By Village Missionary Movement
Wednesday, 28-Jun-2023ಧೈನಂದಿನ ಧ್ಯಾನ(Kannada) – 29.06.2023
ಬಡಗಿ
"ಹಾಗೆಯೇ ನಾವೆಲ್ಲರು ಒಟ್ಟಾಗಿ ಕ್ರಿಸ್ತನಲ್ಲಿ ಒಂದೇ ದೇಹವಾಗಿದ್ದು ಒಬ್ಬೊಬ್ಬರಾಗಿ ಪರಸ್ಪರ ಅಂಗಗಳಾಗಿದ್ದೇವೆ” - ರೋಮಾ 12:5
ಮರಗೆಲಸಗಳು ನಡೆಯುವ ಬಡಗಿಯ ಅಂಗಡಿ ಅದು. ಬಡಗಿ ಯಾವುದೋ ಕೆಲಸದ ನಿಮಿತ್ತವಾಗಿ ಹೊರಗೆ ಹೋದನು. ಅವರು ಹೋಗಿದ್ದೇ ತಡಾ, ಅಲ್ಲಿರುವ ಎಲ್ಲಾ ಸಾಧನಗಳು ಸೇರಿ ನಮ್ಮಲ್ಲಿ ಯಾರು ದೊಡ್ಡವನು? ಎಂದು ಒಬ್ಬರನ್ನೊಬ್ಬರು ಟೀಕಿಸತೊಡಗಿದವು. ಸುತ್ತಿಗೆಯನ್ನು ನೋಡಿ, ಉಳಿದ ಎಲ್ಲಾ ಸಾಧನಗಳು ಹೇಳಿದವು "ನೀನು ತುಂಬಾ ಗಲಾಟೆ ಮಾಡುತ್ತೀಯ, ನೀನು ಇಲ್ಲಿ ಇರಬಾರದು" ಎಂದವು. ಸುತ್ತಿಗೆ ಹೇಳಿತು, "ಉಳಿಯನ್ನು ಓಡಿಸಬೇಕು. ಅವನು ಎಲ್ಲರನ್ನು ತೀಕ್ಷ್ಣವಾಗಿ ನೋಡುತ್ತಾ ಕೊಯ್ದು ಬಿಡುತ್ತಿದ್ದಾನೆ" ಎಂದಿತು. ಉಳಿ ಕೋಪದಿಂದ ಸ್ಕೇಲ್ ನ ಮೇಲೆ ಚಾಡಿ ಹೇಳಿತು. "ಅವನು ಯಾವಾಗಲೂ ಎಲ್ಲರನ್ನೂ ಹೀಗೇ ಇರಬೇಕು, ಹಾಗೇ ಇರಬೇಕು ಎಂದು ಅಳೆಯುತ್ತಲೇ ಇರುತ್ತಾನೆ" ಎಂದಿತು. ಸ್ಕೇಲ್ ಅದಕ್ಕೆ ಪ್ರತ್ಯುತ್ತರವಾಗಿ "ಸ್ಕ್ರೂ ಡ್ರೈವರ್ ಅನ್ನು ನಮ್ಮ ಒಕ್ಕೂಟದಿಂದ ತೆಗೆದುಹಾಕಬೇಕು. ಅವನು ಎಲ್ಲರನ್ನು ಕೆಣಕುತ್ತಲೇ ಇದ್ದಾನೆ" ಎಂದಿತು. ಕೊನೆಯಲ್ಲಿ, ಎಲ್ಲವು ಕೊಡಲಿಯನ್ನು ನೋಡಿ "ನೀನು ಕೇವಲ ಮೇಲ್ನೋಟದ ಕೆಲಸವನ್ನು ಮಾತ್ರ ಮಾಡುತ್ತೀಯ, ನೀನು ಯಾವ ಕಠಿಣವಾದ ಕೆಲಸವನ್ನೂ ಮಾಡುವುದಿಲ್ಲ" ಎಂದು ಪರಸ್ಪರ ದೂರುತ್ತಿದ್ದವು. ಇದ್ದಕ್ಕಿದ್ದಂತೆ, ಬಡಗಿಯ ಧ್ವನಿಯನ್ನು ಕೇಳಿ, ಎಲ್ಲವೂ ಸ್ತಬ್ಧವಾದವು. ಬಡಗಿ ಬಂದರು. ಅವರು ಮರದ ತುಂಡನ್ನು ತೆಗೆದುಕೊಂಡು ಸುತ್ತಿಗೆ ಮತ್ತು ಉಳಿಯಿಂದ ಸುಂದರವಾಗಿ ಕೆತ್ತಿದರು. ಸ್ಕೇಲ್ ತೆಗೆದುಕೊಂಡು ಪರಿಶೀಲಿಸಿದರು. ಮತ್ತು ಉಳಿದ ಎಲ್ಲಾ ಸಾಧನಗಳನ್ನು ಉಪಯೋಗಿಸಿ ಸುಂದರವಾದ ಶಿಲುಬೆಯನ್ನು ಮಾಡಿದರು. ನಂತರ ಅವರು ಆ ಶಿಲುಬೆಯಲ್ಲಿ ತನ್ನನ್ನು ತಾನೇ ಸಾಯಲು ಒಪ್ಪಿಸಿಕೊಟ್ಟರು.
ಈ ಬಡಗಿ ಯಾರು? ಕರ್ತನಾದ ಯೇಸು ಕ್ರಿಸ್ತನೇ. ಮೇಲಿನ ನೀತಿಕಥೆಯನ್ನು ನಮ್ಮ ಜೀವನದಲ್ಲಿ ಆಗಾಗ್ಗೆ ನೆನಪಿಸಿಕೊಳ್ಳಬೇಕಾದದ್ದು ಬಹಳ ಮುಖ್ಯ. ಇದರ ಅರ್ಥವೇನೆಂದರೆ ಕ್ರಿಸ್ತನಲ್ಲಿ ಒಗ್ಗೂಡಿದ ನಮ್ಮಲ್ಲಿ ಪ್ರತಿಯೊಬ್ಬರಿಗೂ ಒಂದು ಬಲವಿದೆ; ಕೆಲವು ಕೊರತೆಗಳೂ ಇವೆ. ಎಲ್ಲರೂ ಎಲ್ಲರಂತೆ ಇರಬೇಕೆಂದೇನೂ ಇಲ್ಲ. ಅದನ್ನು ನಿರೀಕ್ಷಿಸಲೂಬೇಡಿ.
ನಮ್ಮ ಕೆಲಸದ ಸ್ಥಳದಲ್ಲಿಯೋ, ಅಥವಾ ಒಂದು ವೇಳೆ ನಾವು ಸೇವೆ ಮಾಡುವುದಾದರೆ ಆ ಐಕ್ಯತೆಯಲ್ಲೋ, ಪ್ರತಿಯೊಬ್ಬರೂ ವಿಭಿನ್ನವಾಗಿರುತ್ತಾರೆ. ಅಂಥವರನ್ನು ಒಂದೆಡೆ ಸೇರಿಸುವವನು ದೇವರೇ ಎಂಬುದನ್ನು ಮರೆಯದಿರಿ. ನನ್ನಂತೆ ಇತರರೂ ಕೆಲಸ ಮಾಡಬೇಕು ಎಂದು ನಿರೀಕ್ಷಿಸುವುದು ತಪ್ಪು. ದೇವರು ಒಂದು ಕೆಲಸವನ್ನು ಮಾಡಲು ಬೇಕಾದ ವಿವಿಧ ಜನರನ್ನು ಒಟ್ಟುಗೂಡಿಸಿದ್ದಾರೆ. ಸತ್ಯವೇದದಲ್ಲಿ, ಸಭೆಯನ್ನು ಕ್ರಿಸ್ತನ ದೇಹಕ್ಕೆ ಹೋಲಿಸಲಾಗಿದೆ. ಇದನ್ನು ಮನಸ್ಸಿನಲ್ಲಿಟ್ಟುಕೊಳ್ಳೋಣ. ಸಂಕುಚಿತ ಮನೋಭಾವವನ್ನು ಬದಲಾಯಿಸೋಣ. ಪ್ರೀತಿಯಿಂದ ತುಂಬಿದ ವಿಶಾಲ ಹೃದಯವನ್ನು ಹೊಂದಿರೋಣ.
- J. ಸಂತೋಷ್
ಪ್ರಾರ್ಥನಾ ಅಂಶ:
ಪ್ರತಿ ರಾಜ್ಯದಲ್ಲೂ 500 ಹೊಸ ಮಿಷಿನರಿಗಳು ನಮ್ಮ ಸೇವೆಯಲ್ಲಿ ಜೊತೆಗೂಡುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482