Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 22.06.2023
Share:

By Village Missionary Movement

Wednesday, 21-Jun-2023

ಧೈನಂದಿನ ಧ್ಯಾನ(Kannada) – 22.06.2023

 

ಕ್ಷಮೆಯ ಮಹಿಮೆ

 

"ದೇವರು ನಿಮಗೆ ಕ್ರಿಸ್ತನಲ್ಲಿ ಕ್ಷಮಿಸಿ ದಂತೆಯೇ ನೀವು ಒಬ್ಬರಿಗೊಬ್ಬರು ಉಪಕಾರಿಗಳಾ ಗಿಯೂ ಕರುಣೆಯುಳ್ಳವರಾಗಿಯೂ ಕ್ಷಮಿಸುವವ ರಾಗಿಯೂ ಇರ್ರಿ" - ಎಫೆಸದವರಿಗೆ 4:32

 

ಒಬ್ಬ ಶಿಕ್ಷಕಿ ತನ್ನ ವಿದ್ಯಾರ್ಥಿಗಳು ಕ್ಷಮಾಶೀಲರಾಗಿರಲು ಕಲಿಸಿಕೊಡಲು ಒಂದು ತಂತ್ರವನ್ನು ಬಳಸಿದರು. ಅದಕ್ಕಾಗಿ ಎಲ್ಲಾ ವಿದ್ಯಾರ್ಥಿಗಳು ಒಂದು ಚೀಲದಲ್ಲಿ ಆಲೂಗಡ್ಡೆ ಮತ್ತು ಒಳಗಿರುವುದು ಹೊರಗೆ ಕಾಣುವಂತ ಒಂದು ಪ್ಲಾಸ್ಟಿಕ್ ಚೀಲವನ್ನು ತರಲು ಹೇಳಿದರು. ನೀವು ಯಾರನ್ನು ಕ್ಷಮಿಸಲು ಸಾಧ್ಯವಿಲ್ಲವೋ ಅವರ ಹೆಸರನ್ನು ಆಲೂಗಡ್ಡೆಯ ಮೇಲೆ ಬರೆದು ಪ್ಲಾಸ್ಟಿಕ್ ಚೀಲದಲ್ಲಿ ಹಾಕಿ ಎಂದು ಹೇಳಿದರು. ಅದರಂತೆ ಗೋಣಿಚೀಲದಲ್ಲಿ ಆಲೂಗಡ್ಡೆ ಕಡಿಮೆಯಾಗತೊಡಗಿ ಪ್ಲಾಸ್ಟಿಕ್ ಚೀಲ ತುಂಬತೊಡಗಿತು. ಈ ಸಂದರ್ಭದಲ್ಲಿ, ಶಿಕ್ಷಕಿ ತನ್ನ ವಿದ್ಯಾರ್ಥಿಗಳಿಗೆ ಆಲೂಗೆಡ್ಡೆಯ ಮೇಲೆ ಬರೆದಿರುವ ಒಬ್ಬೊಬ್ಬರನ್ನೂ ನೀವು ಯಾವಾಗ ಕ್ಷಮಿಸುತ್ತೀರೋ ಆಗ ಆ ಆಲೂಗಡ್ಡೆಯನ್ನು ನೀವು ಎಸೆಯಬಹುದು ಎಂದು ಹೇಳಿದರು. ಇಲ್ಲವಾದರೆ ಎಲ್ಲಿಗೆ ಹೋದರೂ ಆ ಹೆಸರು ಬರೆದ ಆಲೂಗೆಡ್ಡೆಗಳನ್ನೆಲ್ಲ ಹೊತ್ತುಕೊಂಡೇ ಹೋಗಬೇಕು ಎಂದರು. ಕ್ಷಮಿಸದ ವಿದ್ಯಾರ್ಥಿಗಳ ಹೊರೆ ಕಡಿಮೆಯಾಗಲಿಲ್ಲ, ಮತ್ತು ಕೆಲವು ದಿನಗಳ ನಂತರ ಅದು ಕೊಳೆತು ದುರ್ವಾಸನೆ ಬರಲು ಪ್ರಾರಂಭಿಸಿತು. ಅದರಿಂದ ಅವರ ಬಳಿ ಬರುವವರು ಇವರನ್ನು ದ್ವೇಷಿಸಲು ಪ್ರಾರಂಭಿಸಿದರು.

 

ಸತ್ಯವೇದದಲ್ಲಿ ಆದಿ. 34 ನೇ ಅಧ್ಯಾಯದಲ್ಲಿ - ಯಾಕೋಬನ ಮಗಳು ದೀನ, ಶೆಕೆಮನ ನಿಮಿತ್ತ ಅಪವಿತ್ರವಾದಾಗ, ಯಾಕೋಬನ ಕುಮಾರರು ಮತ್ತು ದೀನನ ಸಹೋದರರಾದ ಸಿಮೆಯೋನನು, ಲೇವಿ ತನ್ನ ಸಹೋದರಿಯನ್ನು ಮದುವೆ ಮಾಡಿಕೊಟ್ಟ ನಂತರವೂ ಕ್ಷಮಿಸಲು ಮನಸ್ಸಿಲ್ಲದೆ, ತನ್ನ ತಂದೆಯ ಮಾತನ್ನೂ ಮೀರಿ ಶೆಕೆಮನನ್ನು ಮತ್ತು ಆ ಪಟ್ಟಣವಾಸಿಗಳನ್ನು ಕೊಲೆ ಮಾಡಿದ್ದರಿಂದ ಯಾಕೋಬನು ತನ್ನ ಕುಟುಂಬವನ್ನು ನೆನೆಸಿ, ಆ ದೇಶದವರ ನಿಮಿತ್ತ ಭಯಪಡುವ ಪರಿಸ್ಥಿತಿ ಉಂಟಾಯಿತು.

 

ಪ್ರಿಯರೇ, ನಾವು ಒಬ್ಬರನ್ನು ಕ್ಷಮಿಸದಿದ್ದರೆ ಅದು ನಮ್ಮ ಮನಸ್ಸನ್ನು ಚುಚ್ಚುತ್ತತ್ತಲೇ ಇರುತ್ತದೆ ಮತ್ತು ನಮ್ಮ ನೆಮ್ಮದಿ ಹಾಳಾಗಿ ಅಶಾಂತಿ ಅನುಭವಿಸುವ ಪರಿಸ್ಥಿತಿಗೆ ತಳ್ಳಿಬಿಡುತ್ತದೆ. ಅದೇ ನಮಗೆ ದೊಡ್ಡ ಹೊರೆಯಾಗಿಯೂ ಅದರ ನಿಮಿತ್ತವಾಗಿ ಎಲ್ಲರೂ ನಮ್ಮನ್ನು ದ್ವೇಷಿಸುವ ವ್ಯಕ್ತಿಯಾಗಿಯೂ ಮಾರ್ಪಡುತ್ತೇವೆ. ಹೇಗೆ ತನ್ನ ಗಂಡ ಮತ್ತು ಇಬ್ಬರು ಮಕ್ಕಳನ್ನು ಜೀಪಿನಲ್ಲಿ ಸುಟ್ಟುಹಾಕಿದವರನ್ನೂ ಕೂಡ ಗ್ರಹಾಂ ಸ್ಟೇನ್ಸ್ ರವರ ಹೆಂಡತಿ ಕ್ಷಮಿಸಿದರೋ, ಅದರಂತೆಯೇ ನಾವು ಕೂಡ ಈ ಜಗತ್ತಿನಲ್ಲಿ ನಮ್ಮೊಂದಿಗೆ ವಾಸಿಸುವ ನಮ್ಮ ಸಹೋದರ ಸಹೋದರಿಯರನ್ನು ದೇವರು ಕ್ರಿಸ್ತನಲ್ಲಿ ಕ್ಷಮಿಸಿದಂತೆ ನಾವೂ ಕ್ಷಮಿಸಬೇಕು, ಕ್ಷಮಿಸುವುದರೊಂದಿಗೆ ಸುಮ್ಮನಾಗಿ ಬಿಡದೇ ಅವರನ್ನು ಆಶೀರ್ವದಿಸುವುದಾದರೆ ಖಂಡಿತವಾಗಿಯೂ ಆ ಆತ್ಮವು ಯೇಸುವನ್ನು ತನ್ನ ಸ್ವಂತ ರಕ್ಷಕನನ್ನಾಗಿ ಸ್ವೀಕರಿಸುತ್ತದೆ ಮತ್ತು ನಿಮ್ಮಲ್ಲಿ ವಾಸಿಸುವ ಯೇಸುವನ್ನು ಕಂಡು ಅವರೂ ಮಹಿಮೆಪಡಿಸುತ್ತಾರೆ. ದೇಶವು ಯೇಸುವಿನೆಡೆಗೆ ತಿರುಗುತ್ತದೆ. ಆಮೆನ್! ಹಲ್ಲೇಲೂಯಾ!

- Sis. ಗೆತ್ಸಿಯಾ ಗ್ಲೋರಿ

 

ಪ್ರಾರ್ಥನಾ ಅಂಶ:

ಸಹ ಸೇವಕರಿಗಾಗಿ ಮತ್ತು ಅವರ ಮೂಲಕ ಭೇಟಿ ನೀಡುವ ಹಳ್ಳಿಗಳಿಗಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş meritking meritking giriş meritking güncel giriş perabet perabet perabet giriş deneme bonusu deneme bonusu veren siteler Vdcasino vaycasino vaycasino giriş vaycasino güncel giriş matbet matbet giriş matbet güncel giriş yakabet yakabet giriş yakabet güncel giriş betsmove betsmove giriş betsmove güncel giriş betsat betsat giriş betsat güncel giriş perabet perabet giriş perabet güncel giriş dumanbet giriş dumanbet dumanbet güncel giriş kingroyal kingroyal giriş kingroyal güncel giriş marsbahis marsbahis giriş marsbahis güncel giriş kingroyal kingroyal giriş kingroyal güncel giriş meritking meritking giriş meritking güncel giriş meritbet meritbet giriş meritbet güncel giriş nakitbahis nakitbahis giriş nakitbahis güncel giriş dumanbet dumanbet giriş dumanbet güncel giriş Holiganbet holiganbet giriş holiganbet güncel giriş bahissenin bahissenin giriş bahissenin güncel giriş bayconticasino bayconticasino giriş bayconticasino güncel giriş imajbet imajbet giriş imajbet güncel giriş prizmabet prizmabet giriş pashagaming pashagaming giriş pashagaming güncel giriş interbahis interbahis giriş interbahis güncel giriş jojobet superbetin matbet jojobet marsbahis marsbahis güncel marsbahis güncel giriş deneme bonusu deneme bonusu veren siteler bahsegel vaycasino vaycasino giriş perabet perabet giriş holiganbet holiganbet giriş holiganbet holiganbet giriş holiganbet holiganbet giriş jojobet jojobet giriş