಿರಿ ಎಂಬ ಮನಸ್ಸಿನೊಂದಿಗೆ, ಇರುವ ಜಾಗದಲ್ಲಿ ನೆಮ್ಮದಿಯಿಂದ ಬಾಳೋಣ.

 

ಹಣವು ಅಗತ್ಯವೇ. ಆದರೆ ಹಣವೇ ಜೀವನದ ಭದ್ರತೆ ಎಂದು ಭಾವಿಸುವುದು ಅನೇಕ ಪಾಪಗಳಿಗೆ ಕಾರಣವಾಗುತ್ತದೆ. ಮೇಲಿನ ವಾಕ್ಯದಲ್ಲಿ ನಿಮಗಿರುವವುಗಳಲ್ಲಿ ತೃಪ್ತರಾಗಿರಿ ಎಂದು ಮಾತ್ರ ಹೇಳದೇ ನಾನು ನಿನ್ನನ್ನು ಎಂದಿಗೂ ಕೈಬಿಡುವದಿಲ್ಲ ಎಂಬ ವಾಗ್ದಾನವೂ ಇದೆ. ಹೌದು, ಹಣವಲ್ಲ ದೇವರೇ

ನಮ್ಮ ಜೀವನದ ಭರವಸೆಯ ಆಧಾರವಾಗಿರಲಿ.

- Mrs. ರೂಬಿ ಅರುಣ್

 

ಪ್ರಾರ್ಥನಾ ಅಂಶ:

ರಾಕ್‌ಲ್ಯಾಂಡ್ ಬೈಬಲ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler Vdcasino vaycasino vaycasino giriş vaycasino güncel giriş matbet matbet giriş matbet güncel giriş matbet matbet giriş matbet güncel giriş betsmove betsmove giriş betsmove güncel giriş betsat betsat giriş betsat güncel giriş perabet perabet giriş perabet güncel giriş dumanbet giriş dumanbet dumanbet güncel giriş kingroyal kingroyal giriş kingroyal güncel giriş marsbahis marsbahis giriş marsbahis güncel giriş kingroyal kingroyal giriş kingroyal güncel giriş meritking meritking giriş meritking güncel giriş meritbet meritbet giriş meritbet güncel giriş nakitbahis nakitbahis giriş nakitbahis güncel giriş dumanbet dumanbet giriş dumanbet güncel giriş Holiganbet holiganbet giriş holiganbet güncel giriş bahissenin bahissenin giriş bahissenin güncel giriş bayconticasino bayconticasino giriş bayconticasino güncel giriş imajbet imajbet giriş imajbet güncel giriş prizmabet prizmabet giriş pashagaming pashagaming giriş pashagaming güncel giriş interbahis interbahis giriş interbahis güncel giriş jojobet superbetin matbet jojobet marsbahis marsbahis güncel marsbahis güncel giriş deneme bonusu deneme bonusu veren siteler bahsegel vaycasino vaycasino giriş perabet perabet giriş holiganbet holiganbet giriş holiganbet holiganbet giriş holiganbet holiganbet giriş jojobet jojobet giriş Superbetin superbetin giriş superbetin güncel giriş süperbetin