Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 03.07.2023
Share:

By Village Missionary Movement

Sunday, 02-Jul-2023

ಧೈನಂದಿನ ಧ್ಯಾನ(Kannada) – 03.07.2023

 

ಒಂದೇ ರಾತ್ರಿಯಲ್ಲಿ

 

“ಯೆಹೋವನೇ ನಿಮಗಾಗಿ ಯುದ್ಧಮಾಡುವನು; ನೀವಂತು ಸುಮ್ಮನೇ ಇರ್ರಿ ಎಂದು ಹೇಳಿದನು" - ವಿಮೋಚನಕಾಂಡ 14:14

 

ಅಮೆರಿಕಾ ಸಂಯುಕ್ತ ಸಂಸ್ಥಾನದ ರಾಜಧಾನಿ ವಾಷಿಂಗ್ಟನ್‌ನಲ್ಲಿ ಮಿಲ್ಲರ್ ಎಂಬ ದೇಶಭಕ್ತಿಯುಳ್ಳ ವ್ಯಾಪಾರಿ ವಾಸಿಸುತ್ತಿದ್ದನು. ಅವರ ವ್ಯವಹಾರದ ಕೆಲಸದ ಹೊರೆಯಿಂದಾಗಿ, ಅವರು ಆಲೂಗಡ್ಡೆಯನ್ನು ಬೆಳೆಸುವ ತಮ್ಮ ಕೃಷಿ ತೋಟದ ಕೆಲಸವನ್ನು ನೋಡಿಕೊಳ್ಳಲು ಕೆಲವು ರೈತರನ್ನು ನೇಮಿಸಿಕೊಂಡು ಗಮನಿಸುತ್ತಾ ಬಂದರು. ದೇವರ ಕಾರ್ಯಕ್ಕೆ ಮೊದಲ ಸ್ಥಾನ ಕೊಡುವುದು, ನಿತ್ಯವೂ ದೇವಾಲಯಕ್ಕೆ ಶ್ರದ್ಧೆಯಿಂದ ಹೋಗುವುದು ಮುಂತಾದ ಕೆಲಸಗಳನ್ನು ಬಿಡದೆ ಮಾಡುತ್ತಿದ್ದರು. ಒಂದು ಶನಿವಾರ, ಅವರು ತಮ್ಮ ಜಮೀನಿಗೆ ಭೇಟಿ ನೀಡಲು ಹೋದಾಗ, ಆಲೂಗಡ್ಡೆಯನ್ನು ನಾಶಪಡಿಸುವ ಒಂದು ರೀತಿಯ ಕೀಟವು ಬಂದು ತೋಟವನ್ನು ತುಂಬಿರುವುದನ್ನು ನೋಡಿದರು. ಕೀಟನಾಶಕಗಳನ್ನು ಬಳಸಿದರೆ ಕೀಟಗಳು ಸಾಯುತ್ತವೆ; ಆದರೆ ಆ ಕೆಲಸ ಮುಗಿಸಲು ಎರಡು ದಿನ ಬೇಕಾಗುವ ಕಾರಣ ತಾನು ದೇವಾಲಯಕ್ಕೆ ಹೋಗಲು ಸಾಧ್ಯವಿಲ್ಲ ಎಂದು ಅರಿತು, ಕ್ರಿಮಿನಾಶಕವನ್ನು ಹಾಕದೆ ಎಂದಿನಂತೆ ಭಾನುವಾರ ದೇವಾಲಯಕ್ಕೆ ಹೋದರು.

 

ಎರಡು ದಿನಗಳ ನಂತರ ಅವರು ಕೀಟಗಳಿಂದ ನಾಶವಾದ ತೋಟಕ್ಕೆ ಭೇಟಿ ನೀಡಿದರು. ಎಂಥಾ ಆಶ್ಚರ್ಯ! ಆಲೂಗಡ್ಡೆ ಗಿಡಗಳು ಅವನು ನಿರೀಕ್ಷಿಸಿದ್ದಕ್ಕಿಂತ ದೊಡ್ಡದಾಗಿ ಬೆಳೆದಿದ್ದವು. ಇದು ಹೇಗೆ ಸಂಭವಿಸಿತು ಎಂದು ಅವರಿಗೆ ಅರ್ಥವಾಗಲಿಲ್ಲ. ಬೆಳೆಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ಬೃಹತ್ ಗಾತ್ರದ ಹುಳುಗಳು ಆಲೂಗೆಡ್ಡೆಯನ್ನು ಹಾಳು ಮಾಡುವ ಹುಳುಗಳನ್ನು ಹಿಡಿದು ತಿನ್ನುತ್ತಿರುವುದನ್ನು ಕಂಡರು. ಅದರಲ್ಲಿ ಎರಡು ಕೀಟಗಳನ್ನು ಹಿಡಿದು ಕೃಷಿ ಸಂಶೋಧನಾ ಕೇಂದ್ರಕ್ಕೆ ಕಳುಹಿಸಿದಾಗ, ಕೆಲವೇ ದಿನಗಳಲ್ಲಿ ಅದಕ್ಕೆ ಉತ್ತರ ಸಿಕ್ಕಿತು. "ಈ ಹುಳುಗಳು ಅಮೆರಿಕಾದಲ್ಲಿ ಇಲ್ಲದವು. ಇವು ಆಗ್ನೇಯ ಏಷ್ಯಾದಲ್ಲಿ ಮಾತ್ರ ಕಂಡುಬರುತ್ತವೆ. ಒಂದೇ ರಾತ್ರಿಯಲ್ಲಿ ಸುಮಾರು 6000 ಕಿಮೀ ದೂರದಿಂದ ನಿಮ್ಮ ಆಲೂಗಡ್ಡೆಗಳನ್ನು ರಕ್ಷಿಸಲು ದೇವರು ಇವುಗಳನ್ನು ಕಳುಹಿಸಿದ್ದಾರೆ"

 

ಹೌದು, ಯೇಸು ಕ್ರಿಸ್ತನು ಹೇಳಿದಂತೆ, "ನೀವು ಮೊದಲು ದೇವರ ರಾಜ್ಯಕ್ಕಾಗಿಯೂ ನೀತಿಗಾಗಿಯೂ ತವಕಪಡಿರಿ. ಇವುಗಳ ಕೂಡ ಅವೆಲ್ಲವೂ ನಿಮಗೆ ದೊರಕುವವು. ಎಂಬ ವಾಕ್ಯದ ಪ್ರಕಾರ ನಾವು ಕರ್ತನ ಕಾರ್ಯಗಳಿಗೆ ಮೊದಲ ಸ್ಥಾನವನ್ನು ಮತ್ತು ಪ್ರಾಮುಖ್ಯತೆಯನ್ನು ನೀಡುವಾಗ, ನಮ್ಮ ಎಲ್ಲಾ ಲೌಕಿಕ ಕಾರ್ಯಗಳಲ್ಲಿ ದೇವರು ಅದ್ಭುತಗಳನ್ನು ಮಾಡಲು ಸಾಧ್ಯ. ಕರ್ತನು ನಮ್ಮ ಜೀವನದಲ್ಲೂ ಒಂದೇ ರಾತ್ರಿಯಲ್ಲಿ ಶತ್ರುಗಳನ್ನು ಸಂಹಾರ ಮಾಡಿ, ರಕ್ಷಣೆಯನ್ನು ದಯಪಾಲಿಸುತ್ತಾರೆ. ವಿಮೋಚನಕಾಂಡ 12ನೇ ಅಧ್ಯಾಯದಲ್ಲಿ, ಹೇರಳವಾಗಿ ಅಭಿವೃದ್ಧಿಯಾಗಿದ್ದ ಸಿರಿಯಾದವರ ಸೈನ್ಯವನ್ನು ಒಂದೇ ರಾತ್ರಿಯಲ್ಲಿ ಒಂದು ದೂತನನ್ನು ಎಬ್ಬಿಸಿ 1,85,000 ಜನರನ್ನು ನಾಶ ಮಾಡಿದರು. ತಮ್ಮ ಜನರಿಗೆ ವಿರುದ್ಧವಾಗಿ ಎದ್ದ ಅರಸರಿಬ್ಬರನ್ನೂ ಒಂದೇ ರಾತ್ರಿಯಲ್ಲಿ ಕಡಜದ ಹುಳಗಳನ್ನು ಕಳುಹಿಸಿ ಓಡಿಸಿ ಬಿಟ್ಟರು. (ಯೆಹೋಶುವ 24:12). ನಾವು ಕೂಡ ದೇವರಿಗೆ ಮೊದಲ ಸ್ಥಾನವನ್ನು ನೀಡೋಣ. ನಮ್ಮ ಜೀವನದಲ್ಲಿ ಬರುವ ಸಮಸ್ಯೆಗಳನ್ನು ಸುಲಭವಾಗಿ ಗೆಲ್ಲೋಣ. ಹಲ್ಲೇಲೂಯ!!

- Bro. ಭಾಗ್ಯನಾಥನ್

 

ಪ್ರಾರ್ಥನಾ ಅಂಶ:

ಆಮೆನ್ ಕಿಡ್ಸ್ ಚಾನೆಲ್‌ ಪ್ರಾರಂಭಿಸಲು ಮತ್ತು ಸಿದ್ಧತಾ ಕಾರ್ಯಗಳಿಗಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler Vdcasino vaycasino vaycasino giriş vaycasino güncel giriş matbet matbet giriş matbet güncel giriş matbet matbet giriş matbet güncel giriş betsmove betsmove giriş betsmove güncel giriş betsat betsat giriş betsat güncel giriş perabet perabet giriş perabet güncel giriş dumanbet giriş dumanbet dumanbet güncel giriş kingroyal kingroyal giriş kingroyal güncel giriş marsbahis marsbahis giriş marsbahis güncel giriş kingroyal kingroyal giriş kingroyal güncel giriş meritking meritking giriş meritking güncel giriş meritbet meritbet giriş meritbet güncel giriş nakitbahis nakitbahis giriş nakitbahis güncel giriş dumanbet dumanbet giriş dumanbet güncel giriş Holiganbet holiganbet giriş holiganbet güncel giriş bahissenin bahissenin giriş bahissenin güncel giriş bayconticasino bayconticasino giriş bayconticasino güncel giriş imajbet imajbet giriş imajbet güncel giriş prizmabet prizmabet giriş pashagaming pashagaming giriş pashagaming güncel giriş interbahis interbahis giriş interbahis güncel giriş jojobet superbetin matbet jojobet marsbahis marsbahis güncel marsbahis güncel giriş deneme bonusu deneme bonusu veren siteler bahsegel vaycasino vaycasino giriş perabet perabet giriş holiganbet holiganbet giriş holiganbet holiganbet giriş holiganbet holiganbet giriş jojobet jojobet giriş Superbetin superbetin giriş superbetin güncel giriş süperbetin