Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 30.06.2023
Share:

By Village Missionary Movement

Thursday, 29-Jun-2023

ಧೈನಂದಿನ ಧ್ಯಾನ(Kannada) – 30.06.2023

 

ದೇವರಾ? ಮನುಷ್ಯನಾ?

 

"…ನೀನು… ಕಪಟಿಗಳಂತೆ ಇರಬೇಡ;..." - ಮತ್ತಾಯ 6: 5

 

ಒಂದಾನೊಂದು ಕಾಲದಲ್ಲಿ ಒಂದು ಕ್ರೈಸ್ತ ಕುಟುಂಬದವರೊಂದಿಗೆ ಭಕ್ತಸಿಂಗ್ ಎಂಬ ದೇವಮನುಷ್ಯನೊಬ್ಬರು ವಾಸಿಸುತ್ತಿದ್ದರು. ಆಗ ಆ ಮನೆಯಲ್ಲಿ ಬೆಳಗ್ಗೆ ಮತ್ತು ಸಂಜೆ ನಿತ್ಯವೂ ಕ್ರಮವಾಗಿ ಕುಟುಂಬ ಪ್ರಾರ್ಥನೆಗಳು ನಡೆಯುತ್ತಿದ್ದವು. ಇದರಲ್ಲಿ ಕೆಲಸದವರು ಸಹ ಭಾಗವಹಿಸುತ್ತಿದ್ದರು. ಹೀಗಾಗಿ ಆ ಸೇವಕರಿಗೆ ಈ ಕುಟುಂಬವನ್ನು ನೋಡಿ ತುಂಬಾ ಖುಷಿಯಾಯಿತು. ಆದರೆ ಒಂದು ದಿನ ಒಬ್ಬ ಕೆಲಸಗಾರ ಸೇವಕರ ಬಳಿ ಈ ರೀತಿ ಹೇಳಿದನು, "ಈ ಮನೆಗೆ ಅತಿಥಿಗಳು ಬಂದಾಗ ಮಾತ್ರವೇ ಕುಟುಂಬ ಪ್ರಾರ್ಥನೆ ನಡೆಯುತ್ತದೆ, ಅವರು ಹೋದ ನಂತರ ಏನೂ ಇರುವುದಿಲ್ಲ" ಎಂದನು. ಮನುಷ್ಯರು ಮೆಚ್ಚಿಕೊಳ್ಳಬೇಕೆಂದು ಯಾವ ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ತೊಡಗಿದರೂ ದೇವರು ಅದನ್ನು ಅಂಗೀಕರಿಸುವುದಿಲ್ಲ. ಏಕೆಂದರೆ ಉದ್ದೇಶವೇ ತಪ್ಪಾಗಿದೆ!

 

ಮನುಷ್ಯನ ಹೃದಯಾಂತರಾಳದಲ್ಲಿ ಹೆಮ್ಮೆ ಮತ್ತು ಖ್ಯಾತಿಯನ್ನು ಬಯಸುವ ಸ್ಥಿತಿಯನ್ನು ದೇವರು ತಿಳಿದಿರುವ ಕಾರಣ, ಅವರು ಪ್ರತಿಯೊಂದು ವಿಷಯವನ್ನು ಸತ್ಯವೇದದಲ್ಲಿ ನಿರ್ದಿಷ್ಟವಾಗಿ ಬರೆದು ನಮ್ಮನ್ನು ಎಚ್ಚರಿಸುತ್ತಿದ್ದಾರೆ. ತಮ್ಮ ದಾನಧರ್ಮಗಳನ್ನು ನೋಡಿ ಜನರು ತಮ್ಮನ್ನು ಹೊಗಳಬೇಕೆಂದು ಬಯಸುತ್ತಾರೆ. ಆದರೆ ಕ್ರೈಸ್ತರಾಗಿರುವ ನಾವು ನಮ್ಮ ಪ್ರಾರ್ಥನೆಯನ್ನು ಸಹ ಮನುಷ್ಯರು ನೋಡಬೇಕೆಂದು ಬಯಸುತ್ತೇವೆ. ಎಂಥಾ ಒಂದು ಶೋಚನೀಯವಾದ ಆಧ್ಯಾತ್ಮಿಕ ಜೀವನ ನೋಡುದ್ರಾ? ನಾವು ಈ ರೀತಿಯ ಆಲೋಚನೆಯೊಂದಿಗೆ ಇದ್ದರೆ, ನಮ್ಮ ಪ್ರಾರ್ಥನೆಯ ಸಮಯದಲ್ಲಿ ನಮ್ಮ ಮನೋನೇತ್ರಗಳ ಮುಂದೆ ದೇವರು ಇರುತ್ತಾರಾ? ಅಥವಾ ಆ ಪ್ರಾರ್ಥನಾ ಗುಂಪಿನಲ್ಲಿ ನಿಮ್ಮ ಸುತ್ತಲಿನ ಜನರು ಇರುತ್ತಾರಾ? ಕರ್ತನಿದ್ದರೆ ಆ ಪ್ರಾರ್ಥನೆಯಲ್ಲಿ ವ್ಯರ್ಥವಾದ ಮಾತುಗಳಾಗಲಿ, ಹೆಚ್ಚಾದ ಮಾತುಗಳಾಗಲಿ, ಅಲಂಕಾರದ ಮಾತುಗಳಾಗಲಿ ಇರುವುದಿಲ್ಲ. ಆತ್ಮ ಮಾತ್ರ ದೇವರನ್ನು ನೋಡಿ ಮೊರೆಯಿಡುತ್ತದೆ. ಸುತ್ತಮುತ್ತಲಿನ ಜನರ ಬಗ್ಗೆ ಯಾವುದೇ ಆಲೋಚನೆ ಇರುವುದಿಲ್ಲ.

 

ಪ್ರಾರ್ಥನೆ ಮಾಡಲು ದೇವರು ನಮಗೆ ಕಲಿಸಿಕೊಡುವ ವಿಧಾನ ಯಾವುದು? "ನೀನು ಪ್ರಾರ್ಥನೆ ಮಾಡುವಾಗ ನಿನ್ನ ಕೋಣೆಯೊಳಕ್ಕೆ ಹೋಗಿ ಬಾಗಿಲನ್ನು ಮುಚ್ಚಿ ಅಂತರಂಗದಲ್ಲಿರುವ ನಿನ್ನ ತಂದೆಗೆ ಪ್ರಾರ್ಥನೆಮಾಡು; ಆಗ ಅಂತರಂಗದಲ್ಲಿ ನೋಡುವ ನಿನ್ನ ತಂದೆಯು ಬಹಿರಂಗವಾಗಿ ನಿನಗೆ ಪ್ರತಿಫಲ ಕೊಡುವನು" ಇದನ್ನೇ ದೇವರು ನಿರೀಕ್ಷಿಸುತ್ತಿದ್ದಾರೆ. ಆದರೂ, ಇಂತಹ ವೈಯಕ್ತಿಕ ಪ್ರಾರ್ಥನೆಯ ಬಗ್ಗೆ ಹೆಮ್ಮೆ ಪಡದಂತೆ ಎಚ್ಚರಿಕೆ ವಹಿಸಬೇಕು. “ಇಂದು ಇಷ್ಟು ಗಂಟೆಗಳು ನಾನು ಪ್ರಾರ್ಥನೆ ಮಾಡಿಬಿಟ್ಟೆ” ಎಂದು ಇತರರಿಗೆ ತಿಳಿಯುವಂತೆ ಹೆಮ್ಮೆಯಿಂದ ಮಾತನಾಡದಂತೆ ಎಚ್ಚರ ವಹಿಸೋಣ. ಒಂದು ವೇಳೆ ನಾವು ಮಾತನಾಡುತ್ತಿರುವ ಆ ವ್ಯಕ್ತಿಗೆ ಈ ವಿಷಯವು ಭಕ್ತಿ ವೃದ್ಧಿಯನ್ನುಂಟುಮಾಡಿ ಅವರ ಪ್ರಾರ್ಥನಾ ಜೀವನವನ್ನು ತಟ್ಟಿ ಎಬ್ಬಿಸುವುದಾದರೆ ಅದನ್ನು ಬಹುತಾಳ್ಮೆಯಿಂದ ಅವರಿಗೆ ಹೇಳುವುದರಲ್ಲಿ ಯಾವ ತಪ್ಪೂ ಇಲ್ಲ. ಆದರೆ "ನಾನು ಒಳಕೋಣೆಯಲ್ಲಿ ವೈಯಕ್ತಿಕವಾಗಿ ಮಾಡಿದ ಪ್ರಾರ್ಥನೆಯು ನಾಲ್ಕು ಜನಕ್ಕೆ ಗೊತ್ತಾಗದೇ ಹೋಗಿಬಿಡಬಾರದು" ಎಂಬ ಉದ್ದೇಶದಿಂದ ಹೇಳುವುದಾದರೆ ಅದು ಕೂಡ ಸೈತಾನನ ಒಂದು ವಂಚನೆಯೇ.

 

ಪ್ರಿಯರೇ! ನಾವು ಮನುಷ್ಯರ ಮುಂದೆ ನಮ್ಮನ್ನು ಹೆಚ್ಚಿಸಿಕೊಳ್ಳಲು ಬಯಸಬಾರದು. ಸತ್ಯವೇದವು ಹೇಳುತ್ತದೆ, "ತನ್ನನ್ನು ತಾನೇ ಹೊಗಳಿಕೊಳ್ಳುವವನು ಯೋಗ್ಯ ನಲ್ಲ; ಕರ್ತನು ಯಾರನ್ನು ಹೊಗಳುತ್ತಾನೋ ಅವನೇ ಯೋಗ್ಯನು." (2 ಕೊರಿಂ. 10:18) ನೀವು ಯಾವ ಪಕ್ಷ?

 

ನೀವು ದೇವರ ಬಳಿ ಪ್ರಾರ್ಥಿಸುತ್ತಿದ್ದೀರಾ ಅಥವಾ ಮನುಷ್ಯರ ಬಳಿ ಪ್ರಾರ್ಥಿಸುತ್ತಿದ್ದೀರಾ?

- ಶ್ರೀಮತಿ ಅನಿತಾ ಅಲಗರಸ್ವಾಮಿ

 

ಪ್ರಾರ್ಥನಾ ಅಂಶ:

ನಮ್ಮ ಕ್ಯಾಂಪಸ್ ಒಳಗೆ ಸಿಮೆಂಟ್ ರಸ್ತೆ ಹಾಕುವುದು ಅತೀ ಅಗತ್ಯವಾಗಿದೆ. ಅಗತ್ಯಗಳು ಪೂರೈಸಲ್ಪಡುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş