By Village Missionary Movement
Tuesday, 20-Jun-2023ಧೈನಂದಿನ ಧ್ಯಾನ(Kannada) – 21.06.2023
ನಾಯಕತ್ವ
"...ಅವನು ಕೇಳದವನ ಹಾಗೆ ಇದ್ದನು" - 1 ಸಮುವೇಲ 10:27
1877 ನೇ ವರ್ಷದಲ್ಲಿ ಒಂದು ದಿನ ಆಲಯ ಆರಾಧನೆಯ ಸಮಯದಲ್ಲಿ, ಕ್ರಿಸ್ತನನ್ನು ಅಂಗೀಕರಿಸುವವರು ಮುಂದೆ ಬರುವಂತೆ ಕರೆ ನೀಡಲಾಯಿತು. ರಾಡ್ನಿ ಸ್ಮಿತ್ ಎಂಬ ಯುವಕ ಮುಂದೆ ಹೋಗುತ್ತಿದ್ದಾಗ "ಇವನೊಬ್ಬ ಅಲೆಮಾರಿ" ಎಂದು ಯಾರೋ ಪರಿಹಾಸ್ಯವಾಗಿ ಗೊಣಗುವುದು ಅವರ ಕಿವಿಗೆ ಬಿತ್ತು. ರಾಡ್ನಿಯ ಪೋಷಕರು ಸಹ ಅನಕ್ಷರಸ್ಥ ಅಲೆಮಾರಿಗಳಾಗಿದ್ದರು. ಈ ಯುವಕನ ಬಗ್ಗೆ ಯಾರೂ ಹೆಚ್ಚು ಯೋಚಿಸಲಿಲ್ಲ. ಆದರೆ ದೇವರು ತನಗಾಗಿ ಒಂದು ಉದ್ದೇಶವನ್ನು ಹೊಂದಿದ್ದಾನೆಂದು ರಾಡ್ನಿಗೆ ಖಚಿತವಾಗಿ ತಿಳಿದಿತ್ತು. ಒಂದು ಸತ್ಯವೇದವನ್ನು ಇಂಗ್ಲೀಷ್ ಡಿಕ್ಷನರಿಯನ್ನು ತೆಗೆದುಕೊಂಡು ಓದಲು ಮತ್ತು ಬರೆಯಲು ಕಲಿತರು. "ಯೇಸುವಿನ ಬಳಿಗೆ ಹೋಗಲು ದಾರಿ ಕೇಂಬ್ರಿಡ್ಜ್, ಹಾರ್ವರ್ಡ್ ಅಥವಾ ಕಾವ್ಯದಲ್ಲಿಲ್ಲ. ಕಲ್ವಾರಿ ಎಂಬ ಪ್ರಾಚೀನ ಪರ್ವತದಲ್ಲಿದೆ" ಎಂದು ಇವರು ಒಂದು ಬಾರಿ ಹೇಳಿದರು. ರಾಡ್ನಿ ಎಲ್ಲಾ ತಡೆಗಳನ್ನು ದಾಟಿ ಒಂದು ಸುವಾರ್ತಾಬೋಧಕರಾದರು. ರಾಡ್ನಿ ಅಮೆರಿಕಾದಲ್ಲಿ ಮತ್ತು ಬ್ರಿಟನ್‌ನಲ್ಲಿ ಅನೇಕರನ್ನು ಕ್ರಿಸ್ತನ ಬಳಿಗೆ ಕರೆದೊಯ್ದ ಒಬ್ಬ ಮಹಾನ್ ಸೇವಕನಾಗಿ ಸುವಾರ್ತಿಕನಾಗಿ ಕಂಡುಬಂದರು.
ಇಂದಿನ ಸತ್ಯವೇದ ಭಾಗದಲ್ಲಿ ಸೌಲನು ಇಸ್ರಾಯೇಲ್ಯರಿಗೆ ರಾಜನಾಗಿ ಉನ್ನತೀಕರಿಸಲ್ಪಟ್ಟದನ್ನು ಕೆಲವರು ಅಂಗೀಕರಿಸಲಿಲ್ಲ ಎಂದು ಓದುತ್ತೇವೆ. ಅದರಲ್ಲೂ ಇವನಾ ನಮ್ಮನ್ನು ಕಾಪಾಡುತ್ತಾನೆ ಎಂದು ಸೌಲನನ್ನು ಗೇಲಿಯಾಗಿ ಮಾತಾಡಿದರು. ಇದರ ಮಧ್ಯೆಯೂ ಸೌಲನು ಕಿವುಡನಂತಿದ್ದನೆಂದು ನಾವು ಓದುತ್ತೇವೆ. ಕ್ರೈಸ್ತವ್ಯದ ನಾಯಕತ್ವದಲ್ಲಿ ಪ್ರಮುಖವಾಗಿ ಕಾಣಲ್ಪಡಬೇಕಾದ ಲಕ್ಷಣವೇನೆಂದರೆ ಕಿವಿ ಕೇಳದವರಂತೆ ಮೌನವಾಗಿರುವುದೇ ಅತ್ಯುತ್ತಮವಾಗಿದೆ.
ನಾವು ಮತ್ತಾಯ 26:63 ರಲ್ಲಿ ಓದುವಾಗ "ಯೇಸು ಮಾತನಾಡದೇ ಮೌನವಾಗಿದ್ದರು" ಎಂದು ಓದುತ್ತೇವೆ. ಯೇಸು ತನಗೆ ವಿರುದ್ಧವಾಗಿ ಹೊರಿಸಲಾದ ಘೋರವಾದ ಆರೋಪಗಳ ಬಗ್ಗೆ ಸ್ವಲ್ಪವೂ ತಿರುಗಿಸಿ ಮಾತಾಡದೇ ಮೌನವಾಗಿದ್ದರು. ನಾಯಕತ್ವವೆಂದರೆ ಚೆನ್ನಾಗಿ, ನಾಜೂಕಾಗಿ ಮತ್ತು ಸ್ಪಷ್ಟವಾಗಿ ಮಾತನಾಡುವುದು ಮಾತ್ರವಲ್ಲ, ಅನಗತ್ಯ ಅರ್ಥಹೀನ ಮಾತುಗಳಿಗೆ ಗಮನಹರಿಸದೇ ತನ್ನ ಮುಂದಿರುವ ಕೆಲಸದಲ್ಲಿ ಗಮನ ಹರಿಸಿದರೇನೆ ಸಾಕು.
ಕ್ರಿಸ್ತನಲ್ಲಿ ಪ್ರಿಯರೇ, ನೀವು ನಾಯಕತ್ವದ ಗುಣಗಳಿಂದ ಸಮೃದ್ಧರಾಗಬೇಕೆಂದು ಕರ್ತನು ಬಯಸುತ್ತಿದ್ದಾರೆ. ನಾವು ಮೇಲೆ ಓದಿದ ಎರಡು ಘಟನೆಗಳಂತೆ ನಾವು ನಮ್ಮ ಜೀವನದಲ್ಲೂ ನಿಧಾನವನ್ನು ಅಭ್ಯಾಸ ಮಾಡಿಕೊಂಡರೆ, ಅದು ಖಂಡಿತವಾಗಿಯೂ ನಮಗೆ ಪ್ರಯೋಜನವನ್ನು ನೀಡುತ್ತದೆ. ದೇವರು ನಿಮ್ಮನ್ನು ಆಶೀರ್ವದಿಸಲಿ!
- Bro.ಜೇಕಬ್ ಶಂಕರ್
ಪ್ರಾರ್ಥನಾ ಅಂಶ:
ಸೇವಾ ಕ್ಷೇತ್ರಗಳಲ್ಲಿ ನಮ್ಮೊಂದಿಗೆ ಸೇರಿ ಸೇವೆ ಮಾಡುವ ಅರೆಕಾಲಿಕ ಸೇವಕರು ಮತ್ತು ಸ್ವಯಂಸೇವಕರಿಗಾಗಿ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482