By Village Missionary Movement
Sunday, 02-Jul-2023ಧೈನಂದಿನ ಧ್ಯಾನ(Kannada) – 02.07.2023 (Kids Special)
ದೇವರು ನೋಡಿಕೊಳ್ಳುತ್ತಾರೆ
"ಆಕಾಶದಲ್ಲಿ ಹಾರಾಡುವ ಹಕ್ಕಿಗಳನ್ನು ನೋಡಿರಿ; ಅವು ಬಿತ್ತುವದಿಲ್ಲ, ಕೊಯ್ಯುವದಿಲ್ಲ, ಕಣಜಗಳಲ್ಲಿ ತುಂಬಿಟ್ಟುಕೊಳ್ಳುವದಿಲ್ಲ; ಆದಾಗ್ಯೂ ಪರಲೋಕದಲ್ಲಿರುವ ನಿಮ್ಮ ತಂದೆಯು ಅವುಗಳನ್ನು ಸಾಕಿ ಸಲಹುತ್ತಾನೆ; ಅವುಗಳಿಗಿಂತ ನೀವು ಹೆಚ್ಚಿನವರಲ್ಲವೋ?” - ಮತ್ತಾಯ 6:26
ಮುದ್ದು ಪುಟಾಣಿಗಳೇ! ಹೇಗಿದ್ದೀರ. ನಿಮಗೆ ಹೊಸ class, ಹೊಸ Teacher, ಹೊಸ friend ಸಿಕ್ಕಿದ್ದೀರಾ? ತುಂಬಾ ಸಂತೋಷವಾಗಿದ್ದೀರಾ? ನನ್ನ ಬಳಿ ಒಳ್ಳೆಯ Dress ಇಲ್ಲವಲ್ಲಾ! ನನಗೆ ಬಯಸಿದ ಆಹಾರ ಸಿಗುತ್ತಿಲ್ಲವಲ್ಲಾ. ಈ ವರ್ಷ ನನ್ನ education ಅನ್ನು ಹೇಗೆ ಮುಗಿಸುತ್ತೇನೋ ಎಂದು ಚಿಂತೆ ಮಾಡುತ್ತಿದ್ದೀರಾ? Don't worry ನಿಮ್ಮ ಪರಲೋಕದ ತಂದೆ ಎಲ್ಲವನ್ನೂ ನೋಡಿಕೊಳ್ಳುತ್ತಾರೆ. Ok ಪುಟಾಣಿಗಳೇ ಕಥೆ ಕೇಳೋಣ್ವಾ?
ಸುಂದರವಾದ ಗದ್ದೆಗಳು, ಆಡುಗಳು, ಹಸುಗಳು, ಕೋಳಿಗಳು ಮತ್ತು ಬಾತುಕೋಳಿಗಳಿಂದ ಹಳ್ಳಿಯ ಜೀವನವು ಎಷ್ಟು ಸುಂದರವಾಗಿರುತ್ತೆ ಅಲ್ವಾ? ಒಂದು ಮನೆಯಲ್ಲಿ ಅನೇಕ ಕೋಳಿಗಳಿದ್ದವು. ಅವು ಹತ್ತಿರದ ಹೊಲಗಳಿಗೆ ಹೋಗಿ ಅಕ್ಕಿ ಕಾಳುಗಳನ್ನು ಕುಕ್ಕಿ ಕುಕ್ಕಿ ತಿಂದುಬಿಟ್ಟು ಜಮ್ ಎಂದು ನಿದ್ದೆಮಾಡಿಬಿಡುತ್ತಿದ್ದವು. ಒಂದು ದಿನ ಆ ಹೊಲದ ಮಾಲೀಕನು ಬಂದು ಹೊಲವನ್ನು ಸುತ್ತಿ ನೋಡಿದರು. ಬೆಳೆ ಚೆನ್ನಾಗಿ ಬೆಳೆದು ಕೊಯ್ಲಿಗೆ ಸಿದ್ಧವಾಗಿದೆ. ಆದ್ದರಿಂದ ಇನ್ನೆರಡು ದಿನದಲ್ಲಿ ಹೊಲದಲ್ಲಿರುವ ಭತ್ತವನ್ನೆಲ್ಲಾ ಕೊಯ್ದು ಬಿಡೋಣ ಎಂದು ಮೊಬೈಲ್ ನಲ್ಲಿ ಪತ್ನಿಯೊಂದಿಗೆ ಮಾತನಾಡುತ್ತಿರುವುದನ್ನು ಕೋಳಿಮರಿಗಳು ಕೇಳಿಸಿಕೊಂಡವು.
ಕೋಳಿಮರಿಗಳು ಅಮ್ಮ, ಅಮ್ಮ ಎಂದು ಆತಂಕದಿಂದ ಕರೆಯುತ್ತಾ ಗುಡು ಗುಡು ಎಂದು ಓಡಿದವು. ಯಾಕೆ ಇಷ್ಟು ವೇಗವಾಗಿ ಓಡಿಬರುತ್ತಿದ್ದೀರ ಏನಾಯಿತು ಎಂದು ತಾಯಿ ಕೋಳಿ ಕೇಳಿದಾಗ ಕೋಳಿಮರಿಗಳು ಹೊಲದ ಯಜಮಾನನು ಮಾತಾಡುತ್ತಿದ್ದ ಮಾತುಗಳನ್ನು ಆತಂಕದಿಂದ ತಾಯಿ ಕೋಳಿಗೆ ಹೇಳಿದವು. ಸರಿ ಇನ್ನೂ ಎರಡು ದಿನ ಇದೆಯಲ್ಲಾ ನೋಡಿಕೊಳ್ಳೋಣ ಎಂದು ತಾಯಿ ಕೋಳಿ ಹೇಳಿಬಿಟ್ಟಿತು. ಎರಡು ದಿನಗಳೂ ಕಳೆದವು. ಕೋಳಿ ಮರಿಗಳಿಗೆ ತುಂಬಾ ಚಿಂತೆ. ಹೊಟ್ಟೆತುಂಬ ತಿನ್ನುತ್ತಿದ್ದ ಆಹಾರ ಈಗ ಇಲ್ಲದಂತಾಯಿತೇ! ಕೋಳಿಗಳು ಅಮ್ಮಾ ಅಮ್ಮಾ ಎಂದು ಕರೆದು ನಾಳೆ ಏನು ತಿನ್ನಬೇಕೆಂದು ಕೇಳುತ್ತಿದ್ದವು. ತಾಯಿ ಕೋಳಿ ಅವುಗಳನ್ನು ಮತ್ತೊಂದು ಸ್ಥಳಕ್ಕೆ ಕರೆದೊಯ್ಯಿತು. ಅಲ್ಲಿ ಹೊಟ್ಟೆ ತುಂಬ ತಿನ್ನುತ್ತಿದ್ದ ಕೋಳಿಗಳಿಗೆ ಇಂಥದ್ದೊಂದು ಸ್ಥಳವಿದೆಯಾ ಎಂದು ಆಶ್ಚರ್ಯವಾಯಿತು. ತಾಯಿ ಇರುವಾಗ ನಮಗೇನೂ ಚಿಂತೆಯಿಲ್ಲ ಎಂದು ಕೋಳಿಮರಿಗಳು ಸಂತೋಷಪಟ್ಟವು.
ಏನು ಪುಟಾಣಿಗಳೇ! ಕೋಳಿಯೇ ತನ್ನ ಮರಿಗಳನ್ನು ಅಷ್ಟು ಚೆನ್ನಾಗಿ ಸಾಕಿದರೆ, ನಮ್ಮ ಪರಲೋಕದ ತಂದೆಯು ನಮ್ಮ ಕಾರ್ಯಗಳನ್ನು ನೋಡಿಕೊಳ್ಳುವುದಿಲ್ಲವೇ? ಖಂಡಿತವಾಗಿಯೂ ನಿಮ್ಮ ಅಗತ್ಯಗಳನ್ನು ಪೂರೈಸುತ್ತಾರೆ. Ok ಪುಟಾಣಿಗಳೇ ಚಿಂತಿಸಬೇಡಿ. Bye. . .
- Sis ದೆಬೋರಾ
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482