By Village Missionary Movement
Friday, 30-Jun-2023ಧೈನಂದಿನ ಧ್ಯಾನ(Kannada) – 01.07.2023
ಸುವಾರ್ತೆ ಪ್ರಕಟಿಸುವ ಕೆಲಸ
"ಹಾಗೆಯೇ ನಿಮ್ಮಲ್ಲಿ ಯಾವನೇ ಆಗಲಿ ತನಗಿರುವದನ್ನೆಲ್ಲಾ ಬಿಟ್ಟುಬಿಡದೆ ಹೋದರೆ ಅವನು ನನ್ನ ಶಿಷ್ಯನಾಗಿರಲಾರನು" - ಲೂಕ 14:33
ಲಂಡನ್ ನಿಂದ ಪ್ರಕಟವಾಗುವ ಪತ್ರಿಕೆಯೊಂದರಲ್ಲಿ ಜಾಹೀರಾತೊಂದು ಈ ರೀತಿಯಾಗಿ ಕಾಣಿಸಿಕೊಂಡಿತು. ಹೆಚ್ಚಿನ ಅಪಾಯವಿರುವ ಕತ್ತಲೆಯ ಪ್ರದೇಶಗಳಲ್ಲಿ ಕೆಲಸ ಮಾಡಲು ಜನರ ಅಗತ್ಯವಿದೆ. ಪ್ರತಿ ವಿಜೇತರಿಗೆ ಸೂಕ್ತ ಬಹುಮಾನ ಮತ್ತು ಉನ್ನತಿಯನ್ನು ನೀಡಲಾಗುವುದು ಎಂದು ಹೇಳಲಾಗಿತ್ತು. ಈ ಜಾಹೀರಾತನ್ನು ನೀಡಿದ್ದವರು ಸರ್ ಆರ್ಟಿಕ್ ಪ್ರಾಂತ್ಯದ ಸಂಶೋಧಕ ಸರ್. ಕರ್ನಲ್ ಶೇಕಿಲ್ಸ್ಟನ್. ಈ ಜಾಹೀರಾತನ್ನು ನೋಡಿದ ಸಾವಿರಾರು ಯುವಕರು ಈ ಬಗ್ಗೆ ವಿಚಾರಿಸಿ ಆರ್ಟಿಕ್ ಪ್ರದೇಶಕ್ಕೆ ಬರಲು ಆಸಕ್ತಿ ವ್ಯಕ್ತಪಡಿಸಿದರು. ಈ ಜಾಹೀರಾತನ್ನು ಮತ್ತು ಇದರಲ್ಲಿ ಆಸಕ್ತಿಯನ್ನು ವ್ಯಕ್ತಪಡಿಸಿದ ಯುವಜನರನ್ನು ಉಲ್ಲೇಖಿಸಿ, ಲಾರೆನ್ಸ್ ತಮ್ಮ "Faithful" ಪುಸ್ತಕದಲ್ಲಿ ಬರೆದಿದ್ದಾರೆ, "ಕಠಿಣವಾದ ಸ್ಥಳಗಳಲ್ಲಿ ಸೇವೆ ಸಲ್ಲಿಸಲು ಮತ್ತು ದೇವರ ರಾಜ್ಯವನ್ನು ನಿರ್ಮಿಸಲು ಜನರ ಅಗತ್ಯವಿದೆ ಎಂದು, ನೀವು ಮಾಡುವ ಕೆಲಸದಿಂದ ತಕ್ಷಣದ ಫಲಿತಾಂಶಗಳನ್ನು ನಿರೀಕ್ಷಿಸಲಾಗುವುದಿಲ್ಲ ಎಂದು, ನೀವು ಅನೇಕ ತ್ಯಾಗಗಳನ್ನು ಮಾಡಬೇಕಾಗಬಹುದು ಎಂದು, ಒಂದು ವೇಳೆ ನಿಮ್ಮ ಜೀವವನ್ನು ಸಹ ಕಳೆದುಕೊಳ್ಳಬಹುದು ಎಂದು ಯೇಸು ಕ್ರಿಸ್ತನು ಒಂದು ಜಾಹೀರಾತು ನೀಡಿದ್ದರೆ ಅದಕ್ಕೆ ಎಷ್ಟು ಜನರು ಮುಂದೆ ಬರುತ್ತಾರೆ?" ಎಂದು!
"ಯಾವನನ್ನು ಕಳುಹಿಸಲಿ, ಯಾವನು ನಮಗೋಸ್ಕರ ಹೋಗುವನು" ಎಂಬ ಕರ್ತನ ನುಡಿ ಇಂದು ಅನೇಕ ಕಿವಿಗಳಲ್ಲಿ ಗಟ್ಟಿಯಾಗಿ ಕೇಳುತ್ತಿದ್ದರೂ, ನಾವು ಏನೂ ಕೇಳದವರಂತೆ ಮೌನವಾಗಿದ್ದುಬಿಡುತ್ತೇವೆ. ಕರ್ತನು ತನ್ನ ತೋಟದಲ್ಲಿ ಕೆಲಸ ಮಾಡಲು ಅನೇಕ ಸೇವಕರನ್ನು ಹುಡುಕುತ್ತಿದ್ದಾರೆ. ಪ್ರತಿದಿನ "ಕೇವಲ ಒಂದು ಗಂಟೆಯಾದರೂ ಕೆಲಸ ಮಾಡಿದರೆ ಸಾಕು" ಎಂಬ ಎನ್ನುವ ಮಟ್ಟಿಗೆ ಜನರನ್ನು ದೇವರು ಹುಡುಕುತ್ತಿದ್ದಾರೆ. ಪೂರ್ಣ ಸಮಯವೋ ಅಥವಾ ಸಾಧ್ಯವಾದಷ್ಟು ಮಟ್ಟಿಗೋ ಯಾವುದಾದರೊಂದು ಪ್ರಾಂತ್ಯದಲ್ಲಿ ದೇವರ ಸೇವೆಯನ್ನು ಮಾಡಬೇಕೆಂದು ನಮ್ಮ ಬಳಿ ನಿರೀಕ್ಷಿಸುತ್ತಿದ್ದಾರೆ. ಸುವಾರ್ತೆ ಪ್ರಕಟಿಸುವ ವಿಷಯದಲ್ಲಿ ನಾವು ಆಲಸ್ಯ ಮಾಡಬಾರದು.
ಇವು ಅಂತ್ಯದಿನಗಳು ಎಂದು ನಾವು ಅನೇಕ ಪ್ರಸಂಗಗಳಲ್ಲಿ ಕೇಳಿದ್ದೇವೆ. ಈ ದಿನಗಳಲ್ಲಿ ನಾವು ಯೇಸುವಿಗಾಗಿ ಏನು ಮಾಡುತ್ತೇವೊ ಅದೇ ನಮಗೆ ನಿತ್ಯತ್ವದಲ್ಲಿ ಪ್ರತಿಫಲವಾಗಿ ರುತ್ತದೆ. ಲೋಕ ಮತ್ತು ಪ್ರಾಪಂಚಿಕ ಕಾರ್ಯಗಳ ಹಿಂದೆ ಶ್ರದ್ಧೆಯಿಂದ ಓಡುತ್ತಿರುವ ನಮ್ಮ ಪಾದಗಳು ಸುವಾರ್ತೆಯ ಕೆಲಸಕ್ಕಾಗಿ ಸ್ವಲ್ಪಮಟ್ಟಿಗಾದರೂ ಕೆಲಸ ಮಾಡುತ್ತಿವೆಯೇ? ಅಂತ್ಯದಿನಗಳಲ್ಲಿರುವ ನಾವು ದೇವರ ಕೆಲಸವನ್ನು ಮಾಡಲು ಸ್ವಲ್ಪ ಹೆಚ್ಚಾಗಿ ಪ್ರಯತ್ನಿಸೋಣ.
- Bro. ಜೇಕಬ್ ಶಂಕರ್
ಪ್ರಾರ್ಥನಾ ಅಂಶ:
ಈ ತಿಂಗಳು ಪೂರ್ತಿಯಾಗಿ ನಡೆಯುವಂತಹ ಸೇವೆಗಳಲ್ಲಿ ದೇವರ ಹಸ್ತವು ಜೊತೆಯಿದ್ದು ನಡೆಸುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482