By Village Missionary Movement
Tuesday, 27-Jun-2023ಧೈನಂದಿನ ಧ್ಯಾನ(Kannada) – 27.06.2023
ಕತ್ತಲೆಯನ್ನು ಮಾರ್ಪಡಿಸುವ ಕರ್ತನು
"ನೀನೇ ನನ್ನ ದೀಪವನ್ನು ಹೊತ್ತಿಸುವವನಲ್ಲವೇ, ನನ್ನ ದೇವರಾದ ಯೆಹೋವನು ನನಗೆ ಬೆಳಕನ್ನು ಕೊಟ್ಟು ಕತ್ತಲನ್ನು ಪರಿಹರಿಸುವವನು" - ಕೀರ್ತನೆ 18:28
ಇಂಗ್ಲೆಂಡಿನಲ್ಲಿ ಜನಿಸಿದ ಜಾನ್ ಬನಿಯನ್ ಎಂಬವರು ಬಡತನದ ಕಾರಣದಿಂದಾಗಿ ಓದಲು ಸಾಧ್ಯವಾಗದೆ ಪಾತ್ರೆ ಮಾರಾಟಗಾರನಾಗಿ ಕೆಲಸ ಮಾಡುತ್ತಿದ್ದರು. ಅವರು ತನ್ನ ಯೌವನದಲ್ಲಿ ಕೆಟ್ಟ ಅಭ್ಯಾಸಗಳೊಂದಿಗೆ ಬೆಳೆದರು. ಅವರು ಸುಳ್ಳು ಹೇಳುತ್ತಾ, ಇತರರನ್ನು ವಂಚಿಸುತ್ತಾ, ಹಿರಿಯರಿಗೆ ಗೌರವ ನೀಡದೆಯೂ ಇದ್ದರು. ಅವರು 19 ನೇ ವಯಸ್ಸಿನಲ್ಲಿ ಕ್ರೈಸ್ತ ಹುಡುಗಿಯನ್ನು ವಿವಾಹವಾದರು. ಅವಳು ಆಗಾಗ್ಗೆ ಕ್ರಿಸ್ತನ ಬಗ್ಗೆ ಜಾನ್ ಹತ್ತಿರ ಮಾತನಾಡುತ್ತಿದ್ದಳು. ನಂತರ ಜಾನ್ ಬೈಬಲ್ ಓದಲು ಆರಂಭಿಸಿದರು. ಅವರ ಬದುಕಿನ ಕತ್ತಲು ದೂರವಾಗತೊಡಗಿತು. ಒಂದು ದಿನ ಅನಾರೋಗ್ಯದ ಸಮಯದಲ್ಲಿ, ಅವರು ಮಾರ್ಟಿನ್ ಲೂಥರ್ ಅವರ ಪುಸ್ತಕವನ್ನು ಓದಿ ತನ್ನನ್ನು ಕ್ರಿಸ್ತನಿಗೆ ಸಂಪೂರ್ಣವಾಗಿ ಅರ್ಪಿಸಿಕೊಂಡರು.
ಆ ದಿನಗಳಲ್ಲಿ ಇಂಗ್ಲೆಂಡಿನಲ್ಲಿ ಬೋಧಕರನ್ನು ಹೊರತುಪಡಿಸಿ ಯಾರೂ ಸುವಾರ್ತೆಯನ್ನು ಬೋಧಿಸಬಾರದು ಎಂಬ ಕಾನೂನು ಇತ್ತು. ಇದನ್ನು ತಿಳಿದ ಜಾನ್ ಬನಿಯನ್, ಮನುಷ್ಯರಿಗೆ ವಿಧೇಯನಾಗುವುದಕ್ಕಿಂತ ದೇವರಿಗೆ ವಿಧೇಯನಾಗುವುದು ಉತ್ತಮ ಎಂದು ಹೇಳಿದರು. ಎಲ್ಲೆಡೆ ಹೋಗಿ ಸುವಾರ್ತೆಯನ್ನು ಸಾರಿದರು. ಇದಕ್ಕಾಗಿ ಅವರು ಜೈಲು ಪಾಲಾದರು. ಅವರು ಸೆರೆಮನೆಯಲ್ಲಿಯೂ ಸುವಾರ್ತೆಯನ್ನು ಸಾರಿದರು. ಅವರು ಜೈಲಿನಲ್ಲಿದ್ದಾಗ "ಮೋಕ್ಷ ಪ್ರಯಾಣ" ಎಂಬ ಉತ್ತಮವಾದ ಪುಸ್ತಕವನ್ನು ಬರೆದರು. ಅವರ 43 ನೇ ವಯಸ್ಸಿನಲ್ಲಿ ಬಿಡುಗಡೆಯಾದರು. ತನ್ನ 59 ನೇ ವಯಸ್ಸಿನವರೆಗೂ ಸೇವೆ ಸಲ್ಲಿಸಿದರು. ಯಾವಾಗ ಅವರು ಕ್ರಿಸ್ತನನ್ನು ತನ್ನ ಹೃದಯದಲ್ಲಿ ಸ್ವೀಕರಿಸಿದರೋ, ಆಗ ಅವರ ಪಾಪದ ಕತ್ತಲೆಯು ನೀಗಿತು. ಜಗತ್ತಿಗೆ ಬೆಳಕನ್ನು ನೀಡಲು ಪ್ರಾರಂಭಿಸಿದರು.
ಹೌದು, ಪ್ರಿಯರೇ! ನಾವು ಕ್ರಿಸ್ತನೆಂಬ ಬೆಳಕನ್ನು ಅನುಸರಿಸಿದಾಗ, ನಮ್ಮಲ್ಲಿರುವ ಕತ್ತಲೆಯು ದೂರವಾಗುತ್ತದೆ ಮತ್ತು ನಾವು ಕರ್ತನನ್ನು ಸ್ಥಿರವಾಗಿ ಹಿಡಿದುಕೊಳ್ಳುತ್ತೇವೆ. ಒಂದು ದೀಪವಿರುವ ಸ್ಥಳದಲ್ಲಿ ನಾವು ಬೆಳಕಿನ ಕಡೆಗೆ ಚಲಿಸಿದರೆ, ನಮ್ಮ ನೆರಳು ನಮ್ಮ ಹಿಂದೆ ಬರುತ್ತದೆ. ನಾವು ಬೆಳಕಿನಿಂದ ದೂರ ಹೋದರೆ, ನೆರಳು ನಮ್ಮ ಮುಂದೆ ಬರುತ್ತದೆ. ಅದೇ ರೀತಿಯಲ್ಲಿ, ನಾವು ಕ್ರಿಸ್ತನೆಂಬ ಬೆಳಕಿನ ಕಡೆಗೆ ತಿರುಗಿದರೆ, ನಮ್ಮಲ್ಲಿರುವ ಪಾಪದ ಕತ್ತಲೆಯು ದೂರವಾಗುತ್ತದೆ. ಸತ್ಯವೇದದಲ್ಲಿಯೂ ಸಹ ಯೋಹಾನ. 8:12 ರಲ್ಲಿ, "ನಾನೇ ಲೋಕಕ್ಕೆ ಬೆಳಕು; ನನ್ನನ್ನು ಅನುಸರಿಸುವವನು ಕತ್ತಲೆಯಲ್ಲಿ ನಡೆಯದೆ ಜೀವಕೊಡುವ ಬೆಳಕನ್ನು ಹೊಂದಿದವನಾಗಿರುವನು" ಎಂದು ಯೇಸು ಹೇಳಿದರು. ನಾವು ಬೆಳಗಲು ಪ್ರಾರಂಭಿಸಿದರೆ, ತಂದೆಯು ಮಹಿಮೆ ಹೊಂದುತ್ತಾರೆ ಎಂದು ಮತ್ತಾಯ 5:16 ರಲ್ಲಿ ಹೇಳುತ್ತದೆ. ನಮ್ಮ ಬೆಳಕು ಇತರರಿಗೆ ಜೀವವನ್ನು ಉಂಟುಮಾಡುವಂಥದ್ದಾಗಿರುತ್ತದೆ. ಆಮೆನ್.
- Mrs. ದಿವ್ಯಾ ಅಲೆಕ್ಸ್
ಪ್ರಾರ್ಥನಾ ಅಂಶ:
ನಮ್ಮ ಕ್ಯಾಂಪಸ್‌ನಲ್ಲಿ ಉಳಿದುಕೊಂಡಿರುವ ನಿವೃತ್ತ ಮಿಷನರಿಗಳಿಗಾಗಿ ಮತ್ತು ಅವರ ದೈಹಿಕ ಯೋಗಕ್ಷೇಮಕ್ಕಾಗಿ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482