Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 24.06.2023
Share:

By Village Missionary Movement

Friday, 23-Jun-2023

ಧೈನಂದಿನ ಧ್ಯಾನ(Kannada) – 24.06.2023

 

ಇರುವ ಸ್ಥಳದಲ್ಲಿ

 

"ಸಹೋದರರೇ, ಪ್ರತಿಯೊಬ್ಬನು ಕರೆಯಲ್ಪಟ್ಟಾಗ ಯಾವ ಸ್ಥಿತಿಯಲ್ಲಿದ್ದನೋ ಅದೇ ಸ್ಥಿತಿಯಲ್ಲಿ ದೇವರ ಮುಂದೆ ಇದ್ದುಕೊಂಡಿರಲಿ" - 1 ಕೊರಿಂಥ 7:24

 

ಅಡವಿಯಲ್ಲಿ ಬೆಳೆದಿದ್ದ ಕಳ್ಳಿಗಿಡದ ಬಳಿ ಅಲ್ಲಿಗೆ ಬಂದ ತಂಗಾಳಿಯು ಮಾತನಾಡಿತಂತೆ, "ನೀನು ಯಾಕೆ ಇಷ್ಟು ಕ್ರೂರವಾದ ಅರಣ್ಯದಲ್ಲಿ ವಾಸಿಸುತ್ತಿದ್ದೀಯ, ಬೇರೆ ಯಾವುದಾದರೂ ಸಮೃದ್ಧವಾದ ಸ್ಥಳಕ್ಕೆ ಹೋಗಿಬಿಡು. ನಿನಗೆ ಇಲ್ಲಿ ಏನು ಪ್ರಯೋಜನವಿದೆ?" ಎಂದು ಹೇಳುತ್ತಾ ಇತ್ತಂತೆ. ಇದನ್ನು ಕೇಳುತ್ತಿದ್ದ ಗೂಬೆಯೊಂದು ತಂಗಾಳಿಯ ಬಳಿ ಜಗಳಕ್ಕೆ ಹೋಯಿತಂತೆ. "ನೀನು ನಿನ್ನ ಕೆಲಸವನ್ನು ನೋಡಿಕೊಂಡು ಸುಮ್ಮನೆ ಹೋಗುತ್ತೀಯಾ? ಈ ಕಳ್ಳಿಗಿಡದ ನೆರಳಿನಲ್ಲೇ ನಾನು ಸ್ವಲ್ಪ ಸಮಯದವರೆಗೆ ದಣಿವು ನೀಗಿಸಿಕೊಳ್ಳುತ್ತೇನೆ. ಸಣ್ಣ ಹಾವುಗಳು ಸಹ ಅದರ ನೆರಳಿನಲ್ಲಿ ಸುತ್ತುತ್ತವೆ ಮತ್ತು ಅದರ ನೆರಳಿನಲ್ಲಿ ವಿಶ್ರಾಂತಿ ಪಡೆಯುತ್ತವೆ. ಇದು ಇಲ್ಲದಿದ್ದರೆ, ಈ ಸುಡುವ ಬಿಸಿಲಿನಲ್ಲಿ ನಮ್ಮ ಗತಿಯೇನು?" ಎಂದಿತು. ಇದನ್ನು ಸದ್ದಿಲ್ಲದೇ ಕೇಳುತ್ತಿದ್ದ ಕಳ್ಳಿಗಿಡ "ನಾನು ಕಾಡಿನಲ್ಲಿದ್ದರೂ ಮತ್ತೊಬ್ಬರಿಗೆ ಆಶೀರ್ವಾದವಾಗಿದ್ದೇನೆಂದರೆ ಅದೇ ನನಗೆ ಸಂತೋಷ" ಎಂದು ಮನದಾಳದಲ್ಲಿ ತೃಪ್ತಿ ಪಟ್ಟಿತು.

 

ನಮ್ಮೊಬ್ಬೊಬ್ಬರನ್ನೂ ದೇವರು ತನ್ನ ಚಿತ್ತದ ಪ್ರಕಾರ ಪ್ರತಿ ಸ್ಥಳದಲ್ಲಿ ಇಟ್ಟಿದ್ದಾರೆ. ಹಾಗೆ ನಾವು ಇರುವ ಸ್ಥಳದಲ್ಲಿ ಇತರರಿಗೆ ಪ್ರಯೋಜನವಾಗಿ ಆಶೀರ್ವಾದಕರವಾಗಿದ್ದೇವಾ? ಎಂದು ಯೋಚಿಸುವುದೇ ಇಂದಿನ ಧ್ಯಾನ. ಸತ್ಯವೇದದಲ್ಲಿ, ಒಬ್ಬ ಯಜಮಾನನು ತನ್ನ ದ್ರಾಕ್ಷಿತೋಟದಲ್ಲಿ ಅಂಜೂರದ ಮರವನ್ನು ನೆಟ್ಟನು. ಆದರೆ ಆ ಅಂಜೂರದ ಮರವೋ ತಾನಿದ್ದ ಸ್ಥಳದಲ್ಲಿ ಯಾರಿಗೂ ಉಪಯೋಗವಿಲ್ಲದೇ, ತನ್ನನ್ನು ಇಟ್ಟಿದ್ದ ಉದ್ದೇಶವನ್ನು ಪೂರೈಸದೆ ಫಲಗಳಿಲ್ಲದೇ ಕಾಣಲ್ಪಟ್ಟಿತು. ಕೊನೆಗೆ ಯಜಮಾನನು ಅದನ್ನು ಕಡಿದು ಹಾಕುವಂತೆ ತೋಟಗಾರನ ಬಳಿ ಹೇಳುತ್ತಿದ್ದಾರೆ.

 

ನಾವು ನಮ್ಮ ಕುಟುಂಬಕ್ಕೆ, ಸಭೆಗೆ, ಸಮಾಜಕ್ಕೆ ಆಶೀರ್ವಾದವಾಗಿದ್ದೇವೆಯೇ ಅಥವಾ ನಮ್ಮ ನಿಮಿತ್ತವಾಗಿ ನಮ್ಮ ಕುಟುಂಬವೋ ಸಭೆಯೋ ಅವಮಾನ ಹೊಂದುತ್ತಿದೆಯೇ? ಯೋಚಿಸೋಣ. ಯಾವ ಸೌಕರ್ಯವೂ ಇಲ್ಲದ ಮರುಭೂಮಿಯಲ್ಲೂ ಕಳ್ಳಿಗಿಡ ಉಪಯುಕ್ತವಾಗಿತ್ತು. ಆದರೆ ದ್ರಾಕ್ಷಿತೋಟದಲ್ಲಿ ನೆಡಲ್ಪಟ್ಟು ತೋಟಗಾರನಿಂದ ಅನುದಿನವೂ ನೀರು ಹಾಯಿಸಿದ ಅಂಜೂರದ ಮರದಿಂದ ಯಜಮಾನನು ಯಾವ ಹಣ್ಣನ್ನೂ ತಿನ್ನಲಿಲ್ಲ. 

 

ಪ್ರೀತಿಯ ಯೌವನಸ್ಥನೇ! ನೀವು ಶ್ರೀಮಂತ ಕುಟುಂಬದಲ್ಲಿ ಹುಟ್ಟಿ, ಒಳ್ಳೆಯ ಕಾಲೇಜಿನಲ್ಲಿ ಓದಿ, ಅನೇಕ ಪ್ರತಿಭೆಗಳನ್ನು ಹೊಂದಿದ್ದರೂ, ನೀವು ಯಾವುದೇ ಪ್ರಯೋಜನವಿಲ್ಲದ ಮತ್ತು ಯಾವುದೇ ಆಶೀರ್ವಾದವಿಲ್ಲದ ಜೀವನವನ್ನು ನಡೆಸುತ್ತಿದ್ದೀರಾ? ನೀನು ಕರೆಯಲ್ಪಟ್ಟ ಕರೆಯುವಿಕೆಯನ್ನು ಯೋಚಿಸಿನೋಡು. ನೀನಿರುವ ಸ್ಥಳದಲ್ಲಿ ಇತರರಿಗೆ ಆಶೀರ್ವಾದಕರವಾಗಿರುವದಕ್ಕಾಗಿಯೇ ದೇವರು ಆ ಸ್ಥಳದಲ್ಲಿಟ್ಟಿದ್ದಾರೆ. ಒಂದು ವೇಳೆ ಅದು ಫಲವತ್ತಾದ ಭೂಮಿಯಾಗಿರಬಹುದು ಅಥವಾ ಅರಣ್ಯವಾಗಿರಬಹುದು. ಯಾವ ಸ್ಥಳವಾಗಿದ್ದರೂ ಯೇಸುವಿನೊಂದಿಗೆ ಐಕ್ಯವಾಗಿರುವುದಾದರೆ ಖಂಡಿತವಾಗಿಯೂ ಇತರರಿಗೆ ಆಶೀರ್ವಾದವಾಗಿರುತ್ತೀಯ.

- C.ಜಯಕುಮಾರಿ

 

ಪ್ರಾರ್ಥನಾ ಅಂಶ:

ರಾಕ್ಲ್ಯಾಂಡ್ ಬೈಬಲ್ ಕಾಲೇಜಿನ ಹೊಸ ವಿದ್ಯಾರ್ಥಿಗಳಿಗಾಗಿ ಪ್ರಾರ್ಥಿಸಿರಿ

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş