Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 23.06.2023
Share:

By Village Missionary Movement

Thursday, 22-Jun-2023

ಧೈನಂದಿನ ಧ್ಯಾನ(Kannada) – 23.06.2023

 

ಫಲ ನೀಡುವ ಜೀವನ

 

 "...ಫಲದಿಂದಲೇ ಮರದ ಗುಣವು ಗೊತ್ತಾಗುವದು” - ಮತ್ತಾಯ 12:33

 

ಯೇಸು ಕ್ರಿಸ್ತನು ಬೇಥಾನ್ಯದಲ್ಲಿ ತನ್ನ ಸೇವೆಯನ್ನು ಮುಗಿಸಿ ಹಿಂದಿರುಗುವಾಗ, ಆತನಿಗೆ ಹಸಿವಾಯಿತು. ಆದ್ದರಿಂದ ದೂರದಲ್ಲಿ ಸಮೃದ್ಧಿಯಾಗಿ ಬೆಳೆದಿದ್ದ ಒಂದು ಅಂಜೂರದ ಮರವನ್ನು ನೋಡುತ್ತಾರೆ. ಅದರ ಹಣ್ಣುಗಳನ್ನು ತಿಂದು ಹಸಿವು ನೀಗಿಸಿಕೊಳ್ಳೋಣ ಎಂದು ಬೇಗನೆ ಹತ್ತಿರಕ್ಕೆ ಧಾವಿಸುತ್ತಾರೆ. ಅದು ಅಂಜೂರದ ಹಣ್ಣುಗಳ ಕಾಲವಲ್ಲದ್ದರಿಂದ, ಎಲೆಗಳು ಹೊರತು ಹಣ್ಣುಗಳಿರಲಿಲ್ಲ. ಹಣ್ಣುಗಳಿಲ್ಲದ ಆ ಮರವನ್ನು ಕಂಡು ಯೇಸು ಶಪಿಸುತ್ತಾರೆ. ಇದು ನ್ಯಾಯವೇ? ಎಂಬ ಒಂದು ಪ್ರಶ್ನೆ ನಮ್ಮ ಹೃದಯದಲ್ಲಿ ಮೂಡಬಹುದು. ಅಂಜೂರದ ಹಣ್ಣುಗಳ ಸೀಸನ್ ಇಲ್ಲದಿರುವಾಗ ಫಲ ನೀಡದಿರುವುದು ಅಂಜೂರದ ಮರದ ತಪ್ಪಾ? ಎಂದು ನಾವು ಯೋಚಿಸಬಹುದು. ಯೇಸು ಅಂಜೂರದ ಮರವನ್ನು ಶಪಿಸುವುದಕ್ಕೆ ಅನೇಕ ಕಾರಣಗಳಿರಬಹುದು. ಆದರೆ ಈ ಘಟನೆ ಸತ್ಯವೇದದಲ್ಲಿ ದಾಖಲಾಗಿರುವುದಕ್ಕೆ ಒಂದು ಕಾರಣವಿದೆ. ಇದರ ಮೂಲಕ ನಮ್ಮನ್ನು ಎಚ್ಚರಿಸುವುದಕ್ಕಾಗಿಯೇ.

 

ಅಂಜೂರದ ಮರಗಳು ಫಲ ನೀಡಲು ಉತ್ತಮ ಸಮಯವೆಂದರೆ ವಸಂತಕಾಲ. ವಸಂತವನ್ನು ಹೊರತುಪಡಿಸಿದ ದಿನಗಳು ಅಂಜೂರದ ಮರವು ಫಲ ನೀಡಲು ಅನುಕೂಲವಲ್ಲದ ದಿನಗಳಾಗಿವೆ. ಈ ನೀತಿಕಥೆಯನ್ನು ನಮ್ಮ ಪ್ರಾಯೋಗಿಕ ಜೀವನದೊಂದಿಗೆ ಹೋಲಿಸೋಣ. ವಸಂತಕಾಲ ಎಂಬುದು ನಮ್ಮ ಜೀವನದ ಎಲ್ಲಾ ಪರಿಸ್ಥಿತಿಗಳು ಅನುಕೂಲಕರವಾಗಿದ್ದು, ನಾವು ಕೊರತೆಯಿಲ್ಲದೆ ಸಂತೋಷವಾಗಿ ಬದುಕುವ ಕಾಲ. ಇಂತಹ ಸಮಯದಲ್ಲಿ ನಾವು ದೇವರನ್ನು ಸಂತೋಷವಾಗಿ ಸ್ತುತಿಸುತ್ತೇವೆ. ಬಡವರಿಗೆ ಕರುಣೆ ತೋರುತ್ತೇವೆ. ಇತರರಿಗೆ ಪ್ರೀತಿ, ಸಂತೋಷ, ಶಾಂತಿ, ದಯೆ ಮತ್ತು ಒಳ್ಳೆಯತನದಂತಹ ಫಲಗಳನ್ನು ನೀಡುವ ಸಮಯವಾಗಿದೆ. ಆದರೆ ನಮ್ಮ ಜೀವನದ ಸಂದರ್ಭಗಳು ಅನಾನುಕೂಲವಾದಾಗ, ಹೋರಾಟ, ಹಿನ್ನಡೆ, ಚಡಪಡಿಕೆ, ನಂಬಿಕೆ ಕುಸಿಯುತ್ತಿರುವ ಸಮಯ, ವ್ಯರ್ಥ ಆರೋಪಗಳ ದಿನಗಳು ಇವು ವಸಂತವಿಲ್ಲದ ದಿನಗಳಾಗಿವೆ. ಇಂತಹ ಸಮಯದಲ್ಲಿ ನಮ್ಮ ಕ್ರಿಯೆಗಳು ಹೇಗಿರುತ್ತವೆ? ಸುಳ್ಳು ಆರೋಪಗಳಲ್ಲಿಯೂ ಸಹ ತಾಳ್ಮೆ ಮತ್ತು ಸೌಮ್ಯತೆ ಎಂಬ ಫಲವನ್ನು ನೀಡುತ್ತೇವಾ? ಎಲ್ಲವೂ ನಮಗೆ ವಿರುದ್ಧವಾಗಿದ್ದಾಗಲೂ ನಾವು ದೇವರನ್ನು ನಂಬಿ ಸಮಾಧಾನದಿಂದ ಇದ್ದೇವಾ? ಈ ಪ್ರಶ್ನೆಗಳನ್ನು ನಮಗೆ ನಾವೇ ಕೇಳಿಕೊಂಡರೆ, ಉತ್ತರ "ಇಲ್ಲ" ಎಂಬುದೇ ಆಗಿರುತ್ತದೆ.

 

ದೇವರ ನಿರೀಕ್ಷೆ ಏನು? ಜೀವನದ ಅನುಕೂಲಕರ ಸಂದರ್ಭಗಳಲ್ಲಿ ಮಾತ್ರವಲ್ಲದೆ ಅನಾನುಕೂಲ ಸಂದರ್ಭಗಳಲ್ಲಿಯೂ ಫಲ ನೀಡಬೇಕೆಂಬುದೇ. ಸ್ನೇಹಿತರೇ! ದೇವರನ್ನು ನಂಬಿ ಆತನೊಂದಿಗೆ ನಡೆಯುವ ನಮ್ಮನ್ನು ಶೋಧನೆಗಳು ಫಲವಿಲ್ಲದವರಾಗಿ ಮಾರ್ಪಡಿಸಲು ಅವಕಾಶ ನೀಡಬಾರದು. ನಮ್ಮಲ್ಲಿ ವಸ್ತುವಿರಲಿ ಇಲ್ಲದಿರಲಿ, ಯಾವುದೇ ಸಂದರ್ಭದಲ್ಲೂ “ನಾವು ದೇವರ ಮಕ್ಕಳು” ಎಂಬ ಬಿಂಬವನ್ನು ಕಳೆದುಕೊಳ್ಳಬಾರದು. ಪ್ರಾರ್ಥಿಸೋಣ ಮತ್ತು ಪ್ರಯತ್ನಿಸೋಣ. ದೇವರು ಕೈ ಕೊಟ್ಟು ಸಹಾಯ ಮಾಡುತ್ತಾರೆ.

- K. ಗಾಂಧಿ ರಾಜನ್

 

ಪ್ರಾರ್ಥನಾ ಅಂಶ:

ಶಾಂತಿ ಕೇಂದ್ರದ ಯೋಜನೆಗಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al