Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 05.07.2023
Share:

By Village Missionary Movement

Wednesday, 05-Jul-2023

ಧೈನಂದಿನ ಧ್ಯಾನ(Kannada) – 05.07.2023

 

ಕೃತಜ್ಞತೆಯೊಂದಿಗೆ...

 

"...ಆತನ ಉಪಕಾರಗಳಲ್ಲಿ ಒಂದನ್ನೂ ಮರೆಯಬೇಡ" - ಕೀರ್ತನೆ 103:2

 

ಒಬ್ಬ ಅಂಧ ಹುಡುಗನು ಪ್ರಮುಖ ಸ್ಥಳದಲ್ಲಿ ಕುಳಿತು ಭಿಕ್ಷೆ ಬೇಡುತ್ತಿದ್ದನು. ಅವನ ಪಕ್ಕದಲ್ಲಿದ್ದ ಬೋರ್ಡ್‌ನಲ್ಲಿ "ನಾನು ಕುರುಡನಾಗಿದ್ದೇನೆ ನನಗೆ ಸಹಾಯ ಮಾಡಿ" ಎಂದು ಬರೆಯಲಾಗಿತ್ತು. ಕೆಲವರು ಹಾಕಿದ್ದ ನಾಣ್ಯಗಳು ಅದರ ಬಳಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ದಾರಿಯಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬ ಕೆಲವು ನಾಣ್ಯಗಳನ್ನು ತೆಗೆದುಕೊಂಡು ತಾನು ಹಿಡಿದಿದ್ದ ಬಟ್ಟಲಿನಲ್ಲಿ ಹಾಕಿ ಹುಡುಗನ ಪಕ್ಕದ ಹಲಗೆಯ ಮೇಲೆ ಏನೋ ಬರೆದನು. ಸ್ವಲ್ಪ ಸಮಯದಲ್ಲೇ ಅವನ ಬಟ್ಟಲು ನಾಣ್ಯಗಳಿಂದ ತುಂಬಲು ಪ್ರಾರಂಭಿಸಿತು. ಕೆಲವರು ನಿಂತು ಅವನಿಗೆ ಹಣ ಕೊಟ್ಟು ಹೋದರು. ಸಂಜೆ ವೇಳೆಯಲ್ಲಿ ಆ ಬೋರ್ಡನ್ನು ಬದಾಲಾಯಿಸಿ ಬರೆದವನು ಏನಾಗುತ್ತಿದೆ ಎಂದು ತಿಳಿಯಲು ಬಂದನು. ಅವನ ಹೆಜ್ಜೆಯ ಸಪ್ಪಳವನ್ನು ಕೇಳಿ ಆ ಹುಡುಗನು ಅವನೇ ಎಂದು ತಿಳಿದು "ಸಾರ್ ನೀವು ಯಾರು? ನೀವು ಏನು ಬರೆದಿದ್ದೀರ? ನನಗೆ ಹಣ ಕೂಡುತ್ತಿದೆ" ಎಂದು ಕೇಳಿದನು. ಅದಕ್ಕೆ ಅವರು, "ನಾನು ಸತ್ಯವನ್ನೇ ಬರೆದಿದ್ದೇನೆ. ನೀನು ಬರೆದಿದ್ದನ್ನು ಸ್ವಲ್ಪ ಬದಲಾಯಿಸಿದ್ದೇನೆ" ಎಂದರು. ಆ ಹುಡುಗ, "ನೀವು ಏನು ಬರೆದಿದ್ದೀರಿ ಹೇಳಿ" ಎಂದನು. ಅದಕ್ಕೆ ಅವರು "ಈ ದಿನವು ಸಂತೋಷದ ದಿನ! ಅದ್ಭುತ ಸೌಂದರ್ಯದ ದಿನ! ನಾನು ಅದನ್ನು ನೋಡಲಾರೆ! ಆದರೆ ನೀವು ಈ ಜಗತ್ತಿನಲ್ಲಿ ಆನಂದಿಸಿರಿ. ನೀವು ಭಾಗ್ಯವಂತರು ಎಂದು ಬರೆದಿದ್ದೇನೆ" ಎಂದರು. ಇದನ್ನು ಓದಿದವರು ತಮ್ಮ ವಿಶೇಷತೆಯನ್ನು ಗ್ರಹಿಸಿದರು. ಅವರ ಹೃದಯಗಳು ಕೃತಜ್ಞತೆಯಿಂದ ತುಂಬಿದವು. ದೇವರು ಕೊಟ್ಟಿರುವ ಆರೋಗ್ಯಕ್ಕಾಗಿ ಮತ್ತು ಕೆಲಸಕ್ಕಾಗಿ ಕೃತಜ್ಞತೆ ಸಲ್ಲಿಸಿದರು.

 

ಹೌದು, ಅನೇಕ ಬಾರಿ ಕರ್ತನು ನಮಗೆ ಮಾಡಿದ ಕಾರ್ಯಗಳಿಗಾಗಿ ಕೃತಜ್ಞತೆ ಸಲ್ಲಿಸುವ ಗ್ರಹಿಕೆಯೂ ಸಹ ಇಲ್ಲದಿದ್ದೇವೆ. ಕರ್ತನಾದ ಯೇಸು ಕ್ರಿಸ್ತನು ಜೀವಿಸಿದ ದಿನಗಳಲ್ಲಿ, 10 ಕುಷ್ಠರೋಗಿಗಳು ಸ್ವಸ್ಥತೆಗಾಗಿ ಆತನ ಬಳಿಗೆ ಬಂದು, ಕರ್ತನೇ, ನಮ್ಮನ್ನು ಕರುಣಿಸು ಎಂದು ಕೂಗಿದರು. ಅದರಂತೆ ಯೇಸುವಿನ ಮಾತಿನ ಪ್ರಕಾರ 10 ಜನರು ಗುಣಹೊಂದಿದರು. ಆದರೆ 10 ಜನರಲ್ಲಿ ಒಬ್ಬರು ಮಾತ್ರವೇ ಹಿಂದಿರುಗಿ ಬಂದು ಯೇಸುವಿಗೆ ಕೃತಜ್ಞತೆ ಸಲ್ಲಿಸಿದರು.

 

ಹೌದು, ಪ್ರಿಯರೇ, ನಮ್ಮ ಕರ್ತನು ನಮ್ಮಿಂದ ಏನನ್ನೂ ನಿರೀಕ್ಷಿಸದೇ ತನ್ನನ್ನೇ ನಮಗಾಗಿ ಶಿಲುಬೆಯ ಮೇಲೆ ಒಪ್ಪಿಸಿಕೊಟ್ಟರು. ಆದರೆ ನಮ್ಮ ಬಳಿ ಕೃತಜ್ಞತೆಯನ್ನು ಮಾತ್ರ ನಿರೀಕ್ಷಿಸುತ್ತಾರೆ. ನಮ್ಮ ಕೈಯಲ್ಲಿ ಇರಿಸಲಾಗಿರುವ ಆಶೀರ್ವಾದ ಮತ್ತು ಸೌಕರ್ಯಗಳಿಗಾಗಿ ನಾವು ಪ್ರತಿದಿನವೂ ಕೃತಜ್ಞರಾಗಿರಬೇಕು. ಇಲ್ಲದ್ದಕ್ಕೆ ಹಂಬಲಿಸುವ ಬದಲು ನಮ್ಮಲ್ಲಿರುವದಕ್ಕೆ ಕೃತಜ್ಞತೆ ಸಲ್ಲಿಸೋಣ! ಒಳ್ಳೆಯ ಶರೀರಕ್ಕಾಗಿ, ಶರೀರದ ಕಾರ್ಯನಿರ್ವಹಣೆಗಾಗಿ, ಆತನಿಂದ ಪಡೆದ ರಕ್ಷಣೆ ಮತ್ತು ಅಭಿಷೇಕಕ್ಕಾಗಿ ನಾವು ಪ್ರತಿಕ್ಷಣವೂ ಕೃತಜ್ಞರಾಗಿರೋಣ.

- Mrs. ಶಕ್ತಿ ಶಂಕರ್ ರಾಜ್

 

ಪ್ರಾರ್ಥನಾ ಅಂಶ:

ಗ್ರಾಮೀಣ ಟಿವಿಯಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳ ಮೂಲಕ ಅನೇಕರು ದೇವರ ಪ್ರೀತಿಯನ್ನು ಸವಿಯಲು ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al