Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 26.06.2023
Share:

By Village Missionary Movement

Monday, 26-Jun-2023

ಧೈನಂದಿನ ಧ್ಯಾನ(Kannada) – 26.06.2023

 

ಚಿಂತೆ ಬೇಡ

 

"...ನಾಳಿನ ವಿಷಯವಾಗಿ ಚಿಂತೆಮಾಡಬೇಡಿರಿ;... ಆ ಹೊತ್ತಿನ ಕಾಟ ಆ ಹೊತ್ತಿಗೆ ಸಾಕು" - ಮತ್ತಾಯ 6:34

 

ಸಾಮಾನ್ಯವಾಗಿ ನಾವು ನಮ್ಮ ದೈನಂದಿನ ಜೀವನದಲ್ಲಿ ಸಣ್ಣ ವಿಷಯಗಳಿಗೂ ಚಿಂತಿಸುತ್ತೇವೆ ಮತ್ತು ಉದ್ರೇಕಗೊಳ್ಳುತ್ತೇವೆ. ನಮ್ಮ ದಿನನಿತ್ಯದ ಕೆಲಸದ ನಡುವೆ ನಾವು ಯಾವಾಗಲೂ ದುಃಖದ ಮುಖದಲ್ಲಿ ಕಾಣುತ್ತೇವೆ ಏಕೆಂದರೆ ನಮ್ಮ ಮನಸ್ಸಿನಲ್ಲಿ ಆತಂಕದ ಆಲೋಚನೆಗಳು ಓಡುತ್ತಿರುತ್ತವೆ. ಚಿಂತೆ ಮಾಡಲು ಯಾವುದೇ ಸಣ್ಣ ಸಮಸ್ಯೆಗಳಿಲ್ಲದಿದ್ದರೂ ನಾವು ನಾಳೆಯ ಬಗ್ಗೆ ಚಿಂತಿಸುತ್ತೇವೆ. ನನ್ನ ಮಗುವಿಗೆ ಕೆಲಸ ಸಿಗುತ್ತದಾ? ನಾವು ಬಯಸುವಂತಹ ವರ ಸಿಗುತ್ತಾನಾ? ನನಗೆ ವಯಸ್ಸಾದಾಗ ಯಾರ ಮನೆಗೆ ಹೋಗೋದು? ಬಹುಶಃ ನಾನು ಹಾಸಿಗೆ ಹಿಡಿದರೆ ನನ್ನನ್ನು ಯಾರು ನೋಡಿಕೊಳ್ಳುತ್ತಾರೆ? ಹೀಗೆಲ್ಲಾ ನಡೆಯದರ ಬಗ್ಗೆ ವಿಧವಿಧವಾಗಿ ಚಿಂತಿಸುತ್ತೇವೆ. ಯಾವುದಾದರೂ ಒಂದರ ಬಗ್ಗೆ ಚಿಂತಿಸದೆ ಸುಮ್ಮನಿರಲು ನಮ್ಮಿಂದ ಸಾಧ್ಯವಿಲ್ಲ. ನಿಜವಾಗಿ ಹೇಳಬೇಕೆಂದರೆ ಚಿಂತೆ ಮತ್ತು ಮನುಷ್ಯ ಬೇರ್ಪಡಿಸಲಾಗದಂತೆ ಒಂದಾಗಿಬಿಟ್ಟಿದ್ದಾರೆ.

 

ಆದರೆ ನಂಬಿಕೆಯ ಯೋಧ ಜಾರ್ಜ್ ಮುಲ್ಲರ್ ರವರು, ಮನುಷ್ಯನು ಕೇವಲ ಎರಡು ವಿಷಯಗಳ ಬಗ್ಗೆ ಚಿಂತಿಸಬೇಕು ಎಂದು ಹೇಳಿದ್ದಾರೆ. ಒಂದು ನಾನು ರಕ್ಷಣೆ ಹೊಂದಿಲ್ಲ ಎಂದು ಚಿಂತಿಸುವುದು. ಇನ್ನೊಂದು, ನಾನು ಇನ್ನೂ ಸೈತಾನನ ಹಿಡಿತದಲ್ಲಿದ್ದೇನೆ ಮತ್ತು ಪಾಪದಲ್ಲಿ ಬದುಕುತ್ತಿದ್ದೇನೆ ಎಂದು ಚಿಂತಿಸುವುದು. ಈ ಎರಡು ವಿಷಯಗಳ ಹೊರತಾಗಿ ಮನುಷ್ಯನು ಯಾವುದರ ಬಗ್ಗೆಯೂ ಚಿಂತಿಸಬೇಕಾಗಿಲ್ಲ ಎಂದು ಹೇಳುತ್ತಾರೆ. ಅವರು ತಮ್ಮ ಅನುಭವವನ್ನು ಹಂಚಿಕೊಳ್ಳುವಾಗ, ಕಳೆದ 70 ವರ್ಷಗಳಿಂದ ನನ್ನ ಜೀವನದಲ್ಲಿ, ಸಾವಿರಕ್ಕೂ ಹೆಚ್ಚು ಸಂದರ್ಭಗಳಲ್ಲಿ ಎರಡು ಸಾವಿರ ಮಕ್ಕಳಿರುವ ನನ್ನ ಅನಾಥಾಶ್ರಮವನ್ನು ನಡೆಸಲು ನಾನು ಎಲ್ಲಾ ಕಾರ್ಯಗಳಲ್ಲೂ ದೇವರನ್ನು ಮಾತ್ರವೇ ನೋಡಿದ್ದೇನೆ. ಯಾವತ್ತೂ ಯಾವುದರ ಬಗ್ಗೆಯೂ ಚಿಂತಿಸಿಲ್ಲ. ನನ್ನ ನಿರೀಕ್ಷೆಗೂ ಮೀರಿ ದೇವರು ನನಗೆ ಸಹಾಯ ಮಾಡಿದ್ದಾರೆ. ಒಂದು ಮಗು ತನ್ನ ಹೆತ್ತವರ ಮೇಲೆ ಎಂಥಾ ನಂಬಿಕೆ ಇಡುತ್ತದೋ ಅದರಂತೆಯೇ ನಂಬಿಕೆಯಿಂದ ನಿಮ್ಮ ಎಲ್ಲಾ ಚಿಂತೆಯನ್ನು, ಭಾರವನ್ನು ಅವರ ಮೇಲೆ ಹಾಕಿ ಬಿಡಿ. "ಕರ್ತನೇ, ನನ್ನ ಸಮಸ್ಯೆಗಳನ್ನು ಬದಲಾಯಿಸಲು ನೀನು ಸಮರ್ಥನೆಂದು ನಾನು ನಂಬುತ್ತೇನೆ." ಎಂದು ಹೃದಯದಲ್ಲಿ ಹೇಳಿ. ಇದೇ ನನ್ನ ಯಶಸ್ವಿಯಾದ, ಚಿಂತೆಯಿಲ್ಲದ, ನಂಬಿಕೆಯ ಜೀವನಕ್ಕೆ ರಹಸ್ಯ ಎಂದು ಅವರು ಹೇಳುತ್ತಾರೆ.

 

ಹೌದು, ಪ್ರಿಯರೇ! ನಮ್ಮನ್ನು ವಿಚಾರಿಸುವ ಒಂದು ದೇವರಿದ್ದಾರೆ. ನಮ್ಮ ಚಿಂತೆಯನ್ನೆಲ್ಲ ಅವರ ಮೇಲೆ ಹಾಕಲು ಅಭ್ಯಾಸ ಮಾಡಿಕೊಳ್ಳೋಣ. ನಾಳೆಯ ದಿನವನ್ನು ಪರದೆಯಿಂದ ಮುಚ್ಚಲಾಗಿದೆ. ಅದರಲ್ಲಿ ಹೀಗೇ ಆಗುತ್ತೋ ಹಾಗೆ ಆಗುತ್ತೋ ಎಂದುಕೊಂಡು ಪರದೆ ತೆರೆದು ನೋಡುವುದು ನಮ್ಮ ಕೆಲಸವಲ್ಲ, ನಾಳೆಯ ದಿನ ದೇವರದ್ದು. ಅವರೇ ಎಲ್ಲವನ್ನೂ ಸರಿ ಮಾಡುತ್ತಾರೆ. ಇಂದಿನ ಸಮಸ್ಯೆ ಚಿಕ್ಕದಿರಲಿ ದೊಡ್ಡದಿರಲಿ ಅದನ್ನು ದೇವರ ಬಳಿ ನಂಬಿಕೆಯಿಂದ ಹೇಳೋಣ, ದೇವರ ಸಮಾಧಾನವು ಹೃದಯವನ್ನು ತುಂಬುವುದನ್ನು ನೋಡಬಹುದು.

- Mrs. ಜೀವಾ ವಿಜಯಕುಮಾರ್

 

ಪ್ರಾರ್ಥನಾ ಅಂಶ:

24 ಗಂಟೆಗಳ ಸರಪಳಿ ಪ್ರಾರ್ಥನೆಯು ಎಲ್ಲಾ ಸೇವಾ ಕ್ಷೇತ್ರಗಳಲ್ಲಿ ಸತತವಾಗಿ ಅಡೆತಡೆಯಿಲ್ಲದೆ ನಡೆಯುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş